Homeಅಂಕಣಗಳುಮೋದಿಜಿಯ ಸಮುದ್ರ ಗೀತೆಗಳು

ಮೋದಿಜಿಯ ಸಮುದ್ರ ಗೀತೆಗಳು

- Advertisement -
- Advertisement -

| ಥೂತ್ತೇರಿ ಯಾಹೂ |

ಭಾಜಪದ ಮೊದಲ ಪ್ರಧಾನಿ ವಾಜಪೇಯಿ ಆಗಾಗ್ಗೆ ಕವನ ಕೆರೆಯುತ್ತಿದ್ದರು. ಕವಿ ಹೃದಯವೂ ಅವರಿಗಿತ್ತು. ಆದ್ದರಿಂದ ಬಿಜೆಪಿ-ಕವಿ ಎನಿಸಿದ್ದರು. ಅವರಿಗೆ ನಾನೇನು ಕಡಿಮೆ ಎಂದು ಸೆಡ್ಡು ಹೊಡೆದಿರುವ ಈಗಿನ ಪ್ರಧಾನಿ ನರೇಂದ್ರ ಮೋದಿಯೂ ಪದಬೇಧಿ ಮಾಡಿಕೊಂಡು ಅದನ್ನೇ ಕಾವ್ಯವೆಂದು ಪರಿಗಣಿಸಿ ಬಿಜೆಪಿ ಕಾವ್ಯಪ್ರಿಯರಿಗೆ ಬಡಿಸಿದ್ದಾರಂತಲ್ಲಾ. ಅದನ್ನ ಕನ್ನಡ ಕರಪತ್ರ ಎಂಬ ಪತ್ರಿಕೆ ಪ್ರಕಟಿಸಿರುವುದಲ್ಲದೆ ಮೋದಿಯ ಪ್ರಾಮಾಣಿಕ ಅಭಿವ್ಯಕ್ತಿಯನ್ನ ತಿರುಚಿ ಪ್ರಕಟಿಸಿದೆಯಲ್ಲಾ. ವಾಸ್ತವವಾಗಿ ಮೋದಿ ಮೂಲಪ್ರತಿ ಹೇಗಿತ್ತು ಎಂಬ ಊಹೆಯ ಸಾಲುಗಳನ್ನು ನ್ಯಾಯಪಥ ಓದುಗರಿಗೆ ಕೊಡುವುದು ನಮ್ಮ ಧರ್ಮ. ಇದು ಕವಿಯೊಬ್ಬನ ಕಾವ್ಯದ ಸಾಲುಗಳ ನಡುವಿನ ಅಕ್ರಮ ಪ್ರವೇಶವಲ್ಲ. ಕಳೆದ ಶತಮಾನದಲ್ಲೇ ವರಕವಿ ಬೇಂದ್ರೆಯವರು ವಾಚನಕ್ಕೆ ಕಳುಹಿಸಿದ ಕವನದ ಸಾಲುಗಳಲ್ಲಿ ಕಡೆಯ ಕೆಲಸಾಲುಗಳು ಬಿಟ್ಟು ಹೋಗಿದ್ದು ಅದನ್ನ ಊಹಿಸಿ ಬರೆದು ಪೂರ್ಣಗೊಳಿಸಿದ ಕೀರ್ತಿ, ಕೀರ್ತಿನಾಥ ಕುರ್ತುಕೋಟಿಯವರದ್ದು. ಅಂತಹ ಭಾಗ್ಯ ಯಾಹುಗೆ ದೊರಕಿದ್ದು ಭಿನ್ನದೊಳಗಿನ ಸೌಭಾಗ್ಯವಲ್ಲವೆ, ಥೂತ್ತೇರಿ!

“ಮೋದಿಯ ಪದಬೇದಿ”

1

ನಮಸ್ತೇ ಸದಾ ವತ್ಸಲೇ ಸಾಗರ;
ನೀನು ಧೀರ ಗಂಭೀರ, ಆದರೆ ನಾನು,
ಸೀರ, ಬೀರ, ಚ್ವೌರ, ಕ್ವಾರ,
ನೀನು ನೀಲಿ
ನಮ್ಮ ಸಂಘ ಹಳದಿ
ನೀನು ಜಗತ್ತಿಗೆ ಜೀವನ ನೀಡುವೆ
ನಾನು ಸಂಘವೆಂಬ ವಿಷವೃಕ್ಷಕ್ಕೆ
ಹಾಲೆರೆಯುವೆ.
ಸಮುದ್ರದ ಮೇಲೆ ಕೋಲಾಹಲವಿದೆ,
ಭಾರತದ ಒಳಗೆ ಹಾಲಾಹಲವಿದೆ,
ನೀನು ವಿಚಲಿತನಾಗಲ್ಲ,
ನಾವು ಸದಾ ವಿಚಲಿತರು.
ಗರ್ಜಿಸುವ ಕನ್ನಯ್ಯನನ್ನು ಕಂಡರೆ
ನಮ್ಮವರು ಭಯಭೀತರಾಗುತ್ತಾರೆ.
ಸಾಬರನ್ನು ಕಂಡರೆ ಸಣ್ಣಗೆ ನಡುಗುತ್ತಾರೆ.
ನಿನ್ನೊಳಗೆ ಅಡಗಿರುವ ಶಾರ್ಕುಗಳಂತೆ
ಭಾರತದಲ್ಲಿ ಅಡಿಗಿದ್ದಾರವರು.

2
ನಮಸ್ತೇ ಸದಾವತ್ಸಲೇ ಸಾಗರ;
ನೀನು ಶಕ್ತಿಭಂಡಾರ.
ನಾನು ಕುಯುಕ್ತಿ ಬಿಡಾರ,
ನೀನು ಯಾವತ್ತೂ ನಿನ್ನ ಪರಿಧಿಯಲ್ಲಿರುತ್ತೀ.
ನಾವು ಸದಾ ಪರಿಧಿ ಮೀರುತ್ತೇವೆ,
ನೀನು ಯಾವತ್ತೂ ದೊಡ್ಡತನದ ಬೋಧನೆ ಮಾಡುತ್ತಿ,
ನಾವು ಪ್ರತಿಬಾರಿ ಸಣ್ಣತನದಲ್ಲೇ ವಾದಿಸುತ್ತೇವೆ.
ನಿನ್ನ ಅಲೆಗಳಲ್ಲಿ ಜೀವನ ಸಂದೇಶವಿದೆ,
ನಮ್ಮ ಮಾತುಗಳಲ್ಲಿ ಸರ್ವನಾಶದ ಆಶಯವಿದೆ.
ನಿನಗೆ ಯಾವ ಆಸೆಯೂ ಇಲ್ಲ,
ಭರತಖಂಡವನ್ನು ಹಿಂದೂ ರಾಷ್ಟ್ರ ಮಾಡುವ ದುರಾಶೆ ನಮ್ಮನ್ನು ಆಕ್ರಮಿಸಿದೆ.

3
ನಮಸ್ತೆ ಸದಾವತ್ಸಲೇ ಸಾಗರ;
ನಡೆಯುತ್ತಲೇ ಜೀವನ ನಡೆಸುತ್ತಿ,
ನಾನು ತಿರುಗುತ್ತಲೇ ಜೀವನ ನಡೆಸುತ್ತಿದ್ದೇನೆ.
ತಿರುಗಲು ನನಗೆ ಆಯಾಸವೇ ಇಲ್ಲ
ಏಕೆಂದರೆ ನನಗೆ ಮನೆ ಎಂಬುದೇ ಇಲ್ಲ,
ಅದಕ್ಕೆ ವಿದೇಶಗಳ ತಿರುಗುತ್ತೇನೆ.
ನನ್ನ ದೇಶದಲ್ಲೇ ತಿರುಗಿದರೆ
ಅತಿವೃಷ್ಠಿ ಅನಾವೃಷ್ಠಿಗೆ ತುತ್ತಾದವರ
ಅತಿಯಾದ ಬೇಡಿಕೆ ನಿಂದನೆಯ ನರಕ,
ಅದಕ್ಕೆ ವಿದೇಶಗಳ ತಿರುಗುತ್ತೇನೆ.
ನಾಯಿಗೆ ಕೆಲಸವಿಲ್ಲ,
ಕೂರಲು ಸಮಯವಿಲ್ಲ ಎಂಬಂತೆ,
ನನ್ನ ಅಲೆಮಾರಿ ಸಂದೇಶ
ಅನವರತ-ಅನವರತ.

4
ಓಂ ನಮೋ ಸದಾವತ್ಸಲೇ ಸಾಗರ:
ಅಲೆಯಿಂದ ಅಲೆಗಳು ಹೊರಬೀಳುವುದಿಲ್ಲ.
ಇದೇ ಸಂಘಕ್ಕೆ ಆದರ್ಶ,
ಬಿದ್ದರೂ ಉಪ ಅಲೆಗಳ ಆಶ್ರಯ,
ಹಿಂದೂ ಮಹಾಸಭಾ, ವಿಶ್ವಹಿಂದೂ ಪರಿಷತ್,
ಆರೆಸ್ಸೆಸ್ಸು, ಭಜರಂಗದಳದ ಅಲೆಗಳೆಲ್ಲಾ
ಸಂಘ ಸಂಯಮಗೊಂಡ ಸಮುಚ್ಛಯಗಳು.

5
ನಮಸ್ತೆ ಸದಾವತ್ಸಲೇ ಸಾಗರ:
ಸೂರ್ಯನ ಜೊತೆಗೆ ನಿನ್ನ ಗೆಳೆತನ ಹಳೆಯದು,
ನನ್ನ ಸಂಘ ಪರಿವಾರದ ಗೆಳೆತನವೂ ಹಳೆಯದು.
ಜೀವಂತ ಜಲ ನೀನು,
ನಿನ್ನನ್ನು ಕುಡಿದು, ಹೊರಬಿಡುವ ಜನ್ಮವಷ್ಟೇ ನನ್ನದು.
ನೀನು ಆಗಸವನ್ನ ಚುಂಬಿಸುತ್ತೀ,
ನಾನೇನು ಚುಂಬಿಸಲೀ,
ಚುಂಬನದಿಂದ ವಂಚಿತ ನಾನು.
ನೀನು ಮೋಡವಾಗಿ ಮಳೆ ಸುರಿಸುತ್ತಿ,
ನಾನು ಜನಸಾಗರದ ಮೇಲೆ ಸುಳ್ಳು ಸುರಿಸುತ್ತೇನೆ.
ನೀನು ಮಧುರಭಾವ ಇಟ್ಟುಕೊಂಡಿದ್ದಿ,
ಸಂಘ ಸೇರಿದಾಗಲೇ ನನ್ನ ಮಧುರಭಾವ ಮಾಯವಾಯ್ತು,
ಈಗೇನಿದ್ದರೂ ಮಧುರ ಕಾಶ ತಲೆನೋವಷ್ಟೇ..

6
ಓಂ ನಮೋ ಸದಾವತ್ಸಲೇ ಸಾಗರ:
ಜೀವನದ ಈ ಸೌಂದರ್ಯ ನೀಲಕಂಠನ ಆದರ್ಶ ನಿನ್ನದು,
ಜೀವನದ ಸೌಂದರ್ಯ ಹಾಳುಮಾಡುವುದೇ ನಮ್ಮ ಆದರ್ಶ.
ನೀನು ಭೂಮಿಯ ವಿಷವನ್ನು ಕುಡಿಯುತ್ತಿ,
ನಾವು ಭರತ ಖಂಡಕೆ ವಿಷ ಉಣಿಸುತ್ತೇವೆ.
ನೀನು ಲವಣಾಂಶವನ್ನು ನಿನ್ನಲ್ಲೇ ಇಟ್ಟುಕೊಳ್ಳುವೆ,
ನಾವು ತಡೆಯಲಾಗದೆ ಆಗಾಗ್ಗೆ ಬಿಟ್ಟುಬಿಡುತ್ತೇವೆ.
ನೀನು ಜಗತ್ತಿಗೆ ಹೊಸ ಜೀವನ ನೀಡುತ್ತಿ,
ನಾವು ಜಗತ್ತಿಗೆ ಹೊಸ ನರಕ ಕೊಡುತ್ತಿದ್ದೇವೆ.
ನೀನು ಜೀವನ ನಡೆಸುವ ಮರ್ಮ ನೀಡುತ್ತಿ,
ನಾವು ಜೀವನ ಸರ್ವನಾಶ ಮಾಡುವ ಕರ್ಮ ನೀಡುತ್ತೇವೆ.
ಹೇ ಸಮುದ್ರವೆ, ನಿನಗೆ ನನ್ನ ಶತಸಹಸ್ರ
ಪ್ರಣಾಮಗಳು.
ಥೂ…. ಥೂ….. ಥೂತ್ತೇರಿ!!!

ಸೆ: ಕನ್ನಡ ಕರಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...