ನೀವೊಬ್ಬ ಗಂಡಸು ಆಗಿದಿದ್ದರೆ ನಿಮ್ಮ ಕಾಲರ್ ಹಿಡಿದು ನಿಮಗೆ ಮೆಮೋ ಕೊಡುತ್ತಿದ್ದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಕಾಮಿನಿ ಠಾಕೂರ್‌ಗೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರಾಗಿರುವ ಹರ್ಷ್ ವಿಜಯ್ ಗೆಹ್ಲೋಟ್ ಬೆದರಿಕೆ ಹಾಕಿದ್ದಾರೆ. ಮಧ್ಯಪ್ರದೇಶದಲ್ಲಿ ಇತ್ತೀಚೆಗಷ್ಟೇ ಕಾಂಗ್ರೇಸ್‌ನ ಮಾಜಿ ಮಂತ್ರಿಯೊಬ್ಬರು ಮಹಿಳೆಯರನ್ನು ಅವಮಾನಿಸುವ ಹೇಳಿಕೆಯನ್ನು ನೀಡಿ ವಿವಾದ ಎಬ್ಬಿಸಿದ್ದರು.
ಪ್ರಸ್ತುತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲಾಗುತ್ತಿದ್ದು, ಅದರಲ್ಲಿ ಕಾಂಗ್ರೆಸ್ ಶಾಸಕ ಹರ್ಷ್ ವಿಜಯ್ ಗೆಹ್ಲೋಟ್ ಅವರು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಾಮಿನಿ ಠಾಕೂರ್ ಅವರೊಂದಿಗೆ ಆಕ್ರೋಶಭರಿತರಾಗಿ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ಮಹಿಳಾ ವಿರೋಧಿ ಹೇಳಿಕೆ ನೀಡಲು ಬಿಜೆಪಿ -ಕಾಂಗ್ರೆಸ್ ನಡುವೆ ಪೈಪೋಟಿ – ಈ ಸಮಾಜ ಬದಲಾಗುವುದೆಂದು?
“ನೀವು ಒಬ್ಬ ಮಹಿಳೆ. ನೀವು ಗಂಡಸಾಗಿದ್ದರೆ ನಾನು ನಿಮ್ಮ ಕಾಲರ್ ಹಿಡಿದು, ನಿಮಗೆ ಮೆಮೋ ಕೊಡುತ್ತಿದ್ದೆ” ಎಂದು ಗೆಹ್ಲೋಟ್ ವೀಡಿಯೊದಲ್ಲಿ ಹೇಳುತ್ತಾರೆ.
मध्यप्रदेश @INCMP @INCIndia विधायक हर्ष विजय गहलोत SDM कामिनी ठाकुर को सरेआम धमकी देते हुए कह रहे हैं कि आप महिला हैं, अगर आप महिला नहीं होती तो कॉलर पकड़ कर ज्ञापन देता @ndtv @ndtvindia @GargiRawat @RajputAditi pic.twitter.com/xFamVNucH6
— Anurag Dwary (@Anurag_Dwary) January 18, 2021
ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಮತ್ತು ಕೇಂದ್ರದ ಮೂರು ವಿವಾದಾತ್ಮಕ ಕಾನೂನುಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ಆಯೋಜಿಸಿದ್ದ ಟ್ರಾಕ್ಟರ್ ರ್‍ಯಾಲಿಯ ನಂತರ ಮಧ್ಯಪ್ರದೇಶ-ರಾಜಸ್ಥಾನ ಗಡಿಯ ಸಮೀಪ ರತ್ನಂ ಜಿಲ್ಲೆಯ ಸೈಲಾನಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ರ್‍ಯಾಲಿಯ ನಂತರ ಶಾಸಕರ ನೇತೃತ್ವದ ಜನಸಮೂಹವು ಮನವಿ ಪತ್ರವನ್ನು ಸಲ್ಲಿಸಲು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಚೇರಿಗೆ ತಲುಪಿತ್ತು. ಆದರೆ ಕಾಮಿನಿ ಠಾಕೂರ್ ಅವರು ಹೊರಬರಲು ತಡವಾಗಿದ್ದಕ್ಕೆ ಗೆಹ್ಲೋಟ್ ಸಾರ್ವಜಿಕವಾಗಿ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ಹೋರಾಟದಲ್ಲಿ ತಮ್ಮದೆ ಛಾಪು ಮೂಡಿಸಿದ ರೈತ ಮಹಿಳೆಯರು!


