Homeಮುಖಪುಟಕರ್ನಾಟಕ ಚುನಾವಣೆ ಎಕ್ಸಿಟ್ ಪೋಲ್: ಮತದಾನೋತ್ತರ ಸಮೀಕ್ಷೆಗಳು ಹೀಗೆ ಹೇಳುತ್ತಿವೆ

ಕರ್ನಾಟಕ ಚುನಾವಣೆ ಎಕ್ಸಿಟ್ ಪೋಲ್: ಮತದಾನೋತ್ತರ ಸಮೀಕ್ಷೆಗಳು ಹೀಗೆ ಹೇಳುತ್ತಿವೆ

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಮತದಾನ ಮುಗಿದಿದೆ. ಹಲವಾರು ಚಾನೆಲ್‌ಗಳು ಮತ್ತು ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ನಡೆಸಿದ್ದು, ಅವುಗಳನ್ನು ಇಂದು ಪ್ರಕಟಿಸಿವೆ. ವಿವಿಧ ಸಂಸ್ಥೆಗಳ ನಡೆಸಿದ ಎಕ್ಸಿಟ್ ಪೋಲ್ ಫಲಿತಾಂಶ ಕೆಳಗಿನಂತಿದೆ.

ಟಿವಿ9- ಸಿ ವೋಟರ್ ಎಕ್ಸಿಟ್ ಪೋಲ್

ಕಾಂಗ್ರೆಸ್:100-112
ಬಿಜೆಪಿ:83-95
ಜೆಡಿಎಸ್:21-29
ಇತರರು:02-06

ಝೀ ಮ್ಯಾಟ್ರಿಜ್

ಕಾಂಗ್ರೆಸ್:103-118
ಬಿಜೆಪಿ:79-89
ಜೆಡಿಎಸ್:25-33
ಇತರರು:02-05

ನವಭಾರತ್

ಕಾಂಗ್ರೆಸ್:106-120
ಬಿಜೆಪಿ:78-92
ಜೆಡಿಎಸ್:20-26
ಇತರರು:02-04

ಎಬಿಪಿ-ಸಿ ವೋಟರ್

  • BJP 83-95
  • Congress 100-12
  • JDS 21-29
  • Others 2-4

News Nation-CGS

  • BJP 114 seats
  • Congress 86
  • JD(S) 21

ರಿಪಬ್ಲಿಕ್ -ಟಿವಿಪಿ

ಕಾಂಗ್ರೆಸ್:94-108
ಬಿಜೆಪಿ:85-100
ಜೆಡಿಎಸ್:24-32
ಇತರರು:02-06

ಟಿವಿ9- PolStart

ಕಾಂಗ್ರೆಸ್:99-109
ಬಿಜೆಪಿ:88-98
ಜೆಡಿಎಸ್:21-26
ಇತರರು:00-04

ಜನ್ ಕಿ ಬಾತ್

ಕಾಂಗ್ರೆಸ್:91-106
ಬಿಜೆಪಿ:94-117
ಜೆಡಿಎಸ್:14-24
ಇತರರು:00-02

ನವಭಾರತ್ ಮತ್ತು ಝೀ ಮ್ಯಾಟ್ರಿಜ್ ಕಾಂಗ್ರೆಸ್‌ಗೆ ಬಹುಮತ ನೀಡಿದರೆ, ಜನ್ ಕಿ ಬಾತ್ ಮತ್ತು ನ್ಯೂಸ್ ನೇಷನ್ ಸಿಜಿಎಸ್ ಬಿಜೆಪಿಗೆ ಬಹುಮತ ನೀಡಿವೆ. ಟಿವಿ 9 -ಸಿ ವೋಟರ್ ಮತ್ತು ಟಿವಿ9- PolStart ಎಕ್ಸಿಟ್ ಪೋಲ್ ಗಳು ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಅತಂತ್ರ ಫಲಿತಾಂಶ ಬರಲಿದೆ ಎಂದು ಹೇಳಿವೆ.

2018ರ ಎಕ್ಸಿಟ್ ಪೋಲ್‌ಗಳು ಏನು ಹೇಳಿದ್ದವು?

ಆರು ರಾಷ್ಟ್ರೀಯ ಟೆಲಿವಿಷನ್ ಚಾನೆಲ್‌ಗಳು ಮತ್ತು ಒಂದು ಪ್ರಾದೇಶಿಕ ಚಾನೆಲ್ ಪ್ರಸಾರ ಮಾಡಿದ ಎಂಟು ಪ್ರಮುಖ ಎಕ್ಸಿಟ್ ಪೋಲ್‌ಗಳ ಪೈಕಿ ಆರು ಸಮೀಕ್ಷೆಗಳು ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು. ಎಂಟರಲ್ಲಿ ಏಳು ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರದ ಕುರಿತು ಸುಳಿವು ನೀಡಿದ್ದವು. ಬಿಜೆಪಿ ಅಥವಾ ಕಾಂಗ್ರೆಸ್ ಬಹುಮತವನ್ನು ಪಡೆಯಲಿಲ್ಲ. ಜೆಡಿಎಸ್ ಕಿಂಗ್‌ಮೇಕರ್ ಆಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿದ್ದವು. ಹಾಗೆಯೇ ಆಯಿತು. ಜೆಡಿಎಸ್‌ 20 ರಿಂದ 40 ಸ್ಥಾನಗಳನ್ನು ಪಡೆಯುತ್ತದೆ ಎಂದು ಸಮೀಕ್ಷೆಗಳು ಸೂಚನೆ ನೀಡಿದ್ದವು.

ವಿಧಾನಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಲಿದೆ ಎಂದು ಎಬಿಪಿ-ಸಿ ವೋಟರ್, ನ್ಯೂಸ್‌ಎಕ್ಸ್-ಸಿಎನ್‌ಎಕ್ಸ್, ರಿಪಬ್ಲಿಕ್-ಜನ್ ಕಿ ಬಾತ್ ಮತ್ತು ನ್ಯೂಸ್ ನೇಷನ್ ಎಕ್ಸಿಟ್ ಪೋಲ್‌ಗಳು  ಭವಿಷ್ಯ ನುಡಿದಿದ್ದವು. ಪ್ರಾದೇಶಿಕ ಮಾಧ್ಯಮವಾದ ದಿಗ್ವಿಜಯ್-ವಿಜಯವಾಣಿ ಸಮೀಕ್ಷೆಯು ಇದನ್ನೇ ಹೇಳಿತ್ತು.

ಟೈಮ್ಸ್ ನೌ ಎರಡು ಎಕ್ಸಿಟ್ ಪೋಲ್‌ಗಳನ್ನು ಪ್ರಸಾರ ಮಾಡಿತ್ತು. ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಕಾಂಗ್ರೆಸ್‌ಗೆ ಅಲ್ಪ ಮುನ್ನಡೆ ನೀಡಿತ್ತು; ಟೈಮ್ಸ್ ನೌ-ಟುಡೇಸ್ ಚಾಣಕ್ಯ- ಬಿಜೆಪಿಗೆ ಸ್ಪಷ್ಟ ಬಹುಮತವನ್ನು ನೀಡಿತ್ತು. ಇಂಡಿಯಾ ಟುಡೆ-ಆಕ್ಸಿಸ್ ಎಕ್ಸಿಟ್ ಪೋಲ್- ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಲಿದೆ ಎಂದಿತ್ತು.

ಎಬಿಪಿ-ಸಿ ವೋಟರ್ ಸಮೀಕ್ಷೆಯು ಬಿಜೆಪಿಗೆ 104-116 ಸ್ಥಾನಗಳನ್ನು ನೀಡಿತ್ತು. ನಂತರ ಕಾಂಗ್ರೆಸ್‌ಗೆ 83-94 ಮತ್ತು ಜೆಡಿಎಸ್‌ಗೆ 20-29 ಸ್ಥಾನಗಳು ಬರಲಿವೆ ಎಂದಿತ್ತು. ನ್ಯೂಸ್‌ಎಕ್ಸ್-ಸಿಎನ್‌ಎಕ್ಸ್ ಬಿಜೆಪಿಗೆ 102-110, ಕಾಂಗ್ರೆಸ್‌ಗೆ 72-78, ಜೆಡಿಎಸ್‌ಗೆ 35-39 ಮತ್ತು ಇತರರಿಗೆ 3-5 ಸ್ಥಾನಗಳನ್ನು ನೀಡಿತ್ತು. ರಿಪಬ್ಲಿಕ್-ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 37 ಮತ್ತು ಇತರೆ 3 ಸ್ಥಾನ ಪಡೆದಿದ್ದವು.

ಟೈಮ್ಸ್ ನೌ-ಚಾಣಕ್ಯ ಸಮೀಕ್ಷೆಯು ಬಿಜೆಪಿ 120 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿತ್ತು. ಇದು ಯಾವುದೇ ಪಕ್ಷಕ್ಕೆ ಬಹುಮತದ ಮುನ್ಸೂಚನೆ ನೀಡಿದ ಏಕೈಕ ಸಮೀಕ್ಷೆಯಾಗಿತ್ತು. ಟೈಮ್ಸ್ ನೌ-ಚಾಣಕ್ಯದವರು ಕಾಂಗ್ರೆಸ್‌ಗೆ 73, ಜೆಡಿಎಸ್‌ಗೆ 26 ಮತ್ತು ಇತರರಿಗೆ 3 ಸ್ಥಾನಗಳನ್ನು ನೀಡಿದ್ದರು. ಟೈಮ್ಸ್ ನೌ-ವಿಎಂಆರ್ ಪ್ರಕಾರ, ಕಾಂಗ್ರೆಸ್ 97 ಸ್ಥಾನಗಳನ್ನು, ಬಿಜೆಪಿ 94 ಸ್ಥಾನಗಳನ್ನು, ಜೆಡಿಎಸ್ 28 ಸ್ಥಾನಗಳನ್ನು ಮತ್ತು ಇತರರು 3 ಸ್ಥಾನಗಳು ಪಡೆಯಲಿದ್ದವು.

ನ್ಯೂಸ್ ನೇಷನ್ ಸಮೀಕ್ಷೆಯು ಬಿಜೆಪಿಗೆ 99-108, ಕಾಂಗ್ರೆಸ್‌ಗೆ 75-84, ಜೆಡಿಎಸ್‌ಗೆ 31-40 ಮತ್ತು ಇತರರಿಗೆ 3-7 ಸ್ಥಾನ ನೀಡಿತ್ತು. ದಿಗ್ವಿಜಯ್-ವಿಜಯವಾಣಿ ಸಮೀಕ್ಷೆಯು ಬಿಜೆಪಿಗೆ 103-107, ಕಾಂಗ್ರೆಸ್‌ಗೆ 76-80, ಜೆಡಿಎಸ್‌ಗೆ 31-35 ಮತ್ತು ಇತರರಿಗೆ 4-8 ಸ್ಥಾನಗಳನ್ನು ನೀಡಲಾಗಿತ್ತು.

ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆಯು ಕಾಂಗ್ರೆಸ್ ಗೆಲ್ಲಲಿದೆ ಎಂದು ಮುನ್ಸೂಚನೆ ನೀಡಿತ್ತು. ಆಡಳಿತರೂಢ ಕಾಂಗ್ರೆಸ್‌ 106 ರಿಂದ 118 ಸ್ಥಾನಗಳನ್ನು ಪಡೆಯಲಿದೆ ಎಂದಿತ್ತು. ಬಿಜೆಪಿ 79-92, ಜೆಡಿಎಸ್‌ 22-30 ಮತ್ತು ಇತರರು 1-4 ಗಳಿಸುತ್ತಾರೆ ಎಂದಿತ್ತು.

2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಮತ್ತು ಜೆಡಿಎಸ್ ತಲಾ 40 ಸ್ಥಾನಗಳನ್ನು ಪಡೆದರೆ, ಯಡಿಯೂರಪ್ಪ ಅವರ ಅಂದಿನ ಕರ್ನಾಟಕ ಜನತಾ ಪಕ್ಷ (ಕೆಜೆಪಿ) 6 ಸ್ಥಾನಗಳನ್ನು ಮತ್ತು ಬಿ ಶ್ರೀರಾಮುಲು ಅವರ ಬಡವರ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ 4 ಸ್ಥಾನಗಳನ್ನು ಪಡೆದುಕೊಂಡಿದ್ದವು.

ಇದನ್ನೂ ಓದಿ: ಮಹಿಳೆಯ ಮಾತು ಉಲ್ಲಂಘಿಸಿ ಬಿಜೆಪಿ ಬಟನ್ ಒತ್ತಿದ ಅಧಿಕಾರಿ; ಚಿತ್ತಾಪುರದಲ್ಲಿ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...