Homeಮುಖಪುಟಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

- Advertisement -
- Advertisement -

| ಮಲ್ಲನಗೌಡರ್ ಪಿ.ಕೆ |

ಕಂಡ ಕಂಡಲ್ಲಿ ಸಾಲ ಮಾಡಿಕೊಂಡು ತಿರುಗುವ, ಪರದೇಶಗಳಲ್ಲೂ ತೆರಿಗೆ ವಂಚನೆ ಮಾಡಿ ‘ವಿಶ್ವಗುರು’ ಭಾರತದ ಕೀರ್ತಿ ಪತಾಕೆ ಹಾರಿಸುವ, ಪಾಲುದಾರ ಕಂಪನಿಗಳಿಗೆ ಕೊಡಬೇಕಾದ ಹಣ ನೀಡದೇ ಸತಾಯಿಸುವ, ಜೈಲಿಗೆ ಹಾಕಬೇಕ್ತಾಗದೆ ಹುಷಾರ್ ಎಂದು ಸುಪ್ರಿಂಕೋರ್ಟ್‍ನಿಂದ ಉಗಿಸಿಕೊಳ್ಳುವ ಒಬ್ಬ ದುಷ್ಟ ಬ್ಯುಸಿನೆಸ್‍ಮ್ಯಾನ್ ಜೊತೆ ಪ್ರಧಾನಿ ನರೇಂದ್ರ ಮೋದಿಯ ಸ್ನೇಹ ಎಂಥದ್ದು? ವಿದೇಶ ಪ್ರವಾಸಗಳಲ್ಲಿ ಮೋದಿಗೆ ಅಂಬಾನಿ ಕಂಪನಿ ಕೊಟ್ಟರೋ, ಅಂಬಾನಿಗೇ ಕಂಪನಿ ಕೊಡಲು ಮೋದಿ ಟೂರ್ ಮಾಡಿದರೋ?

ಇವೆಲ್ಲ ಪ್ರಶ್ನೆಗಳನ್ನು ಮತದಾರರು ಈಗ ಎತ್ತಿಕೊಳ್ಳಲೇ ಬೇಕಾಗಿದೆ. ರಫೆಲ್ ಒಪ್ಪಂದದ ನಂತರ ಫ್ರಾನ್ಸ್ ಸರ್ಕಾರ ಅನಿಲ್ ಅಂಬಾನಿ ಕಂಪನಿಗೆ 1,124.9 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ನೀಡಿರುವುದು ಬೆಳಕಿಗೆ ಬಂದಿದೆ.

      ರಕ್ಷಣಾ ಇಲಾಖೆಯ ‘ಡಿಫೆನ್ಸ್’ ಆಟ!

ಫ್ರಾನ್ಸಿನ ‘ಲೆ ಮಾಂಡೆ’ ಪತ್ರಿಕೆ ಇದನ್ನು ಪ್ರಕಟಿಸಿದ ನಂತರ, ‘ದಿ ವೈರ್’ ಅದನ್ನು ಭಾರತದಲ್ಲಿ ಪ್ರಕಟಿಸಿತು. ವಿಪಕ್ಷಗಳು ಈ ಕುರಿತು ಮೋದಿಯತ್ತ, ಸರ್ಕಾರದತ್ತ ಬೊಟ್ಟು ಮಾಡಿದವು. ಸರ್ಕಾರದ ನಡೆಯ ಬಗ್ಗೆ, ಪ್ರಧಾನಿ ವಿರುದ್ಧ ಟೀಕೆಗೆ ಪ್ರತ್ಯುತ್ತರ ನೀಡುವಲ್ಲಿ ಬಿಜೆಪಿಗಿಂತ ರಕ್ಷಣಾ ಸಚಿವಾಲಯಕ್ಕೇ ಹೆಚ್ಚು ಆಸಕ್ತಿಯಿರುವಂತಿದೆ!

‘ಡಿಫೆನ್ಸ್ ಗೆ ಇಳಿದ ರಕ್ಷಣಾ ಸಚಿವಾಲಯ, ‘ತೆರಿಗೆ ವಿನಾಯತಿ ಪಡೆದಿರುವುದನ್ನು ರಫೆಲ್ ಒಪ್ಪಂದದ ಜತೆ ಸಂಬಂಧ ಕಲ್ಪಿಸುವುದು ತಪ್ಪು. ಸರ್ಕಾರಕ್ಕೂ ಹಾಗೂ ತೆರಿಗೆ ವಿನಾಯತಿಗೂ ಸಂಬಂಧವಿಲ್ಲ’ ಎಂದು ಸರ್ಕಾರದ ಪರ, ಮೋದಿ ಪರ ‘ರಕ್ಷಣಾತ್ಮಕ’ ಬ್ಯಾಟಿಂಗ್ ಮಾಡಿದೆ! ರಫೆಲ್ ಡೀಲ್‍ನ ಅಧಿಕೃತ ಭಾಗವಾಗಿ ಅಥವಾ ರಫೆಲ್ ಕಾರಣಕ್ಕೇ ಅಂತ ಬಹಿರಂಗವಾಗಿ ಘೋಷಿಸಿ ತೆರಿಗೆ ವಿನಾಯತಿ ಮಾಡಲು ಫ್ರಾನ್ಸ್ ಸರ್ಕಾರವೂ ಮೂರ್ಖವಲ್ಲ, ಅಂಬಾನಿ-ಮೊದಿಯೂ ಮೂರ್ಖರಲ್ಲ. ಈ ಸರಳ ಸತ್ಯ  ರಕ್ಷಣಾ ಸಚಿವಾಲಯಕ್ಕೆ ತಿಳಿಯಲಿಲ್ಲವೇ? ಅಥವಾ ಸರ್ಕಾರವೇ ಒತ್ತಾಯದಿಂದ ಅದರ ಕಡೆ ಸ್ಟೇಟ್‍ಮೆಂಟ್ ಕೊಡೊಸಿತೇ?

ರಫೆಲ್‍ಗೆ ಪೂರಕವಾಗಿ, ಸಮಾಂತರವಾಗಿ ಅನಧಿಕೃತ ಡೀಲ್ ಏರ್ಪಟ್ಟ ಕಾರಣಕ್ಕೆ ತೆರಿಗೆ ವಿನಾಯತಿ ಮಾಡಲಾಗಿದೆ, ಇದಕ್ಕೆ ಪ್ರಧಾನಿಯ ಕೃಪೆ ಇದೆ ಎಂಬುದು ಆರೋಪ. ಹೀಗಿರುವಾಗ ಡಿಫೆನ್ಸ್ ಮಿನಿಸ್ಟ್ರಿ ಕುಂಬಳಕಾಯಿ ಕಳ್ಳನಂತೆ ವರ್ತಿಸಿತೇ?

  ಸಂಶಯಾತ್ಮಕ ಘಟನಾವಳಿಗಳು

ಮಾರ್ಚ್ 25, 2015: ಡಸಾಲ್ಟ್ ಬಿಡುಗಡೆ ಮಾಡಿದ ಅಧಿಕೃತ ವಿಡಿಯೋ ಪ್ರಕಾರ, ಎಚ್‍ಎಎಲ್, ಭಾರತೀಯ ರಕ್ಷಣಾ ಇಲಾಖೆ  ನಡುವಿನ ರಫೆಲ್ ಒಪ್ಪಂದದ ಮಾತುಕತೆಗಳು ಶೇ.95ರಷ್ಟು ಮುಗಿದಿದ್ದು, ಭಾರತ ವಾಯುಸೇನೆಗೆ 126 ರಫೆಲ್ ವಿಮಾನ ಪೂರೈಸಲು ಡಸಾಲ್ಟ್ ಖುಷಿ ಪಡುತ್ತದೆ.

ಮಾರ್ಚ್ 28, 2015: ಯುದ್ಧ ವಿಮಾನವಿರಲಿ, ಏರೋನಾಟಿಕ್ಸ್‍ನಲ್ಲಿ ಕಿಂಚಿತ್ ಅನುಭವ ಇಲ್ಲದ ಅನಿಲ್ ಅಂಬಾನಿಯ ರಿಲಾಯನ್ಸ್‍ನಿಂದ ಡಿಫೆನ್ಸ್ ಕಂಪನಿಯೊಂದು ರಿಜಿಸ್ಟರ್ ಆಗುತ್ತದೆ.

ಏಪ್ರಿಲ್ 8, 2015: ಪ್ರಧಾನಿ ಏಪ್ರಿಲ್ 9ರಿಂದ (ಮರುದಿನ) ಕೈಗೊಳ್ಳಲಿರುವ ಫ್ರಾನ್ಸ್ ಪ್ರವಾಸ ಕುರಿತು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರಿಂದ ಪತ್ರಿಕಾಗೋಷ್ಠಿ. 126 ರಫೆಲ್ ವಿಮಾನ ಖರೀದಿ ಕುರಿತು ಡಸಾಲ್ಟ್, ಎಚ್‍ಎಎಲ್, ರಕ್ಷಣಾ ಇಲಾಖೆ ನಡುವೆ ಸುದೀರ್ಘ ಮತ್ತು ತಾಂತ್ರಿಕ ಚರ್ಚೆಗಳು ಮುಂದುವರೆದಿವೆ, ಪ್ರಧಾನಿ ಭೇಟಿಗೂ ಈ ವಿಷಯಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು.

ಅಂದರೆ, ಅಲ್ಲಿವರೆಗೂ ವಿದೇಶಾಂಗ ಇಲಾಖೆಗೂ ಎರಡೇ ದಿನದಲ್ಲಿ  ‘ಅಂಬಾನಿಯ ರಫೆಲ್’ ಹಾರುವುದೂ ಗೊತ್ತಿರಲಿಲ್ಲ.

ಏಪ್ರಿಲ್ 10: ಫ್ರಾನ್ಸಿನ ರಾಹಧಾನಿ ಪ್ಯಾರಿಸ್‍ನಲ್ಲಿ ಪ್ರಧಾನಿ ಮೋದಿಯಿಂದ ಸಂಪೂರ್ಣ ಮಾರ್ಪಾಡಾದ ರಫೆಲ್ ಒಪ್ಪಂದದ ಘೋಷಣೆ! ಎಚ್‍ಎಎಲ್ ಬದಲು ಅನಿಲ್ ಅಂಬಾನಿಯ ಕಂಪನಿ1 126ರ ಬದಲು 36 ರಫೆಲ್ ವಿಮಾನ! ಮೂಲ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಯ ಒಪ್ಪಂದ.

ಇದಾದ ಆರು ತಿಂಗಳಿಗೆ, ಫ್ರಾನ್ಸ್ ಸರ್ಕಾರದಿಂದ ಬಹು ವರ್ಷಗಳವರೆಗೂ ಇತ್ಯರ್ಥವಾಗದ ಅಂಬಾನಿಯ ತೆರಿಗೆ ವಂಚನೆ ಪ್ರಕರಣದ ಇತ್ಯರ್ಥ. ಅಂಬಾನಿಗೆ 1,100 ಕೋಟಿ ತೆರಿಗೆ ರಿಯಾಯಿತಿ!

ವಿದೇಶದಲ್ಲೂ ತೆರಿಗೆ ವಂಚಿಸಿದ ಅಂಬಾನಿಗೆ ಮೋದಿ ‘ಕಂಪನಿ’ ಕೊಡುತ್ತಿರುವುದೇಕೆ? ಸ್ವೀಡನ್ನಿನ ಎರಿಕ್ಸನ್ ಕಂನಿಗೆ ಕೊಡಬೇಕಿದ್ದ 462 ಕೋಟಿ ರೂ.ಗಳನ್ನು ನೀಡದೇ ಸತಾಯಿಸಿ, ಪದೇ ಪದೇ ಕೋರ್ಟಿಗೆ ಗೈರಾಗಿ, ಅಂತಿಮದಲ್ಲಿ ಜೈಲಿಗೆ ಕಾಕಬೇಕಾಗ್ತದೆ ಎಂದು ಸುಪ್ರಿಂಕೋರ್ಟಿಂದ ಎಚ್ಚರಿಕೆ ಪಡೆದಿದ್ದ ದಗಲ್ಬಾಜಿ ಅನಿಲ್ ಅಂಬಾನಿಯಂ ಮನುಷ್ಯನನ್ನು ರಫೆಲ್ ಡೀಲ್‍ನಲ್ಲಿ ಸೇರಿಸಿಕೊಂಡಿದ್ದು ಏಕೆ?

ಚೌಕಿದಾರ್ ಮತ್ತು ಅಂಬಾನಿ ನಡುವೆ ಬರೀ ‘ಚಾಯ್’ ಪಾರ್ಟಿಗಳು ನಡೆಯುತ್ತಿವೆಯೋ ಅಥವಾ ಪರಸ್ಪರ ಹಂಚಿ ತಿನ್ನುವ ಡೀಲ್ ನಡೆದಿವೆಯೋ?

ಕೊನೆಯಲ್ಲಿ ಕೇಳಬೇಕಾದ ಪ್ರಶ್ನೆ: ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...