Homeಮುಖಪುಟಮೋದಿ ವಿರುದ್ಧ ವಾರಣಾಸಿಯಲ್ಲೇ ಕಣಕ್ಕಿಳಿಯುತ್ತಾರಾ ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ ಜೋಷಿ?

ಮೋದಿ ವಿರುದ್ಧ ವಾರಣಾಸಿಯಲ್ಲೇ ಕಣಕ್ಕಿಳಿಯುತ್ತಾರಾ ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ ಜೋಷಿ?

- Advertisement -
- Advertisement -

ಟೈಟಲ್ ನೋಡಿ ಆಶ್ಚರ್ಯವೆನಿಸಬಹುದಾದ ಈ ಸುದ್ದಿ ಈಗ ಕೇವಲ ತೆರೆಮರೆಯಲ್ಲಿ ಉಳಿದಿಲ್ಲ. ಅದಾಗಲೇ ದೇಶದ ಪ್ರಮುಖ ಸುದ್ದಿ ಚಾನೆಲ್‍ನ ವೆಬ್‍ಸೈಟ್‍ನಲ್ಲಿ ಬಂದಾಗಿದೆ.

ನಿನ್ನೆಯಷ್ಟೇ ಬಿಜೆಪಿ ಭೀಷ್ಮ ಎನ್ನುವ ವಿಶೇಷಣದ ಅಡ್ವಾಣಿಯವರು ತಮ್ಮ ಬ್ಲಾಗ್‍ನಲ್ಲಿ ‘ನಮ್ಮನ್ನು ರಾಜಕೀಯವಾಗಿ ವಿರೋಧಿಸುವವರು ದೇಶದ್ರೋಹಿಗಳಾಗುವುದಿಲ್ಲ, ನಮ್ಮ ಶತ್ರುಗಳೂ ಅಲ್ಲ, ಕೇವಲ ರಾಜಕೀಯ ಎದುರಾಳಿಗಳಷ್ಟೇ. ನಮ್ಮ ಭಾರತದ ಪ್ರಜಾಪ್ರಭುತ್ವ ನೆಲೆ ನಿಂತಿರುವುದೇ ಬಹುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ. ಈ ಪ್ರಜಾಪ್ರಭುತ್ವವೇ ಯಾವತ್ತೂ ಬಿಜೆಪಿ ಪಕ್ಷದ ಹೆಗ್ಗುರುತು” ಎಂದು ಬರೆದಿದ್ದರು. ಪ್ರಸ್ತುತ ಬಿಜೆಪಿಯ ಹಿರಿಯ ನಾಯಕರು ಮುಖ್ಯವಾಗಿ ಮೋದಿಯವರು, ತಮ್ಮ ರಾಜಕೀಯ ವಿರೋಧಿಗಳ, ನಿರ್ದಿಷ್ಟವಾಗಿ ಕಾಂಗ್ರೆಸ್ ನಾಯಕರ ದೇಶಪ್ರೇಮವನ್ನು ಪ್ರಶ್ನಿಸುತ್ತಾ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಹಾಗೂ ಪಕ್ಷದೊಳಗೆ ಮೋದಿ-ಶಾ ಜೋಡಿ ಸರ್ವಾಧಿಕಾರಿಗಳಾಗಿ ಬೆಳೆದಿರುವ ಸನ್ನಿವೇಶದಲ್ಲಿ ಅಡ್ವಾಣಿಯವರ ಈ ಹೇಳಿಕೆ ಮೋದಿಯವರಿಗೆ ಕೊಟ್ಟ ಟಾಂಗ್ ಎಂತಲೇ ವಿಶ್ಲೇಷಣೆಗೆ ಒಳಪಡುತ್ತಿದೆ. ಮೋದಿ-ಅಮಿತ್ ಶಾ ಜೋಡಿ ತಮ್ಮನ್ನು ಮೂಲೆಗುಂಪು ಮಾಡಿದ್ದಕ್ಕೆ ಪ್ರತಿಯಾಗಿ ಈ ಹಿರಿಯ ನಾಯಕ ಚುನಾವಣೆಯ ಸಮಯದಲ್ಲಿ ಹೀಗೆ ಬರೆದಿರುವುದರಲ್ಲಿ ಹೆಚ್ಚೇನು ಅನುಮಾನವಿಲ್ಲ. ಇದು ಸಮರೋತ್ಸಾಹದಲ್ಲಿರುವ ಗುಜರಾತಿ ಜೋಡಿಗೆ ಭರ್ಜರಿ ಹಿನ್ನಡೆಯನ್ನೇ ಉಂಟು ಮಾಡುತ್ತಿದೆ.

ಅಡ್ವಾಣಿಯವರ ರೆಬೆಲ್ ಇಶ್ಯೂ ತಣ್ಣಗಾಗುವ ಮೊದಲೇ ಈಗ ಮತ್ತೊಬ್ಬ ಹಿರಿಯ ನಾಯಕ ಮುರುಳಿ ಮನೋಹರ್ ಜೋಷಿಯವರಿಂದಲೂ ಬಿಜೆಪಿಗೆ ಆಘಾತಕರವಾದ ಸುದ್ದಿ ಹೊರಬಿದ್ದಿದೆ. ಮೋದಿ-ಶಾ ಬಿಜೆಪಿಯೊಳಗೆ ಮುಂಚೂಣಿಗೆ ಬಂದ ಕ್ಷಣದಿಂದಲೂ ಪ್ರತಿರೋಧ ತೋರುತ್ತಲೇ ಬಂದಿದ್ದ ಮತ್ತು ಆ ಕಾರಣಕ್ಕೆ ಹೀನಾಯವಾಗಿ ಮೂಲೆ ಗುಂಪಾಗಿಸಲ್ಪಟ್ಟ ಜೋಷಿಯವರು ಇದೀಗ ಮೋದಿ ವಿರುದ್ಧ ವಾರಣಾಸಿಯಲ್ಲಿ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ ಎಂಬ ಸುದ್ದಿ ಬರೆದಿರುವುದು ಪ್ರಸಿದ್ಧ ಪತ್ರಕರ್ತೆ ಸ್ವಾತಿ ಚತುರ್ವೇದಿ. ಈಗಾಗಲೇ ಕಾಂಗ್ರೆಸ್‍ನ ಹಿರಿಯ ನಾಯಕರು ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮಾತ್ರವಲ್ಲದೆ, ಇತರೆ ಪಕ್ಷಗಳ ನಾಯಕರೂ ಜೋಷಿಯವರನ್ನು ಸಂಪರ್ಕಿಸಿದ್ದು ಅವರು ವಾರಣಾಸಿಯಿಂದ ಸ್ಪರ್ಧಿಸಲು ಇಚ್ಛಿಸಿದರೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಬೆಂಬಲ ಸೂಚಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಾಯಕರಲ್ಲಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಹೆಸರೂ ಕೇಳಿಬರುತ್ತಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಎಸ್‍ಪಿ ಮೈತ್ರಿ ಮಾಡಿಕೊಂಡಿರುವುದರಿಂದ ಜೋಷಿಗೆ ಮಾಯಾವತಿಯವರ ಬೆಂಬಲವೂ ಸಿಕ್ಕಂತಾಗುತ್ತದೆ.

ಜೋಷಿಯವರು ಈ ಮಾತುಕತೆಗೆ ಪೂರಕವಾಗಿ ಸ್ಪಂದಿಸಿದ್ದಾರಾದರೂ, ಮೊದಲಿಗೆ ವಾರಾಣಾಸಿಗಿಂತ ಬೇರೆಡೆ ಸ್ಪರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ವಾರಾಣಾಸಿ, ಈ ಮೊದಲು ಮುರುಳಿ ಮನೋಹರ್ ಜೋಷಿ ಸಂಸದನಾಗಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಆದರೆ 2014ರಲ್ಲಿ ಮೋದಿಯವರು ವಾರಾಣಾಸಿಯಿಂದ ಸ್ಪರ್ಧಿಸಲು ನಿರ್ಧರಿಸಿದಾಗ ಜೋಷಿಯವರಿಗೆ ಕಾನ್ಪುರ ಕ್ಷೇತ್ರದ ಟಿಕೆಟ್ ನೀಡಲಾಗಿತ್ತು. ಆಗಲೇ ತನ್ನ ಕ್ಷೇತ್ರವನ್ನು ಮೋದಿಯವರಿಗೆ ಬಿಟ್ಟುಕೊಡಲು ಸಣ್ಣಗೆ ಪ್ರತಿರೋಧ ಒಡ್ಡಿದ್ದ ಅವರು ಆರೆಸೆಸ್ ನಾಯಕರ ಮಧ್ಯಸ್ಥಿಕೆಯಿಂದ ಬಿಟ್ಟುಕೊಟ್ಟಿದ್ದರು. ಆದರೆ ಈ ಬಾರಿ ಟಿಕೆಟ್ ನೀಡುವಾಗ ಬಿಜೆಪಿ ಪಕ್ಷವು ಎಲ್.ಕೆ.ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಷಿಯವರಿಗೆ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಅಡ್ವಾಣಿಯವರು ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರವನ್ನು ಸ್ವತಃ ಅಮಿತ್ ಶಾ ತಮ್ಮ ಬಳಿಯೇ ಉಳಿಸಿಕೊಂಡರೆ, ಮುರುಳಿ ಮನೋಹರ್ ಜೋಷಿಯವರು ಹಾಲಿ ಸಂಸದರಾಗಿರುವ ಕಾನ್ಪುರದಿಂದ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಮಂತ್ರಿ ಸತ್ಯದೇವ್ ಪಚೌರಿಯನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

1992ರಲ್ಲಿ ಮೋದಿ ಮತ್ತು ಜೋಶಿಯವರು

ವಾಜಪೇಯಿಯವರ ಜೊತೆಗೂಡಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅಡ್ವಾಣಿ ಮತ್ತು ಜೋಷಿ ಇಬ್ಬರೂ ಮಹತ್ವದ ಪಾತ್ರ ನಿಭಾಯಿಸಿದಂತವರು. 1977ರಲ್ಲಿ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಾಗ ಜನಸಂಘದಿಂದ ಸಚಿವರಾಗುವ ಅರ್ಹತೆಯಲ್ಲಿ ಇದ್ದವರು ವಾಜಪೇಯಿ ಮತ್ತು ಅಡ್ವಾಣಿ. ಜೋಷಿಯವರನ್ನು ಆಗ ಜನತಾ ಪಕ್ಷದ ಸಂಸದೀಯ ಪಕ್ಷದ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಇನ್ನು ಬಿಜೆಪಿ ದೇಶದಲ್ಲಿ ಬಲವಾಗಿ ಬೇರೂರಲು ಕಾರಣವಾದದ್ದು ಅಡ್ವಾಣಿಯವರ ಕುಖ್ಯಾತ ರಥಯಾತ್ರೆ ಮತ್ತು ಅವರದೇ ನೇತೃತ್ವದಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣಗಳು. ಜೋಷಿ ಇವರಿಬ್ಬರ ನಂತರದ ಮೂರನೇ ಸ್ಥಾನದಲ್ಲಿದ್ದ ನಾಯಕ. ವಾಜಪೇಯಿಯವರ ಹದಿಮೂರು ದಿವಸದ ಸರ್ಕಾರದಲ್ಲಿ ಗೃಹಮಂತ್ರಿಯಾಗುವಷ್ಟು, ಆನಂತರದ ಎನ್‍ಡಿಎ ಸರ್ಕಾರದಲ್ಲಿ ಮಾನವ ಸಂಪನ್ಮೂಲದಂತಹ ಪ್ರಭಾವಿ ಖಾತೆಯ ಸಚಿವರಾಗುವಷ್ಟು ಜೋಷಿ ಬಿಜೆಪಿಯೊಳಗೆ ವರ್ಚಸ್ಸು ಹೊಂದಿದ್ದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

ಅಂತವರನ್ನು ಮೋದಿ-ಶಾ ಜೋಡಿ ಇತ್ತೀಚಿನ ದಿನಗಳಲ್ಲಿ ನಡೆಸಿಕೊಂಡ ರೀತಿ ಮಾತ್ರ ತುಂಬಾ ಅವಮಾನಕರದ್ದಾಗಿತ್ತು. ಅದರ ವಿರುದ್ಧ ಅಡ್ವಾಣಿಯವರು ಒಂದಷ್ಟು ಮಟ್ಟಿಗಿನ ಸಹನೆ ತೋರಿದರಾದರು ಮುರುಳಿ ಮನೋಹರ್ ಜೋಷಿ ಪ್ರತಿಯಾಡುತ್ತಲೇ ಬಂದಿದ್ದರು. 2014ರ ಚುನಾವಣೆ ಸಂದರ್ಭದಲ್ಲೇ ಇಡೀ ದೇಶಾದ್ಯಂತ ಮೋದಿ ಅಲೆ ಇದೆ ಎಂಬ ವಾದ ಎನ್ನುತ್ತಿದ್ದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ “ದೇಶದಲ್ಲಿ ಮೋದಿ ಅಲೆ ಇಲ್ಲ, ಇರೋದು ಬಿಜೆಪಿ ಅಲೆ. ಮೋದಿ ಕೇವಲ ಪಕ್ಷದ ಪ್ರಧಾನಿ ಅಭ್ಯರ್ಥಿ ಅಷ್ಟೆ” ಎಂದು ನೇರವಾಗಿ ಹೇಳಿದ್ದ ಜೋಷಿಯವರು, ಅಷ್ಟರಲ್ಲಾಗಲೇ ಬಿಜೆಪಿಯಿಂದ ಟಿಕೆಟ್ (ಬಾರ್ಮರ್ ಕ್ಷೇತ್ರ) ನಿರಾಕರಿಸಲ್ಪಟ್ಟಿದ್ದ ಮತ್ತೊಬ್ಬ ಹಿರಿಯ ನಾಯಕ ಜಸ್ವಂತ್ ಸಿಂಗ್‍ರ ಕುರಿತು “ಅವರಿಗೆ ಟಿಕೆಟ್ ನೀಡಬಾರದೆನ್ನುವುದು ಪಕ್ಷದೊಳಗೆ ಚರ್ಚೆಯೇ ಆಗಿರಲಿಲ್ಲ” ಎನ್ನುವ ಮೂಲಕ ಅದು ಮೋದಿ-ಶಾ ಜೋಡಿಯ ಏಕಪಕ್ಷೀಯ ನಿರ್ಧಾರ ಎಂದು ಟೀಕಿಸಿದ್ದರು. ಅಲ್ಲದೇ 2018ರಲ್ಲಿ `ಪವರ್ ಪೊಲಿಟಿಕ್ಸ್’ ಎಂಬ ನಿಯತಕಾಲಿಕೆಯಲ್ಲಿ ‘ರಾಜಧರ್ಮ’ ತಲೆಬರಹದಲ್ಲಿ ಲೇಖನವೊಂದನ್ನು ಬರೆದಿದ್ದ ಜೋಷಿ, ಇಡೀ ಲೇಖನವನ್ನು ಮೋದಿ-ಶಾ ಸರ್ವಾಧಿಕಾರವನ್ನು ಟೀಕಿಸಲು ದುಡಿಸಿಕೊಂಡಿದ್ದರು. ‘ವಾಲ್ಮೀಕಿಯ ಪ್ರಕಾರ ರಾಜನಾದವನು ಸರ್ವಾಧಿಕಾರಿಯಾಗಿರಬಾರದು. ರಾಜನಾದವನು ಆಡಳಿತವನ್ನು ನಡೆಸಲು ಮಂತ್ರಿಗಳ, ವಿದ್ವಾಂಸರ, ಸೇನಾ ಅಧಿಕಾರಿಗಳ ಸಲಹೆ ಕೇಳುತ್ತಿದ್ದುದನ್ನು ರಾಮಾಯಣದಲ್ಲಿ ನಾವು ಕಾಣಬಹುದು’ ಎಂಬ ಒಂದು ಸಾಲೇ ಇಡೀ ಲೇಖನಕ್ಕೆ ಹಿಡಿದ ಕನ್ನಡಿಯಂತಿದೆ. ಜೋಷಿಯವರ ವ್ಯಕ್ತಿತ್ವ ಹೀಗಿದ್ದುದರಿಂದಲೇ ಆರೆಸ್ಸೆಸ್ ನಾಯಕರು ಮೋದಿ-ಷಾ ಜೋಡಿಗೆ, ಜೋಷಿಯವರ ವಿಚಾರದಲ್ಲಿ ಎಚ್ಚರಿಸಿದ್ದರಂತೆ.

ಇದೀಗ ಸಿಡಿದೆದ್ದಿರುವ ಜೋಷಿಯವರನ್ನು ಆರೆಸ್ಸೆಸ್ ತಣ್ಣಗೆ ಮಾಡುತ್ತದಾ ಅಥವಾ ಮೋದಿಯ ವಿರುದ್ಧ ತಮ್ಮ ಸ್ವಂತ ಕ್ಷೇತ್ರ ವಾರಣಾಸಿಯಿಂದ ಸ್ಪರ್ಧೆ ಮಾಡಲು ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...