Homeಅಂಕಣಗಳುಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

ಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

- Advertisement -
- Advertisement -

ಪಿಕೆ ಟಾಕೀಸ್ 11/ ಜಾಗತಿಕ ಸಿನಿಮಾ/ ಗ್ರೀಸ್/ ಯಾನಿಸ್ ಯಕಾನೊಮಿಡಿಸ್

ಮ್ಯಾಚ್ ಬಾಕ್ಸ್ (2003): ಇಕ್ಕಟ್ಟಿನ ಚೌಕದಲ್ಲಿ ಬೆಂಕಿ ಹತ್ತಿಕೊಂಡು ಉರಿದು ಹೋಗಬಲ್ಲವರೆಲ್ಲವರು ಒಟ್ಟಾಗಿ ಇರುವುದನ್ನು ರೂಪಕವಾಗಿ ಮ್ಯಾಚ್ ಬಾಕ್ಸ್/ ಬೆಂಕಿಪೊಟ್ಟಣ ಎಂದಿದ್ದಾರೆ. ಅದೇ ಈ ಸಿನಿಮಾದ ಕಥಾನಕ. ಒಂದೇ ಮನೆಯಲ್ಲಿ ಬೇಸಿಗೆಯ ಬಿಸಿಯಿಂದ ಬೆವರು ಸುರಿಯುವ ಹವಾಮಾನದಲ್ಲಿ ಕುಟುಂಬ ಸದಸ್ಯರು ಪರಸ್ಪರ ಕೋಪಾಗ್ನಿಗೆ ಒಳಗಾಗದರೆ ಏನಾಗಬಹುದು?

ಬಿಸಿ ತುತ್ತತುದಿ ಮುಟ್ಟಿದಾಗ, ಐವತ್ತು ವಯಸ್ಸು ದಾಟಿದ ಮುಂಗೋಪಿ ಡಿಮಿಟ್ರಿ ತನ್ನ ಅಂಗಡಿ ವ್ಯಾಪಾರದ ಕುರಿತು ನಿರಾಸಕ್ತನಾದ ಕೆಲಸಗಾರನಿಗೆ, ವ್ಯವಹಾರಗಳನ್ನು ಗಮನವಿಟ್ಟು ಸರಿಯಾಗಿ ನಡೆಸುವಂತೆ ಜೋರಾಗಿ ಕೂಗಿ ಕಿರುಚಾಡುತ್ತಿರುತ್ತಾನೆ. ಕೆಲಸಗಾರ ಅವನ ಮಾತಿಗೆ ಹೌದು ಅಥವಾ ಇಲ್ಲವೆಂಬಂತೆ ಉತ್ತರ ನೀಡುತ್ತಿರುತ್ತಾನೆ. ಇದರಿಂದ ಇನ್ನಷ್ಟು ಕೋಪಗೊಂಡು ಬೈಯ್ಯುತ್ತಿರುತ್ತಾನೆ. ಇದೆಲ್ಲವೂ ನಮಗೆ ಸಂಬಂಧಿಸಿದಲ್ಲವೆಂಬಂತಿರುವ ಬೇಜಾವಾಬ್ದಾರಿ ಯುವ ಮಗ, ತಂದೆಗೆ ತಿರುಗಿ ಬೈಯ್ಯುವ ಮಗಳು, ಡಿಮಿಟ್ರಿಯ ಬಗ್ಗೆ ಆಸಕ್ತಿಯೆ ವಹಿಸದ ಹೆಂಡತಿ ಇವೆಲ್ಲದರ ಜೊತೆಗೆ ಉರಿಯುವ ಬಿಸಿಲು!

ಮಹಡಿಯ ಮೇಲೆ ಈ ಬೇಜಾವಾಬ್ದಾರಿ ಮಗ ತನ್ನ ಫೋನಿನಲ್ಲಿ ಗೆಳೆಯರೊಂದಿಗೆ, ತನ್ನ ತಂದೆ ಮಾತನಾಡುವಾಗ ಬಳಸುವ ಅವೇ ಕೆಟ್ಟ ಮಾತುಗಳನ್ನು ಆಡುತ್ತಾ ಹುಡುಗಿಯರು ಮತ್ತು ಚಟಗಳ ಕುರಿತು ಮಾತಾಡುತ್ತಿರುತ್ತಾನೆ. ಬಾಲ್ಕನಿಯಲ್ಲಿ ಮಗಳು ಕೋಪದಿಂದ ಫೋನಿನಲ್ಲಿ ಯಾರ ಜೊತೆಗೋ ಕೂಗಾಡುತ್ತಿರುತ್ತಾಳೆ. ಹೀಗೆ ಮನೆಯ ಸದಸ್ಯರೆಲ್ಲ ಅವರವರ ಪಾಡಿಗೆ ಅವರದ್ದೇ ಪ್ರಪಂಚಗಳಲ್ಲಿ ಕೋಪದಿಂದ ಕುದಿಯುತ್ತಿರುತ್ತಾರೆ.

PC : Taste of Cinema

ಮತ್ತೊಂದು ಪ್ರಸಂಗದಲ್ಲಿ, ಅಂಗಡಿಯ ಮತ್ತೊಬ್ಬ ಕೆಲಸಗಾರನಿಗೆ ಗರ್ಭಿಣಿ ಹೆಂಗಸೊಬ್ಬಳನ್ನು ಮದುವೆಯಾಗುವಂತೆ ಡಿಮಿಟ್ರಿ ಒತ್ತಾಯಿಸುತ್ತಾನೆ. ಅದಕ್ಕೆ, ಆ ಮಹಿಳೆ ಗರ್ಭ ಧರಿಸುವುದಕ್ಕೂ ತನಗೂ ಸಂಬಂಧವಿಲ್ಲವೆಂದು ಆ ಕೆಲಸಗಾರ ಹೇಳುತ್ತಾನೆ. ಆದರೆ ಡಿಮಿಟ್ರಿ ಸಿಡಿಮಿಡಿಗೊಂಡು ಅವನು ಆಕೆಯನ್ನು ಮದುವೆಯಾಗಲೇಬೇಕೆಂದು ಹಠಮಾಡುತ್ತಾನೆ. ಆಗ ಅಲ್ಲಿಂದ ಕೆಲಸಗಾರ ಹೋಗಿಬಿಡುತ್ತಾನೆ. ಇವೆಲ್ಲಾ ಜಗಳದ ಗದ್ದಲದಿಂದ ಡಿಮಿಟ್ರಿಗೆ ತನ್ನ ಹೆಂಡತಿಯೊಂದಿಗೆ ಜಗಳ ಹಚ್ಚಿಕೊಳ್ಳುತ್ತದೆ. ಶಾಂತವಾಗಿದ್ದವಳು ಒಮ್ಮೆಲೆ ಕೋಪಗೊಂಡು ಅವಳು ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ, ಜಗಳಕ್ಕಿಳಿದು ಡಿಮಿಟ್ರಿಯನ್ನು ಬೈಯ್ಯುತ್ತಾ, ತಮ್ಮ ಮಗಳು ಡಿಮಿಟ್ರಿಯಿಂದ ಹುಟ್ಟಿಲ್ಲವೆಂದು ಹೇಳಿ ಹೊರನಡೆಯುತ್ತಾಳೆ.

ಈ ವಿಷಯ ತಿಳಿದು ಡಿಮಿಟ್ರಿ ಆಘಾತದಿಂದ ಕುಸಿಯುತ್ತಾನೆ. ಆಗ ಅವನ ನಿರಾಸಕ್ತ ಕೆಲಸಗಾರ ಬರುತ್ತಾನೆ. ’ಕೆಲಸಗಾರನಿಗೆ ತನ್ನ ಹೆಂಡತಿಯ ಮೇಲೆ ನಂಬಿಕೆ ಇದಿಯಾ’ ಎಂದು ಕೇಳುತ್ತಾನೆ ಡಿಮಿಟ್ರಿ. ಈ ಪ್ರಶ್ನೆಗೂ ಉತ್ತರಿಸದ ಆ ಕೆಲಸಗಾರನಿಗೂ ಮತ್ತು ಡಿಮಿಟ್ರಿಗೂ ಜಗಳ ಏರಿಬಿಡುತ್ತದೆ. ಡಿಮಿಟ್ರಿಯ ಉದ್ವೇಗವನ್ನು ತಣ್ಣಾಗಿಸಲು ಸ್ನಾನ ಮಾಡಿಸಿ ಮಲಗಿಸಲು ಕೆಲಸಗಾರ ಪ್ರಯತ್ನಿಸುತ್ತಾನೆ.

ಇತ್ತ ಮಗ ಅವರಪ್ಪನ ಸ್ಥಿತಿಯನ್ನು ನೋಡಿ ಮತ್ತೆ ಮಹಡಿ ಏರಿ ಹೋಗುತ್ತಾನೆ. ತಿರುಗಿ ಬಂದ ಹೆಂಡತಿ ಮತ್ತೆ ಜಗಳ ಮಾಡಲು ಮುಂದಾದಾಗ ಡಿಮಿಟ್ರಿ ಸುಮ್ಮನಾಗಿಬಿಡುತ್ತಾನೆ. ಹೀಗೆ ಬೇಸಿಗೆಯ ಬಿಸಿಲಿಗೆ, ಮನಸ್ಸಿನ ಅನುಮಾನಗಳ ಬೇಗೆಯನ್ನು ಬೆರೆಸಿ, ಸದಾ ಉದ್ವೇಗದಲ್ಲೇ ಮತ್ತು ನಿರಂತರ ಮಾತುಗಳಿಂದಲೇ ಕಟ್ಟಿರುವ ಸಿನಿಮಾ ಇದು.

ತೊಂಬತ್ತು ನಿಮಿಷಗಳ ಸಿನಿಮಾ ಒಂದೇ ಮನೆಯಲ್ಲಿ ನಡೆಯುವುದು ವಿಶೇಷ. ಯಾವುದೇ ಮಿತಿ ಅಥವಾ ನಿರ್ಭಂದವನ್ನಿಟ್ಟುಕೊಂಡು ಸಿನಿಮಾ ಕಟ್ಟುವುದು ಕಷ್ಟದ ಕೆಲಸ. ಆದರೆ ಇಲ್ಲಿ ಮನೆಯನ್ನು ರೂಪಕವಾಗಿ ಬೆಂಕಿಪೊಟ್ಟಣ್ಣಕ್ಕೆ ಬಳಸಿರುವುದರಿಂದ ಸಿನಿಮಾ ಅಪ್ಯಾಯಮಾನವಾಗಿ ಮೂಡಿದೆ.

ಈ ಸಿನಿಮಾದ ಸಿನಿಮ್ಯಾಟೋಗ್ರಫಿ ಕಪ್ಪು ಬಿಳುಪಿನಲ್ಲಿದ್ದು, ಕೌಟುಂಬಿಕ ಕರಾಳತೆಯನ್ನು ತೋರಿಸಿದ್ದಾರೆ. ಸಿನಿಮಾ ಬಹುಭಾಗವನ್ನು ಕ್ಲೊಸಅಪ್‌ಗಳಲ್ಲೇ ಸೆರೆಹಿಡಿದಿರುವುದರಿಂದ ಎಲ್ಲ ಪಾತ್ರಗಳು ಸನ್ನಿವೇಶಗಳಿಗೆ ಸಿಕ್ಕಿಹಾಕಿಕೊಂಡಿದ್ದಾರೆಂದು ಅನಿಸದ ಇರದು.

ನೈಫಾರ್ (2011): ಹಾಸಿಗೆಯಲ್ಲಿ ಮಲಗಿ ನಿರ್ಭಾವುಕವಾಗಿ ಟಿವಿಯಲ್ಲಿ ಬರುತ್ತಿರುವ ಕಪ್ಪು ಬಿಳುಪಿನ ಕಾರ್ಟೂನ್ ಚಿತ್ರವನ್ನು ನೋಡುತ್ತಿರುವ ವೃದ್ಧ. ಅವನ ಪಕ್ಕಕ್ಕೆ ಕುಳಿತು ಕಡಲೆಕಾಯಿ ತಿನ್ನುತ್ತಿರುವ ನಲವತ್ತರ ಅಸುಪಾಸಿನ ನಿಕೋಸ್. ತನ್ನ ತಂದೆಯ ಸಾವಿನ ನಂತರದಲ್ಲಿ ನಿಕೋಸ್‌ನ ಬದುಕಿನಲ್ಲಾಗುವ ಬದಲಾವಣೆಗಳೇ ಈ ಸಿನಿಮಾದ ಕಥಾನಕ.

ನಿಕೋಸ್ ತನ್ನ ಗೆಳಯರೊಂದಿಗೆ ಸಮಯ ಕಳೆಯುತ್ತಾ, ಯಾವುದೇ ಕೆಲಸ ಕಾರ್ಯವಿಲ್ಲದೆ, ಗ್ರೀಸಿನ ಹಳ್ಳಿಯಲ್ಲಿ ಬದುಕುತ್ತಿರುತ್ತಾನೆ. ವೃದ್ಧ ತಂದೆಯ ಸಾವಿಗೆ ಬಂದ ದೂರದ ಸಂಬಂಧಿ ಐವತ್ತರ ಗಡಿದಾಟಿದ ಅಲೆಕೊಸ್, ಅಥೆನ್ಸ್‌ನ ಹೊರವಲಯದಲ್ಲಿರುವ ತನ್ನ ಮನೆಗೆ ಬರುವಂತೆ ಹೇಳುತ್ತಾನೆ.

ಅಲೆಕೊಸ್ ಮನೆಯಲ್ಲಿರುವ ನಾಯಿಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ನಿಗದಿಯಾಗುತ್ತಾನೆ ನಿಕೋಸ್. ಅಲ್ಲೂ ಅಷ್ಟಾಗಿ ಕೆಲಸವಿರುವುದಿಲ್ಲ. ತಿನ್ನುವುದು, ಟಿವಿ ನೋಡುವುದು. ಮೊಬೈಲಿನಲ್ಲಿ ಆಟವಾಡುವುದು ಮತ್ತು ಹಸ್ತ ಮೈಥುನ ಮಾಡಿಕೊಳ್ಳುವುದೇ ನಿಕೋಸ್‌ನ ದಿನಚರಿ.

ಅಲೆಕೊಸ್ ನಿಕೋಸ್‌ನನ್ನು ಸದಾ ಬೈಯ್ಯುತಿರುತ್ತಾನೆ. ನಿಕೋಸ್‌ಗೆ ಬೇರೆ ಗತಿಯಿಲ್ಲದೇ ಅಲ್ಲೇ ಇರಬೇಕಾಗುತ್ತದೆ. ಈ ಮಧ್ಯೆ ಅಲೆಕೊಸ್‌ನ ಸುಂದರ ಹೆಂಡತಿ ನಿಕೋಸ್‌ನತ್ತ ಆರ್ಕಷಿತಳಾಗುತ್ತಾಳೆ. ಹಾಗೆಯೇ ಇವರಿಬ್ಬರ ನಡುವೆ ರಹಸ್ಯ ಸಂಬಂಧವೂ ಏರ್ಪಡುತ್ತದೆ. ಇದು ಅಲೆಕೊಸ್‌ಗೆ ತಿಳಿಯುವುದಿಲ್ಲ.

ಅಲೆಕೊಸ್‌ನ ವ್ಯಾಪಾರದ ಸಮಯದಲ್ಲಿ, ಅವನ ಅಂಗಡಿಗೆ ಅಪರಿಚಿತರ ಬಂದು ದಾಳಿ ಮಾಡುತ್ತಾರೆ. ಇದರಿಂದ ಅವನು ಗಾಯಗೊಳ್ಳುತ್ತಾನೆ. ಆಸ್ಪತ್ರೆಯಲ್ಲಿ ವಿಚಾರಿಸಲು ಬಂದ ನಿಕೋಸ್‌ನನ್ನು ತನ್ನ ದಬ್ಬಾಳಿಕೆಯ ಮನೋಭಾವದಿಂದ ತನ್ನ ಹೆಂಡತಿಯ ಮುಂದೆಯೇ ಬೈಯ್ಯುತ್ತಾನೆ. ನಡುವೆ ಬಂದ ಹೆಂಡತಿಯನ್ನೂ ಸಹ ನಿಂದಿಸುತ್ತಾನೆ.

ಅಲ್ಲಿಗೆ ನಿಕೋಸ್ ಮತ್ತು ಅವನ ಪ್ರಿಯತಮೆ, ಅಲೆಕೊಸ್‌ನನ್ನು ಕೊಲ್ಲಲು ಸರಿಯಾದ ಯೋಜನೆ ರೂಪಿಸಿ ಕೊಂದು ಮುಗಿಸಿ, ಅದೇ ಮನೆಯಿಂದ ಮಕ್ಕಳೊಂದಿಗೆ ಕಾರಿನಲ್ಲಿ ಹೋಗುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ.

ಈ ಸಿನಿಮಾ ಆಧುನಿಕ ಗ್ರೀಸ್ ಸಮಾಜದಲ್ಲಿ ಪುರುಷಪ್ರಧಾನ ದಬ್ಬಾಳಿಕೆಯಿಂದ ಜಡ್ಡುಗಟ್ಟಿ, ಕುಸಿಯುತ್ತಿರುವ ಕೌಟುಂಬಿಕ ಮೌಲ್ಯಗಳ ಕುರಿತು ನಿರ್ದೇಶಕನ ವ್ಯಾಖ್ಯಾನಿವೆಸುತ್ತದೆ.

ಯಾನಿಸ್ ಯಕಾನೊಮಿಡಿಸ್: ಯಾನಿಸ್‌ಗೆ ಗ್ರೀಕ್ ವಿಲಕ್ಷಣ ಅಲೆಯಲ್ಲಿ ಅತಿ ಮುಖ್ಯವಾದ ಪಾತ್ರವಿದೆ. ಇವರು ಇಂಡಿಪೆಂಡೆಂಟ್ ಸಿನಿಮಾ ನಿರ್ದೇಶಕ. ಆದರೆ, ಕೇವಲ ತನ್ನನ್ನು ನಿರ್ದೇಶಕನಾಗಿ ಮಾತ್ರ ನಿರ್ಭಂಧಿಸಿಕೊಳ್ಳದೆ, ಹಲವಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ ಕೂಡ. ಅದಲ್ಲದೆ ನಿರ್ಮಾಪಕನಾಗಿ ’ಮ್ಯಾಚ್ ಬಾಕ್ಸ್’ ಜೊತೆಗೆ ಇನ್ನು ಹಲವಾರು ಇಂಡಿಪೆಂಡೆಂಟ್ ಸಿನಿಮಾಗಳನ್ನು ಮಾಡಿದ್ದಾರೆ. ಬರಹಗಾರನಾಗಿಯೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ.

ಯಾನಿಸ್‌ನ ಕಥಾವಸ್ತುಗಳು ಆಧುನಿಕ ಗ್ರೀಸ್ ಸಮಾಜ, ಕುಟುಂಬದಲ್ಲಿನ ಸಂಬಂಧಗಳನ್ನು ಒಳಗೊಂಡಿರುವುದೇ ಹೆಚ್ಚು. ಇವರ ಒಟ್ಟಾರೆ ಸಿನಿಮಾ ತಯಾರಿಸುವ ಶೈಲಿ ಸರಳವಾದದ್ದು ಮತ್ತು ನೇರವಾಗಿರುವ ಸ್ವತಂತ್ರ ಶೈಲಿಯದ್ದು.

ಯಾನಿಸ್ ಯಕಾನೊಮಿಡಿಸ್

ಇವರ ಸಿನಿಮ್ಯಾಟೋಗ್ರಾಫಿಯಂತೂ ಉಲ್ಲೇಖನಿಯ. ನೈಫಾರ್ ಸಿನಿಮಾದಲ್ಲಿ ಕಪ್ಪು ಬಿಳುಪಿನ ಕಲರ್ ಸ್ಕೀಮ್‌ಅನ್ನು ಬಳಸಿದ್ದರೂ, ಅದ್ಬುತವಾಗಿ ಕಾಣುವ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಕಪ್ಪು ಬಿಳುಪಿನ ಲ್ಯಾಂಡ್‌ಸ್ಕೇಫ್ ಪೋಟೊಗ್ರಾಫಿ ಅತ್ಯುತ್ತಮವಾಗಿ ಮೂಡಿಬಂದಿದೆ.

ಮನೆಗಳು ಅಥವಾ ಚಿಕ್ಕದಾದ ಜಾಗಗಳಲ್ಲಿ ನಟರನ್ನು ಬಾಗಿಲುಗಳ ಮೂಲಕ ಫ್ರೇಮ್ ಮಾಡುವ ಮೂಲಕ ಪಾತ್ರಗಳು ಸಿಕ್ಕಿಹಾಕಿಕೊಂಡಿದ್ದಾರೆಂಬ ಅನಿಸಿಕೆ ಹುಟ್ಟಿಸುತ್ತಾರೆ. ಹಾಗೆಯೇ ಪಾತ್ರಗಳ ಅನೈತಿಕ ಕೆಲಸಗಳನ್ನು ಕಿಟಕಿಗಳ ಮೂಲಕ ನೋಡುತ್ತಿರುವಂತೆ ಪ್ರೇಕ್ಷಕರಿಗೆ ಭಾಸವಾಗುವಂತೆ ಮಾಡುತ್ತಾರೆ.

ಇವರ ಹೆಚ್ಚಿನ ಸಿನಿಮಾಗಳಲ್ಲಿ ಕಪ್ಪು ಬಿಳುಪು ಅಥವಾ ವರ್ಣರಹಿತವಾಗಿರುವ ಕಲರ್ ಸ್ಕೀಮ್ ಇರುವುದನ್ನು ಗಮನಿಸಬಹುದು ಏಕೆಂದರೆ ಇವರ ಕಥಾವಸ್ತುಗಳಲ್ಲಿ ನಿರಾಸಕ್ತಿ, ಖಾಲಿತನವನ್ನೇ ಇವರ ಪೋಟೋಗ್ರಾಫಿಯೂ ಪ್ರತಿಧ್ವನಿಸುತ್ತದೆ.

ಸೋಲ್ ಕಿಕೀಂಗ್(2006)ನಲ್ಲಿ ತಾಕೀಸ್ ಎನ್ನುವ ಪಾತ್ರ ಮನೆ ನಡೆಸಲು ಸಾಲ ಪಡೆದಿರುತ್ತಾನೆ. ಇತ್ತ ಸಾಲಗಾರರು ಕೆಲಸ ಮಾಡುವ ಜಾಗದಲ್ಲಿ ಮತ್ತು ಮನೆಯಲ್ಲಿ ಹೆಂಡತಿ ಈ ಎಲ್ಲರೂ ತಾಕೀಸ್‌ನನ್ನು ಬೈಯ್ಯುತ್ತಿರುವುದೇ ಸಿನಿಮಾದ ಕಥೆ. ಹೀಗೆ ಎಲ್ಲ ಕಡೆಯಿಂದ ಒತ್ತಡವನ್ನು ತಾಳಲಾಗದೆ, ತನ್ನ ಹೆಂಡತಿ ಬೇರೊಬ್ಬನ ಜೊತೆ ಹೊಂದಿರುವ ಅನೈತಿಕ ಸಂಬಂಧವನ್ನು ಸಹಿಸಿಕೊಳ್ಳಲಾಗದೆ ತಾಕೀಸ್ ಕೊಲೆಗಾರನಾಗುವುದೇ ಸಿನಿಮಾದ ಅಂತ್ಯ. ವಿಶೇಷವೆಂದರೆ ಇದರಲ್ಲೂ ಬಣ್ಣಗಳೇ ಇಲ್ಲದಂತೆ ಚಿತ್ರಿಸಿದ್ದಾರೆ.

ವ್ಯಕ್ತಿ ಮತ್ತು ಕೌಟುಂಬಿಕ ಒತ್ತಡಗಳನ್ನು ನಿಭಾಯಿಸಲು ಮಾಡುವ ಪ್ರಯತ್ನಗಳು, ಕೆಲವೊಮ್ಮೆ ಅವುಗಳಿಂದಲೇ ಕೊಲೆಯಾಗುವ ಪಾತ್ರಗಳು, ಇನ್ನೊಮ್ಮೆ ಕೊಲೆ ಮಾಡುವ ಪಾತ್ರಗಳನ್ನು ಸೃಷ್ಠಿಸುವ ಮೂಲಕ ಗ್ರೀಸ್ ಸಮಾಜದಲ್ಲಿರುವ ಕೌಟುಂಬಿಕ ಕಲಹಗಳನ್ನು ಮತ್ತು ಸಂಬಂಧಗಳ ಸಂಘರ್ಷಗಳನ್ನು ನೈಜವಾಗಿ ಯಾನಿಸ್ ಚಿತ್ರಿಸಿದ್ದಾರೆ.


ಇದನ್ನೂ ಓದಿ: ಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....