Homeಮುಖಪುಟಪಶ್ಚಿಮ ಬಂಗಾಳ ಚುನಾವಣೆಯ ಕೇಂದ್ರಬಿಂದುವಾಗಿರುವ ನಂದಿಗ್ರಾಮ ಕ್ಷೇತ್ರ

ಪಶ್ಚಿಮ ಬಂಗಾಳ ಚುನಾವಣೆಯ ಕೇಂದ್ರಬಿಂದುವಾಗಿರುವ ನಂದಿಗ್ರಾಮ ಕ್ಷೇತ್ರ

- Advertisement -
- Advertisement -

ಏಪ್ರಿಲ್ 1ರಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ 30 ಸ್ಥಾನಗಳಿಗಾಗಿ ನಡೆಯಿತು. ನಂದಿಗ್ರಾಮ, ಕೇಶ್‌ಪುರ ಕ್ಷೇತ್ರಗಳಲ್ಲಿ ಕೆಲವು ಹಿಂಸಾಚಾರದ ಘಟನೆಗಳ ನಡುವೆಯೇ ಸುಮಾರು 82% ಮತದಾನ ದಾಖಲೆಯಾಯಿತು. ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಮತಗಟ್ಟೆಗಳನ್ನು ಜಾಮ್ ಮಾಡಿದ, ಮತದಾನದಲ್ಲಿ ಅವ್ಯವಹಾರ ನಡೆದ ಮತ್ತು ತಮ್ಮ ಮತಗಟ್ಟೆಗಳ ಏಜೆಂಟ್‌ರನ್ನು ಹೆದರಿಸಲಾಗಿದೆ ಎಂದು ಆರೋಪಗಳು ಕೇಳಿಬಂದವು. ಬಿಜೆಪಿ ಪಕ್ಷವು ಟಿಎಂಸಿಯನ್ನು ದೂರಿದರೆ, ಟಿಎಂಸಿ ಪಕ್ಷವು ಬಿಜೆಪಿಯನ್ನು ಈ ಅವ್ಯವಹಾರಗಳಿಗೆ ಹೊಣೆ ಎಂದು ದೂರಿದೆ. ಮತಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ದೂರುಗಳಿಗೆ ಸ್ಪಂದಿಸಿಲ್ಲ ಎಂದು ಚುನಾವಣಾ ಆಯೋಗವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟೀಕಿಸಿದ್ದಾರೆ ಹಾಗೂ ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಆಯೋಗ ಕೆಲಸ ಮಾಡುತ್ತಿದೆ ಎಂದಿದ್ದಾರೆ. ನಂದಿಗ್ರಾಮದಲ್ಲಿ ಟಿಎಂಸಿಯಿಂದ ಮಮತಾ ಬ್ಯಾನರ್ಜಿ ಕಣಕ್ಕಿಳಿದಿದ್ದರೆ, ಟಿಎಂಸಿಯ ಮಾಜಿ ಸಚಿವ ಸುವೇಂದು ಅಧಿಕಾರಿ ಈಗ ಬಿಜೆಪಿ ಸೇರಿಕೊಂಡು ಮಮತ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ ಹಾಗೂ ಇಬ್ಬರೂ ಭಾರಿ ಅಂತರದಿಂದ ತಮ್ಮ ಎದುರಾಳಿಯನ್ನು ಸೋಲಿಸುವುದಾಗಿ ಹೇಳಿಕೊಂಡಿದ್ದಾರೆ.

ಸುವೇಂದು ಅಧಿಕಾರಿಯ ತಂದೆ ಸಿಸಿರ್ ಅಧಿಕಾರಿ ಮತ್ತು ತಮ್ಮ ದೀಪ್ಯೆಂದು ಅಧಿಕಾರಿ ಇಬ್ಬರೂ ಪೂರ್ವ ಮಿದ್ನಾಪುರ ಪ್ರದೇಶದ ಎಂಪಿಗಳಾಗಿದ್ದಾರೆ. ಮೊದಲು ಟಿಎಂಸಿಯಲ್ಲಿದ್ದ ಇವರು ಈಗ ಪಕ್ಷವನ್ನು ತ್ಯಜಿಸಿದ್ದಾರೆ. ’ಅಧಿಕಾರಿ ಫ್ಯಾಮಿಲಿ’ ಎಂದೇ ಗುರುತಿಸಿಕೊಂಡ ಇವರು ಇಡೀ ಜಿಲ್ಲೆಯಲ್ಲಿ ಗಣನೀಯ ಪ್ರಭಾವವನ್ನು ಉಳ್ಳವರಾಗಿದ್ದಾರೆ. ಸುವೆಂದು ಅಧಿಕಾರಿ ಚುನಾವಣೆಗೆ ಕೆಲವೇ ತಿಂಗಳ ಮುನ್ನ ಟಿಎಂಸಿ ತೊರೆದು, ಈಗ ಸಂಘಪರಿವಾರ ಮತ್ತು ಬಿಜೆಪಿಯ ಧಾರ್ಮಿಕ ಧ್ರುವೀಕರಣದ ಭಾಷೆಯನ್ನು ಬಳಸಿಕೊಳ್ಳುತ್ತಿದ್ದಾರೆ; ಹಿಂದೂ ಸಮುದಾದಯದ ಮತಗಳನ್ನು ಸೆಳೆಯಲು ಟಿಎಂಸಿಯು ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯ ಮಾಡುತ್ತಿದೆ ಎಂಬ ನಿರಾಧಾರದ ಅರೋಪಗಳನ್ನು ಮಾಡುತ್ತಿದ್ದಾರೆ.

ಸ್ಥಳೀಯ ಟಿಎಂಸಿ ನಾಯಕರ ವಿರುದ್ಧ ಜನರಿಗೆ ಇರುವ ಅಸಮಧಾನ ಸರಿಯಾಗಿಯೇ ಇದೆ. ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಅವರು ಶಾಮೀಲಾಗಿದ್ದಾರೆ, ಸುಲಿಗೆಯಲ್ಲಿ ನಿರತರಾಗಿದ್ದಾರೆ ಎಂಬ ಆರೋಪಗಳಿವೆ. ಅಂಫನ್ ಚಂಡಮಾರುತ ಅಪ್ಪಳಿಸಿದ ನಂತರ ಅವರುಗಳು ಪರಿಹಾರದ ಧನವನ್ನು ವಿತರಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪಗಳು ಸ್ಥಳೀಯ ಟಿಎಂಸಿ ನಾಯಕರ ಮೇಲಿವೆ. ಆದರೆ, ಮಮತಾ ಬ್ಯಾನರ್ಜಿ ಅವರನ್ನು ’ಬೇಗಂ’ ಎಂದು ಕರೆದು, ಟಿಎಂಸಿಗೆ ಮತ ಹಾಕುವುದು, ಪಾಕಿಸ್ತಾನಕ್ಕೆ ಮತ ಹಾಕಿದ್ದಕ್ಕೆ ಸಮ ಎಂಬ ವಿಷಕಾರಿ ಪ್ರಚಾರವು ನಂದಿಗ್ರಾಮದ ಸಾಮಾಜಿಕ ಡೈನಾಮಿಕ್ಸ್ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.

2011ರ ಜನಗಣತಿಯ ಪ್ರಕಾರ, ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 3,31,064 ಜನಸಂಖ್ಯೆ ಇದ್ದು, ಅದರಲ್ಲಿ 73.96% (2,44,867) ಹಿಂದೂಗಳಾಗಿದ್ದು, 25.88% ಜನರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪರಿಶಿಷ್ಟ ಜಾತಿಗಳ ಜನರ ಪ್ರಮಾಣ 16.46 ರಷ್ಟಿದೆ. ಯೋಗಿ ಆದಿತ್ಯನಾಥ, ಸ್ಮೃತಿ ಇರಾನಿಯಂತಹ ವ್ಯಕ್ತಿಗಳು ಪದೇಪದೇ ಬಂಗಾಳಕ್ಕೆ ಬಂದು ಹಿಂದುತ್ವದ ದ್ವೇಷ ಸಿದ್ಧಾಂತ ಮತ್ತು ಕಾರ್ಪೊರೇಟ್ ಪರ ನೀತಿಗಳ ಪ್ರಚಾರವನ್ನು ಮುಂದುವರೆಸುತ್ತಿರುವುದರೊಂದಿಗೆ, ಈ ಭಾಗದಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ಸಹಬಾಳ್ವೆ ಮತ್ತು ಜೊತೆಯಲ್ಲಿ ಮಾಡಿದ ಹೋರಾಟದ ಇತಿಹಾಸವನ್ನು ಅಳಿಸಿಹಾಕುವ ಪ್ರಯತ್ನವನ್ನು ಮಾಡಲಾಗುತ್ತಿದೆ. ತಮ್ಮನ್ನು ’ಪಾಕಿಸ್ತಾನಿಗಳು’ ಎಂದು ಕರೆಯುತ್ತಿರುವುದರಿಂದ ಮುಸ್ಲಿಂ ಸಮುದಾಯದವರು ನೋವನ್ನು ವ್ಯಕ್ತಪಡಿಸಿದ್ದಾರೆ. ಇವರೆಲ್ಲರೂ ದಶಕಗಳಿಂದ ಶಾಂತಿಯುತವಾಗಿ ನೆಲೆಸಿದ್ದರಿಂದ ಇಂತಹ ಉಗ್ರ ಕೋಮುವಾದಿ ರಾಜಕೀಯ ಪರಿಚಯ ಇಲ್ಲಿಯ ಜನರಿಗೆ ಆಗಿದ್ದು ಇದೇ ಮೊದಲು.

ನಂದಿಗ್ರಾಮದಲ್ಲಿ ಇಬ್ಬರು ಹೆವಿವೇಟ್ ಅಭ್ಯರ್ಥಿಗಳಿರುವುದರಿಂದ ಹಾಗೂ ಕೋಮುದ್ವೇಷ ಹೊಗೆಯಾಡುತ್ತಿರುವ ಕಾರಣದಿಂದ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಇದೇ ನಂದಿಗ್ರಾಮವು 2007ರಲ್ಲಿ ಒಂದು ಪ್ರಬಲ ಹೋರಾಟವನ್ನು ಕಂಡಿತ್ತು. ಇಂಡೋನೇಷಿಯಾದ ಸಲೀಮ್ ಗ್ರೂಪ್‌ನ ಕೆಮಿಕಲ್ ಹಬ್‌ಗಾಗಿ ಆಗಿನ ಸಿಪಿಐ(ಎಂ) ಸರಕಾರದ ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿತ್ತು. ಈ ಕ್ರಮದ ವಿರುದ್ಧ ದೊಡ್ಡ ಹೋರಾಟ ನಡೆದಿತ್ತು. ಆ ಹೋರಾಟದಲ್ಲಿ ಸರಕಾರದ ಕ್ರಮಗಳಿಗೆ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯದ ಜನರು ಜೀವ ಕಳೆದುಕೊಂಡಿದ್ದರು ಮತ್ತು ಒಟ್ಟಿಗೆ ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದರು.

ಆದರೆ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಈ ರೈತ ಹೋರಾಟದ ಕಥಾನಕ ಸಂಪೂರ್ಣವಾಗಿ ಕಾಣೆಯಾಗಿದೆ. ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿಯ ನಡುವಿನ ಜಗಳಗಳನ್ನೇ ತೋರಿಸುತ್ತಿದ್ದಾರೆ. ಚುನಾವಣೆಗೆ ಕೆಲವೇ ದಿನಗಳ ಮುನ್ನ ಮಮತಾ ಬ್ಯಾನರ್ಜಿ ಅವರು 2007ರಲ್ಲಿ ನಂದಿಗ್ರಾಮದಲ್ಲಿ ಆದ ಹಿಂಸಾಚಾರಕ್ಕೆ (ರೈತರ ಮೇಲೆ ಪೊಲೀಸರಿಂದ ಆದ ಗೋಲಿಬಾರ್) ಆಗಿನ ಸರಕಾರದೊಂದಿಗೆ ಸುವೇಂದು ಅಧಿಕಾರಿ ಕೂಡ ಜವಾಬ್ದಾರರಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೇ ಸಿಪಿಐಎಂ ಕಾರ್ಯಕರ್ತರು ಮತ್ತು ಎಡ ಪಕ್ಷದೊಂದಿಗೆ ಸಹಾನುಭೂತಿ ಹೊಂದಿದವರು ಉಪಯೋಗಿಸಿಕೊಂಡು, ಆ ಇಡೀ ಆಂದೋಲನ ಸರಕಾರದ ವಿರುದ್ಧ ಒಂದು ಪಿತೂರಿಯಾಗಿತ್ತು ಎಂದು ಹೇಳುತ್ತಿದ್ದಾರೆ. ಆಗ ತಾವು ಕೈಗೊಂಡಿದ್ದ ತಪ್ಪಿನ ಕ್ರಮಗಳು ಹಾಗೂ ಜನರ ಮೇಲೆ ತಮ್ಮ ಕಾರ್ಯಕರ್ತರು ನಡೆಸಿದ್ದ ಹಿಂಸಾಚಾರದ ಆರೋಪಗಳಿಂದ ಮುಕ್ತರಾಗಲು ಪ್ರಯತ್ನಿಸುತ್ತಿದ್ದಾರೆ. 2007ರಲ್ಲಿ ಅಲ್ಲಿನ ಹಳ್ಳಿಗಳ ಜನರು ಭೂಮಿ ಉಚ್ಛೇಡ್ ಪ್ರತಿರೋಧ್ ಕಮಿಟಿ (ಕಮಿಟಿ ಅಗೇನ್ಸ್ಟ್ ಲ್ಯಾಂಡ್ ಎವಿಕ್ಷನ್ಸ್) ಎಂಬ ಸಮಿತಿಯನ್ನು ಸ್ಥಾಪಿಸಿದ್ದರು. ಅದರಲ್ಲಿ, ಅನೇಕ ಎಡ ಪಂಥೀಯ ಗುಂಪುಗಳಿಗೆ ಸೇರಿದ ಜನರೂ ಇದ್ದರು. ಅವರೆಲ್ಲಾ ಒಗ್ಗೂಡಿ ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಕಾರ್ಪೊರೆಟ್ ವಿರೋಧಿ ಹೋರಾಟವನ್ನು ಹಮ್ಮಿಕೊಂಡಿದ್ದರು, 2007ರ ಮಾರ್ಚ್ 14 ರಂದು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ 14 ಜನರು ಪ್ರಾಣತೆತ್ತರು ಹಾಗೂ ಅನೇಕ ಮಹಿಳೆಯರ ಮೇಲೆ ಬಲಾತ್ಕಾರದ ಮತ್ತು ಅನೇಕರು ಕಾಣೆಯಾದ ಸುದ್ದಿಗಳೂ ಇವೆ.

ನಂದಿಗ್ರಾಮದ ಪ್ರತಿರೋಧ ಶುರುವಾಗುವುದಕ್ಕೂ ಮುನ್ನ 2006ರಲ್ಲಿ ಟಾಟಾದ ನ್ಯಾನೊ ಕಾರಿನ ಕಾರ್ಖಾನೆಯ ಸಲುವಾಗಿ ಕೃಷಿಭೂಮಿಯನ್ನು ಸ್ವಾಧೀನಗೊಳಿಸುವ ವಿರುದ್ಧ ಸಿಂಗೂರಿನಲ್ಲಿಯೂ ರೈತರ ಆಂದೋಲನ ನಡೆದಿತ್ತು. ರಾಜ್ಯದ ಆರ್ಥಿಕತೆಯನ್ನು ಕೈಗಾರೀಕರಣಗೊಳಿಸಲು ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಎಸ್‌ಈಜೆಡ್‌ಗಳನ್ನು ಸೃಷ್ಟಿಸಬೇಕೆಂದು ತೀರ್ಮಾನಿಸಿತ್ತು. ಎಸ್‌ಈಜೆಡ್ ಎಂದರೆ ವಿದೇಶಿ ವ್ಯಾಪಾರವನ್ನು ಪ್ರೋತ್ಸಾಹಿಸಲು ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಸ್ಥಾಪಿಸಲಾದ ಒಂದು ಕಮರ್ಷಿಯಲ್ ಪ್ರದೇಶ. ಈ ಎಸ್‌ಈಜೆಡ್‌ಗಳು ಕೈಗಾರಿಕೋದ್ಯಮಿಗಳಿಗೆ 100% ತೆರಿಗೆ ವಿನಾಯಿತಿ, ಕಟ್ಟುನಿಟ್ಟಿನ ಕಾರ್ಮಿಕ ಕಾನೂನುಗಳ ಸಡಿಲಿಕೆ ಮತ್ತು ರಾಜ್ಯ ಸರಕಾರಗಳ ಹಸ್ತಕ್ಷೇಪ ಇಲ್ಲದಿರುವುದನ್ನು ಖಾತ್ರಿಪಡಿಸುತ್ತವೆ. 1991ರಲ್ಲಿ ಪಿ.ವಿ. ನರಸಿಂಹರಾವ್ ಸರಕಾರವು ಬಂದ ನಂತರ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳಲಾಯಿತು. ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುವುದು, ತೆರಿಗೆ ಕಡಿತ, ಮಾರುಕಟ್ಟೆಯ ಮೇಲಿದ್ದ ನಿಯಂತ್ರಣವನ್ನು ಸಡಿಲಗೊಳಿಸುವುದು ಹಾಗೂ ಮುಕ್ತ ವ್ಯಾಪಾರವನ್ನು ಖಾತ್ರಿಪಡಿಸುವುದು ಈ ಹೊಸ ನೀತಿಯ ಭಾಗವಿದ್ದವು. ಈ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆ ಮತ್ತು ವಸಾಹತುಶಾಹಿ ಜಾಗತೀಕರಣದ ನೇರ ಪರಿಣಾಮವೇ ಎಸ್‌ಈಜೆಡ್.

ಬಂಗಾಳದಲ್ಲಷ್ಟೇ ಅಲ್ಲದೇ, ಒರಿಸ್ಸಾದ ಕಳಿಂಗನಗರ್, ಮಹಾರಾಷ್ಟ್ರದ ರಾಯಗಢ, ಗೋವಾ ಹಾಗೂ ಆಂಧ್ರಪ್ರದೇಶದಲ್ಲೂ ಸರಕಾರಗಳು ಎಸ್‌ಈಜೆಡ್‌ಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿದಾಗ ತಮ್ಮ ಭೂಮಿ, ನೀರು, ಅರಣ್ಯ ಮತ್ತು ಜೀವನೋಪಾಯವನ್ನು ಉಳಿಸಿಕೊಂಡು ರಕ್ಷಿಸಿಕೊಳ್ಳಲು ಜನರು ತೀವ್ರವಾಗಿ ಪ್ರತಿಭಟಿಸಿದ್ದರು. ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ವಿಫಲಗೊಂಡದ್ದಲ್ಲದೆ, ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುವಂತೆ ಮಾಡಿ, ಕಾರ್ಮಿಕರನ್ನು ಶೋಷಣೆಗೊಳಪಡಿಸುವ ಅಭಿವೃದ್ಧಿಯ ನವ ಉದಾರವಾದಿ ಮಾದರಿಯನ್ನು ಅಳವಡಿಸಿಕೊಂಡಿತ್ತು ಎಂಬ ಕಾರಣಕ್ಕಾಗಿ ಸಿಪಿಐಎಂ ಅನ್ನು ಟೀಕಿಸಲಾಗಿದೆ. 2011ರಲ್ಲಿ ಸಿಪಿಐಎಂನ ಐತಿಹಾಸಿಕ ಸೋಲಿನಲ್ಲಿ ಟಿಎಂಸಿ ಮೊದಲ ಬಾರಿ ಮತಗಳನ್ನು ತನ್ನೆಡೆ ಸೆಳೆಯಲು ಸಫಲವಾಗಿತ್ತು. ಈ ನಿಟ್ಟಿನಲ್ಲಿ 14 ಜನರು ಹುತಾತ್ಮರಾಗಿದ್ದನ್ನು ಮತ್ತು ರೈತರ ಪ್ರತಿರೋಧವನ್ನು ಒಂದು ’ಪಿತೂರಿ’ ಎಂದು ಕರೆಯುವುದು ತಪ್ಪು.

ಹಾಗಾಗಿ, ಈಗ ಕಾರ್ಪೊರೆಟ್ ಪರ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ಜಂಟಿ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಬಂಗಾಳಕ್ಕೆ ಬಂದು ನಂದಿಗ್ರಾಮಕ್ಕೆ ಭೇಟಿ ನೀಡಿರುವುದು ಅತ್ಯಂತ ಗಮನಾರ್ಹವಾಗಿದೆ. ನಂದಿಗ್ರಾಮದ ಆಂದೋಲನದ ಭಾಗವಾಗಿದ್ದ ಮೇಧಾ ಪಾಟ್ಕರ್ ಮತ್ತು ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಅವರುಗಳು ನಂದಿಗ್ರಾಮದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಭಾಗವಹಿಸಿ ಬಿಜೆಪಿಗೆ ಒಂದೂ ಮತವನ್ನೂ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಮೇಧಾ ಪಾಟ್ಕರ್ ಅವರು ಸುವೇಂದು ಅಧಿಕಾರಿಯ ಸ್ವಕೇಂದ್ರಿತ ರಾಜಕೀಯವನ್ನು ಕಟುವಾಗಿ ಟೀಕಿಸಿದ್ದಾರೆ ಹಾಗೂ ಬಿಜೆಪಿಯ ಕೋಮುವಾದಿ ರಾಜಕೀಯದ ವಿರುದ್ಧ ಒಗ್ಗೂಡಿ 2007ರಲ್ಲಿ ಹೇಗೆ ಒಂದು ಭ್ರಾತೃತ್ವವನ್ನು ರಚಿಸಿದ್ದರೋ, ಅದೇ ರೀತಿ ಒಗ್ಗಟ್ಟಾಗಬೇಕೆಂದು ಕರೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ನಂದಿಗ್ರಾಮದ ಚುನಾವಣೆ ಪಶ್ಚಿಮ ಬಂಗಾಳದ ಚುನಾವಣೆಯ ಕೇಂದ್ರಬಿಂದುವಾಗಿದೆ ಎಂದರೂ ತಪ್ಪಾಗಲಾರದು. ಇವೆಲ್ಲವಕ್ಕೂ ಮೇ 2ರಂದು ಉತ್ತರ ಸಿಗಲಿದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಇಂದ್ರಾಣಿ ಪಾಲ್

ಇಂದ್ರಾಣಿ ಪಾಲ್
ಪಶ್ಚಿಮ ಬಂಗಾಳದ ಯುವ ಪತ್ರಕರ್ತೆ. ಬೆಂಗಾಳದ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಭಾಗವೂ ಆಗಿದ್ದಾರೆ.


ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಹಳೆಯ ವರಸೆ; ಹೊಸ ಪಾತ್ರಧಾರಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....