Homeಮುಖಪುಟಗಾಬರಿಗೊಂಡಿದೆಯೇ ಕೇಂದ್ರದ ಆಡಳಿತ ಪಕ್ಷ?

ಗಾಬರಿಗೊಂಡಿದೆಯೇ ಕೇಂದ್ರದ ಆಡಳಿತ ಪಕ್ಷ?

- Advertisement -
- Advertisement -

ಇದೊಂದು ಇಂಟರೆಸ್ಟಿಂಗ್ ಆದ ಕದನ. 2019ರ ಫೈನಲ್‍ಗಿಂತ ಮೊದಲಿನ ‘ಸೆಮಿಫೈನಲ್’ ಎಂದೇ ವ್ಯಾಖ್ಯಾನಿಸಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯು ಕೆಲವರಿಗೆ ಆತಂಕ, ಹಲವರ ಕುತೂಹಲಕ್ಕೆ ಕಾರಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಚುನಾವಣೆ’ ಅಂದರೆ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ‘ಅವಕಾಶ’. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ ಬಹುತೇಕ ಚುನಾವಣೆಗಳು ‘ಅವಕಾಶ’ ನೀಡುವದಕ್ಕೆ ನಡೆದ ‘ಆಟ’ದಂತೆ ನಡೆಯುತ್ತ ಬಂದಿದ್ದವು. ಇತ್ತೀಚಿನ ವರ್ಷಗಳ ಚುನಾವಣೆಯ ಸ್ವರೂಪವೇ ಬದಲಾದ ಮೇಲೆ ಅದನ್ನು ಕುರಿತ ಭಾಷೆಯ ಬಳಕೆಯಲ್ಲಿಯೂ ಸಹಜವಾಗಿ ಗಣನೀಯ ಬದಲಾವಣೆ ಆಗಿದೆ. ಸಮರ, ಕದನ, ರಣತಂತ್ರ ಹೀಗೆ ಯುದ್ಧೋನ್ಮಾದಕ್ಕೆ ಸಂಬಂಧಿಸಿದ ಪದಗಳು ಮುಂಚೂಣಿಗೆ ಬಂದಿವೆ. ‘ಅವಕಾಶ’ ಆಗಿದ್ದ ಚುನಾವಣೆಯು ಈಗ ರಾಜಕೀಯ ಪಕ್ಷಗಳಿಗೆ ‘ಚುನಾವಣೆ’ ಜೀವನ್ಮರಣದ ಪ್ರಶ್ನೆಯಾಗಿ ಪರಿಣಮಿಸಿದೆ. ಯಾವ ಚಿಕ್ಕ-ಪುಟ್ಟ ಚುನಾವಣೆಯನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಆಟದ ನಿಯಮ ಬದಲಿಸಿದ ‘ಚಾಣಕ್ಯ’ರೇ ಪರದಾಡಬೇಕಾದ ಸ್ಥಿತಿ ಬಂದಿದೆ.
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ, ತೆಲಂಗಾಣ, ಮಿಜೋರಾಂ ರಾಜ್ಯಗಳ ವಿಧಾನ ಸಭಾ ಚುನಾವಣೆಯು ಕೇಂದ್ರ ಮತ್ತು ಆಯಾ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಪಕ್ಷಗಳ ಸತ್ವಪರೀಕ್ಷೆಯಾಗಿದೆ. ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ತೆಲಂಗಾಣದಲ್ಲಿ ಕೆ. ಚಂದ್ರಶೇಖರರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್) ಮತ್ತು ಪುಟ್ಟ ರಾಜ್ಯ ಮಿಜೋರಾಂನಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಿವೆ. 2019ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಡೆಯುತ್ತಿರುವ ಈ ಐದು ರಾಜ್ಯಗಳ ಚುನಾವಣೆ ‘ದಿಕ್ಸೂಚಿ’ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಪಾಲಿಗೆ ಇದು ಸಹಜವಾಗಿಯೇ ‘ಆತಂಕ’ ಉಂಟು ಮಾಡಿದೆ. ಬರಲಿರುವ ವಿಧಾನಸಭಾ ಚುನಾವಣಾ ಆಟದಲ್ಲಿ ಕಾಂಗ್ರೆಸ್ ಕಳೆದುಕೊಳ್ಳುವುದೇನೂ ಇಲ್ಲ. ಈಗಾಗಲೇ ಮಣ್ಣುಪಾಲಾಗಿರುವ ತನ್ನ ಸ್ಥಿತಿಯನ್ನು ಅದು ಸ್ವಲ್ಪಮಟ್ಟಿಗೆ ಉತ್ತಮಪಡಿಸಿಕೊಳ್ಳಬಹುದು. ಈಗ ಇರುವ ಸ್ಥಿತಿಗಿಂತ ಮತ್ತಷ್ಟು ಕೆಳಗೆ ಕುಸಿಯುವ ಸಾಧ್ಯತೆಗಳಿಲ್ಲ.

ಯಾಕೆ ಸೆಮಿಫೈನಲ್?
ಚುನಾವಣೆಯ ನಡೆಯುವ ಐದು ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಷ್ಟು ಮಾತ್ರವಲ್ಲದೆ ಲೋಕಸಭೆಯ ಸ್ಥಾನಗಳಲ್ಲಿಯೂ ಅದು ಮುಂಚೂಣಿಯಲ್ಲಿದೆ. ಐದು ರಾಜ್ಯ ಒಟ್ಟು 83 ಸ್ಥಾನಗಳ ಪೈಕಿ 2014ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು 60 ಸ್ಥಾನಗಳನ್ನು ಪಡೆದಿತ್ತು. ಆದರೆ, ಕಾಂಗ್ರೆಸ್ ಪಡೆದದ್ದು ಕೇವಲ 9 ಸ್ಥಾನ ಮಾತ್ರ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಪರಸ್ಪರ ಭಿನ್ನ ಎಂಬುದು ನಿಜವಾದರೂ ಪಕ್ಷಗಳ ಮನೋಬಲ ಹೆಚ್ಚಿಸಲು ಮತ್ತು ಕುಗ್ಗಿಸಲು ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ.

ಮಧ್ಯಪ್ರದೇಶ
2005 ರಿಂದ ಮಧ್ಯಪ್ರದೇಶದ ಆಡಳಿತ ಚುಕ್ಕಾಣಿ ಬಿಜೆಪಿಯ ವಶದಲ್ಲಿದೆ. ಕಳೆದ ಹದಿನೈದು ವರ್ಷಗಳಿಂದ ಶಿವರಾಜ ಚೌಹ್ವಾಣ ಮುಖ್ಯಮಂತ್ರಿಯಾಗಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು 230 ಸ್ಥಾನಗಳ ಪೈಕಿ 165 ಸ್ಥಾನಗಳ ತನ್ನದಾಗಿಸಿಕೊಂಡಿತ್ತು. ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ 58 ಸ್ಥಾನ ಪಡೆದರೆ ಬಿಎಸ್‍ಪಿ 4 ನಾಲ್ಕು ಸ್ಥಾನ ಪಡೆದಿತ್ತು. ಕಳೆದ

shivaraja chowhvan

ಚುನಾವಣೆಯಲ್ಲಿಯೂ ಬಿಎಸ್ ಪಿಯು ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಈ ಬಾರಿ ಕೂಡ ಬಿಎಸ್‍ಪಿ ಕಾಂಗ್ರೆಸ್ ಜೊತೆ ಮೈತ್ರಿಗೆ ನಿರಾಕರಿಸಿದೆ. ಒಂದುವರೆ ದಶಕದ ಆಡಳಿತ ರೂಪಿಸಿರುವ ಆಡಳಿತ ವಿರೋಧಿ ಅಲೆಯನ್ನು ವಿರೋಧ ಪಕ್ಷ ಕಾಂಗ್ರೆಸ್ ತನ್ನೆಡೆಗೆ ತಿರುಗಿಸಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆ ಪ್ರಮುಖವಾಗಿದೆ. ವ್ಯಾಪಂನಂತಹ ಅತಿದೊಡ್ಡ ಹಗರಣ ಸೇರಿದಂತೆ ಬಿಜೆಪಿಯ ಒಟ್ಟು ವೈಫಲ್ಯವನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾಂಗ್ರೆಸ್ ಸಫಲವಾದರೆ ಮಾತ್ರ ಮಧ್ಯಪ್ರದೇಶದಲ್ಲಿ ಅದು ಮುಖ ಉಳಿಸಿಕೊಳ್ಳಬಹುದು. ಚುನಾವಣಾ ತಂತ್ರ ಮತ್ತು ಆಕ್ರಮಣಕಾರಿ ಧೋರಣೆಯಿಂದ ಕಣಕ್ಕೆ ಇಳಿಯುವ ಬಿಜೆಪಿಗೆ ಮಧ್ಯಪ್ರದೇಶದ ಜನತೆ ನೀಡುವ ತೀರ್ಪು ಕೇವಲ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತ್ರ ನಿರ್ಣಾಯಕವಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ 29 ಸ್ಥಾನಗಳಲ್ಲಿ 26 ಪಡೆದಿತ್ತು. ಕಾಂಗ್ರೆಸ್ ಗೆಲುವು ಕೇವಲ 3 ಸ್ಥಾನಗಳಿವೆ ಸೀಮಿತವಾಗಿತ್ತು. ಆದರೆ, 2015ರಲ್ಲಿ ನಡೆದ ರತಲಾಮ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಚ್ಚರಿಗೊಳಿಸುವ ಪ್ರಮಾಣದಲ್ಲಿ ಗೆಲುವು ತನ್ನದಾಗಿಸಿಕೊಂಡಿತ್ತು.

ರಾಜಸ್ಥಾನ
ಚುನಾವಣೆಯ ನಡೆಯಲಿರುವ ಮತ್ತೊಂದು ಪ್ರಮುಖ ರಾಜ್ಯ ರಾಜಸ್ಥಾನ. ಆಟ ಆರಂಭವಾಗುವ ಮುನ್ನವೇ ಆಡಳಿತಾರೂಢ ಪಕ್ಷಕ್ಕೆ ಮುಖಭಂಗದ ಸೂಚನೆಗಳು ದೊರೆಯತೊಡಗಿವೆ. ಮುಖ್ಯಮಂತ್ರಿ ಆಗಿರುವ ವಸುಂಧರಾಜೆ ಸಿಂಧ್ಯಾ ಅವರ ಆಡಳಿತ ವೈಖರಿಗೆ ರೋಸಿದಂತೆ ಕಾಣಿಸುತ್ತಿದೆ. ಅದಕ್ಕೆ ಪ್ರತಿಯಾಗಿ ಸಚಿನ್ ಪೈಲಟ್ ನೇತೃತ್ವದ ಕಾಂಗ್ರೆಸ್ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದೆ. ಕಾಂಗ್ರೆಸ್ ಆಂತರಿಕ

vasumdaraje sindhya

ಕಚ್ಚಾಟದಿಂದ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ರಾಜಸ್ಥಾನದಲ್ಲಿ ಅದು ಅಧಿಕಾರಕ್ಕೆ ಬರದಂತೆ ತಡೆಯುವುದು ಕಷ್ಟ. ಆದರೆ, ತನ್ನ ಆತ್ಮಹತ್ಯಾತ್ಮಕ ಧೋರಣೆಗಳಿಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ಅದನ್ನು ಮೀರುವುದೇ? ಕಾದು ನೋಡಬೇಕು.
2013ರ ವಿಧಾನಸಭಾ ಚುನಾವಣೆಯಲ್ಲಿ 200 ಸ್ಥಾನಗಳ ಪೈಕಿ ಬಿಜೆಪಿಯು 163 ಸ್ಥಾನ ಪಡೆದು ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್ ಕೇವಲ 21 ಸ್ಥಾನ ಪಡೆದಿತ್ತು. ನಂತರ ನಡೆದ ಉಪಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷ ಪರಾಜಯದ ಮುಖ ನೋಡಬೇಕಾಗಿತ್ತು. ಬಿಎಸ್ ಪಿ 3 ಸ್ಥಾನ ಪಡೆದಿತ್ತು. ಚುನಾವಣಾಪೂರ್ವ ಸಮೀಕ್ಷೆಗಳೆಲ್ಲವೂ ಆಡಳಿತ ವಿರೋಧಿ ಅಲೆಯನ್ನು ಸೂಚಿಸುವಂತಿವೆ. ವಿಧಾನಸಭಾ ಚುನಾವಣೆಯು ವಸುಂಧರಾ ಅವರ ಚುನಾವಣೆ ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ರಾಜಸ್ಥಾನದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇದೇ ಮಾತನ್ನು ಹೇಳುವಂತಿಲ್ಲ. ರಾಜ್ಯದ 25 ಸ್ಥಾನಗಳಲ್ಲಿ ಎಲ್ಲ ಸ್ಥಾನಗಳಲ್ಲಿಯೂ ಗೆಲುವು ಸಾಧಿಸಿ ಕ್ಲೀನ್ ಸ್ವೀಪ್ ಮಾಡಿತ್ತು. ಮೋದಿಯವರು ಎದುರಿಸಲಿರುವ ಚುನಾವಣೆಯಲ್ಲಿಯೂ ಎಲ್ಲ 25 ಸ್ಥಾನ ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜಸ್ಥಾನದ ಅಲವರ, ಅಜ್ಮೀರ ಉಪಚುನಾವಣೆಯಲ್ಲಿ ಒಂದುವರೆ ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ತನ್ನದಾಗಿಸಿಕೊಂಡಿದೆ.

ಛತ್ತೀಸ್‍ಘಡ
ಛತ್ತೀಸಗಢದಲ್ಲಿಯೂ ಆಡಳಿತದಲ್ಲಿರುವ ಬಿಜೆಪಿಗೆ ರಾಜಸ್ಥಾನದಂತಹ ಸ್ಥಿತಿಯೇನೂ ಇಲ್ಲ. ಆದರೆ, ಅಧಿಕಾರ ಉಳಿಸಿಕೊಳ್ಳಲೇಬೇಕಾದ ಸ್ಥಿತಿಯಲ್ಲಿ ಅಲ್ಲಿನ ಮುಖ್ಯಮಂತ್ರಿ ರಮಣಸಿಂಗ್ ಇದ್ದಾರೆ. ಸಮೀಕ್ಷೆಗಳು ಆಡಳಿತ ಪಕ್ಷವಾಗಿ ಮತದಾರರ ನಿಲುವು ಇಲ್ಲ ಎನ್ನುವ ಸೂಚನೆ ನೀಡಿವೆ. ಆದರೆ, ಕಾಂಗ್ರೆಸ್ ತೊರೆದು ಹೋಗಿರುವ ಅಜಿತ್ ಜೋಗಿ ತನ್ನದೇ ಪಕ್ಷ ಕಟ್ಟಿಕೊಂಡು ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ

ramana singh

ಸವಾಲಾಗಿದ್ದಾರೆ. ತ್ರಿಕೋನ ಸ್ಪರ್ಧೆಯಲ್ಲಿ ಯಾರ ಕೈ ಮೇಲಾಗಬಹುದು ಎಂಬುದನ್ನು ನಿರ್ಧರಿಸುವುದು ಕಷ್ಟ. ಅಜಿತ್ ಜೋಗಿ ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿಲ್ಲವಾದರೂ ಕಾಂಗ್ರೆಸ್‍ಗೆ ಎಷ್ಟರಮಟ್ಟಿಗೆ ನಷ್ಟವನ್ನುಂಟು ಮಾಡುತ್ತಾರೆ ಎಂಬುದು ಆಸಕ್ತಿಕರ ಅಂಶ.
2013ರ ಚುನಾವಣೆಯಲ್ಲಿ ವಿಧಾನಸಭೆಯ 90 ಸ್ಥಾನಗಳ ಪೈಕಿ ಬಿಜೆಪಿಯ 49 ಸ್ಥಾನ ಪಡೆದು ಸರಳ ಬಹುಮತಕ್ಕಿಂತ ಸ್ವಲ್ಪ ಮುಂದಿತ್ತು. 39 ಸ್ಥಾನ ಪಡೆದ ಕಾಂಗ್ರೆಸ್‍ನ ಸ್ಥಿತಿ ಕೂಡ ನಿರಾಶಾದಾಯಕವೇನಾಗಿರಲಿಲ್ಲ. ಈಗಲೂ ಅಜಿತ್ ಜೋಗಿ ಪಕ್ಷದ ಮತ ವಿಭಜನೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿದರೆ ಮಾತ್ರ ಕಾಂಗ್ರೆಸ್ ತನ್ನ ನೆಲೆ ಕಂಡುಕೊಳ್ಳಬಹುದು. ಅತಂತ್ರ ಸ್ಥಿತಿ ರೂಪುಗೊಂಡರೆ ಎಲ್ಲ ಸಣ್ಣಪುಟ್ಟ ಪಕ್ಷಗಳಿಗೂ ಭಾರೀ ಬೇಡಿಕೆ ಉಂಟಾಗಲಿದೆ. ಛತ್ತೀಸಗಢಕ್ಕೆ ಸಂಬಂಧಿಸಿದಂತೆ ಈ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ 11 ಸ್ಥಾನಗಳಲ್ಲಿ ಬಿಜೆಪಿಯು 10ರಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಖಾತೆ ತೆರೆಯುವಲ್ಲಿ ಮಾತ್ರ ಯಶಸ್ವಿಯಾಗಿತ್ತು. ವಿಧಾನಸಭಾ ಚುನಾವಣೆಯ ಫಲಿತಾಂಶವು 2019ರ ಚುನಾವಣೆಯ ಮೇಲೂ ತನ್ನ ಪ್ರಭಾವ ಬೀರದೇ ಇರಲಾರದು.

ತೆಲಂಗಾಣ
ಅವಧಿಗೆ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿರುವ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರು ಅಕಾಲಿಕ ಚುನಾವಣೆಗೆ ಕಾರಣರಾಗಿದ್ದಾರೆ. 2014ರ ಏಪ್ರಿಲ್ ನಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಆಂಧ್ರಪ್ರದೇಶದಿಂದ ವಿಭಜನೆಗೊಂಡ ನಂತರ ನಡೆದ ಮೊದಲ ಚುನಾವಣೆಯಲ್ಲಿ ಟಿಆರ್ ಎಸ್ ಪಕ್ಷವು ಭಾರೀ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಲೋಕಸಭಾ ಚುನಾವಣೆಯ ಜೊತೆಗೆ ಮತದಾರರ ಬಳಿಗೆ ಹೋಗಲು ಹಿಂದೇಟು ಹಾಕಿದ ಟಿಆರ್ ಎಸ್ ಅವಧಿಗೆ ಮುನ್ನವೇ ಚುನಾವಣೆಗೆ ಸಜ್ಜಾಗಿದೆ. 2014ರ

k chandrashekara rao

ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ ಟಿಆರ್ ಎಸ್ ಪಕ್ಷವು 90 ಸ್ಥಾನಗಳ ಅದ್ಭುತ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 13 ಮತ್ತು ಬಿಜೆಪಿ 5 ಎಐಎಂಎಐಎಂ 7, ತೆಲುಗುದೇಶಂ ಪಕ್ಷ (ಟಿಡಿಪಿ) 3, ಸಿಪಿಐ (ಎಂ) 1 ಸ್ಥಾನಗಳಲ್ಲಿ ತನ್ನ ನೆಲೆ ಕಂಡುಕೊಂಡಿದ್ದವು. ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಡಿಪಿ, ತೆಲಂಗಾಣ ಜನ ಸಮಿತಿ ಹಾಗೂ ಎಡಪಕ್ಷಗಳು ಮಹಾಮೈತ್ರಿ ಮಾಡಿಕೊಂಡಿವೆ. ರಾಜ್ಯ ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಅದು ಅನಿವಾರ್ಯವೂ ಆಗಿತ್ತು. ಈ ಮಹಾಮೈತ್ರಿಗೆ ಟಿಆರ್ ಎಸ್ ಮತ್ತು ಚಂದ್ರಶೇಖರರಾವ್ ಅವರ ಮರು ಆಯ್ಕೆಯನ್ನು ತಡೆಯುವ ಸಾಮಥ್ರ್ಯ ಬರಬಹುದೇ? ಎಂಬುದಕ್ಕೆ ಫಲಿತಾಂಶದ ವರೆಗೂ ಕಾಯಬೇಕು.
2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 17 ಸ್ಥಾನಗಳ ಪೈಕಿ ಟಿಆರ್ ಎಸ್ 11 ಸ್ಥಾನ ಪಡೆದಿತ್ತು. ಕಾಂಗ್ರೆಸ್ 2 ಸ್ಥಾನ ಪಡೆದರೆ ಬಿಜೆಪಿ, ಎಐಎಂಐಎಂ, ವೈಎಸ್ ಆರ್ ಕಾಂಗ್ರೆಸ್, ಟಿಡಿಪಿ ತಲಾ ಒಂದು ಸ್ಥಾನ ಪಡೆದಿದ್ದವು. ವಿಧಾನ ಸಭೆಯಲ್ಲಿ ಚಂದ್ರಶೇಖರರಾವ್ ಅವರಿಗೆ ಹಿನ್ನಡೆಯಾದರೆ ಮಾತ್ರ ಅದು ಲೋಕಸಭೆಯ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು.

ಮಿಜೋರಾಂ
ಈಶಾನ್ಯ ರಾಜ್ಯಗಳಲ್ಲಿ ಒಂದಾಗಿರುವ ಮಿಜೋರಾಂನಲ್ಲಿಯೂ ವಿಧಾನ ಸಭೆ ಚುನಾವಣೆಯ ನಡೆಯುತ್ತಿದೆ. ಸದ್ಯ ಕಾಂಗ್ರೆಸ್‍ನ ಲಾಲ್

lal thanwal

ಥನ್‍ವಾಲ್ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ 40 ಸ್ಥಾನಗಳ ಪೈಕಿ 34ನ್ನು ತನ್ನದಾಗಿಸಿಕೊಂಡಿತ್ತು. ವಿರೋಧಿ ಮಿಜೋ ನ್ಯಾಷನಲ್ ಫ್ರಂಟ್ 4 ಮತ್ತು ಮಿಜೋರಾಂ ಪೀಪಲ್ ಕಾನ್ಫರೆನ್ಸ್ 1 ಸ್ಥಾನ ಪಡೆದಿದ್ದವು. ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವ ಕಾಂಗ್ರೆಸ್ ಉತ್ಸಾಹದಲ್ಲಿದೆ. ಬಿಜೆಪಿಯು ಎರಡು ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಲಿದೆ. ಮಿಜೋರಾಂನಲ್ಲಿ ಲೋಕಸಭೆಯ ಒಂದು ಸ್ಥಾನ ಇದೆ. ಅದು ಸದ್ಯ ಕಾಂಗ್ರೆಸ್ ವಶದಲ್ಲಿದೆ.
ಲೋಕಸಭಾ ಚುನಾವಣೆಗೆ ಮುನ್ನುಡಿಯಂತಿರುವ ಐದು ರಾಜ್ಯಗಳ ಮತದಾರರು ನೀಡುವ ಜನಾದೇಶ ಮುಂಬರುವ 2019ರ ಪಾರ್ಲಿಮೆಂಟ್ ಎಲೆಕ್ಷನ್‍ಗೆ ‘ದಿಕ್ಸೂಚಿ’ ಎಲ್ಲಾ ಆಗುವ ಸಾಧ್ಯತೆಗಳಿವೆ.

– ಡಿ.ಪಿ.ಗೌತಮ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...