Homeಕರ್ನಾಟಕಫ್ಯಾಕ್ಟ್ ಚೆಕ್: ಬೆಂಗಳೂರಲ್ಲಿ ‘ಮೋದಿ ಮಸೀದಿ’ ಇದೆಯೇ? ಇಲ್ಲಿದೆ ನೋಡಿ ಅಸಲಿ ಕಹಾನಿ!

ಫ್ಯಾಕ್ಟ್ ಚೆಕ್: ಬೆಂಗಳೂರಲ್ಲಿ ‘ಮೋದಿ ಮಸೀದಿ’ ಇದೆಯೇ? ಇಲ್ಲಿದೆ ನೋಡಿ ಅಸಲಿ ಕಹಾನಿ!

ಈ ಮಸೀದಿಯನ್ನು 175 ವರ್ಷಗಳಿಗೂ ಹಿಂದೆಯೇ ಕಟ್ಟಲಾಗಿದೆ. ಇತ್ತೀಚಿಗೆ ಈ ಮಸೀದಯನ್ನು ನವೀಕರಣ ಮಾಡಿದ ಕಾರಣಕ್ಕಾಗಿ ಈಗ ಅದು ಸುದ್ದಿಯಲ್ಲಿದೆ. ಈ ಮಸೀದಿ ಶಿವಾಜಿ ನಗರದಲ್ಲಿದೆ.

- Advertisement -
- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಹೀಗೊಂದು ಫೋಟೊ-ಸುದ್ದಿ ಹರಿದಾಡುತ್ತಿದೆ: ‘ಬೆಂಗಳೂರಿನ ಮುಸ್ಲಿಮರು ಮಸೀದಿಯೊಂದಕ್ಕೆ ನರೇಂದ್ರ ಮೋದಿ ಹೆಸರಿಟ್ಟಿದ್ದಾರೆ… ಇದನ್ನು ನೋಡಿ ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ’ ಎಂಬುದು ಆ ಸುದ್ದಿಯ ಸಾರಾಂಶ.

ಮೇಲಿನ ಸಂದೇಶದ ಪ್ರಕಾರ, ಬೆಂಗಳೂರಿನಲ್ಲಿ ಮಸೀದಿಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರಿಟ್ಟಿದ್ದಾರೆ. ಮೋದಿಯವರು ಫಾಲೋ ಮಾಡುವ ಟ್ವೀಟ್ ಖಾತೆ( @mahesh10816 ) ಯಿಂದ ಮೇಲಿನ ಸಂದೇಶವನ್ನು ಟ್ವೀಟ್ ಮಾಡಲಾಗಿದ್ದು, ಈ ಟ್ವೀಟ್ ಜೊತೆ ಎರಡು ಫೋಟೊಗಳೂ ಇವೆ. ಜೂನ್ 20ರ ಈ ಸಂದೇಶ ಅಂದೇ 400ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಪೋಸ್ಟ್‍ನ ಎಡಕ್ಕಿರುವ ಫೋಟೊದಲ್ಲಿ ‘MODI MASJID’ ಎಂಬುದನ್ನು, ಬಲಭಾಗದ ಫೋಟೊದಲ್ಲಿ ಹಿಂಬದಿಯಲ್ಲಿ ಮೋದಿಯ ಪೋಸ್ಟರ್ ಅನ್ನು ಕಾಣಬಹುದು. ವ್ಯಾಟ್ಸಾಪ್ ನಲ್ಲೂ ಈ ಸಂದೇಶ ವಿಪರೀತ ಹರಿದಾಡುತ್ತಿದೆ.

ಕನ್ನಡದ ಶೀರ್ಷಿಕೆ ಇರುವ ಫೋಟೊ ಒಂದು ಕೂಡ ಹರಿದಾಡುತ್ತಿದ್ದು, ‘ಮೋದಿ ಹೆಸರಲ್ಲಿ 12 ಕೋಟಿಯ ಮಸೀದಿ, ಮೋದಿ ಮಸೀದಿಯಲ್ಲಿ ಜಮೀರ ಖಾನ್’ ಎಂಬ ಸಾಲುಗಳಿವೆ. ಇಂಥದ್ದನ್ನು ತೋರಿಸಿ, ನೋಡಿ ಬೆಂಗಳೂರಿನ ಮುಸ್ಲಿಮರೂ ಮೋದಿ ಸಾಧನೆ ಮೆಚ್ಚಿದ್ದಾರೆ ಎಂದು ಸುಳ್ಳನ್ನು ಹರಡುವ ಕುತಂತ್ರವಿದು.

ಸತ್ಯ: ಬೆಂಗಳೂರಿನ ಯಾವ ಮಸಿದಿಗೂ ನರೆಂದ್ರ ಮೋದಿಯ ಹೆಸರನ್ನು ಇಡಲಾಗಿಲ್ಲ. ಮೇಲಿನ ಸಂದೇಶವನ್ನು ಮೋದಿ ಕೆಲವರು ಮುಸ್ಲಿಮರಲ್ಲೂ ಜನಪ್ರಿಯರು ಎಂದು ತೋರಿಸುವ ಭಾಗವಾಗಿ ಹರಡುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದ ಅಮಾಯಕರು ವ್ಯಾಟ್ಸಾಪ್‍ನಲ್ಲಿ ತಮ್ಮ ಸ್ನೇಹಿತರಿಗೆ ಇದನ್ನು ಕಳಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಬಳಕೆದಾರರ ಕೋರಿಕೆಯ ಮೇಲೆ ಮೇಲಿನ ಸಂದೇಶದ ಕುರಿತಾಗಿ ಆಲ್ಟ್‍ನ್ಯೂಸ್ ಫ್ಯಾಕ್ಟ್‍ಚೆಕ್ ಮಾಡಿದೆ. ಬೆಂಗಳೂರಲ್ಲಿ ಮೋದಿ ಮಸೀದಿ ಎಂಬುದು ಇದೆ ಆದರೂ, ಅದು ನರೇಂದ್ರ ಮೋದಿ ಹೆಸರಿನದ್ದಲ್ಲ. ಅದನ್ನು ‘ಮೋದಿ ಅಬ್ದುಲ್ ಗಫೂರ್’ ಎಂಬ ದಾನಿಯ ಸ್ಮರಣಾರ್ಥ ‘ಮೋದಿ ಮಸೀದಿ’ ಎಂದು ಹೆಸರಿಸಲಾಗಿದೆ. ಈ ಮಸೀದಿಯನ್ನು 175 ವರ್ಷಗಳಿಗೂ ಹಿಂದೆಯೇ ಕಟ್ಟಲಾಗಿದೆ. ಇತ್ತೀಚಿಗೆ ಈ ಮಸೀದಯನ್ನು ನವೀಕರಣ ಮಾಡಿದ ಕಾರಣಕ್ಕಾಗಿ ಈಗ ಅದು ಸುದ್ದಿಯಲ್ಲಿದೆ. ಈ ಮಸೀದಿ ಶಿವಾಜಿ ನಗರದಲ್ಲಿದೆ.

ಟ್ವೀಟ್ ಜೊತೆಗಿರುವ ಎಡಭಾಗದ ಫೋಟೊ ‘ಮೋದಿ ಮಸೀದಿ’ಯದ್ದು (ನರೇಂದ್ರ ಮೋದಿಯಲ್ಲ, ಮೋದಿ ಅಬ್ದುಲ್ ಗಫೂರ್)… ಎರಡನೇ ಫೋಟೊದ ಮೂಲ ಗೊತ್ತಾಗಿಲ್ಲವಾದರೂ, ಅದು ‘ಮೋದಿ ಮಸೀದಿ’ಯ ಫೋಟೊವಂತೂ ಅಲ್ಲ. ಮೇಲಿನ ಫೇಕ್ ಆಧರಿಸಿಯೇ ಜಮೀರ್ ನಿಂತಿರುವ ಮಸಿದಿಯ ಫೋಟೊ ಇರುವ ಕನ್ನಡ ವಿಡಿಯೊವನ್ನು ಸೃಷ್ಟಿಸಿ ಯುಟ್ಯೂಬ್‍ಗೆ ಅಪಲೋಡ್ ಮಾಡಲಾಗಿದೆ. ಕಳೆದ ವರ್ಷವಷ್ಟೇ ಈ ಮಸೀದಿ ನಿರ್ಮಸಿಲಾಗಿದೆ ಎಂದು ಸುಳ್ಳು ಬಿತ್ತರಿಸಲಾಗಿದೆ.

ಈ ಮಸೀದಿ ಬಗ್ಗೆ ಗೊತ್ತಾದರೆ ನಮ್ಮ ಚಾನೆಲ್‍ಗಳೂ ಮೋದಿ ಹೆಸರಲ್ಲಿ ಬೆಂಗಳೂರಲ್ಲಿ ಮಸೀದಿ ಎಂದು ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಬಹುದು, ಎಚ್ಚರವಿರಲಿ…

ಕೃಪೆ: ಆಲ್ಟ್ ನ್ಯೂಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...