Homeಕರ್ನಾಟಕ‘ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್’: ಕ್ರಾಂತಿಕಾರಿ ‘ಚೆ’ ಮಗಳು ಅಲಿಡಾ ಗುವೆರಾ

‘ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್’: ಕ್ರಾಂತಿಕಾರಿ ‘ಚೆ’ ಮಗಳು ಅಲಿಡಾ ಗುವೆರಾ

- Advertisement -
- Advertisement -

‘ಚೆ’ ಎಷ್ಟು ಕ್ರಾಂತಿಕಾರಿಯು ಅಷ್ಟೆ ರೊಮ್ಯಾಂಟಿಕ್ ಕೂಡಾ ಆಗಿದ್ದರು. ಮನುಕುಲವನ್ನು ಪ್ರೀತಿಸುವ ಸಾಮರ್ಥ್ಯ ಇದ್ದರೆ ಮಾತ್ರ ಅವರು ಸಮರ್ಥ ವ್ಯಕ್ತಿ ಎಂದೆಣಿಸಿಕೊಳ್ಳಬಹುದು. ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್ ಎಂದು ಕ್ರಾಂತಿಕಾರಿ ಚೆ ಗೆವಾರ ಅವರ ಮಗಳು, ಮಕ್ಕಳ ವೈದ್ಯೆ, ಮಾನವ ಹಕ್ಕುಗಳ ಹೋರಾಟಗಾರ್ತಿ ಡಾ. ಅಲಿಡಾ ಗೆವಾರ ಅಭಿಪ್ರಾಯಪಟ್ಟರು. ಅವರು ಗುರುವಾರ ಸಂಜೆ ಬೆಂಗಳೂರಿನಲ್ಲಿ ನಡೆದ ‘ಪ್ರಗತಿಪರ ಸಂಘಟನೆಗಳು’ ಹಾಗೂ ‘ಕ್ಯೂಬಾ ಸೌಹಾರ್ದತಾ ಸಮಿತಿ’ ಆಯೋಜಿಸಿದ್ದ ‘ನಾಗರೀಕ ಸನ್ಮಾನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ತಂದೆ ಚೆ ಗೆವೆರಾ ಅವರ ಒಡನಾಟವನ್ನು ಸ್ಮರಿಸಿದ ಅಲಿಡಾ ಗುವೆರಾ,“ನನ್ನ ತಂದೆ ಕವನಗಳೆಂದರೆ ಬಹಳ ಪ್ರೀತಿ. ಕವಿತೆಗಳನ್ನು ಹಾಡುತ್ತಿದ್ದರು ಮತ್ತು ಬರೆಯುತ್ತಿದ್ದರು. ಅವರ ಬರಹಗಳಿಗೆ ಅವರೇ ವಿಮರ್ಶಕರೂ ಆಗಿರುತ್ತಿದ್ದರು. ಹಾಗಾಗಿ ಅವರು ಅವರೇ ಬರೆದ ಕವಿತೆಗಳನ್ನು ಓದುತ್ತಿರಲಿಲ್ಲ. ಆದರೆ ರಾತ್ರಿ ಹೊತ್ತಿನಲ್ಲಿ ನನ್ನ ತಾಯಿಗಾಗಿ ನನ್ನ ತಂದೆ ಚೆ ಗುವೆರಾ ಕವಿತೆಗಳನ್ನು ಓದುತ್ತಿದ್ದರು. ಅಪ್ಪ ಕ್ರಾಂತಿಗಾಗಿ ಕಾಂಗೋಗೆ ಹೊರಡುವಾಗ ನನ್ನ ತಾಯಿಗಾಗಿ ಅವರೇ ವಾಚನ ಮಾಡಿದ ಕವನಗಳನ್ನು ರೆಕಾರ್ಡ್ ಮಾಡಿ ಕೊಟ್ಟು ಹೋಗಿದ್ದರು” ಎಂದು ತಂದೆಯನ್ನು ನೆನಪಿಸಿಕೊಂಡರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಿಜವಾದ ಕ್ರಾಂತಿಯಲ್ಲಿ ಯಾವತ್ತೂ ಕೂಡಾ ಪುರುಷ ಮತ್ತು‌ ಮಹಿಳೆ ಸಮಾನವಾಗಿ ಒಳಗೊಂಡಿರಬೇಕು. ಕ್ರಾಂತಿಯಲ್ಲಿ ಪುರುಷ ಮತ್ತು ಮಹಿಳೆಯರ ಸಮಾನ ಪಾಲುದಾರಿಕೆ ಇರಬೇಕು ಎಂದು ತಂದೆ ಚೆಗುವೆರಾ ನಂಬಿದ್ದರು” ಎಂದು ಅವರು ಹೇಳಿದರು.

ಸದ್ಯದ ಕ್ಯೂಬಾ ಸ್ಥಿತಿಗಳನ್ನು ವಿವರಿಸಿದ ಅವರು,“ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ಕ್ಯೂಬಾ ದೊಡ್ಡ ಪ್ರಮಾಣದಲ್ಲಿ ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸಂಪನ್ಮೂಲಗಳ ಕೊರತೆ ಎದುರಾಗಿದೆ. ಅಲ್ಲಿನ ಸರ್ಕಾರ ಚೇತರಿಕೆಗಾಗಿ ಶ್ರಮಿಸುತ್ತಿದೆ” ಎಂದು ತಿಳಿಸಿದರು.

“ಚೆ ಗುವೆರಾ ಎಷ್ಟು ಕ್ರಾಂತಿಕಾರಿಯೋ ಅಷ್ಟೆ ರೊಮ್ಯಾಂಟಿಕ್ ಕೂಡಾ ಆಗಿದ್ದರು. ಹೇಗೆ ಪ್ರೀತಿಸಬೇಕು ಎಂದು ಅವರು ತಿಳಿದಿದ್ದರು. ಹೇಗೆ ಒಬ್ಬ ವ್ಯಕ್ತಿ ತನ್ನ ಮಗಳು ಮತ್ತು ಪತ್ನಿಯ ಜೊತೆ ಬದುಕುತ್ತಲೇ, ಅವರನ್ನೂ ಕ್ರಾಂತಿಯ ಭಾಗವಾಗಿಸಿಕೊಂಡು ಜಗತ್ತಿಗಾಗಿ ಹೇಗೆ ಹೋರಾಡಬೇಕು ಎಂದು ತಿಳಿಸಿಕೊಟ್ಟರು. ಮನುಕುಲವನ್ನು ಪ್ರೀತಿಸುವ ಸಾಮರ್ಥ್ಯ ಇದ್ದರೆ ಮಾತ್ರ ಅವರು ಸಮರ್ಥ ವ್ಯಕ್ತಿ. ನನ್ನಪ್ಪ ಚೆಗುವೆರಾ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್” ಎಂದು ಅವರು ಹೆಮ್ಮೆಪಟ್ಟುಕೊಂಡರು

“ನಾವು ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಸರಿಯಾದುದನ್ನೇ ಹೇಳಿದರೂ ಹೇಗೆ ಹೇಳಬೇಕು ಎಂಬ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಮಾಹಿತಿಗಳ ತಿರುಚುವಿಕೆ ಮತ್ತು ತಪ್ಪಾಗಿ ಪ್ರಸಾರ ಮಾಡುವಿಕೆಯೂ ಈಗಿನ ಮನುಕುಲವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು” ಎಂದು ಹೇಳಿದ ಅವರು ‘ಚೆ’ ಹೇಳದ ಮಾತುಗಳನ್ನು ಅವರ ಹೆಸರಿನಲ್ಲಿ ಹರಿದಾಡಿದ ಘಟನೆಯೊಂದನ್ನು ಹಂಚಿಕೊಂಡರು.

“ಭಾರತ ಮತ್ತು ಕ್ಯೂಬಾ ಭಾವನಾತ್ಮಕವಾಗಿ ದೂರವೇನಿಲ್ಲ. ಭಾರತದ ಜನರು ಕ್ಯೂಬಾ ಬೆಂಬಲಕ್ಕೆ ನಿಂತಿದ್ದರು. ಈಗಲೂ ಭಾರತ-ಕ್ಯೂಬಾ ಜೊತೆಯಲ್ಲೇ ಇದ್ದೇವೆ. ಇದೇ ಭಾರತ-ಕ್ಯೂಬಾ ಸೌಂದರ್ಯ. ‘ಭಾರತ-ಕ್ಯೂಬಾ ಭಾವನಾತ್ಮಕ ಒಗ್ಗಟ್ಟು’ ಎನ್ನುವುದು ಮಾನವತೆಯ ಸೌಂದರ್ಯವಾಗಿದೆ ಎಂದು ನಾನು ನಂಬಿದ್ದೇನೆ” ಎಂದು ಅವರು ಹೇಳಿದರು.

“ಎರಡು ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದ ನಾವು ಕಷ್ಟಕ್ಕೀಡಾದೆವು. ಕ್ಯೂಬಾ ಆಗ ಆರ್ಥಿಕತೆಯಿಂದಲೂ ಬಳಲಿತ್ತು. ಆದರೆ ನಾವು ಜನರ ಬದುಕನ್ನು ರಕ್ಷಣೆ ಮಾಡಲೇಬೇಕಿತ್ತು ಮತ್ತು ಅದನ್ನು ನಾವು ಮಾಡಿದೆವು ಕೂಡ. ಗಂಭೀರ ಆರ್ಥಿಕ‌ ಸಮಸ್ಯೆ ಎದುರಾದಾಗಲೂ ಅದನ್ನು ನಿಭಾಯಿಸಿದೆವು. ನಾವು ಬಹಿಷ್ಕಾರದ ಬಗ್ಗೆ ಸುಲಭವಾಗಿ ಮಾತಾಡಬಹುದು‌. ಆದರೆ ಬಹಿಷ್ಕಾರವನ್ನೇ ಬದುಕುವುದು ಅಷ್ಟು ಸುಲಭವಲ್ಲ. ನಮ್ಮಲ್ಲಿದ್ದ ಎಲ್ಲಾ ಅನುದಾನವನ್ನು ನಾವು ನಾಗರಿಕರಿಗಾಗಿ ಬಳಸಿದ್ದೇವೆ” ಎಂದು ತಿಳಿಸಿದರು.

“ಜಗತ್ತಿನ ದುರಂತ ಏನೆಂದರೆ ಎಲ್ಲಾ ಜೀವರಕ್ಷಕ ಔಷಧಿಗಳ ಪೇಟೆಂಟ್ ಅಮೇರಿಕಾದ ಬಳಿ ಇದೆ. ನಾವು ಹಣ ಕೊಟ್ಟರೂ ಅಮೇರಿಕಾ ನಮಗೆ ಔಷಧಿಗಳನ್ನು ಕೊಡುವುದಿಲ್ಲ. ಬೇರೆ ಯಾರಾದರೂ ಕೊಂಡು, ಅವರ ಬಳಿ ನಾವು ಕೊಂಡರೆ ಅವರಿಗೂ ಅಮೇರಿಕಾ ತೊಂದರೆ ಕೊಡುತ್ತದೆ. ಅದಕ್ಕೆ ನಾವು ಉಪಾಯವಾಗಿ ಕನಿಷ್ಠ ಐದು ದೇಶದ ಕೈದಾಟಿದ ಮೇಲೆ ಅವರಿಂದ ನಾವು ಔಷಧಿ ಕೊಳ್ಳುವ ವ್ಯವಸ್ಥೆ ಮಾಡಿದೆವು. ಆಗ ಔಷದಿಯ ಬೆಲೆ ಐದು ಪಟ್ಟು ಹೆಚ್ಚಾಗುತ್ತದೆ. ಇಷ್ಟಾದರೂ ನಾವು ನಮ್ಮ ಜನರಿಗೆ ಸಂಪೂರ್ಣ ಉಚಿತವಾದ ವೈದ್ಯಕೀಯ ಸೌಲಭ್ಯ ಕೊಡುತ್ತೇವೆ” ಎಂದು ಅವರು ಹೇಳಿದರು.

“ನಮ್ಮ ವಿಜ್ಞಾನಿಗಳು ಕ್ಯೂಬಾದಲ್ಲಿ ಒಟ್ಟು ಐದು ಬಗೆಯ ಕೋವಿಡ್ ವ್ಯಾಕ್ಸಿನ್‌ಗಳನ್ನು ಕಂಡುಹಿಡಿದರು. ಆದರೆ ಅದಕ್ಕೆ ಬೇಕಾದ ಸಿರಿಂಜ್‌ಗಳ ಮೇಲೂ ಅಮೇರಿಕಾ ನಿರ್ಬಂಧ ಹೇರಿತ್ತು. ಕಡೆಗೆ ನಾವು ಮೂಗಿನ ಹೊಳ್ಳೆಗಳ ಮೂಲಕ ವ್ಯಾಕ್ಸಿನ್ ಅನ್ನು ಜನರಿಗೆ ನೀಡಿ ಯಶಸ್ಸು ಗಳಿಸಿದೆವು. ಇದೀಗ ಕ್ಯೂಬಾ ಮತ್ತೊಂದು ಹೊಸ ವ್ಯಾಕ್ಸಿನ್ ಕಂಡು ಹಿಡಿದಿದ್ದು, ಅದನ್ನೂ ಕೂಡಾ ಮೂಗಿನ ಮೂಲಕ ಕೊಡಲಾಗುತ್ತದೆ. ಹಾಗಾಗಿ ನಮಗೆ ಅಮೇರಿಕಾದ ಸಿರೀಂಜು ಅಗತ್ಯವಿಲ್ಲ” ಎಂದು ಹೇಳಿದರು.

“ಕ್ಯೂಬಾ ಜೊತೆಗೆ ಕೇರಳ ತನ್ನ ಬೆಂಬಲವನ್ನು ನೀಡಿತು. ಕ್ಯೂಬಾ ಒಂದು ದೇಶವಾಗಿ ಕೇರಳದ ಜೊತೆ ಜೊತೆಗೆ ಸಾಗುತ್ತಿದ್ದೇವೆ. ಇದಕ್ಕೆ ನಾವು ಒಗ್ಗಟ್ಟು ಎನ್ನುತ್ತೇವೆ. ಆಯುರ್ವೇದಿಕೆ ಮೆಡಿಸಿನ್ ಗಳನ್ನು ಕ್ಯೂಬಾದಲ್ಲಿ ಅಭಿವೃದ್ದಿಪಡಿಸಲು ಕೇರಳದ ಸಹಕಾರ ನೀಡಿದೆ. ಕೇರಳ ಮತ್ತು ಕ್ಯೂಬಾದ ಮನೋಧರ್ಮ ಒಂದೇ ಆಗಿದೆ. ಹಾಗಾಗಿ ಕೇರಳ ಮತ್ತು ಕ್ಯೂಬಾದಲ್ಲಿ ಒಂದೇ ರೀತಿಯ ಯೋಜನೆ ಮತ್ತು ಯೋಚನೆಗಳಿವೆ. ಕ್ಯೂಬಾ ಮತ್ತು ಕೇರಳದ ಈ ಸಂಬಂಧದಿಂದ ಜಗತ್ತು ಕಲಿಯುವಂತದ್ದು ಬಹಳ ಇದೆ” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ, ಅಲಿಡಾ ಗೆವಾರ ಅವರ ಪುತ್ರಿ ಅರ್ಥಶಾಸ್ತ್ರಜ್ಞೆ ಎಸ್ತೆಫಾನಿಯಾ, ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಕೇರಳದ ಮಾಜಿ ಸಚಿವ, ಕ್ಯೂಬಾ ಸೌಹಾರ್ದ ಸಮಿತಿ ಅಧ್ಯಕ್ಷ ಎಂ.ಎ. ಬೇಬಿ, ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ ದಾಸ್, ದಲಿತ ಹಕ್ಕುಗಳ ಹೋರಾಟಗಾರ ಹಿರಿಯ ಮುಖಂಡ ಮಾವಳ್ಳಿ ಶಂಕರ್, ಹಿರಿಯ ಪತ್ರಕರ್ತೆ ಡಾ. ವಿಜಯಾ, ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್, ಹಿರಿಯ ವಿಧ್ವಾಂಸ ಜಿ. ರಾಮಕೃಷ್ಣ, ಸಿಪಿಐಎಂಎಲ್‌‌ ನಾಯಕಿ ಮೈತ್ರೇಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಹುತ್ವ ನಾಶ ಮಾಡಲು ಹೊರಟವರಿಗೆ ‘ಚೆ’ ಅಭಿಮಾನಿಗಳು ಉತ್ತರಿಸುತ್ತೇವೆ: ಪ್ರೊ. ಬರಗೂರು ರಾಮಚಂದ್ರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...