Homeಮುಖಪುಟಅಕ್ರಮ ಹಣ ವರ್ಗಾವಣೆ ಪ್ರಕರಣ: ಅಶೋಕ ವಿವಿಯ ಇಬ್ಬರು ಸಹ ಸಂಸ್ಥಾಪಕರ ಬಂಧನ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಅಶೋಕ ವಿವಿಯ ಇಬ್ಬರು ಸಹ ಸಂಸ್ಥಾಪಕರ ಬಂಧನ

- Advertisement -
- Advertisement -

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಅಶೋಕ ವಿಶ್ವವಿದ್ಯಾಲಯದ ಇಬ್ಬರು ಸಹ ಸಂಸ್ಥಾಪಕರನ್ನು ಬಂಧಿಸಿದ್ದಾರೆ.

ಪ್ಯಾರಾಬೋಲಿಕ್ ಡ್ರಗ್ಸ್ ಹೆಸರಿನ ಫಾರ್ಮಾ ಕಂಪನಿಯ ಪ್ರಮೋಟರ್‌ಗಳಾದ ಪ್ರಣವ್ ಗುಪ್ತಾ ಮತ್ತು ವಿನೀತ್ ಗುಪ್ತಾ ಅವರನ್ನು ಬಂಧಿಸಲಾಗಿದೆ.

2021ರಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ 1,626.74 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಫಾರ್ಮಾ ಕಂಪನಿ ವಿರುದ್ಧ ಸಿಬಿಐ ಆರೋಪಿಸಿತ್ತು. ಇದಾದ ಒಂದು ವರ್ಷದ ಬಳಿಕ ಆರೋಪಿಗಳು ವಿಶ್ವವಿದ್ಯಾನಿಲಯದಲ್ಲಿನ ತಮ್ಮ ಹುದ್ದೆಗಳಿಂದ ಕೆಳಗಿಳಿದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪ್ಯಾರಾಬೋಲಿಕ್ ಡ್ರಗ್ಸ್‌ ಕಂಪೆನಿಗೆ ಮತ್ತು ಅಶೋಕ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಶೋಕ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ. ಅಶೋಕ ವಿಶ್ವವಿದ್ಯಾನಿಲಯವು ಪ್ಯಾರಾಬೋಲಿಕ್ ಡ್ರಗ್ಸ್‌ ಕಂಪೆನಿ ಜೊತೆ ಈ ಹಿಂದೆಯೂ ಸಂಬಂಧ ಹೊಂದಿಲ್ಲ. ಈಗಲೂ ಸಂಬಂಧ ಹೊಂದಿಲ್ಲ. ಕಂಪನಿ ಮತ್ತು ವಿವಿಗೆ ಸಂಬಧ ಕಲ್ಪಿಸುವ ಪ್ರಯತ್ನವು ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವಂತದ್ದು ಎಂದು ಅದು ಹೇಳಿದೆ.

ಅಶೋಕ ವಿಶ್ವವಿದ್ಯಾನಿಲಯದ 200ಕ್ಕೂ ಹೆಚ್ಚು ಸಂಸ್ಥಾಪಕರು ಮತ್ತು ದಾನಿಗಳಲ್ಲಿ ವಿನೀತ್ ಮತ್ತು ಪ್ರಣವ್ ಗುಪ್ತಾ ಇಬ್ಬರು ಸೇರಿದ್ದಾರೆ. ಅವರ ವೈಯಕ್ತಿಕ ವ್ಯವಹಾರಗಳು ವಿಶ್ವವಿದ್ಯಾನಿಲಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅದು ಹೇಳಿದೆ.

ಇದಲ್ಲದೆ ಇಡಿ ಅಧಿಕಾರಿಗಳು ಚಾರ್ಟರ್ಡ್ ಅಕೌಂಟೆಂಟ್ ಎಸ್.ಕೆ.ಬನ್ಸಾಲ್ ಅವರನ್ನು ಕೂಡ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (PMLA) ಅಡಿಯಲ್ಲಿ ಬಂಧಿಸಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ, ಮುಂಬೈ, ಚಂಡೀಗಢ, ಪಂಚಕುಲ ಮತ್ತು ಅಂಬಾಲಾ ಸೇರಿದಂತೆ ಕಂಪನಿಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ಈ ಬಂಧನಗಳು ನಡೆದಿವೆ.

ಇದನ್ನು ಓದಿ: ಸೂರತ್‌: ಒಂದೇ ಮನೆಯಲ್ಲಿ 7 ಮಂದಿ ಸಾಮೂಹಿಕ ಆತ್ಮಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...