ಅಧಿಕಾರಕ್ಕಾಗಿ ಬೂಟು ನೆಕ್ಕುವ ರಾಜಕಾರಣ ನನ್ನದಲ್ಲ ಎಂದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ನಿನ್ನೆ ತಾನೇ ಕಿಡಿಕಾರಿದ್ದ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಆರ್ಥಿಕತೆ ಸರಿಪಡಿಸಲು 12 ಪತ್ರ ಬರೆದೆ, ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದ್ದಾರೆ.
ಹದಗೆಟ್ಟ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಮೋದಿಗೆ ಸಲಹೆ ನೀಡಿ ಎಂದು ಪ್ರತಿನಿತ್ಯ ನನಗೆ ನೂರಾರು ಕರೆಗಳು ಬರುತ್ತಿವೆ. ಸಣ್ಣ ಪುಟ್ಟ ವ್ಯಾಪರಿಗಳು ಫೋನ್ ಮಾಡುತ್ತಿರುತ್ತಾರೆ. ಕುದುರೆಯನ್ನು ನೀರು ಇರುವಲ್ಲಿಗೆ ಕರೆದೊಯ್ಯಬಹುದು ಆದರೆ ನೀರು ಕುಡಿಯುವಂತೆ ಮಾಡುವುದು ಹೇಗೆ? ನಾನು ಆರ್ಥಿಕತೆ ಸರಿಪಡಿಸಲು ಸಲಹೆ ನೀಡಿ ಪ್ರಧಾನಿ ಮೋದಿಯವರಿಗೆ 12 ಪತ್ರ ಬರೆದಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
Nowadays I get phone calls even from shop keepers asking me to suggest to Modi how to get out the current economic mess. I told them a horse can be taken to water but how to make it drink? I have written 12 letters to Modi on how to fix the economy but only acknowledged no action
— Subramanian Swamy (@Swamy39) September 18, 2021
ಇದನ್ನೂ ಓದಿ; ‘ನಾನು ಬೂಟ್ ನೆಕ್ಕುವ ಮೂಲಕ ಮಂತ್ರಿಯಾಗಿಲ್ಲ’ – ಸಿಎಂ ಬೊಮ್ಮಾಯಿಗೆ ಬಿಜೆಪಿ ಸಂಸದ
ಇದಕ್ಕೆ ಟ್ವಿಟರ್ ಬಳಕೆದಾರರೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಸಣ್ಣ ಪುಟ್ಟ ವ್ಯಾಪಾರಿಗಳ ಬಳಿ ನಿಮ್ಮ ಮೊಬೈಲ್ ನಂಬರ್ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೂ ಉತ್ತರಿಸಿರುವ ಸುಬ್ರಮಣಿಯನ್ ಸ್ವಾಮಿಯವರು ನನ್ನ ನಂಬರ್ ಬಿಜೆಪಿ ವೆಬ್‌ಸೈಟ್ ಮತ್ತು ರಾಜ್ಯಸಭಾ ದಾಖಲೆಗಳಲ್ಲಿದೆ ಎಂದಿದ್ದಾರೆ.
ಈ ಹಿಂದೆ ಅವರು ‘ಲಸಿಕೆ ಸಂಭ್ರಮದ ಮಧ್ಯೆ ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಮರೆಯದಿರಿ ಎಂದು ಜನರಿಗೆ ಎಚ್ಚರಿಕೆ ನೀಡುವ ಮೂಲಕ ತಮ್ಮದೇ ಸರ್ಕಾರವನ್ನು ಟೀಕಿಸಿದ್ದರು. ಅಲ್ಲದೆ ದೊಡ್ಡ ಉದ್ಯಮಪತಿಗಳು ಬ್ಯಾಂಕುಗಳಿಗೆ 4.5 ಲಕ್ಷ ಕೋಟಿ ರೂ ಸಾಲ ತೀರಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ : ಬ್ಯಾಂಕುಗಳಿಗೆ 4.5 ಲಕ್ಷ ಕೋಟಿ ರೂ ಸಾಲ ತೀರಿಸುತ್ತಿಲ್ಲವೇಕೆ? ಅದಾನಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಿಡಿ



nayee bala donku yaru sari padasalu haguvadila
It may not be needed Stick ,to ractify the system, only needed to strict rule & action….