Homeಕರ್ನಾಟಕ2018ರಲ್ಲಿ ನಿಜವಾಗಿದ್ದ ಎಕ್ಸಿಟ್ ಪೋಲ್; 8 ಸಮೀಕ್ಷೆಗಳು ಏನು ಹೇಳಿದ್ದವು?

2018ರಲ್ಲಿ ನಿಜವಾಗಿದ್ದ ಎಕ್ಸಿಟ್ ಪೋಲ್; 8 ಸಮೀಕ್ಷೆಗಳು ಏನು ಹೇಳಿದ್ದವು?

- Advertisement -
- Advertisement -

2018ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ರಾಜ್ಯದ ಮತದಾರರು ಸ್ಪಷ್ಟ ಬಹುಮತವನ್ನು ನೀಡಿರಲಿಲ್ಲ. 224 ಸಂಖ್ಯಾಬಲದ ವಿಧಾನಸಭೆಯಲ್ಲಿ 104 ಶಾಸಕರನ್ನು ಹೊಂದಿದ್ದ ಬಿಜೆಪಿಯು ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿತು. ಸರ್ಕಾರ ರಚಿಸಲು ಬಿಜೆಪಿಯನ್ನು ಆಹ್ವಾನಿಸಲಾಯಿತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ ತ್ವರಿತವಾಗಿ ಒಗ್ಗೂಡಿ ಸರ್ಕಾರ ರಚಿಸಿದವು.

ಕಾಂಗ್ರೆಸ್-ಜೆಡಿಎಸ್‌ನ 17 ಶಾಸಕರು ಬಂಡಾಯವೆದ್ದು ಆಪರೇಷನ್ ಕಮಲಕ್ಕೆ ಒಳಗಾಗಿ ಬಾಂಬೆ ಸೇರಿದ್ದರಿಂದ ಒಂದು ವರ್ಷದೊಳಗೆ ಸರ್ಕಾರ ಪಥನವಾಯಿತು. ಬಿಜೆಪಿ ಮತ್ತೆ ಸರ್ಕಾರವನ್ನು ರಚಿಸಿತು. ಕರ್ನಾಟಕ ಬಿಜೆಪಿಯ ಕಟ್ಟಾಳು ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಆದರೆ ಜುಲೈ 26, 2021 ರಂದು ರಾಜೀನಾಮೆ ನೀಡಿದರು. ಅವರ ನಂತರದಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಆದರು.

2018ರ ಎಕ್ಸಿಟ್ ಪೋಲ್‌ಗಳು ಏನು ಹೇಳಿದ್ದವು?

ಆರು ರಾಷ್ಟ್ರೀಯ ಟೆಲಿವಿಷನ್ ಚಾನೆಲ್‌ಗಳು ಮತ್ತು ಒಂದು ಪ್ರಾದೇಶಿಕ ಚಾನೆಲ್ ಪ್ರಸಾರ ಮಾಡಿದ ಎಂಟು ಪ್ರಮುಖ ಎಕ್ಸಿಟ್ ಪೋಲ್‌ಗಳ ಪೈಕಿ ಆರು ಸಮೀಕ್ಷೆಗಳು ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು. ಎಂಟರಲ್ಲಿ ಏಳು ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರದ ಕುರಿತು ಸುಳಿವು ನೀಡಿದ್ದವು. ಬಿಜೆಪಿ ಅಥವಾ ಕಾಂಗ್ರೆಸ್ ಬಹುಮತವನ್ನು ಪಡೆಯಲಿಲ್ಲ. ಜೆಡಿಎಸ್ ಕಿಂಗ್‌ಮೇಕರ್ ಆಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿದ್ದವು. ಹಾಗೆಯೇ ಆಯಿತು. ಜೆಡಿಎಸ್‌ 20 ರಿಂದ 40 ಸ್ಥಾನಗಳನ್ನು ಪಡೆಯುತ್ತದೆ ಎಂದು ಸಮೀಕ್ಷೆಗಳು ಸೂಚನೆ ನೀಡಿದ್ದವು.

ವಿಧಾನಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಲಿದೆ ಎಂದು ಎಬಿಪಿ-ಸಿ ವೋಟರ್, ನ್ಯೂಸ್‌ಎಕ್ಸ್-ಸಿಎನ್‌ಎಕ್ಸ್, ರಿಪಬ್ಲಿಕ್-ಜನ್ ಕಿ ಬಾತ್ ಮತ್ತು ನ್ಯೂಸ್ ನೇಷನ್ ಎಕ್ಸಿಟ್ ಪೋಲ್‌ಗಳು  ಭವಿಷ್ಯ ನುಡಿದಿದ್ದವು. ಪ್ರಾದೇಶಿಕ ಮಾಧ್ಯಮವಾದ ದಿಗ್ವಿಜಯ್-ವಿಜಯವಾಣಿ ಸಮೀಕ್ಷೆಯು ಇದನ್ನೇ ಹೇಳಿತ್ತು.

ಇದನ್ನೂಓದಿರಿ: ಕರ್ನಾಟಕ ಚುನಾವಣೆ ಎಕ್ಸಿಟ್ ಪೋಲ್: ಮತದಾನೋತ್ತರ ಸಮೀಕ್ಷೆಗಳು ಹೀಗೆ ಹೇಳುತ್ತಿವೆ

ಟೈಮ್ಸ್ ನೌ ಎರಡು ಎಕ್ಸಿಟ್ ಪೋಲ್‌ಗಳನ್ನು ಪ್ರಸಾರ ಮಾಡಿತ್ತು. ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಕಾಂಗ್ರೆಸ್‌ಗೆ ಅಲ್ಪ ಮುನ್ನಡೆ ನೀಡಿತ್ತು; ಟೈಮ್ಸ್ ನೌ-ಟುಡೇಸ್ ಚಾಣಕ್ಯ- ಬಿಜೆಪಿಗೆ ಸ್ಪಷ್ಟ ಬಹುಮತವನ್ನು ನೀಡಿತ್ತು. ಇಂಡಿಯಾ ಟುಡೆ-ಆಕ್ಸಿಸ್ ಎಕ್ಸಿಟ್ ಪೋಲ್- ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಲಿದೆ ಎಂದಿತ್ತು.

ಎಬಿಪಿ-ಸಿ ವೋಟರ್ ಸಮೀಕ್ಷೆಯು ಬಿಜೆಪಿಗೆ 104-116 ಸ್ಥಾನಗಳನ್ನು ನೀಡಿತ್ತು. ನಂತರ ಕಾಂಗ್ರೆಸ್‌ಗೆ 83-94 ಮತ್ತು ಜೆಡಿಎಸ್‌ಗೆ 20-29 ಸ್ಥಾನಗಳು ಬರಲಿವೆ ಎಂದಿತ್ತು. ನ್ಯೂಸ್‌ಎಕ್ಸ್-ಸಿಎನ್‌ಎಕ್ಸ್ ಬಿಜೆಪಿಗೆ 102-110, ಕಾಂಗ್ರೆಸ್‌ಗೆ 72-78, ಜೆಡಿಎಸ್‌ಗೆ 35-39 ಮತ್ತು ಇತರರಿಗೆ 3-5 ಸ್ಥಾನಗಳನ್ನು ನೀಡಿತ್ತು. ರಿಪಬ್ಲಿಕ್-ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 37 ಮತ್ತು ಇತರೆ 3 ಸ್ಥಾನ ಪಡೆದಿದ್ದವು.

ಟೈಮ್ಸ್ ನೌ-ಚಾಣಕ್ಯ ಸಮೀಕ್ಷೆಯು ಬಿಜೆಪಿ 120 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿತ್ತು. ಇದು ಯಾವುದೇ ಪಕ್ಷಕ್ಕೆ ಬಹುಮತದ ಮುನ್ಸೂಚನೆ ನೀಡಿದ ಏಕೈಕ ಸಮೀಕ್ಷೆಯಾಗಿತ್ತು. ಟೈಮ್ಸ್ ನೌ-ಚಾಣಕ್ಯದವರು ಕಾಂಗ್ರೆಸ್‌ಗೆ 73, ಜೆಡಿಎಸ್‌ಗೆ 26 ಮತ್ತು ಇತರರಿಗೆ 3 ಸ್ಥಾನಗಳನ್ನು ನೀಡಿದ್ದರು. ಟೈಮ್ಸ್ ನೌ-ವಿಎಂಆರ್ ಪ್ರಕಾರ, ಕಾಂಗ್ರೆಸ್ 97 ಸ್ಥಾನಗಳನ್ನು, ಬಿಜೆಪಿ 94 ಸ್ಥಾನಗಳನ್ನು, ಜೆಡಿಎಸ್ 28 ಸ್ಥಾನಗಳನ್ನು ಮತ್ತು ಇತರರು 3 ಸ್ಥಾನಗಳು ಪಡೆಯಲಿದ್ದವು.

ಇದನ್ನು ಓದಿರಿ: ಕುಸುಮಾ ವಿರುದ್ಧ ಪ್ರಚಾರಕ್ಕೆ 80 ಲಕ್ಷ ಬೇಡಿಕೆ ಇಟ್ಟ ಡಿ.ಕೆ.ರವಿ ತಾಯಿ?; ವಿಡಿಯೊ ವೈರಲ್

ನ್ಯೂಸ್ ನೇಷನ್ ಸಮೀಕ್ಷೆಯು ಬಿಜೆಪಿಗೆ 99-108, ಕಾಂಗ್ರೆಸ್‌ಗೆ 75-84, ಜೆಡಿಎಸ್‌ಗೆ 31-40 ಮತ್ತು ಇತರರಿಗೆ 3-7 ಸ್ಥಾನ ನೀಡಿತ್ತು. ದಿಗ್ವಿಜಯ್-ವಿಜಯವಾಣಿ ಸಮೀಕ್ಷೆಯು ಬಿಜೆಪಿಗೆ 103-107, ಕಾಂಗ್ರೆಸ್‌ಗೆ 76-80, ಜೆಡಿಎಸ್‌ಗೆ 31-35 ಮತ್ತು ಇತರರಿಗೆ 4-8 ಸ್ಥಾನಗಳನ್ನು ನೀಡಲಾಗಿತ್ತು.

ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆಯು ಕಾಂಗ್ರೆಸ್ ಗೆಲ್ಲಲಿದೆ ಎಂದು ಮುನ್ಸೂಚನೆ ನೀಡಿತ್ತು. ಆಡಳಿತರೂಢ ಕಾಂಗ್ರೆಸ್‌ 106 ರಿಂದ 118 ಸ್ಥಾನಗಳನ್ನು ಪಡೆಯಲಿದೆ ಎಂದಿತ್ತು. ಬಿಜೆಪಿ 79-92, ಜೆಡಿಎಸ್‌ 22-30 ಮತ್ತು ಇತರರು 1-4 ಗಳಿಸುತ್ತಾರೆ ಎಂದಿತ್ತು.

ಬಹುತೇಕ ಎಕ್ಸಿಟ್‌ ಪೋಲ್‌ಗಳು ನುಡಿದಂತೆ ಬಿಜೆಪಿ 104 ಸ್ಥಾನಗಳನ್ನು ಪಡೆದು ಬಹುದೊಡ್ಡ ಪಕ್ಷವಾಗಿ ಹೊಮ್ಮಿತು. ಕಾಂಗ್ರೆಸ್ 80, ಜೆಡಿಎಸ್ 38 (ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡಿದ್ದ ಬಿಎಸ್‌ಪಿಯ 1 ಸ್ಥಾನ ಸೇರಿ) ಕ್ಷೇತ್ರಗಳಲ್ಲಿ ಗೆದ್ದಿದ್ದವು.

2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಮತ್ತು ಜೆಡಿಎಸ್ ತಲಾ 40 ಸ್ಥಾನಗಳನ್ನು ಪಡೆದರೆ, ಯಡಿಯೂರಪ್ಪ ಅವರ ಅಂದಿನ ಕರ್ನಾಟಕ ಜನತಾ ಪಕ್ಷ (ಕೆಜೆಪಿ) 6 ಸ್ಥಾನಗಳನ್ನು ಮತ್ತು ಬಿ ಶ್ರೀರಾಮುಲು ಅವರ ಬಡವರ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ 4 ಸ್ಥಾನಗಳನ್ನು ಪಡೆದುಕೊಂಡಿದ್ದವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...