Homeಮುಖಪುಟಸಿಎಂ ಕಾರು ಚೆಕ್ ಮಾಡುವ ಆಯೋಗ ಪಿಎಂ ತಂದ ಸೂಟ್‍ಕೇಸ್‍ನ್ನು ಬಿಟ್ಟಿದ್ಯಾಕೆ?

ಸಿಎಂ ಕಾರು ಚೆಕ್ ಮಾಡುವ ಆಯೋಗ ಪಿಎಂ ತಂದ ಸೂಟ್‍ಕೇಸ್‍ನ್ನು ಬಿಟ್ಟಿದ್ಯಾಕೆ?

- Advertisement -
- Advertisement -

ಸಿಎಂ ಕಾರು ಚೆಕ್ ಮಾಡುವ ಆಯೋಗ ಪಿಎಂ ತಂದ ಸೂಟ್‍ಕೇಸ್‍ನ್ನು ಬಿಟ್ಟಿದ್ಯಾಕೆ? ಸಾರ್ವಜನಿಕ ವಲಯದ ಪ್ರಶ್ನೆಗಳು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಿಂದ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಏಪ್ರಿಲ್ 8ರಂದು ಚಿತ್ರದುರ್ಗಕ್ಕೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮದ ಸ್ಥಳಕ್ಕೆ ತೆರಳುತ್ತಿದ್ದಂತೆ, ಅವರ ಹೆಲಿಕಾಪ್ಟರ್‍ನಿಂದ ಭಾರದ ಸೂಟ್‍ಕೇಸ್ ಒಂದನ್ನು ಇಳಿಸಲಾಗಿದೆ. ಒಬ್ಬರಲ್ಲಾ ಇಬ್ಬರು ವ್ಯಕ್ತಿಗಳು ಅದನ್ನು ಕಷ್ಟಪಟ್ಟು ಎತ್ತಿಕೊಂಡು ಹೋಗುತ್ತಿರುವುದನ್ನು ನೋಡಿದರೆ, ಅದು ಬಹಳ ಭಾರ ಇರುವುದು ಗೊತ್ತಾಗುತ್ತದೆ. ಆ ಸೂಟ್‍ಕೇಸನ್ನು ನಂತರ ಒಂದು ಇನ್ನೋವಾ ಕಾರಿನಲ್ಲಿ ಇಡಲಾಗುತ್ತದೆ. ಕೂಡಲೇ ಕಾರು ವೇಗವಾಗಿ ಅಲ್ಲಿಂದ ತೆರಳುತ್ತದೆ.

ಇದರಿಂದ ಎದ್ದಿರುವ ಪ್ರಶ್ನೆಗಳಿಗೆ ಇದುವರೆಗೆ ಬಿಜೆಪಿ ಪಕ್ಷವಾಗಲೀ, ಚುನಾವಣಾ ಆಯೋಗವಾಗಲಿ ಉತ್ತರಿಸಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಚುನಾವಣಾ ಪ್ರಚಾರ ನಿಮಿತ್ತ ಪ್ರಯಾಣಿಸುತ್ತಿದ್ದಾಗ ಒಂದಕ್ಕಿಂತ ಹೆಚ್ಚು ಬಾರಿ ಅದನ್ನು ತಡೆದು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ‘ಎಷ್ಟು ಬೇಕಾದರೂ ಚೆಕ್ ಮಾಡಿ’ ಎಂದು ಮುಖ್ಯಮಂತ್ರಿಗಳು ಸಿಟ್ಟಿನಿಂದ ಹೇಳಿದರೆಂದು ವರದಿಯಾಗಿದೆ.

ಆದರೆ, ಇದೀಗ ಮೋದಿಯವರ ಹೆಲಿಕಾಪ್ಟರ್‍ನಿಂದ ಇಳಿಸಲಾದ ಭಾರದ ಸೂಟ್‍ಕೇಸ್ ಮತ್ತು ಇನ್ನೋವಾ ಕಾರನ್ನು ತಪಾಸಣೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಚಿತ್ರದುರ್ಗದಲ್ಲಿ ಮೋದಿ ಬಂದಾಗ ಬೆಂಗಾವಲು ಪಡೆ ವಾಹನದಿಂದ ಖಾಸಗಿ ವಾಹನಕ್ಕೆ ರಹಸ್ಯ ಸೂಟ್ ಕೇಸ್ ಗಡಿಬಿಡಿಯಲ್ಲಿ ಟ್ರಾನ್ಸಫರ್! ಚುನಾವಣೆಗೆ ದುಡ್ಡು ಸಪ್ಲೈ ಮಾಡಲು ಮೋದಿಯಿಂದ ಬೆಂಗಾವಲು ಪಡೆ ದುರುಪಯೋಗ?

Save Constitution Karnataka ಸಂವಿಧಾನ ಉಳಿವಿಗಾಗಿ ಕರ್ನಾಟಕ यांनी वर पोस्ट केले शनिवार, १३ एप्रिल, २०१९

ಕಳೆದ ತಿಂಗಳು ಪ್ರಜಾವಾಣಿ ಪತ್ರಿಕೆಯಲ್ಲಿ ‘ಚುನಾವಣಾ ಸಂದರ್ಭದಲ್ಲಿ ಹಣವನ್ನು ಹೇಗೆ ಸಾಗಿಸಲಾಗುತ್ತದೆ’ ಎಂಬ ಕುರಿತು ವಿವರವಾದ ವರದಿ ಪ್ರಕಟವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಇನ್ನೊಬ್ಬ ಪೊಲೀಸ್ ಅಧಿಕಾರಿ ಹಣ ಸಾಗಿಸುವ ಜವಾಬ್ದಾರಿ ಹೊತ್ತುಕೊಂಡಿದ್ದರು ಎಂದು ಅದರಲ್ಲಿ ಹೇಳಲಾಗಿತ್ತು.

ಈಗ ಇನ್ನೂ ಒಂದು ಹೆಜ್ಜೆ ದಾಟಿ ಅಧಿಕಾರದಲ್ಲಿರುವ ದೊಡ್ಡ ನಾಯಕರುಗಳೇ ಈ ಕೆಲಸ ಮಾಡುತ್ತಿದ್ದಾರಾ ಎಂಬ ಅನುಮಾನ ಉದ್ಭವಿಸುತ್ತದೆ. ಅದೇ ಸಂದರ್ಭದಲ್ಲಿ ಸಿಎಂಗೆ ಒಂದು ರೀತಿಯಲ್ಲಿ, ಪಿಎಂಗೆ ಇನ್ನೊಂದು ರೀತಿಯಲ್ಲಿ ಚುನಾವಣಾ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರಾ ಎಂಬುದು ಸಹಜವಾಗಿಯೇ ಮೂಡಿಬರುವ ಪ್ರಶ್ನೆ.

ಆದರೆ, ಅಂತಿಮ ಅಭಿಪ್ರಾಯಕ್ಕೆ ಬರುವ ಮುಂಚೆ ಯಾವುದಕ್ಕೂ ಬಿಜೆಪಿಯ ವತಿಯಿಂದ ಅಥವಾ ಚುನಾವಣಾ ಆಯೋಗದದ ವತಿಯಿಂದ ಸ್ಪಷ್ಟೀಕರಣ ಬರುತ್ತದಾ ಕಾದು ನೋಡಬೇಕು. ಈ ಕುರಿತು ಕಾಂಗ್ರೆಸ್ ಮುಖಂಡ ದಿನೇಶ್ ಗೂಂಡುರಾವ್ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.

 

ಅಪ್‌ಡೇಟ್: 14.04.2019

ಚಿತ್ರದುರ್ಗದಲ್ಲಿ ಮೋದಿಯವರ ಹೆಲಿಕಾಪ್ಟರ್ ಜೊತೆಗೆ ಬಂದ ಸೂಟ್‌ಕೇಸ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಜಿಲ್ಲಾಧಿಕಾರಿಗಳಿಗೆ ನಿನ್ನೆ ದೂರು ನೀಡಿದೆ.

ಇದರ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಆರುಣ್ ಅದು ಭದ್ರತೆಗೆ ಸಂಬಂಧಿಸಿದ್ದು ಎಂದು ಸಂಬಂಧಪಟ್ಟ ಇಲಾಖೆಯವರು ಹೇಳಿದ್ದಾರೆ. ಆದರೆ, ಅದನ್ನು ಪರಿಶೀಲಿಸಿ ತಪಾಸಣೆ ನಡೆಸಬೇಕಾದದ್ದು ಪೊಲೀಸರಲ್ಲ, ಚುನಾವಣಾಧಿಕಾರಿಗಳು. ನೀವು ಹೆಚ್ಚಿನ ಮಾಹಿತಿಗೆ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಯವರನ್ನು ಕೇಳಿ ಎಂದಿದ್ದಾರೆ. ಜಿಲ್ಲಾಧಿಕಾರಿಗಳಿಂದ ಇನ್ನೂ ಹೇಳಿಕೆ ಹೊರಬಿದ್ದಿಲ್ಲ.

ಈ ಮಧ್ಯೆ ಬಿಜೆಪಿಯು ಹೇಳಿಕೆ ನೀಡಿ, ಆ ಬಾಕ್ಸ್‌ನಲ್ಲಿ ಮೋದಿಯವರು ಭಾಷಣ ಮಾಡುವಾಗ ವೇದಿಕೆಯ ಮೇಲೆ ಬಳಸಲಾಗುವ ಉಪಕರಣಗಳಿರುತ್ತವೆ ಎಂದಿದೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಆನಂದ್ ಶರ್ಮಾ ದೆಹಲಿಯಲ್ಲಿ ಹೇಳಿಕೆ ನೀಡಿ ಆ ಬಾಕ್ಸ್‌ಅನ್ನು ಖಾಸಗಿ ವಾಹನದಲ್ಲಿ ಏಕೆ ತೆಗೆದುಕೊಂಡು ಹೋಗಲಾಯಿತು? ಅದು ಪ್ರಧಾನಿಯ ಎಸ್‌ಪಿಜಿ ಪ್ರೋಟೋಕಾಲ್‌ನ ಭಾಗ ಏಕೆ ಆಗಿರಲಿಲ್ಲ? ಈ ಕುರಿತು ಎಸ್‌ಪಿಜಿ ಉತ್ತರ ನೀಡಬೇಕು ಎಂದಿದ್ದಾರೆ.

ಮೊಟ್ಟಮೊದಲು ಕಾಂಗ್ರೆಸ್‌ನ ಕೇಂದ್ರೀಯ ಐಟಿ ವಿಭಾಗದ ಶ್ರೀವತ್ಸ ಇದನ್ನು ಏಪ್ರಿಲ್ 12ರಂದು ಟ್ವೀಟ್ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...