Homeರಾಷ್ಟ್ರೀಯಪಿಎಫ್‌ಐ ಹಿಂಸಾತ್ಮಕ ಹರತಾಳ | ರಾಜ್ಯಕ್ಕೆ 86 ಲಕ್ಷ ರೂ. ನಷ್ಟ: ಹೈಕೋರ್ಟ್‌‌ನಲ್ಲಿ ಕೇರಳ ಸರ್ಕಾರ

ಪಿಎಫ್‌ಐ ಹಿಂಸಾತ್ಮಕ ಹರತಾಳ | ರಾಜ್ಯಕ್ಕೆ 86 ಲಕ್ಷ ರೂ. ನಷ್ಟ: ಹೈಕೋರ್ಟ್‌‌ನಲ್ಲಿ ಕೇರಳ ಸರ್ಕಾರ

- Advertisement -
- Advertisement -

ಇತ್ತೀಚೆಗೆ ನಿಷೇಧಗೊಂಡ ಬಲಪಂಥೀಯ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕರೆ ನೀಡಿದ್ದ ರಾಜ್ಯವ್ಯಾಪಿ ಹರತಾಳದ ಹಿಂಸಾಚಾರದ ವೇಳೆ ರಾಜ್ಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿ 86 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಕೇರಳ ಸರ್ಕಾರ ಸೋಮವಾರ ಹೈಕೋರ್ಟ್‌ಗೆ ತಿಳಿಸಿದೆ. ಅಲ್ಲದೆ ಹಿಂಸಾತ್ಮಕ ಹರತಾಳದಲ್ಲಿ ಖಾಸಗಿ ವ್ಯಕ್ತಿಗಳಿಗೆ 16 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಹೇಳಿದೆ. ಸೆಪ್ಟೆಂಬರ್ 23 ರಂದು ಪಿಎಫ್‌ಐ ಹರತಾಳಕ್ಕೆ ಕರೆ ನೀಡಿತ್ತು ಮತ್ತು ಈ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿತ್ತು.

ಹಿಂಸಾತ್ಮಕ ಹರತಾಳಕ್ಕೆ ಕರೆ ನೀಡಿದವರಿಂದ ನಷ್ಟವನ್ನು ಮರುಪಡೆಯುವ ಪ್ರಕ್ರಿಯೆಯನ್ನು ತಾನು ಪ್ರಾರಂಭಿಸಿರುವುದಾಗಿ ಸರ್ಕಾರ ಹೇಳಿದೆ. ಇದಕ್ಕಾಗಿ ಮಾಜಿ ಜಿಲ್ಲಾ ನ್ಯಾಯಾಧೀಶರಾದ ಪಿ.ಡಿ. ಶರ್ಗಾಧರನ್ ಅವರನ್ನು ಹಕ್ಕುಗಳ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪ್ರತಿಬಂಧಕ ಬಂಧನದ ಭಾಗವಾಗಿ ಒಟ್ಟು 724 ಜನರನ್ನು ವಶಕ್ಕೆ ಪಡೆಯಲಾಗಿದೆ, ಎಲ್ಲಾ ಅಪರಾಧಿಗಳನ್ನು ಗುರುತಿಸಲಾಗಿದ್ದು ಮತ್ತು ಹೆಚ್ಚಿನವರನ್ನು ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಹರತಾಳ ದಿನದಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಇದುವರೆಗೆ ಒಟ್ಟು 361 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 2,674 ಜನರನ್ನು ಬಂಧಿಸಿದೆ.

ಇದನ್ನೂ ಓದಿ: ಪಿಎಫ್‌ಐ ಮತ್ತು ಎಸ್‌ಡಿಪಿಐ ನಡುವೆ ಯಾವುದೇ ಸಂಬಂಧ ಕಂಡುಬಂದಿಲ್ಲ: ಭಾರತೀಯ ಚುನಾವಣಾ ಆಯೋಗ

ಈ ಹಿಂದೆ, ಹರತಾಳ ಸಂಬಂಧಿತ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಮತ್ತು ಸರ್ಕಾರ ಅಂದಾಜು ಮಾಡಿದ ಹಾನಿಗೆ ಗೃಹ ಇಲಾಖೆಗೆ 5.2 ಕೋಟಿ ರೂಪಾಯಿಗಳನ್ನು ಠೇವಣಿ ಮಾಡುವಂತೆ ನಿಷೇಧಿತ ಪಿಎಫ್‌ಐ ಮತ್ತು ಅದರ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ತಾರ್‌ ಅವರಿಗೆ ಹೈಕೋರ್ಟ್ ಹೇಳಿತ್ತು.

ಹರತಾಳ ಸಮಯದಲ್ಲಿ ತನ್ನ ಬಸ್‌ಗಳಿಗೆ ಹಾನಿ ಮತ್ತು ಸೇವೆಗಳನ್ನು ಕಡಿತಗೊಳಿಸಿದ್ದಕ್ಕಾಗಿ ಪಿಎಫ್‌ಐ ಮತ್ತು ಸತಾರ್‌ ಅವರಿಂದ 5 ಕೋಟಿ ರೂ.ಗೂ ಹೆಚ್ಚು ಪರಿಹಾರವನ್ನು ಕೋರಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಕೀಲ ದೀಪು ತಂಕನ್ ಮೂಲಕ ಸಲ್ಲಿಸಿದ ಮನವಿಯ ಮೇರೆಗೆ ಈ ಆದೇಶ ಹೊರಬಿದ್ದಿತ್ತು.

ಕೆಎಸ್‌ಆರ್‌ಟಿಸಿಯು ತನ್ನ ಅರ್ಜಿಯಲ್ಲಿ ಯಾವುದೇ ಮುನ್ಸೂಚನೆ ನೀಡದೆ ಹರತಾಳಕ್ಕೆ ಕರೆ ನೀಡಲಾಗಿದ್ದು, ಇದು ಹೈಕೋರ್ಟ್‌ನ ಆದೇಶದ ಉಲ್ಲಂಘನೆಯಾಗಿದೆ ಮತ್ತು ಅಂದು ನಡೆದ ಹಿಂಸಾಚಾರದಲ್ಲಿ 58 ಬಸ್‌ಗಳ ಗಾಜು ಮತ್ತು ಸೀಟುಗಳಿಗೆ ಹಾನಿಯಾಗಿದೆ, ಜೊತೆಗೆ 10 ನೌಕರರು ಮತ್ತು ಒಬ್ಬ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಪ್ರತಿಪಾದಿಸಿದೆ.

ಇದನ್ನೂ ಓದಿ: ಉಪ್ಪಿನಂಗಡಿ ಅಶಾಂತಿ ಪ್ರಕರಣಕ್ಕೆ ಪಿಎಫ್‌ಐ, ಸಂಘ ಪರಿವಾರ, ಪೊಲೀಸರು ಸಮಾನ ಹೊಣೆಗಾರರು- ಸಿಪಿಐ(ಎಂ)

ಸತ್ತಾರ್‌‌ ಅವರು ಪಿಎಫ್‌ಐಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ, ಪಿಎಫ್‌ಐ ಕಚೇರಿಗಳ ಮೇಲೆ ಕೇಂದ್ರದ ತನಿಖಾ ಸಂಸ್ಧೆಗಳು ರಾಷ್ಟ್ರವ್ಯಾಪಿ ದಾಳಿ ಮತ್ತು ಅದರ ಮುಖಂಡರ ಬಂಧನದ ವಿರುದ್ಧ ಹರತಾಳಕ್ಕೆ ಕರೆ ನೀಡಿದ್ದರು. ಇದರ ನಂತರ ಅವರು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪಿಎಫ್‌ಐ ಅನ್ನು ನಿಷೇಧಿಸಿದ ಕೆಲವೇ ಗಂಟೆಗಳ ನಂತರ, “ಗೃಹ ಸಚಿವಾಲಯದ ನಿರ್ಧಾರದ ಹಿನ್ನೆಲೆಯಲ್ಲಿ ಸಂಘಟನೆಯನ್ನು ವಿಸರ್ಜಿಸಲಾಗಿದೆ” ಎಂದು ಅವರು ಹೇಳಿಕೆ ಬಿಡುಗಡೆ ಮಾಡಿದ್ದರು. ಇದರ ನಂತರ ಅವರನ್ನು ಬಂಧಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...