Homeಮುಖಪುಟನನ್ನ ಹೃದಯ ಘಾಸಿಯಾಗಿದೆ: ದ್ವೇಷದ ಟ್ರೋಲ್‌ಗಳಿಂದ ಮನನೊಂದು ರಶ್ಮಿಕಾ ಪೋಸ್ಟ್‌

ನನ್ನ ಹೃದಯ ಘಾಸಿಯಾಗಿದೆ: ದ್ವೇಷದ ಟ್ರೋಲ್‌ಗಳಿಂದ ಮನನೊಂದು ರಶ್ಮಿಕಾ ಪೋಸ್ಟ್‌

- Advertisement -
- Advertisement -

ವಿನಾಕಾರಣ ಟ್ರೋಲ್‌ಗಳಿಗೆ ಒಳಗಾಗುತ್ತಿರುವ ಬಹುಭಾಷಾ ನಟಿ, ಕೊಡಗಿನ ರಶ್ಮಿಕಾ ಮಂದಣ್ಣ ಅವರು ತಮಗಾಗುತ್ತಿರುವ ಬೇಸರವನ್ನು ಹಂಚಿಕೊಂಡಿದ್ದಾರೆ.

ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತಲಾಗುತ್ತಿರುವ ತಮ್ಮ ವಿರುದ್ಧದ ದ್ವೇಷದ ಅಭಿಯಾನ ಹಾಗೂ ಅಪಹಾಸ್ಯದ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಶ್ಮಿಕಾ ಮಾತುಗಳು:

“ಕಳೆದ ಕೆಲವು ದಿನಗಳು, ವಾರಗಳು, ತಿಂಗಳುಗಳು ಅಥವಾ ಬಹುಶಃ ವರ್ಷಗಳಲ್ಲಿ ಒಂದೆರಡು ವಿಷಯಗಳು ನನ್ನನ್ನು ಸಮಸ್ಯೆಗೆ ದೂಡಿವೆ. ನಾನು ಅದನ್ನು ಪರಿಹರಿಸುವ ಸಮಯ ಇದೆಂದು ನಾನು ಭಾವಿಸುತ್ತೇನೆ. ನಾನು ನನಗಾಗಿ ಮಾತ್ರ ಮಾತನಾಡುತ್ತಿದ್ದೇನೆ. ಇದನ್ನು ನಾನು ವರ್ಷಗಳ ಹಿಂದೆಯೇ ಮಾಡಬೇಕಾಗಿತ್ತು. ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದಲೂ ಬಹಳಷ್ಟು ದ್ವೇಷವನ್ನು ಸ್ವೀಕರಿಸುತ್ತಿದ್ದೇನೆ. ಸಾಕಷ್ಟು ಟ್ರೋಲ್‌ ಮತ್ತು ನಕಾರಾತ್ಮಕತೆಗೆ ಒಳಗಾಗಿದ್ದೇನೆ” ಎಂದು ಅವರು ಬರೆದಿದ್ದಾರೆ.

“ನಾನು ಆಯ್ಕೆ ಮಾಡಿದ ಜೀವನವು ಮೌಲ್ಯದೊಂದಿಗೆ ಕೂಡಿದೆ ಎಂದು ನನಗೆ ತಿಳಿದಿದೆ. ನಾನು ಪ್ರತಿಯೊಬ್ಬರ ಕಪ್‌ ಆಫ್‌ ಟೀ ಅಲ್ಲ. ಖಂಡಿತವಾಗಿಯೂ ಪ್ರತಿಯೊಬ್ಬ ವ್ಯಕ್ತಿಯಿಂದಲೂ ಪ್ರೀತಿಸಲ್ಪಡಬೇಕೆಂದು ನಾನು ನಿರೀಕ್ಷಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ನೀವು ನನ್ನನ್ನು ಒಪ್ಪದ ಕಾರಣ ನೀವು ನಕಾರಾತ್ಮಕತೆಯನ್ನು ಹೊರಹಾಕಬಹುದು ಎಂದು ಇದರ ಅರ್ಥವಲ್ಲ. ನೀವೆಲ್ಲರೂ ಖುಷಿಯಿಂದರಲು ನಾನು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ನನಗೆ ಮಾತ್ರ ತಿಳಿದಿದೆ. ನಾನು ಮಾಡಿದ ಕಾರ್ಯಕ್ಕೆ ನೀವು ಖುಷಿಯಾದಾಗ ನಾನು ಹೆಚ್ಚು ಕಾಳಜಿ ವಹಿಸುತ್ತೇನೆ. ನೀವು ಮತ್ತು ನಾನು ಹೆಮ್ಮೆಪಡುವ ವಿಷಯಗಳನ್ನು ಹಂಚಿಕೊಳ್ಳಲು ನಾನು ನಿಜವಾಗಿಯೂ ಪ್ರಯತ್ನಿಸುತ್ತಿದ್ದೇನೆ.”

“ನಾನು ಹೇಳದೆ ಇರುವ ವಿಷಯಗಳ ಕಾರಣಕ್ಕಾಗಿ ನನ್ನನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪಹಾಸ್ಯ ಮಾಡಿದಾಗ ನನ್ನ ಹೃದಯ ಘಾಸಿಯಾಗುತ್ತದೆ. ಸಂದರ್ಶನಗಳಲ್ಲಿ ನಾನು ಹೇಳಿದ ಕೆಲವು ವಿಷಯಗಳು ನನ್ನ ವಿರುದ್ಧವೇ ಬಳಕೆಯಾಗುತ್ತಿವೆ ಎಂಬುದನ್ನು ಕಂಡುಕೊಂಡಿದ್ದೇನೆ. ಅಂತರ್ಜಾಲದಲ್ಲಿ ಫೇಕ್‌ ನೆರೆಟಿವ್‌ಗಳನ್ನು (ನಕಲಿ ನಿರೂಪಣೆಗಳನ್ನು) ಹರಡಲಾಗುತ್ತಿದೆ. ಇದರಿಂದ ನನಗೆ, ಹೊರಗಿನ ವೃತ್ತಿ ಬಾಂಧವ್ಯಗಳಿಗೆ ತುಂಬಾ ಹಾನಿಕಾರಕವಾಗಿದೆ”.

“ನಾನು ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತೇನೆ. ಏಕೆಂದರೆ ಇವುಗಳಿಂದ ನನ್ನನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಆದರೆ ನಕಾರಾತ್ಮಕತೆ ಮತ್ತು ದ್ವೇಷದಿಂದ ಏನು ಸಾಧ್ಯ? ಇದನ್ನು ನಿರ್ಲಕ್ಷಿಸುವಂತೆ ಹಿಂದೆಯೇ ಹೇಳಿದ್ದೇನೆ. ಆದರೆ ಪರಿಸ್ಥಿತಿ ಹದಗೆಟ್ಟಿದೆ. ನಾನು ಯಾರನ್ನೂ ಗೆಲ್ಲಲು ಪ್ರಯತ್ನಿಸುತ್ತಿಲ್ಲ. ನಾನು ಸ್ವೀಕರಿಸುತ್ತಿರುವ ಈ ದ್ವೇಷದ ಕಾರಣದಿಂದಾಗಿ ಬದಲಾಗಲು ಬಯಸುವುದಿಲ್ಲ”.

“ನಿಮ್ಮ ಉಳಿದವರಿಂದ ಸ್ವೀಕರಿಸುತ್ತಿರುವ ಎಲ್ಲಾ ಪ್ರೀತಿಯನ್ನು ಗುರುತಿಸುತ್ತೇನೆ ಮತ್ತು ಅಂಗೀಕರಿಸುತ್ತೇನೆ. ನಿಮ್ಮ ನಿರಂತರ ಪ್ರೀತಿ ಮತ್ತು ಬೆಂಬಲವೇ ನನ್ನನ್ನು ಬೆಳೆಸಿದೆ. ಇದನ್ನು ಹೇಳಲು ನನಗೆ ಧೈರ್ಯವನ್ನು ನೀಡಿದೆ. ನನ್ನ ಸುತ್ತಲಿರುವ ಎಲ್ಲರ ಮೇಲೆ ಪ್ರೀತಿ ಇದೆ. ನಾನು ವೃತ್ತಿ ಬದುಕಿನ ಎಲ್ಲರನ್ನೂ ಮೆಚ್ಚಿಕೊಂಡಿದ್ದೇನೆ. ನಾನು ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಏಕೆಂದರೆ ನಾನು ಹೇಳಿದಂತೆ, ನಿಮ್ಮನ್ನು ರಂಜಿಸುತ್ತೇನೆ. ಅದುವೇ ನನ್ನ ಸಂತೋಷ. ಎಲ್ಲರೂ ದಯೆಯಿಂದಿರಿ. ನಾವೆಲ್ಲರೂ ನಮ್ಮ ಕೈಲಾದದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ”- ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಮಕ್ಕಳಿಗೆ ಉಚಿತವಾಗಿ ‘ಗಂಧದಗುಡಿ’ ತೋರಿಸಬೇಕು, ಏಕೆಂದರೆ..,: ಮಂಸೋರೆ ಮನದ ಮಾತು

‘ಕಿರಿಕ್‌ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಅವರು ಬಹುಭಾಷಾ ನಟಿಯಾಗಿ ಬೆಳೆದರು. ಬದುಕಿನ ಏರಿಳಿತಗಳನ್ನು ಕಂಡರು. ತಮ್ಮ ಬದುಕಿನ ಭವಿಷ್ಯವನ್ನು ನೆನೆದು ತಮ್ಮದೇ ಆಯ್ಕೆಗಳನ್ನು ಮಾಡಿಕೊಂಡರು. ಆನಂತರದಲ್ಲಿ ಅವರ ವಿರುದ್ಧ ಟ್ರೋಲ್‌ಗಳು ಆರಂಭವಾದವು. ಕನ್ನಡದ ಮುಖ್ಯವಾಹಿನಿ ಕೆಲವು ಮಾಧ್ಯಮಗಳಲ್ಲಿ, ಸುದ್ದಿ ಜಾಲತಾಣಗಳಲ್ಲಿ ವಿನಾಕಾರಣ ರಶ್ಮಿಕಾ ವಿರುದ್ಧ ದ್ವೇಷಕಾರುವ ರೀತಿಯ ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ.

ಇತ್ತೀಚೆಗೆ, “ನಾನಿನ್ನು ಕಾಂತಾರ ಸಿನಿಮಾ ನೋಡಿಲ್ಲ” ಎಂದು ರಶ್ಮಿಕಾ ಅವರು ಹೇಳಿದ ತಕ್ಷಣ ದೊಡ್ಡ ಅಪರಾಧವೆಂಬಂತೆ ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದ ಟ್ರೋಲರ್‌ಗಳು ರಶ್ಮಿಕಾ ಅವರ ಮೇಲೆ ಮುಗಿಬಿದ್ದಿದ್ದರು.

ಪತ್ರಕರ್ತ ಪಿ.ಟಿ.ಬೋಪಣ್ಣ ಈ ಟ್ರೋಲ್‌ ವಿರುದ್ಧ ಬರೆದಿದ್ದರು. ಕೊಡಗು ಮೂಲದ ನಟಿಯ ಬಗ್ಗೆ ಆಗುತ್ತಿರುವ ಅಪಪ್ರಚಾರವನ್ನು ಖಂಡಿಸಿದ್ದರು. ಕಾಂತಾರ ಸಿನಿಮಾದಲ್ಲಿ ಕಾಣೆಯಾಗಿರುವ ಲಿಂಗ ಸೂಕ್ಷ್ಮತೆಯನ್ನು ಉಲ್ಲೇಖಿಸಿದ್ದರು. “ನಟನಾ ಕೌಶಲ್ಯದಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿರುವ ರಶ್ಮಿಕಾ ಅವರನ್ನು ಟ್ರೋಲ್ ಮಾಡುವ ಬದಲು ಕಾಂತಾರ ಚಿತ್ರದ ಬಗ್ಗೆ ನಿಷ್ಪಕ್ಷಪಾತವಾದ ಮೌಲ್ಯಮಾಪನ ನಡೆಯಬೇಕು” ಎಂದಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...