Homeಕರ್ನಾಟಕ300 ಕ್ಕೂ ಹೆಚ್ಚು ಗುಡಿಸಲುಗಳ ಧ್ವಂಸ: ಚಿಕ್ಕಮಗಳೂರು ನಗರಸಭೆಯ ವಿರುದ್ದ ಪ್ರತಿಭಟನೆ

300 ಕ್ಕೂ ಹೆಚ್ಚು ಗುಡಿಸಲುಗಳ ಧ್ವಂಸ: ಚಿಕ್ಕಮಗಳೂರು ನಗರಸಭೆಯ ವಿರುದ್ದ ಪ್ರತಿಭಟನೆ

- Advertisement -
- Advertisement -

ಚಿಕ್ಕಮಗಳೂರು ಜಿಲ್ಲೆಯ ನಗರಸಭೆ ವ್ಯಾಪ್ತಿಯ ಇಂದಿರಾಗಾಂಧಿ ಬಡಾವಣೆಯಲ್ಲಿ ವಾಸವಿದ್ದ ಸುಮಾರು 300 ರಷ್ಟು ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ನಗರದ ಅಝಾದ್‌ ವೃತ್ತದ ಬಳಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.

ಜಿಲ್ಲೆಯ ಉಪ್ಪಳ್ಳಿ ಸಮೀಪದ ಕಲ್ದೊಡ್ಡಿಯ ಇಂದಿರಾಗಾಂಧಿ ಬಡಾವಣೆಯಲ್ಲಿ ಸುಮಾರು 300 ಕ್ಕಿಂತಲೂ ಹೆಚ್ಚಿನ ಕುಟುಂಬಗಳು ಹಲವಾರು ವರ್ಷಗಳಿಂದ ವಾಸವಿತ್ತು. ಈ ಗುಡಿಸಲುಗಳನ್ನು ಒಂದೂವರೆ ವರ್ಷಗಳ ಹಿಂದೆ ನಗರ ಸಭೆಯು ಏಕಾಏಕಿ ಧ್ವಂಸ ಮಾಡಿತ್ತು.

ಇದರ ನಂತರ ಇಲ್ಲಿನ ನಿವಾಸಿಗಳು ತಾಲೂಕು ಆಫಿಸೀನ ಬಳಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಈ ಹೋರಾಟಕ್ಕೆ ಮಣಿದ ಜಿಲ್ಲಾಧಿಕಾರಿ ಮತ್ತು ನಗರಸಭೆಯ ಅಯುಕ್ತರು 15-20 ದಿನಗಳಲ್ಲಿ ನಿವೇಶನಗಳನ್ನು ಮತ್ತು ಹಕ್ಕು ಪತ್ರಗಳನ್ನು ನೀಡುವುದಾಗಿ ಭರವಸೆ ನೀಡಿ ಮುಷ್ಕರವನ್ನು ಕೈಬಿಡುವಂತೆ ಕೇಳಿಕೊಂಡಿದ್ದರು. ಆದರೆ ಈ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

ಇದನ್ನೂ ಓದಿ: ಅಕ್ರಮ ಮದ್ಯ ಮಾರಾಟ ನಿಷೇಧದ ಹೈಕೋರ್ಟ್ ಆದೇಶ ಪಾಲಿಸಿ: ಬೃಹತ್ ಹೋರಾಟ

ಇಂದು ನಗರದ ಆಝಾದ್ ವೃತ್ತದ ಬಳಿ ಸೇರಿದ ಸಂತ್ರಸ್ತ ಜನರು, ತಾವು ವಾಸವಿದ್ದ ಗುಡಿಸಲು ಧ್ವಂಸಮಾಡಿ ತಮ್ಮನ್ನು ಬೀದಿಪಾಲು ಮಾಡಿದ ನಗರಸಭೆಯ ನಡೆಯನ್ನು ಖಂಡಿಸಿ, ಎಲ್ಲರಿಗೂ ಕೂಡಲೇ ನಿವೇಶನ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪ್ರತಿಯೊಂದು ಸಂತ್ರಸ್ತ ಕುಟುಂಬಗಳು ತಮಗೆ ನಿವೇಶನದ ಹಕ್ಕು ಪತ್ರಗಳನ್ನು ನೀಡುವಂತೆ ಆಗ್ರಹಿಸಿ ಮನವಿ ಪತ್ರವನ್ನು ನೀಡಿದರು. ಪ್ರತಿಭಟನಾಕಾರರ ಮನವಿಗಳನ್ನು ನಗರಸಭೆಯ ಆಯುಕ್ತರು ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಗೌಸ್‌ ಮೊಹಿಯುದ್ದೀನ್, ಸಂವಿಧಾನ ಸಂರಕ್ಷಣ ಸಮಿತಿಯ ಕೃಷ್ಣಮೂರ್ತಿ, ವಿಶ್ವರತ್ನ ಯುವ ಸೇನೆಯ ಅಧ್ಯಕ್ಷರಾದ ವೆಂಕಟೇಶ್, ಕರ್ನಾಟಕ ಜನಶಕ್ತಿಯ ಕೆ.ಎಲ್ . ಅಶೋಕ್, ಜಾತ್ಯಾತೀತ ಜನತಾದಳ ಪಕ್ಷದ ಹೆಚ್‌.ಎಸ್. ದೇವರಾಜ್, ಡಿಎಸ್‌ಎಸ್‌ ಚಂದ್ರಶೇಖರ್‌, ನುಡಿಕನ್ನಡ ಪುಸ್ತಕ ಮನೆಯ ನೀಳಗುಳಿ ಪದ್ಮನಾಭ ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು.

ತಮ್ಮ ಗುಡಿಸಲುಗಳನ್ನು ನಾಶ ಮಾಡಿದ ಸರ್ಕಾರದ ವಿರುದ್ದ ಸಂತ್ರಸ್ಥೆಯೊಬ್ಬರ ಆಕ್ರೋಶ ವಿಡಿಯೋ ನೋಡಿ

ಇದನ್ನೂ ಓದಿ: ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್‌ಪಂಚ್‌ ಆದ ಕಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...