Homeಚಳವಳಿರೈತ ಹೋರಾಟಕ್ಕೆ ಬೆಂಬಲ: ರೈತರಿಲ್ಲದೆ ಅನ್ನವಿಲ್ಲ ಎಂದ ಸರ್ಕಾರಿ ಅಧಿಕಾರಿಗಳು

ರೈತ ಹೋರಾಟಕ್ಕೆ ಬೆಂಬಲ: ರೈತರಿಲ್ಲದೆ ಅನ್ನವಿಲ್ಲ ಎಂದ ಸರ್ಕಾರಿ ಅಧಿಕಾರಿಗಳು

’ನಾವು ಸರ್ಕಾರಿ ಅಧಿಕಾರಿಗಳು ನಿಜ, ಆದರೆ ಅದಕ್ಕೂ ಮೊದಲು ರೈತರ ಮಕ್ಕಳು. ರೈತರ ಮಕ್ಕಳಾದ ಮೇಲೆ ಸರ್ಕಾರಿ ಕೆಲಸ ಸಿಕ್ಕಿದೆ. ಈ ಕೆಲಸಕ್ಕೆ ಸೇರುವ ಶಕ್ತಿ ನೀಡಿದ್ದು ಕೃಷಿ’

- Advertisement -
- Advertisement -

ರೈತ ಹೋರಾಟ ಹಲವು ಮಜಲುಗಳಿಗೆ ಸಾಕ್ಷಿಯಾಗುತ್ತಿದೆ. ಮೊದ ಮೊದಲು ಪಂಜಾಬ್ ಮತ್ತು ಹರಿಯಾಣದ ರೈತರ ಹೋರಾಟ ಎಂದು ಬಿಂಬಿಸಲಾದ ಈ ಪ್ರತಿಭಟನೆ ಇಂದು ದೇಶವ್ಯಾಪಿ ಆಂದೋಲನಕ್ಕೆ ಕಾರಣವಾಗಿದೆ. ಹಲವು ಸಂಘ ಸಂಸ್ಥೆಗಳ ಜೊತೆಗೆ ಸರ್ಕಾರಿ ಅಧಿಕಾರಿಗಳು ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ಪಂಜಾಬ್‌ನ ಲೂದಿಯಾನ ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿರುವ ದಲವೀರ್ ಸಿಂಗ್, ಪರವ್‌ಜಿಂತ್ ಸಿಂಗ್, ನರೇಂದರ್ ಸಿಂಗ್ ಮತ್ತು ಗುರುದೀಪ್ ಸಿಂಗ್ ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಿಂಘ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ಸಾಥ್ ನೀಡುತ್ತಿರುವ ಈ ಅಧಿಕಾರಿಗಳು, ನಾನುಗೌರಿ.ಕಾಂ ಜೊತೆ ಮಾತನಾಡಿ ತಾವಷ್ಟೇ ಅಲ್ಲದೆ ಪಂಜಾಬ್ ಮತ್ತು ಹರಿಯಾಣದ ಸರ್ಕಾರಿ ಅಧಿಕಾರಿಗಳು ಕೆಲಸದ ಜೊತೆಗೆ ಪ್ರತಿಭಟನೆಗೂ ಬೆಂಬಲ ನೀಡುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಟ್ರಾಕ್ಟರ್ ರ್ಯಾಲಿ ತಡೆಯುವಂತೆ PIL: ಕಾನೂನಿನಡಿ ಇರುವ ಎಲ್ಲಾ ಅಧಿಕಾರ ಬಳಸಲು ನೀವು ಸ್ವಂತಂತ್ರರು

ಪಂಜಾಬ್ ಮತ್ತು ಹರಿಯಾಣದ ಸುಮರು 50ಕ್ಕೂ ಹೆಚ್ಚು ಸರ್ಕಾರಿಅಧಿಕಾರಿಗಳು, ರೈತರಂತೆಯೇ ಪಾಳಿಯ ಮಾದರಿಯಲ್ಲಿ ಪ್ರತಿಭಟನೆಗೆ ಬಂದು ಬೆಂಬಲ ನೀಡುತ್ತಿದ್ದಾರೆ.

ಕೃಷಿ ಕಾನೂನುಗಳ ವಾಪಾಸ್ ತೆಗೆದುಕೊಳ್ಳಲು ಯುವಕರ ಆಗ್ರಹ (ಸಿಂಘು ಗಡಿ)

’ನಾವು ಸರ್ಕಾರಿ ಅಧಿಕಾರಿಗಳು ನಿಜ, ಆದರೆ ಅದಕ್ಕೂ ಮೊದಲು ರೈತರ ಮಕ್ಕಳು. ರೈತರ ಮಕ್ಕಳಾದ ಮೇಲೆ ಸರ್ಕಾರಿ ಕೆಲಸ ಸಿಕ್ಕಿದೆ. ಈ ಕೆಲಸಕ್ಕೆ ಸೇರುವ ಶಕ್ತಿ ನೀಡಿದ್ದು ಕೃಷಿ. ಅಂತಹ ಕೃಷಿಯ ಮೇಲೆ, ರೈತರ ಮೇಲೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾನೂನುಗಳು ದಬ್ಬಾಳಿಕೆ ನಡೆಸುತ್ತವೆ ಎಂದರೆ ಅವುಗಳನ್ನು ಕೇಂದ್ರ ವಾಪಸ್ ಪಡೆಯಲೇಬೇಕು. ರೈತರಿಲ್ಲದಿದ್ದರೆ, ಅನ್ನ ದೊರೆಯುವುದಾದರೂ ಹೇಗೆ..?’ ಎಂದು ದಲವೀರ್ ಸಿಂಗ್ ಪ್ರಶ್ನಿಸುತ್ತಾರೆ.

ಈಗಾಗಲೇ ಸಿಂಘು ಗಡಿಯಲ್ಲಿ ಪಂಜಾಬ್‌ ಮತ್ತು ಹರಿಯಾಣದ ಕಬ್ಬಡಿ ಆಟಗಾರರು ಗಡಿಗಳನಗ್ನು ಕಾಯುವ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾವಿರಾರು ಯುವಕರು ಪ್ರತಿಭಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರಿಗೆ ಸರ್ಕಾರಿ ಅಧಿಕಾರಿಗಳು ಸಾಥ್ ನೀಡಿದ್ದಾರೆ.


ಇದನ್ನೂ ಓದಿ: ರೈತ ಹೊಸ ಬೆಳೆಯನ್ನು ಬೆಳೆಯಬಲ್ಲ…. ಹೊಸ ನಗರವನ್ನು ಸೃಷ್ಟಿಸಬಲ್ಲ…!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...