Homeಕಥೆಕಠೋಪನಿಷತ್ತು - ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

ಕಠೋಪನಿಷತ್ತು – ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

- Advertisement -
- Advertisement -

ಆಚರಣೆಯು ಅನುಷ್ಠಾನದಿಂದ ಹೊರತಾಗಿರುವುದರ ವಿರುದ್ಧವಾಗಿ ಬಂಡಾಯವೇಳುವ ನಚಿಕೇತನೆಂಬ ಹುಡುಗನ ಕತೆ ಈ ಕಠೋಪನಿಷತ್ತು.

ಉದ್ದಾಲಕ ನಚಿಕೇತನ ತಂದೆ. ಅವನು ಸರ್ವವೇದಸ್ ಎಂಬ ಯಜ್ಞವನ್ನು ಮಾಡಿದ. ಅದರ ಪ್ರಕಾರ ತನ್ನಲ್ಲಿರುವ ಎಲ್ಲವನ್ನೂ ಕೂಡಾ ಯಜ್ಞಕರ್ತೃವು ಕೊಡಬೇಕು. ಹಸುಗಳೇ ಅವರ ಸಂಪತ್ತು. ಉದ್ದಾಲಕನು ತನ್ನಲ್ಲಿರುವ ಎಲ್ಲಾ ಹಸುಗಳನ್ನು ದಾನ ಮಾಡುವ ಬದಲು ಉತ್ತಮವಾದ ಹಸುಗಳನ್ನು ಇಟ್ಟುಕೊಂಡು ಗೊಡ್ಡು ಹಸುಗಳನ್ನು ಬಂದವರಿಗೆ ದಾನವಾಗಿ ನೀಡುತ್ತಿದ್ದ.

ಇದನ್ನು ನಚಿಕೇತ ಗಮನಿಸಿದ. ತನ್ನಲ್ಲಿರುವ ಸರ್ವಸ್ವವನ್ನೂ ಕೊಟ್ಟು ಲೌಕಿಕ ಭಾರದಿಂದ ಮುಕ್ತನಾಗಬೇಕಿದ್ದ ತಂದೆ ಆಚರಣೆಯಲ್ಲಿ ಹಾಗೆ ತೋರುತ್ತಿದ್ದಾನೆ ಆದರೆ ವಾಸ್ತವದಲ್ಲಿ ಲೋಭಿಯೇ ಆಗಿದ್ದಾನೆ. ನಡೆನುಡಿ ಹೊಂದದ, ಆಚರಣೆ ಅನುಷ್ಠಾನಗಳಿಗೆ ತಾಳೆಯಾಗದ ಈ ಯಜ್ಞವನ್ನು ಅವನು ಪ್ರತಿಭಟಿಸುವ ರೀತಿ ವಿಶಿಷ್ಟವಾಗಿದೆ.

ನಚಿಕೇತ ಅವರ ಮನೆಯಲ್ಲಿ ಜಾಣನಾಗಿ ಗುರುತಿಸಿಕೊಂಡಿರುವವನಲ್ಲ. ಒಂದು ರೀತಿಯಲ್ಲಿ ಕೆಲಸಕ್ಕೆ ಬಾರದವನು. ಏನೂ ಕೆಲಸಕ್ಕೆ ಬಾರದ ಹಸುಗಳನ್ನು ದಕ್ಷಿಣೆಯಾಗಿ ಕೊಡುತ್ತಿದ್ದ ತಂದೆಯ ಗಮನ ಸೆಳೆದು ಇದೇ ಕೆಲಸಕ್ಕೆ ಬಾರದ ಮಗ ಕೇಳಿದ “ನನ್ನನ್ನು ಯಾರಿಗೆ ಕೊಡುತ್ತೀರಿ?” ಎಂದು.

ಈ ಪ್ರಶ್ನೆಯೇ ಅವನ ಪ್ರತಿಭಟನೆ. ಈ ಪ್ರಶ್ನೆಯಲ್ಲಿ ತಂದೆಯ ಡಾಂಭಿಕತನವನ್ನು ಪ್ರಶ್ನಿಸುತ್ತಾನೆ. ಶುಷ್ಕ ಆಚರಣೆಗಳನ್ನು, ಆಧ್ಯಾತ್ಮ ಮೌಲ್ಯಗಳನ್ನು ಗ್ರಹಿಸದ ವಿಧಿಗಳನ್ನು, ತನ್ನ ಸಂಪತ್ತನ್ನು ದಾನ ತೆಗೆದುಕೊಳ್ಳಿ ಎಂದು ಪೊಳ್ಳನ್ನು ಕೊಡುವ ಮೋಸವನ್ನು ಪ್ರಶ್ನಿಸುತ್ತಾನೆ. ಕೆಲಸಕ್ಕೆ ಬಾರದ ಮಗನನ್ನು ಏನು ಮಾಡುತ್ತೀಯಾ ಎಂದು ಕೆಲಸಕ್ಕೆ ಬಾರದವೆಂದು ಹಸುಗಳನ್ನು ದಾನದ ಹೆಸರಲ್ಲಿ ಕೈ ತೊಳೆದುಕೊಳ್ಳುವ ಮನುಷ್ಯನ ವ್ಯಾಮೋಹವನ್ನು ಪ್ರಶ್ನಿಸುತ್ತಾನೆ.

ನಚಿಕೇತ ಎಲ್ಲೋ ಮೂಲೆಯಲ್ಲಿ ಕೇಳಲಿಲ್ಲ. ಯಜ್ಞ ನಡೆಯುವಲ್ಲಿ ಎಲ್ಲರ ಮುಂದೆ ಕೇಳಿದ. ಮುಜುಗರಗೊಂಡ ತಂದೆ ಉತ್ತರಿಸದೇ ತಪ್ಪಿಸಿಕೊಳ್ಳುತ್ತಾನೆ. ಆದರೆ ಇವನು ಬಿಡದೇ ಮೂರು ಬಾರಿ ಕೇಳುತ್ತಾನೆ. ಕೆರಳಿದ ತಂದೆ ನಿನ್ನ ಸಾವಿಗೆ ಕೊಡುತ್ತೇನೆ ಎನ್ನುತ್ತಾನೆ.

ಮಾತು ಮತ್ತು ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿಯುವ ನಚಿಕೇತನ ಪ್ರತಿಭಟನೆ ಮುಂದುವರಿಯುತ್ತದೆ. ನಾನು ಸಾವಿಗೆ ಹೋಗುತ್ತೇನೆ ಎಂದು ಹೋಗುತ್ತಾನೆ ನಚಿಕೇತ.
ಮುಂದಿನ ಭಾಗ ರೂಪಕ. ಏಕೆಂದರೆ ಮೃತ್ಯುವಿನ ದೇವತೆಯಾದ ಯಮನಿಗಾಗಿ ಮೂರು ದಿನಗಳ ಕಾಲ ಕಾದು ನಂತರ ಅವನನ್ನು ಸಂಧಿಸಿ ಮರಣದಾಚೆಯ ಬದುಕಿನ ಬಗ್ಗೆ ತಿಳಿದುಕೊಳ್ಳುತ್ತಾನೆ.

ವೈದಿಕರ ಯಾವ ಯಜ್ಞವನ್ನು ವಿರೋಧಿಸಿ ಮಾತು ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿದನೋ ಆ ನಚಿಕೇತನೇ ಮುಂದೆ ಯಮನಿಂದ ಯಜ್ಞ ಮಾಡುವುದನ್ನು ಕಲಿತುಕೊಳ್ಳುವುದನ್ನು ಸೂಚಿಸುತ್ತದೆ. ಆದರೆ ಅದು ಸಮಿತ್ತುಗಳನ್ನಿಟ್ಟು ಅಗ್ನಿಕಾರ್ಯದಿಂದ ಮಾಡುವ ಯಜ್ಞವಾಗಿರದೇ ಆಂತರಿಕ ಯಜ್ಞವಾಗಿ ಅನಾವರಣಗೊಳ್ಳುತ್ತದೆ.

ಅದೇನೇ ಇರಲಿ, ಒಬ್ಬ ಪ್ರತಿಭಟನಾಕಾರನಿಗೆ ಇರಬೇಕಾದ ಆತ್ಮವಿಶ್ವಾಸವನ್ನು ನಚಿಕೇತ ಅಲ್ಲಿ ತೋರುತ್ತಾನೆ. “ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ” ಎಂದು ತಂದೆ ಹೇಳಿದಾಗ, “ಬಹುಜನರಲ್ಲಿ ಪ್ರಥಮನಾಗಿ, ಬಹುಜನರಲ್ಲಿ ಮಧ್ಯಮನಾಗಿರುವ ನನ್ನಿಂದ ಯಾವ ಕೆಲಸ ಮೃತ್ಯುವಿಗೆ ಆಗುತ್ತದೆ?” ಎಂದು ಯೋಚಿಸುತ್ತಾನೆ. ತಾನು ಅಧಮನಲ್ಲ ಎಂಬ ಆತ್ಮವಿಶ್ವಾಸವಿದೆ ಅವನಲ್ಲಿ. ಅಷ್ಟೇಅಲ್ಲದೇ ತಾನು ಪ್ರತಿಭಟಿಸಿದ ತಂದೆಗೆ ನಿದ್ರೆಗಳಿಂದ ಕೂಡಿರುವ ರಾತ್ರಿಯಿರಲಿ ಎಂದು ಒತ್ತಡರಹಿತವಾದ ಮನಸ್ಥಿತಿ ಬಯಸುತ್ತಾನೆ. ಪ್ರತಿಭಟನೆ ಮತ್ತು ಪ್ರೀತಿ ತೋರುವ ಆತ್ಮೀಯ ಭಾವ ನಚಿಕೇತದಲ್ಲಿ.

ಕಠೋಪನಿಷತ್ತಿನಲ್ಲಿ ಮೂಲಕತೆಯೊಂದಿಗೆ ನುಸುಳುವಿಕೆಗಳಿವೆ ಎಂದು ತೋರುತ್ತದೆ. ಆದರೆ, ನಚಿಕೇತನೆಂಬ ಸಾತ್ವಿಕ ಬಂಡಾಯಗಾರನ ಪ್ರತಿಮೆ ಮಾತ್ರ ಅತ್ಯಂತ ಆಪ್ತ. ಇದನ್ನೇ ಆಧರಿಸಿ ತ ರಾ ಸು “ಬೆಳಕು ತಂದ ಬಾಲಕ” ಎಂಬ ಕಾದಂಬರಿ ರಚಿಸಿದ್ದಾರೆ. ಇದೂ ಕೂಡಾ ನಚಿಕೇತನ ವ್ಯಕ್ತಿತ್ವದ ದರ್ಶನ ಮಾಡಿಸುವಂತದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...