Homeಅಂತರಾಷ್ಟ್ರೀಯಗಂಗಾವತಿಯಲ್ಲಿ ಮೋದಿ ಭಾಷಣ: ಸಾಧನೆಗಳೇ ಇಲ್ಲದ ತರಾವರಿ ಕಾಲಹರಣ!

ಗಂಗಾವತಿಯಲ್ಲಿ ಮೋದಿ ಭಾಷಣ: ಸಾಧನೆಗಳೇ ಇಲ್ಲದ ತರಾವರಿ ಕಾಲಹರಣ!

- Advertisement -
- Advertisement -

| ಮಲ್ಲನಗೌಡರ್ ಪಿ.ಕೆ |

‘ಲೇ ತಮ್ಮಾ, ಈ ಸರೆ ಪರೀಕ್ಸೆ ಹೆಂಗಾಗ್ಯಾವ್ಲೇ….ನೀ ಓದಿದ್ದ ನೋಡಿಲ್ಲಲೇ…ಹ್ಯಂಗ್ ಬರದಿದಿ?’- ಸಂಬಂಧಿಯೊಬ್ಬರು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿರುವ ಹುಡುಗನನ್ನು ಪ್ರಶ್ನಿಸಿದರು.
ಹುಡುಗ: ಅಂವಾ ಅಣ್ಣಾ ನಮ್ ಮನಿ ಮಗ್ಗಲ ಅದಾನಲ್ರಿ. ಅವಾ ಹ್ವಾದ ವರ್ಷ ಫೇಲಾಗಿದ್ದಾರಿ…ಹಹಹಹಾ…
ಸಂಬಂಧಿ: ನೀ ಹ್ಯಾಂಗ ಬರದಿಯೋ?
ಹುಡುಗ: ಅಂವಾ ನಮ್ ಸ್ಕೂಲ್ ಸೆಕ್ಯುರಿಟಿ ಅದಾನಲ್ರಿ, ಬಾಳ ಸ್ಟ್ರಿಕ್ಟ್ ಅದಾನರಿ. ಕಾಪಿ ಚೀಟಿ ಒಯ್ಯಾಕ ಬಿಡದ ಇಲ್ರಿ.
ಸಂಬಂಧಿ: ಹಂಗ ಇರ್ಬೇಕೋ…
(ಹುಡುಗ ಮನಸ್ಸಲ್ಲೇ ನಗುತ್ತ, ಯಪ್ಪಾ, ಪರೀಕ್ಷೆ ವಿಷಯ ಬಿಟ್ರಲ್ಲ ಸಾಕು ಎಂದು ವಿಷಯಾಂತರ ಮಾಡುತ್ತ ಹೋದ)
**

2019ರ ಚುನಾವಣೆಯಲ್ಲಿ ಮೋದಿ ಈ ಹುಡುಗನ ತರಹ ಭಾಷಣ ಕುಟ್ಟುತ್ತಿದ್ದಾರೆ. ಶುಕ್ರವಾರ ಗಂಗಾವತಿಯಲ್ಲಿ ಅವರು ಅಕ್ಷರಶ: ತೌಡು ಕುಟ್ಟಿ ಹೋದರು. ವಿಷಯಗಳೇ ಇಲ್ಲದ, ಸಾಧನೆಗಳೇ ಇಲ್ಲದ ವ್ಯಕ್ತಿ, ‘ಪಕ್ಕದ ಮನೆ ಅಣ್ಣ ಫೇಲಾಗಿದ್ದನ್ನು, ಸ್ಕೂಲ್ ಸೆಕ್ಯರಿಟಿ ಗಾರ್ಡ್ ಸ್ಟ್ರಿಕ್ಟ್ ಇರುವುದನ್ನು’ ಹೇಳುತ್ತ ಕಾಲಹರಣ ಮಾಡಿ ಹೋಗಿದ್ದಾರೆ.

ಅವರ ಭಾಷಣ ಆರಂಭವಾಗುವುದೇ ಎಚ್.ಡಿ. ರೇವಣ್ಣರ ಹೇಳಿಕೆ ಪ್ರಸ್ತಾಪಿಸುವ ಮೂಲಕ! ‘2014ರಲ್ಲೂ ದೇವೇಗೌಡರು ಹೀಗೆ ಹೇಳಿದ್ದರು, ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ತಗೊಳ್ತೀನಿ ಅಂತಾ. ಸನ್ಯಾಸ ತಗೊಂಡ್ರಾ? (ಪ್ರೇಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ!), ಅವರ ಮಗ ತಗಳ್ತಾರಾ?’- ಹೀಗೆ ಶುರುವಾಗಿ, ‘ಇದು ಕುಟುಂಬ ರಾಜಕಾರಣ ಮತ್ತು ರಾಷ್ಟ್ರವಾದಗಳ ನಡುವಿನ ಚುನಾವಣೆ’ ಎಂದು ನೀರು ಕುಡಿಯುತ್ತಾರೆ. ಅಷ್ಟರಲ್ಲಿ ‘ಮೋದಿ ಮೋದಿ’ ಎಂಬ ನಾದ ತೇಲಿ ಬಂದ ಕೂಡಲೇ, ‘ನಿಮ್ಮ ಪ್ರೀತಿಗೆ ಋಣಿ’ ಎನ್ನುತ್ತಾರೆ. ಒಟ್ಟು ಸುಮಾರು 40 ನಿಮಿಷದ ಭಾಷಣದಲ್ಲಿ ಐದು ಸಲ ಹೀಗೆ ‘ಡಿಸ್ಟರ್ಬ್’ ಆಗುತ್ತದೆ. ಮೋದಿ ಸುಧಾರಿಸಿಕೊಳ್ಳಲು ಭಕ್ತರು ಅವಕಾಶ ಮಾಡಿಕೊಡುತ್ತಾರೆ!

ಒಮ್ಮೆ ಬಲಗೈನ ತೋರುಬೆರಳು, ಮರುಕ್ಷಣವೇ ಎಡಗೈನ ತೋರುಬೆರಳನ್ನು ಆಕಾಶಕ್ಕೆ ತೋರಿಸುತ್ತ ಧ್ವನಿಯಲ್ಲಿ ಹಾವಭಾವ ತೋರಿಸಲು ಯತ್ನಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸೈನಿಕರ ಕುರಿತು ಕಾಳಜಿಯಿಂದ ಮಾತಾಡಿದ್ದು, ಸೈನಿಕರ ಹೆಸರನ್ನು ಬಳಸಿಕೊಳ್ಳುವ ಮೋದಿಯನ್ನು ಟೀಕಿಸಿದ್ದನ್ನು ತಿರುಚಿದ ಮೋದಿ, ‘ಎರಡು ಹೊತ್ತು ಊಟ ಇಲ್ಲದವರು ಸೇನೆ ಸೇರುತ್ತಾರೆ ಎಂದು ಕುಮಾರಸ್ವಾಮಿ ಸೈನಿಕರನ್ನು ಅವಮಾನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿವ ಅಭಿನಯ ಮಾಡಿದರು.

ಒಟ್ಟೂ ಭಾಷಣದಲ್ಲಿ ಆರು ಸಲ ಸೇನೆಯ ವಿಷಯ, ಎರಡು ಸಲ ಪಾಕ್ ವಿಷಯ ಬರುತ್ತದೆ. ‘ಮಾಸೂಮ್ ಬಚ್ಚೇ’ ಎಂದು ಐದು ಸಲ ಪ್ರಸ್ತಾಪಿಸುವ ಮೋದಿ, ‘ಮಧ್ಯಪ್ರದೇಶ ಸರ್ಕಾರವು ಮುಗ್ಧ ಮಕ್ಕಳ ಮತ್ತು ಗರ್ಭಿಣಿಯರಿಗೆ ಆಹಾರ ನೀಡುವ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿ ಕಾಂಗ್ರೆಸ್‍ಗೆ ದುಡ್ಡು ನೀಡಿದೆ’ ಎಂದು ಅಪಾದಿಸುತ್ತಾರೆ. ಮಾಸೂಮ್ ಬಚ್ಚೇ ಕೆ ಥಾಲಿ’ (ಮುಗ್ಧ ಮಕ್ಕಳ ರೊಟ್ಟಿ) ಕಸಿದಿದ್ದಾರೆ ಎಂಬ ಭಾವನಾತ್ಮಕ ಮಾತನ್ನು ರಿಪೀಟ್ ಮಾಡಿ ಸುಸ್ತಾಗಿ ಮತ್ತೆ ನೀರು ಕುಡಿಯುತ್ತಾರೆ. ಮತ್ತೆ ಮೋದಿ ಮೋದಿ…..

ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು –ಇದ್ಯಾವುದರ ಕುರಿತು ಚಕಾರವೇ ಇಲ್ಲ. ‘ಮೇಕ್ ಇನ್ ಇಂಡಿಯಾ’ , ಸ್ಮಾರ್ಟ್ ಸಿಟಿ ಬಗ್ಗೆಯೂ ಮಾತೇ ಇಲ್ಲ. ರಫೇಲ್ ಕುರಿತು ಬಾಯಿ ಬಿಡಲೇ ಇಲ್ಲ!

ಮೋದಿಯ ಜೋಶ್ ಇಳಿದು ಹೋಗಿದೆ. ಅದು ವಯಸ್ಸಿನ ಕಾರಣಕ್ಕೆ , ದೇಹದ ಕಾರಣಕ್ಕೆ ಅಲ್ಲ. ಮಾನಸಿಕವಾಗಿ ಮೋದಿ ‘ವೀಕ್’ ಆಗಿದ್ದಾರೆ. ಭಾಷಣಕ್ಕೆ ವಸ್ತುಗಳಿಲ್ಲದೇ ಪಾಕ್, ಸೈನಿಕರ ಮೊರೆ ಹೋಗುತ್ತಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಈ ಸಭೆ ಆಯೋಜಿಸಲಾಗಿತ್ತು. ಇಲ್ಲಿ ಮೂರೂ ಕಡೆ ಜೆಡಿಎಸ್ ಅಭ್ಯರ್ಥಿಗಳೇ ಇಲ್ಲ. ಆದರೆ ಭಾಷಣದ ಮೊದಲ ಹತ್ತು ನಿಮಿಷವನ್ನು ಜೆಡಿಎಸ್ ಟೀಕೆಯಲ್ಲೇ ಕಳೆದರು. ಇಡೀ ಭಾಷಣದಲ್ಲಿ ಅವರ ಕುಗ್ಗಿದ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಏನೋ ಮಾತಾಡಬೇಕು ಎಂಬಂತೆ ಕಾಲಹರಣ ಮಾಡಿದ್ದಷ್ಟೇ ಬಂತು. ಹಿಂದಿ ಭಾಷಿಕ ಪ್ರೇಕ್ಷಕರ ಎದುರೇ ಸಪ್ಪೆಯಾಗಿರುವ ಮೋದಿ, ಕನ್ನಡ-ತೆಲುಗು ಭಾಷಿಕ ಪ್ರೇಕ್ಷಕರ ಎದುರು ಫುಲ್ ಡಲ್. ಖಾಲಿ ಡಬ್ಬಿಯನ್ನು ಅಲ್ಲಾಡಿಸಿದಂತೆ ಇತ್ತು ಅವರ ಭಾಷಣ.. ನಡುನಡುವೆ ಮಬ್ಭಕ್ತರ ‘ಮೋದಿ ಮೋದಿ’ ಎಂಬುದಷ್ಟೇ ಮೋದಿಗೆ ಹಿತ ತಂದಿರಬಹುದು.

ರಾಹುಲ್ ಗಾಂಧಿ ಕನ್ನಡದಲ್ಲಿ ತಪ್ಪಾಗಿ ಮಾತಾಡಿದಾಗ ನ್ಯೂಸ್ ಮಾಡುವ ಮಾಧ್ಯಮಗಳು, ಮೋದಿ ಮಾಡಿದ ಅಪಭ್ರಂಶಗಳ ಬಗ್ಗೆ ಸುದ್ದಿನೇ ಮಾಡಿದಂತೆ ಕಾಣ್ತಾ ಇಲ್ಲ. ‘ಹಳ್ಳಿ ಹಳ್ಳಿಗೂ ಮೋದಿ’ ಎನ್ನುವಾಗ ಅವರು ‘ಹಲ್ಲಿ ಹಲ್ಲಿಗೂ ಮೋದಿ’ ಎಂದರು. ಸತ್ಯದ ಮಾತೇ ಎಂದು ಸುಮ್ಮನಿದ್ದು ಬಿಡೋಣವೇ?
***

ಈಗ ಮೊದಲ ಪ್ಯಾರಾಕ್ಕೆ ಬನ್ನಿ. ಈ ಸಲ ಪರೀಕ್ಷೆ ಬರೆದ ಎಸ್‍ಎಸ್‍ಎಲ್‍ಸಿ ಹುಡುಗ ಸಂಬಂಧಿಯನ್ನು ಯಾಮಾರಿಸುವ ರೀತಿಯಲ್ಲಿ ಮೋದಿ ಭಾಷಣವಿತ್ತು.
ಮನೆಗೆ ಹೋದ ಸಂಬಂಧಿ, ಆ ಹುಡುಗ ಫೇಲ್ ಆಗ್ತಾನೆ ಬಿಡು ಎಂದು ಪತ್ನಿಗೆ ಹೇಳಿ ಸುಮ್ಮನಾದರಂತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...