“ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕೆಂದು ಸುಮಾರು 8,400 ಕೋಟಿ ವ್ಯಯಿಸಿ ಐಷಾರಾಮಿ ವಿಮಾನದ ವ್ಯವಸ್ಥೆ ಮಾಡಿರುವ ಸರ್ಕಾರ, ನಮ್ಮ ದೇಶದ ಸೈನಿಕರಿಗೆ ಬುಲ್ಲೆಟ್‌ಪ್ರೂಫ್ ಟ್ರಕ್ ಒದಗಿಸಲು ನಿರಾಕರಿಸಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸೈನಿಕರು ಮಾತನಾಡುತ್ತಿರುವುದ ದಾಖಲಾಗಿದೆ.
ಇದನ್ನೂ ಓದಿ: ಮೋದಿಯ ₹8000 ಕೋಟಿ ವಿಮಾನದ ಬಗ್ಗೆ ಪ್ರಶ್ನೆ ಯಾಕಿಲ್ಲ?- ರಾಹುಲ್ ಗಾಂಧಿ
हमारे जवानों को नॉन-बुलेट प्रूफ़ ट्रकों में शहीद होने भेजा जा रहा है और PM के लिए 8400 करोड़ के हवाई जहाज़!
क्या यह न्याय है? pic.twitter.com/iu5iYWVBfE
— Rahul Gandhi (@RahulGandhi) October 10, 2020
ಸಮವಸ್ತ್ರದಲ್ಲಿರುವ ಸೈನಿಕರು, “ಇಂದಿನ ಸಂದರ್ಭದಲ್ಲಿ ಬುಲ್ಲೆಟ್‌ಪ್ರೂಫ್ ವಾಹನದಲ್ಲಿ ಚಲಿಸುವುದೇ ಅಪಾಯವಾಗಿದೆ. ಆದರೆ ನಾವು ಬುಲ್ಲೆಟ್‌ಪ್ರೂಫ್ ರಹಿತ ಟ್ರಕ್‌ನಲ್ಲಿ ಚಲಿಸುತ್ತಿದ್ದೇವೆ. ಅವರು ನಮ್ಮ ಜೀವದೊಂದಿಗೆ ಆಟವಾಡುತ್ತಿದ್ದಾರೆ. ನಾವು ನಮ್ಮ ಜೀವನವನ್ನು ವ್ಯರ್ಥ ಮಾಡುತ್ತಿದ್ದೇವೆ” ಎಂದು ಮಾತನಾಡಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಒಂದು ಸ್ವತಂತ್ರ ಮಾಧ್ಯಮವನ್ನು ನನಗೆ ಕೊಡಿ, ಮರುಕ್ಷಣ ಈ ಸರ್ಕಾರ ಅಧಿಕಾರದಲ್ಲಿರುವುದಿಲ್ಲ: ರಾಹುಲ್ ಗಾಂಧಿ
“ಇದು ಕಳಪೆ ವ್ಯವಸ್ಥೆಯಾಗಿದೆ. ನಮಗೆ ಅತ್ಯಂತ ಕೆಟ್ಟ ಟ್ರಕ್ ಅನ್ನು ಒದಗಿಸಲಾಗಿದೆ. ಹಿರಿಯ ಅಧಿಕಾರಿಗಳು ಬುಲ್ಲೆಟ್‌ಪ್ರೂಫ್ ವಾಹನದಲ್ಲಿ ಸಂಚರಿಸುತ್ತಾರೆ. ಆದರೆ ನಮಗೆ ಮಾತ್ರ ಬುಲ್ಲೆಟ್‌ಪ್ರೂಫ್ ರಹಿತ ವಾಹನ ಒದಗಿಸಿದ್ದಾರೆ” ಎಂದು ಮತ್ತೊಬ್ಬ ಸೈನಿಕ ಹೇಳಿರುವುದನ್ನು ಕೇಳಬಹುದು.
ಮತ್ತೊಂದು ಟ್ವೀಟ್‌ನಲ್ಲಿ, “ಪ್ರಧಾನಮಂತ್ರಿ ತನಗಾಗಿ 8,400 ಕೋಟಿ ಮೌಲ್ಯದ ವಿಮಾನವನ್ನು ಖರೀದಿಸಿದ್ದಾರೆ. ಈ ದುಡ್ಡಿನಲ್ಲಿ ಸಿಯಾಚಿನ್-ಲಡಾಕ್ ಗಡಿಯಲ್ಲಿರುವ ನಮ್ಮ ಸೈನಿಕರಿಗೆ ಏನೆಲ್ಲಾ ಖರೀದಿಸಬಹುದು? ಪ್ರಧಾನಿಯವರು ಕೇವಲ ತನ್ನ ಬಗ್ಗೆ ಮಾತ್ರ ಯೋಚಿಸುತ್ತಾರೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಕುರಿತು ಪ್ರಧಾನಿ ಒಂದೂ ಮಾತಾಡಲಿಲ್ಲ ಏಕೆ? : ರಾಹುಲ್ ಗಾಂಧಿ ಪ್ರಶ್ನೆ
PM ने अपने लिए 8400 करोड़ का हवाई जहाज़ ख़रीदा।
इतने में सियाचिन-लद्दाख़ सीमा पे तैनात हमारे जवानों के लिए कितना कुछ ख़रीदा जा सकता था:
गरम कपड़े: 30,00,000
जैकेट, दस्ताने: 60,00,000
जूते: 67,20,000
ऑक्सिजन सिलेंडर: 16,80,000PM को सिर्फ़ अपनी इमेज की चिंता है सैनिकों की नहीं। pic.twitter.com/uQf038BiJj
— Rahul Gandhi (@RahulGandhi) October 8, 2020
ಈ ಹಿಂದೆಯೂ ಮಾಧ್ಯಮಗಳನ್ನು ಗುರಿಯಾಗಿಸಿಕೊಂಡು “ಪ್ರಧಾನಿಗಾಗಿ ಅಷ್ಟು ದೊಡ್ಡ ಮೊತ್ತದ ವಿಮಾನ ಖರೀದಿಸಲಾಗಿದೆ. ಆದರೂ ಯಾವುದೇ ಮಾಧ್ಯಮದವರೂ ಇದನ್ನು ಪ್ರಶ್ನಿಸುವುದಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಕರಾಳ ಕಾಯ್ದೆಗಳನ್ನು ತೆಗೆದುಹಾಕುತ್ತದೆ: ರಾಹುಲ್ ಗಾಂಧಿ


