ಅಫಘಾನಿಸ್ತಾನವನ್ನು ತಾಲಿಬಾನ್ ತನ್ನ ಹಿಡಿತಕ್ಕೆ ತೆಗೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಫಘಾನ್ ಬಿಕ್ಕಟ್ಟಿನ ಕುರಿತು ಜಾಗತಿಕ ವೇದಿಕೆಯಲ್ಲಿ ಮಾತನಾಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, “ಅಫಘಾನಿಸ್ತಾನ ಭಯೋತ್ಪಾದಕ ಚಟುವಟಿಕೆಗೆ ಬಳಕೆಯಾಗುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು ಅಗತ್ಯವಾಗಿದೆ” ಎಂದು ಹೇಳಿದ್ದಾರೆ.
“ಭಯೋತ್ಪಾದನೆಯನ್ನು ರಾಜಕೀಯ ಸಲಕರಣೆಯಾಗಿ ಬಳಸುತ್ತಿರುವ ದೇಶಗಳು, ಇದು ಒಂದಲ್ಲ ಒಂದು ದಿನ ತಮಗೂ ಅಪಾಯಕಾರಿ ಎಂಬುದನ್ನು ತಿಳಿಯಬೇಕು” ಎಂದು ಪಾಕಿಸ್ತಾನವನ್ನು ಪರೋಕ್ಷವಾಗಿ ಕುಟುಕಿದ್ದಾರೆ.
“ಈ ಸಂದರ್ಭದಲ್ಲಿ ಇಡೀ ಜಗತ್ತು ವೈಜ್ಞಾನಿಕ, ವೈಚಾರಿಕ ವಿಚಾರಗಳ ಆಧಾರದಲ್ಲಿ ಅಭಿವೃದ್ಧಿಯನ್ನು ಸಾಧಿಸಬೇಕಿದೆ” ಎಂದು ಹೇಳಿದ್ದಾರೆ.
“ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧ ಲಸಿಕೆಯನ್ನು ಉತ್ಪಾದಿಸಬಹುದು” ಎಂದು ಲಸಿಕಾ ತಯಾರಿಕರಿಗೆ ತಿಳಿಸಿದರು. “ಬನ್ನಿ, ಭಾರತದಲ್ಲಿ ಲಸಿಕೆಯನ್ನು ಉತ್ಪಾದಿಸಿ” ಎಂದು ಆಹ್ವಾನಿಸಿದರು.
ಇದನ್ನೂ ಓದಿ: ಮೋದಿ ಯುಎಸ್ ಭೇಟಿ – ‘ಮಾಧ್ಯಮಗಳು ಪ್ರಶ್ನೆ ಕೇಳಬಾರದೆಂದು ಮೊದಲೇ ತೀರ್ಮಾನವಾಗಿತ್ತು!’


