ಕೊಚ್ಚಿಯ ಕಲಮಸ್ಸೆರಿಯ ಸಭಾಂಗಣವೊಂದರಲ್ಲಿ ಸ್ಪೋಟ ಸಂಭವಿಸಿ ಓರ್ವ ಮೃತಪಟ್ಟು 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಕೊಚ್ಚಿಯ ಕಲಮಸ್ಸೆರಿಯ ಸಭಾಂಗಣದ ಪ್ರಾರ್ಥನಾ ವೇದಿಕೆಯ ಬಳಿ ಬೆಳಿಗ್ಗೆ 9.30ರ ಸುಮಾರಿಗೆ ಸ್ಫೋಟಗಳು ಸಂಭವಿಸಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಪ್ರಾರ್ಥನೆ ಪ್ರಾರಂಭವಾದ ಐದು ನಿಮಿಷಗಳ ನಂತರ ಸ್ಫೋಟ ಸಂಭವಿಸಿದೆ. ಸುಮಾರು 2,000 ಜನರಿದ್ದ ಕನ್ವೆನ್ಷನ್ ಹಾಲ್‌ನ ವೇದಿಕೆಯ ಬಳಿ ಸರಣಿ ಸ್ಫೋಟಗಳು ಸಂಭವಿಸಿದೆ.
ಕೊಚ್ಚಿಯ ಕಲಮಸ್ಸೆರಿಯ ಸಭಾಂಗಣವೊಂದರಲ್ಲಿ ಮೂರು ದಿನಗಳ ಪ್ರಾರ್ಥನಾ ಸಮಾವೇಶ ಶುಕ್ರವಾರ ಆರಂಭಗೊಂಡಿತ್ತು. ಇಂದು ಸಮಾವೇಶ ಮುಕ್ತಾಯದ ಹಂತದಲ್ಲಿತ್ತು ಈ ವೇಳೆ ಸ್ಪೋಟ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕದ ದಳದ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯಿಂದ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಇದನ್ನು ಓದಿ: ಉತ್ತರಪ್ರದೇಶ: ಮುಸ್ಲಿಂ ವ್ಯಕ್ತಿ ಕಸ್ಟಡಿಯಲ್ಲಿ ಸಾವು; ಪೊಲೀಸರ ವಿರುದ್ಧ ಕೊಲೆ ಆರೋಪ ಮಾಡಿದ ಕುಟುಂಬ


