Homeಕರ್ನಾಟಕಐತಿಹಾಸಿಕ ನಿರ್ಧಾರ:ಟ್ರಾನ್ಸ್‌ಜೆಂಡರ್‌ಗಳನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದ ರಾಜ್ಯ ಪೊಲೀಸ್‌ ಇಲಾಖೆ

ಐತಿಹಾಸಿಕ ನಿರ್ಧಾರ:ಟ್ರಾನ್ಸ್‌ಜೆಂಡರ್‌ಗಳನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದ ರಾಜ್ಯ ಪೊಲೀಸ್‌ ಇಲಾಖೆ

- Advertisement -
- Advertisement -

ಸ್ವಾಗತಾರ್ಹ ಮತ್ತು ಪ್ರಗತಿಪರ ನಡೆಯ ಮೊದಲ ಹೆಜ್ಜೆಯೊಂದನ್ನು ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಇಟ್ಟಿದೆ. ಕೆಎಸ್‌ಆರ್‌ಪಿ ಮತ್ತು ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಗಳಲ್ಲಿ ವಿಶೇಷ ಮೀಸಲು ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಪುರುಷ, ಮಹಿಳೆ ಮತ್ತು ‘ಟ್ರಾನ್ಸ್‌ಜೆಂಡರ್‌’ಗಳಿಂದ ಅರ್ಜಿಗಳನ್ನು ಇಲಾಖೆಯು ಆಹ್ವಾನಿಸಿದೆ.

ಸೋಮವಾರ ಹೊರಡಿಸಿದ ಅಧಿಸೂಚನೆಯು, ಕರ್ನಾಟಕದಲ್ಲಿ ಟ್ರಾನ್ಸ್‌ಜೆಂಡರ್‌‌ ಸಮುದಾಯದಿಂದ ಅರ್ಜಿಗಳನ್ನು ಆಹ್ವಾನಿಸಿದ ಮೊದಲ ಸರ್ಕಾರಿ ಇಲಾಖೆಯಾಗಿ ರಾಜ್ಯ ಪೊಲೀಸ್‌ ಇಲಾಖೆಯು ಹೊರಹೊಮ್ಮಿದೆ ಎಂದು ಮಾಧ್ಯಮಗಳು ಉಲ್ಲೇಖಿಸಿದೆ. 70 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 18 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ:ನೈತಿಕತೆ ಮತ್ತು ಪೊಲೀಸ್‌ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ

ಈ ವರ್ಷ ಜುಲೈನಲ್ಲಿ ಕರ್ನಾಟಕ ಹೈಕೋರ್ಟ್‌ನ ಮಹತ್ವದ ನಿರ್ದೇಶನದ ನಂತರ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಸಾರ್ವಜನಿಕ ಉದ್ಯೋಗದಲ್ಲಿ ಉದ್ಯೋಗಗಳನ್ನು ಕಾಯ್ದಿರಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.

ವಿಶೇಷ ಮೀಸಲು ಕಾನ್ಸ್‌ಟೇಬಲ್ ಪಡೆಯಲ್ಲಿ 2,467 ಹುದ್ದೆಗಳು ಖಾಲಿಯಾದ ನಂತರ, ನಗರ ಮೂಲದ ಎನ್‌ಜಿಒ ಮತ್ತು ಹಕ್ಕುಗಳ ಹೋರಾಟ ಗುಂಪಾದ ‘ಸಂಗಮ’ ಮತ್ತು ಹಿರಿಯ ವಕೀಲ ಬಿಟಿ ವೆಂಕಟೇಶ್ ಪ್ರತಿನಿಧಿಸುವ ಸಾಮಾಜಿಕ ಹೋರಾಟಗಾರ್ತಿ ನಿಶಾ ಗೂಳೂರ್ ಅವರು ಕಳೆದ ವರ್ಷ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಪ್ರತಿಕ್ರಿಯೆಯಾಗಿ ಈ ತೀರ್ಪು ಹೊರಬಿದ್ದಿವೆ. “ಜುಲೈ 2021 ರಲ್ಲಿ ಹೈಕೋರ್ಟ್ ಎಲ್ಲಾ ವರ್ಗಗಳಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ 1% ದಷ್ಟು ಮೀಸಲಾತಿಯನ್ನು ಆದೇಶಿಸಿತು” ಎಂದು ವಕೀಲ ವೆಂಕಟೇಶ್ ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.

“ಇದು ಭಾರತದಲ್ಲೇ ಮೊದಲ ಹೆಜ್ಜೆಯಾಗಿದ್ದು, ಸರ್ಕಾರವು ತನ್ನ ನೇಮಕಾತಿಯಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ ಸಮಾನ ಸ್ಥಾನಮಾನವನ್ನು ಘೋಷಿಸಿದೆ. ಮೀಸಲಾತಿ ನೀಡುವಂತೆ ನ್ಯಾಯಾಲಯ ನೀಡಿರುವ ನಿರ್ದೇಶನ ಶ್ಲಾಘನೀಯ” ಎಂದು ವೆಂಕಟೇಶ್ ಹೇಳಿದ್ದಾರೆ.

ಈ ಮಧ್ಯೆ, ಟ್ರಾನ್ಸ್‌‌ಜೆಂಡರ್‌‌ ಸಮುದಾಯದಿಂದ ಅರ್ಜಿಗಳನ್ನು ಆಹ್ವಾನಿಸಿದ ರಾಜ್ಯ ಪೊಲೀಸ್‌ ಇಲಾಖೆಯ ನಡೆಯನ್ನು ಟ್ರಾನ್ಸ್‌‌ಜೆಂಡರ್‌‌‌ ಸಮುದಾಯಕ್ಕಾಗಿ ಕೆಲಸ ಮಾಡುತ್ತಿರುವ NGO ‘ಸಂಗಮ’ ಸ್ವಾಗತಿಸಿದೆ.

ಇದನ್ನೂ ಓದಿ:ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್‌ ವಿವರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ-2024: ಕುಗ್ಗಿದ ಮೋದಿ ವರ್ಚಸ್ಸು; ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವಲೋಕನ…

0
2014 ಮತ್ತು 2019ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ 2024ರಲ್ಲಿ ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗಿದೆ. ಈ ಬಾರಿ ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ, ಮೋದಿ ಕುರಿತು ನಿರೂಪಣೆಯಲ್ಲಿ ಬದಲಾವಣೆ ಇದೆ, ಜನರಲ್ಲಿ ಮೋದಿ...