Homeಮುಖಪುಟಕೊಲ್ಕತ್ತಾದಲ್ಲಿ ಹೊಸ ಕಾರ್ಯಕ್ರಮ ಘೋಷಿಸಿದ ಮುನಾವರ್‌ ಫಾರೂಖಿ!

ಕೊಲ್ಕತ್ತಾದಲ್ಲಿ ಹೊಸ ಕಾರ್ಯಕ್ರಮ ಘೋಷಿಸಿದ ಮುನಾವರ್‌ ಫಾರೂಖಿ!

- Advertisement -
- Advertisement -

ಖ್ಯಾತ ಸ್ಟಾಂಡ್‌‌ಅಪ್‌‌‌‌‌ ಕಾಮೇಡಿಯನ್‌‌‌‌‌ ಮುನಾವರ್‌ ಫಾರೂಖಿ ಜನವರಿ 16 ರಂದು ಕೊಲ್ಕತ್ತಾದಲ್ಲಿ ಪ್ರದರ್ಶನ ನೀಡುವುದಾಗಿ ಹೇಳಿದ್ದರೆ. ‘ಧಂಧೋ’ ಎಂಬ ತನ್ನ ಎರಡು ಗಂಟೆಗಳ ಕಾರ್ಯಕ್ರಮದ ಪೋಸ್ಟರ್ ಅನ್ನು ಮತ್ತು ಟಿಕೆಟ್‌ಗಳನ್ನು ಕಾಯ್ದಿರಿಸುವ ಲಿಂಕ್‌‌‌‌ ಅನ್ನು ಅವರು ಶನಿವಾರ ಟ್ವೀಟ್ ಮಾಡಿದ್ದರು.

799 ರೂ. ಬೆಲೆಯ ಟಿಕೆಟ್‌ಗಳು ವೇಗವಾಗಿ ಮಾರಾಟವಾಗುತ್ತಿದೆ ಎಂದು ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್‌ ಬುಕ್‌ಮೈಶೋ ಹೇಳಿತ್ತು. ಇದೀಗ ಮುನಾವರ್‌ ಫಾರೂಖಿ ಅವರೇ ಕೊಲ್ಕತ್ತಾ ಕಾರ್ಯಕ್ರಮದ ಟಿಕೆಟ್‌ಗಳು ಮಾರಾಟವಾಗಿದೆ ಎಂದು ಹೇಳಿದ್ದು, ಮತ್ತಷ್ಟು ಟಿಕೆಟ್‌ಗಳನ್ನು ಸೇರಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಬಿಜೆಪಿ ಆಗ್ರಹದ ಬಳಿಕ ಮುನಾವರ್‌ ಫಾರೂಖಿಯ ಮತ್ತೊಂದು ಕಾರ್ಯಕ್ರಮ ರದ್ದು

ಕಳೆದ ನವೆಂಬರ್‌ನಲ್ಲಿ ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಗಳ ಪ್ರತಿಭಟನೆಯಿಂದಾಗಿ ಬೆಂಗಳೂರಿನ ಕಾರ್ಯಕ್ರಮವನ್ನು ಪೊಲೀಸರು ರದ್ದು ಪಡಿಸಲು ಒತ್ತಾಯಿಸಿದ್ದರು ಮತ್ತು ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿದ್ದರು. ಬಿಜೆಪಿ ಬೆಂಬಲಿತ ಸಂಘಟನೆಗಳು, ಮುನಾವರ್‌ ಅವರು ಕಾರ್ಯಕ್ರಮವೊಂದರಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಆರೋಪಿಸಿದ್ದವು. ಜೊತೆಗೆ ಸಂಘಟನೆಗಳು

ಕಳೆದ ನವೆಂಬರ್‌ನಲ್ಲಿ ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಗಳ ಪ್ರತಿಭಟನೆಯಿಂದಾಗಿ ಬೆಂಗಳೂರಿನ ಕಾರ್ಯಕ್ರಮವನ್ನು ಪೊಲೀಸರು ರದ್ದು ಪಡಿಸಲು ಒತ್ತಾಯಿಸಿದ್ದರು ಮತ್ತು ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿದ್ದರು. ಬಿಜೆಪಿ ಬೆಂಬಲಿತ ಸಂಘಟನೆಗಳು, ಮುನಾವರ್‌ ಅವರು ಕಾರ್ಯಕ್ರಮವೊಂದರಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ, ಕಾರ್ಯಕ್ರಮದ ಮೇಲೆ ದಾಳಿ ಮಾಡುವುದಾಗಿ ಬೆದರಿಸಿದ್ದರು. ಇದರಿಂದಾಗಿ 600 ಕ್ಕೂ ಹೆಚ್ಚು ಟಿಕೆಟ್‌‌‌ ಮಾರಾಟವಾಗಿದ್ದ ಪ್ರದರ್ಶನ ರದ್ದಾಗಿತ್ತು.

ಕಳೆದ ಎರಡು ತಿಂಗಳುಗಳಲ್ಲಿ ತನ್ನ ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಅಲ್ಲಿರುವ ಪ್ರೇಕ್ಷಕರಿಗೆ ಬೆದರಿಕೆ ಇರುವ ಕಾರಣಕ್ಕೆ ತನ್ನ 12 ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ಮುನಾವರ್‌ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ:ಬೆಂಗಳೂರು: ಮುನಾವರ್‌ ಬಳಿಕ ಕುನಾಲ್ ಕಮ್ರಾ ಕಾರ್ಯಕ್ರಮವೂ ರದ್ದು; ಬೆದರಿಕೆ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...