ಯುದ್ಧ ಭೂಮಿಯಲ್ಲಿ ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಸೇವೆ ಸಲ್ಲಿಸುತ್ತಿರುವ UN ಸಂಸ್ಥೆ ಸಂದಿಗ್ಧತೆಯನ್ನು ಎದುರಿಸುತ್ತಿದೆ. 150 UNRWA ಕೇಂದ್ರಗಳ ಮೇಲೆ ದಾಳಿಯನ್ನು ನಡೆಸಲಾಗಿದೆ. 390ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1,300 ಮಂದಿ ಗಾಯಗೊಂಡಿದ್ದಾರೆ ಎಂದು UNRWA ಮುಖ್ಯಸ್ಥ ಫಿಲಿಪ್ ಲಝಾರಿನಿ ಹೇಳಿದ್ದಾರೆ. ಈ ಮಧ್ಯೆ ಇಸ್ರೇಲ್ ಗಾಝಾದ ನಿರ್ಮೂಲನೆಗೆ ಕರೆ ನೀಡಿದ್ದು, ಹಣಕಾಸಿನ ಸ್ಥಗಿತವು UN ಸಂಸ್ಥೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಇಸ್ರೇಲ್ ಯುದ್ಧ ಘೋಷಿಸಿದ ಅ.7ರ ಬಳಿಕ ಗಾಝಾದಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು, ಪತ್ರಕರ್ತರು, ವೈದ್ಯಕೀಯ ಸಿಬ್ಬಂದಿ ಮತ್ತು ಯುಎನ್ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ಯುಎನ್ ಏಜೆನ್ಸಿಯ ಫಿಲಿಪ್ ಲಝಾರಿನಿ ಹೇಳಿದ್ದಾರೆ.
UN ಜನರಲ್ ಅಸೆಂಬ್ಲಿಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರಿಗೆ ಬರೆದ ಪತ್ರದಲ್ಲಿ ಫಿಲಿಪ್ ಲಝಾರಿನಿ ಈ ಬಗ್ಗೆ ಮಹತ್ವದ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಈ ಕುರಿತು ಪತ್ರವನ್ನು ಲಝಾರಿನಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಭೀಕರ ಅಕ್ಟೋಬರ್ 7ರ ಭಯೋತ್ಪಾದಕ ದಾಳಿಯಲ್ಲಿ 12 UNRWA ಸಿಬ್ಬಂದಿ ವಿರುದ್ಧ ಜನವರಿಯಲ್ಲಿ ಇಸ್ರೇಲ್ ಮಾಡಿದ ಆರೋಪಗಳನ್ನು ತಳ್ಳಿಹಾಕಿದ UNRWA ಮುಖ್ಯಸ್ಥರು ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಪುರಾವೆಗಳನ್ನು ಇಸ್ರೇಲ್ UNRWAಯೊಂದಿಗೆ ಹಂಚಿಕೊಂಡಿಲ್ಲ ಎಂದು ಹೇಳಿದೆ. ಈ ಆರೋಪಗಳ ಬಳಿಕ 16 ರಾಷ್ಟ್ರಗಳು ಒಟ್ಟು 450 ಮಿಲಿಯನ್ ನೆರವನ್ನು ಸ್ಥಗಿತಗೊಳಿಸಿದೆ, ಹೆಚ್ಚಿನ ಹಣಕಾಸಿನ ಸಹಾಯವಿಲ್ಲದೆ ಮಧ್ಯಪ್ರಾಚ್ಯದಾದ್ಯಂತ UNRWA ಕಾರ್ಯಾಚರಣೆಗಳು ಮಾರ್ಚ್‌ನಿಂದ ತೀವ್ರವಾಗಿ ಸಮಸ್ಯೆಗೆ ಕಾರಣವಾಗಿದೆ. ಇತ್ತೀಚಿನ ವಾರಗಳಲ್ಲಿ ಯುಎನ್‌ಆರ್‌ಡಬ್ಲ್ಯೂಎ ಕಾರ್ಯಾಚರಣೆಯನ್ನು ಅಡ್ಡಿಪಡಿಸಲು ಮತ್ತು ಏಜೆನ್ಸಿಯನ್ನು ಕಿತ್ತುಹಾಕಲು ಕರೆ ನೀಡಲು ಕೆಲವು ಇಸ್ರೇಲ್ ಅಧಿಕಾರಿಗಳು ಸಂಘಟಿತ ಪ್ರಯತ್ನವನ್ನು ಮಾಡಿದ್ದಾರೆ ಎಂದು ಲಾಝರಿನಿ ಒತ್ತಿಹೇಳಿದ್ದಾರೆ. ನಾವು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಮಾನವ ಹಕ್ಕುಗಳ ಗಂಭೀರ ಪರಿಣಾಮಗಳೊಂದಿಗೆ ದುರಂತದ ಅಂಚಿನಲ್ಲಿದ್ದೇವೆ ಎಂದು ನಾನು ಭಯಪಡುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ಯಾಲೆಸ್ತೀನ್ ಮತ್ತು ಇಸ್ರೇಲ್‌ನ ಭದ್ರತೆಗೆ ಯುಎನ್‌ಆರ್‌ಡಬ್ಲ್ಯುಎ ಅತ್ಯಗತ್ಯ ಎಂದು ಲಜ್ಜರಿನಿ ಗಮನ ಸೆಳೆದಿದ್ದು,ಯುದ್ಧ ಪೀಡಿತ ಪ್ರದೇಶದಲ್ಲಿ ಪ್ರಾಣವನ್ನು ರಕ್ಷಿಸುವ ಮಾನವೀಯ ಸೇವೆಗಳನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 12 UNRWA ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂಬ ಇಸ್ರೇಲ್ ಆರೋಪಗಳ ಹಿನ್ನೆಲೆ ಯುಎನ್ ಸೆಕ್ರೆಟರಿ ಜನರಲ್ ಫೆಬ್ರವರಿ ಆರಂಭದಲ್ಲಿ ಈ ಬಗ್ಗೆ ಪರಿಶೀಲನೆಗೆ ಸ್ವತಂತ್ರ ಸಮಿತಿಯನ್ನು ರಚಿಸಿದ್ದಾರೆ.
ಮಾಜಿ ಫ್ರೆಂಚ್ ಸಚಿವ ಕ್ಯಾಥರೀನ್ ಕೊಲೊನ್ನಾ ನೇತೃತ್ವದ ಸಮಿತಿ ಪ್ಯಾಲೆಸ್ತೀನ್ ಅಧಿಕಾರಿಗಳನ್ನು ಭೇಟಿ ಮಾಡುವ ಗುರಿಯನ್ನು ಹೊಂದಿದೆ. ಸಾಕ್ಷ್ಯಾಧಾರಿತ ವರದಿಯನ್ನು ನೀಡುವುದು ನನ್ನ ಗುರಿಯಾಗಿದೆ ಎಂದು ಕೊಲೊನ್ನಾ ಈಗಾಗಲೇ ಮಾದ್ಯಮಗಳಿಗೆ ತಿಳಿಸಿದ್ದಾರೆ. ಫೆಬ್ರವರಿ 13ರಂದು ಸಮಿತಿಯು ಪರಿಶೀಲನೆ ಪ್ರಾರಂಭಿಸಿದ್ದು, ಏಪ್ರಿಲ್ 20 ರಂದು ವರದಿಯನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಯುಎನ್ ನ್ಯೂಸ್ ಪ್ರಕಾರ, 1949ರಿಂದ ಕಾರ್ಯನಿರ್ವಹಿಸುತ್ತಿರುವ UNRWA ವೆಸ್ಟ್ ಬ್ಯಾಂಕ್, ಲೆಬನಾನ್, ಜೋರ್ಡಾನ್, ಸಿರಿಯಾ ಮತ್ತು ಗಾಝಾದಲ್ಲಿ ಸುಮಾರು ಆರು ಮಿಲಿಯನ್ ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಸೇವೆ ಸಲ್ಲಿಸುತ್ತದೆ. ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7ರಂದು ಯುದ್ಧ ಪ್ರಾರಂಭವಾದಾಗಿನಿಂದ 29,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರನ್ನು ಇಸ್ರೇಲ್ ಹತ್ಯೆ ಮಾಡಿದೆ. ಅದರಲ್ಲಿ ಹೆಚ್ಚಾಗಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.
In just over four months in #Gaza, there have been more #children, more journalists, more medical personnel, and more @UN staff killed than anywhere in the world during a conflict.
It is with profound regret that I must now inform you that @UNRWA has reached a breaking point,… pic.twitter.com/JbQVk72avu
— Philippe Lazzarini (@UNLazzarini) February 22, 2024
ಇದನ್ನು ಓದಿ: ದಲಿತರ ಬಗ್ಗೆ ಕೇಂದ್ರ ಸರಕಾರ ಹಗೆತನದ ಧೋರಣೆ ಅನುಸರಿಸುತ್ತಿದೆ: ಪಿಣರಾಯ್ ವಿಜಯನ್


