Homeಮುಖಪುಟರಾಜ್ಯಸಭಾ ಚುನಾವಣೆ: ಕ್ರಿಮಿನಲ್‌ ಹಿನ್ನೆಲೆ ಹೊಂದಿರುವ 36% ಅಭ್ಯರ್ಥಿಗಳು!

ರಾಜ್ಯಸಭಾ ಚುನಾವಣೆ: ಕ್ರಿಮಿನಲ್‌ ಹಿನ್ನೆಲೆ ಹೊಂದಿರುವ 36% ಅಭ್ಯರ್ಥಿಗಳು!

- Advertisement -
- Advertisement -

ರಾಜ್ಯಸಭಾ ಅಭ್ಯರ್ಥಿಗಳ ಪೈಕಿ 36% ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದು, ಅಭ್ಯರ್ಥಿಗಳ ಸರಾಸರಿ ಆಸ್ತಿ 127.81 ಕೋಟಿ ಎಂದು ವಿಶ್ಲೇಷಿಸಲಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯು ಬಹಿರಂಗಪಡಿಸಿದೆ.

ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ 15 ರಾಜ್ಯಗಳ 56 ಸ್ಥಾನಗಳಿಗೆ ಕಣದಲ್ಲಿರುವ 59 ಅಭ್ಯರ್ಥಿಗಳ ಪೈಕಿ 58 ಮಂದಿ ಅಫಿಡವಿತ್‌ಗಳನ್ನು ವಿಶ್ಲೇಷಿಸಿದೆ. ರಾಜ್ಯಸಭಾ ಚುನಾವಣೆ ಫೆಬ್ರವರಿ 27ಕ್ಕೆ ನಿಗದಿಯಾಗಿದೆ. 56 ರಾಜ್ಯಸಭಾ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್ ಅವರು ವಿಶ್ಲೇಷಣೆಯಿಂದ ಹೊರಗುಳಿದಿದ್ದಾರೆ. 36% ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ವಿಶ್ಲೇಷಣೆಯ ವೇಳೆ ಕಂಡು ಹಿಡಿಯಲಾಗಿದೆ.

ಹೆಚ್ಚುವರಿಯಾಗಿ 17%ದಷ್ಟು ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಒಬ್ಬ ಅಭ್ಯರ್ಥಿಯು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ವಿಶ್ಲೇಷಣೆಯ ಪ್ರಕಾರ, 30 ಬಿಜೆಪಿ ಅಭ್ಯರ್ಥಿಗಳಲ್ಲಿ ಎಂಟು (27%), ಒಂಬತ್ತು ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಆರು ಮಂದಿ, ನಾಲ್ಕು ಟಿಎಂಸಿ ಅಭ್ಯರ್ಥಿಗಳಲ್ಲಿ ಒಬ್ಬರು (25%), ಮೂರು ಎಸ್‌ಪಿ ಅಭ್ಯರ್ಥಿಗಳಲ್ಲಿ ಇಬ್ಬರು,  ಮೂವರು YSRCP ಅಭ್ಯರ್ಥಿಗಳಲ್ಲಿ ಒಬ್ಬರು, ಇಬ್ಬರು RJD ನಾಮನಿರ್ದೇಶಿತರಲ್ಲಿ ಒಬ್ಬರು, ಇಬ್ಬರು BJD ಅಭ್ಯರ್ಥಿಗಳಲ್ಲಿ ಒಬ್ಬರು  ಮತ್ತು ಓರ್ವ BRS ಅಭ್ಯರ್ಥಿ ತಮ್ಮ ಅಫಿಡವಿತ್‌ನಲ್ಲಿ ಕ್ರಿಮಿನಲ್ ಮೊಕದ್ದಮೆಗಳು ಇರುವುದನ್ನು ಘೋಷಿಸಿದ್ದಾರೆ.

ಸರಿಸುಮಾರು 21% ಅಭ್ಯರ್ಥಿಗಳು ಶತಕೋಟ್ಯಾಧಿಪತಿಗಳಾಗಿದ್ದು, 100 ಕೋಟಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ. ರಾಜ್ಯಸಭಾ ಅಭ್ಯರ್ಥಿಗಳ ಸರಾಸರಿ ಆಸ್ತಿ 127.81 ಕೋಟಿ ಎಂದು ವರದಿಯು ತಿಳಿಸಿದೆ.

ಹಿಮಾಚಲ ಪ್ರದೇಶದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಒಟ್ಟು 1,872 ಕೋಟಿ ಆಸ್ತಿಯನ್ನು ಹೊಂದಿದ್ದು, ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯ ಅಮಿತಾಬ್ ಬಚ್ಚನ್ 1,578 ಕೋಟಿ ಮತ್ತು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ 871 ಕೋಟಿ ಆಸ್ತಿ ಹೊಂದಿದ್ದಾರೆ. ಇವರು ರಾಜ್ಯಸಭಗೆ ಸ್ಪರ್ಧಿಸುತ್ತಿರುವ ಮೂವರು ಅತಿ ಶ್ರೀಮಂತ ಅಭ್ಯರ್ಥಿಗಳೆಂದು ವರದಿಯು ಉಲ್ಲೇಖಿಸಿದೆ.

ಬಡ ಅಭ್ಯರ್ಥಿಗಳ ಪೈಕಿ ಬಿಜೆಪಿಯ ಮಧ್ಯಪ್ರದೇಶದ ಅಭ್ಯರ್ಥಿ ಬಾಲಯೋಗಿ ಉಮೇಶ್ ನಾಥ್ 47 ಲಕ್ಷ  ಆಸ್ತಿ ಹೊಂದಿದ್ದಾರೆ, ಬಿಜೆಪಿಯ ಪಶ್ಚಿಮ ಬಂಗಾಳದ ಅಭ್ಯರ್ಥಿ ಸಮಿಕ್ ಭಟ್ಟಾಚಾರ್ಯ 1 ಕೋಟಿ ಆಸ್ತಿ ಮತ್ತು ಉತ್ತರ ಪ್ರದೇಶದ ಬಿಜೆಪಿ ಅಭ್ಯರ್ಥಿ ಸಂಗೀತಾ  1 ಕೋಟಿ ಆಸ್ತಿ ಹೊಂದಿದ್ದಾರೆ.

17% ಅಭ್ಯರ್ಥಿಗಳು 5ನೇ ಉತ್ತೀರ್ಣದಿಂದ 12ನೇ ತೇರ್ಗಡೆಯವರೆಗಿನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದರೆ, ಗಮನಾರ್ಹ 79% ಪದವಿ ಅಥವಾ ಉನ್ನತ ಪದವಿಗಳನ್ನು ಹೊಂದಿದ್ದಾರೆ. ಬಹುಪಾಲು (76%) ಅಭ್ಯರ್ಥಿಗಳು 51-70 ವಯಸ್ಸಿನ ಗುಂಪಿನಲ್ಲಿ ಬರುತ್ತಾರೆ ಮತ್ತು 31-50 ವಯಸ್ಸಿನ ಗುಂಪಿನಲ್ಲಿ ಸಣ್ಣ ಪ್ರಮಾಣ ಅಂದರೆ 16% ಹೊಂದಿದ್ದಾರೆ. 19% ಮಹಿಳಾ ಅಭ್ಯರ್ಥಿಗಳು ರಾಜ್ಯಸಭಾ ಕಣದಲ್ಲಿದ್ದಾರೆ ಎಂದು ವರದಿಯು ಬಹಿರಂಗಪಡಿಸುತ್ತದೆ.

ಇದನ್ನು ಓದಿ: ಗಾಝಾದಲ್ಲಿ ಮಾನವೀಯ ನೆರವು ಕಾರ್ಯಚರಣೆ: ಸಂಕಷ್ಟದಲ್ಲಿರುವ UN ಏಜೆನ್ಸಿ

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...