Homeಮುಖಪುಟಟ್ರ್ಯಾಕ್ ರೆಕಾರ್ಡ್ ಹೇಳುವ ಸತ್ಯ : ರೈಲ್ವೆಯನ್ನೂ ಹಳಿ ತಪ್ಪಿಸಿದ ಮೋದಿ ಸರ್ಕಾರ!

ಟ್ರ್ಯಾಕ್ ರೆಕಾರ್ಡ್ ಹೇಳುವ ಸತ್ಯ : ರೈಲ್ವೆಯನ್ನೂ ಹಳಿ ತಪ್ಪಿಸಿದ ಮೋದಿ ಸರ್ಕಾರ!

- Advertisement -
- Advertisement -

-ಸಂಜಯ್ ಬಸು ಮತ್ತು ಉಜ್ವಲ್ ಚೌಧರಿ

ಕನ್ನಡಕ್ಕೆ: ಮಲ್ಲನಗೌಡರ್ ಪಿ.ಕೆ

ಒಂದು ಕಡೆ ಸಾರ್ವಜನಿಕ ತನಿಖಾ ಸಂಸ್ಥೆಗಳನ್ನು ಬಿಜೆಪಿಯ ಏಜೆಂಟರನ್ನಾಗಿ ಪರಿವರ್ತಿಸಿದ ಮೋದಿ ಸರ್ಕಾರ, ಇನ್ನೊಂದು ಕಡೆ ಸಾರ್ವಜನಿಕ ಸೇವೆ ನೀಡುವ ಸರ್ಕಾರಿ ಇಲಾಖೆ, ಸಂಸ್ಥೆಗಳನ್ನು ಹಳ್ಳ ಹಿಡಿಸುತ್ತ ಬಂದಿತು. ಅನಿಲ್ ಅಂಬಾನಿಗಾಗಿ ಎಚ್‍ಎಎಲ್ ಅನ್ನು, ಮುಖೇಶ್ ಅಂಬಾನಿಗಾಗಿ ಬಿಎಸ್‍ಎನ್‍ಎಲ್‍ನ್ನು ವಂಚಿಸಿದ ಮೋದಿ ಸರ್ಕಾರ ರೈಲ್ವೇ ಇಲಾಖೆಗೂ ಒಂದು ದುರ್ಗತಿ ಕಾಣಿಸಿಯೇ ಬಿಟ್ಟಿದೆ…..

ಭಾರತದ ಜೀವನಾಡಿ ಎಂದೇ ಹೆಸರು ಪಡೆದ ರೈಲ್ವೇ ವ್ಯವಸ್ಥೆಯನ್ನು ಈ ಐದು ವರ್ಷಗಳಲ್ಲಿ ಹಳಿ ತಪ್ಪಿಸಿದ ‘ಕೀರ್ತಿ’ಯನ್ನು ಮೋದಿ ಸರ್ಕಾರ ಹೊತ್ತುಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ದೊರೆತ ಮತ್ತು ಲೋಕಸಭೆಗೆ ಕೇಂದ್ರ ಸರ್ಕಾರವೇ ನೀಡಿದ ಮಾಹಿತಿಗಳೆರಡೂ ಇದನ್ನು ಪುಷ್ಟಿಕರಿಸುತ್ತಿವೆ.

ವರ್ಷದಲ್ಲಿ 8 ಬಿಲಿಯನ್ (8 ಶತಕೋಟಿ) ಪ್ರಯಾಣಿಕರನ್ನು ಸಾಗಿಸುವ ವಿಶ್ವದ ನಾಲ್ಕನೇ ದೊಡ್ಡ ನೆಟ್‍ವರ್ಕ್, ಚೀನಾದ ನಂತರ ಸಾಮರ್ಥಯದಲ್ಲಿ ಎರಡನೇ ಸ್ಥಾನ ಹೊಂದಿರುವ ಭಾರತೀಯ ರೈಲ್ವೇ ಇವತ್ತು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಈ ಸರ್ಕಾರ ಬಂದ ಮೊದಲ ವರ್ಷ 2014-15ರಲ್ಲೇ 135 ರೈಲು ಅಪಘಾತ ಸಂಭವಿಸಿದವು, ಅದು ಕ್ರಮೇಣ ಇಳಿಯುತ್ತ ಬಂದು 2017-18ರಲ್ಲಿ 78ಕ್ಕೆ ಇಳಿದಿತು. 2018ರ ನವೆಂಬರರನಲ್ಲಿ ಆರ್‍ಟಿಐ ಅಡಿ ಸಿಕ್ಕ ಮಾಹಿತಿಯಿದು. ಆದರೆ ಅಪಘತಗಳ ಸಂಖ್ಯೆ ಇಳಿಮುಖಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಸುರಕ್ಷತಾ ಕ್ರಮಗಳು ಕಾರಣವಲ್ಲ, ಅದಕ್ಕೆ ಇತರ ಹಲವು ಕಾರಣಗಳಿವೆ.

ಡಿಸೆಂಬರ್ 2018ರಲ್ಲಿ ಇಲಾಖೆ ನೀಡಿದ ಇನ್ನೊಂದು ಉತ್ತರದ ಪ್ರಕಾರ, 2014-15ರಲ್ಲಿ 3,591 ಟ್ರೇನುಗಳು ರದ್ದಾಗಿದ್ದರೆ, 2017-18ರಲ್ಲಿ 21,053 ಟ್ರೇನುಗಳು (ಏಳು ಪಟ್ಟು!) ರದ್ದಾಗಿದ್ದವು! ಟ್ರೇನುಗಳ ಓಡಾಟವೇ ಕುಸಿದ ಮೇಲೆ ಅಪಘಾತ ಸಂಖ್ಯೆ ಸಹಜವಾಗಿ ಕಡಿಮೆ ತಾನೇ? ರೈಲ್ವೇ ¸ಹಾಯಕ ಸಚಿವ ರಾಜೇನ ಗೋಹೆನ್ ಸಂಸತ್ತಿಗೆ ಕೊಟ್ಟ ವಿವರಗಳೂ ಇದನ್ನು ಪುಷ್ಟಿಕರಿಸಿವೆ. 2014-15ರಲ್ಲಿ 8.317 ಬಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದರೆ, 2016-17ರಲ್ಲಿ ಈ ಸಂಖ್ಯೆ 8.116 ಬಿಲಿಯನ್. 2017-18ರಲ್ಲಿ ಶೇ. 30ರಷ್ಟು ಟ್ರೇನುಗಳು ತಡಾವಾಗಿ ಚಲಿಸಿವೆ. ನಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬಂದಿದೆ.

ಮಾರ್ಗ ನವೀಕರಣ ಮತ್ತು ವಿದ್ಯುದೀಕರಣ
ಮಾರ್ಗ ನವೀಕರಣ ಮತ್ತು ವಿದ್ಯುದೀಕರಣದಲ್ಲೂ ಈ ಸರ್ಕಾರದ ಸಾಧನೆ ತೀರಾ ಕಳಪೆಯಾಗಿದೆ. ರೈಲ್ವೇ ಸುರಕ್ಷತೆಗೆ ಮಾರ್ಗ ನವೀಕರಣ ಅತ್ಯಂತ ಮುಖ್ಯವಾದ ಕ್ರಮ. ಫೆಬ್ರುವರಿ 2019ರಲ್ಲಿ ಆರ್‍ಟಿಐನಲ್ಲಿ ನೀಡಿದ ಮಾಹಿತಿ ಪ್ರಕಾರ, ಯುಪಿಎ ಸರ್ಕಾರ 2009-10ರಲ್ಲಿ ಮಾಡಿದ್ದ ಮಾರ್ಗ ನವೀಕರಣಗಳ ಸಂಖ್ಯೆಯನ್ನು 2017-18ರಲ್ಲಿ ಈ ಸರ್ಕಾರ ತಲುಪಿದೆ.

1 ಲಕ್ಷ 17 ಸಾವಿರ ಮಾರ್ಗ (ಟ್ರ್ಯಾಕ್)ವನ್ನು ರೈಲ್ವೆ ಹೊಂದಿದ್ದು, ಇದರಲ್ಲಿ ಬಹುಪಾಲು ಮಾರ್ಗಗಳು ತುಂಬ ಹಳೆಯವು ಇಲ್ಲವೇ ಓವರ್‍ಲೋಡ್‍ನಿಂದ ತತ್ತರಿಸುತ್ತಿರುವ ಸುವ ಮಾರ್ಗಗಳು. ಈ ಸರ್ಕಾರದ ಅವಧಿಯಲ್ಲಿ ಕೇವಲ 4 ಸಾವಿರ ಕಿ.ಮೀ (ಅಂದರೆ ಕೇವಲ ಶೇ. 3.57) ಮಾರ್ಗಗದ ನವೀಕರಣವಾಗಿದೆ! ಮೋದಿ ಸರ್ಕಾರದ ಮೊದಲ ಮೂರು ವರ್ಷಗಳಲ್ಲಿ ವಿದ್ಯುದೀಕರಣಪ್ರಕ್ರಿಯೆಯೇ ನಡೆಯಲಿಲ್ಲ. 2017-18ರಲ್ಲಿ ಕೇವಲ 4.087 ಕಿ.ಮೀ( 4 ಕಿಮೀ ಅನ್ನಿ) ಮಾರ್ಗದ ವಿದ್ಯುದೀಕರಣವಾಗಿದೆ!

ರೈಲ್ವೇಯನ್ನು ಸಶಕ್ತಗೊಳಿಸಲು ಹೊಸ ಹೊಸ ಲೈನ್‍ಗಳ ಸ್ಥಾಪನೆಯ ಅಗತ್ಯವಿದೆ. 2016-17ರಲ್ಲಿ 953 ಕಿಮೀ ಹೊಸ ಲೈನ್ ನಿರ್ಮಿಸಿದ ಮೋದಿ ಸರ್ಕಾರ, 2017-18ರಲ್ಲಿ ನಿರ್ಮಿಸಿದ್ದು ಕೇವಲ 409 ಕಿಮೀ!. ದಿನಕ್ಕೆ ಕೇವಲ 1.75 ಕೀಮೀ ಹೊಸ ಲೈನ್ ಮಾಡಿದ್ದನ್ನು ಸಾಧನೆ ಎನ್ನಲಾದೀತೆ?

ಫಂಡೂ ಇಲ್ಲ, ಬಾಂಡೂ ಇಲ್ಲ

ಆರಂಭಶೂರತ್ವ ತೋರಿದಂತೆ ಮಾಡಿದ ಸರ್ಕಾರ ರೈಲ್ವೆಗೆ ಅಗತ್ಯವಾದ ಬೃಹತ್ ಅನುದಾನ ಒದಗಿಸಲು ಎಲ್‍ಐಸಿಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಇದರ ಪ್ರಕಾರ ಎಲ್‍ಐಸಿ ಒಂದೂವರೆ ಲಕ್ಷ ಕೋಟಿ ರೂ ಒದಗಿಸಬೇಕಿತ್ತು. ಅಕ್ಟೋಬರ್ 25, 2015ರಂದು ಸಿಕ್ಕ ಮಾಹಿತಿ ಪ್ರಕಾರ, ಎಲ್‍ಐಸಿ ಮೊದಲ ಕಂತಾಗಿ 2 ಸಾವಿರ ಕೋಟಿ ನೀಡಿತ್ತು. ನಂತರ ಮಾರ್ಚ್ 26, 2018ರ ಮಾಹಿತಿ ಪ್ರಕಾರ, ನಂತರ ಅದು ಯಾವುದೇ ಫಂಡ್ ಬಿಡುಗಡೆ ಮಾಡಲೇ ಇಲ್ಲ. ಬಾಂಡ್‍ಗಳ ಮೂಲಕ ಎಲ್‍ಐಸಿ ನೆರವು ನೀಡಲಿದೆ ಎಂದು ಸರ್ಕಾರ ಹೇಳಿತು. ಹಾಗೇ ನೀಡಿದರೂ ಅದು 7 ಸಾವಿರ ದಾಟಲ್ಲ. ಒಂದೂವರೆ ಕೋಟಿ ಲಕ್ಷದಲ್ಲಿ ಉಳಿದ ಹಣ ಏಕೆ ಬರಲಿಲ್ಲ?

ಸರ್ಕಾರ ಹಲವು ಸ್ಟೇಷನ್‍ಗಳನ್ನು ನಿರ್ಮಿಸಲು ಖಾಸಗಿ-ಸಾರ್ವಜನಿಕ ಭಾಗವಹಿಸುವಿಕೆಯ (ಪಿಪಿಪಿ) ಮೊರೆ ಹೋಗಿತು. 13 ಸ್ಟೇಷನ್‍ಗಳ ಮರು ನಿರ್ಮಾಣದ ಘೋಷಣೆ ಮಾಡಲಾಗಿತು. ಇವತ್ತಿಗೂ ಒಂದೂ ಜಾರಿಗೆ ಬಂದಿಲ್ಲ!

ಮೋದಿಯ ವಿದೇಶಿ ನೆರವು!
ವಿದೇಶಗಳಿಗೆ ಹೋದಾಗ ಆ ದೇಶಗಳೊಂದಿಗೆ ರೈಲ್ವೇ ನವೀಕರಣ, ಅಭಿವೃದ್ಧಿಯ ಯೋಜನೆಗಳಿಗೆ ಮೋದಿ ಸಾಹೇಬರು ಸಹಿ ಹಾಕಿದ್ದಷ್ಟೇ ಬಂತು. ಯಾವವೂ ಅನುಷ್ಠಾನಕ್ಕೆ ಬgಲೇ ಇಲ್ಲ. ಏಪ್ರಿಲ್ 2015ರಲ್ಲಿ, ಫ್ರಾನ್ಸ್, ಮೇ 2015ರಲ್ಲಿ ಚೀನಾ ಮತ್ತು ಅಕ್ಟೋಬರ್ 2018ರಲ್ಲಿ ರಷ್ಯಾಗಳಿಗೆ ಭೇಟಿ ನೀಡಿದಾಗ ಮೋದಿ ರೈಲ್ವೇ ಅಭಿವೃದ್ಧಿಗೆ ಆ ದೇಶಗಳ ಜೊತೆಗೆ ಒಪ್ಪಂದ (ಒoU)ಗಳನ್ನು ಮಾಡಿಕೊಂಡು ಬಂದಿದ್ದರು. ಅವೆಲ್ಲ ಬರೀ ಶೋ ಆಗಿದ್ದವಷ್ಟೇ!
ಒಟ್ಟಿನಲ್ಲಿ ರೈಲ್ವೇ ವ್ಯವಸ್ಥೆಯನ್ನೇ ಹಳಿ ತಪ್ಪಿಸಿದ ಮೋದಿ ಸರ್ಕಾರ, ಕಾಲಕಾಲಕ್ಕೆ ಭಾರಿ ಸುಧಾರಣೆ ಎಂಬ ಹೆಡ್‍ಲೈನ್ಸ್ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುತ್ತ ಬಂದಿದೆ.
(ಕೃಪೆ: ಡೆಕ್ಕನ್ ಹೆರಾಲ್ಡ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...