Homeಮುಖಪುಟಲಸಿಕೆ ಸಂಭ್ರಮದ ಮಧ್ಯೆ ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಮರೆಯದಿರಿ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ

ಲಸಿಕೆ ಸಂಭ್ರಮದ ಮಧ್ಯೆ ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಮರೆಯದಿರಿ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ

ತಮ್ಮ ಸರ್ಕಾರದ ವಿರುದ್ದ ಮಾತನಾಡುತ್ತಲೇ ಅದನ್ನು ಮುಜುಗರಕ್ಕೆ ಈಡಾಗಿಸುತ್ತಿರುವ ಬಿಜೆಪಿಯ ಹಿರಿಯ ನಾಯಕ ಲಡಾಖ್‌ನಲ್ಲಿ 4 ಸಾವಿರ ಚದರ ಕಿಲೋ ಮೀಟರ್ ಚೀನಾ‌ ಆಕ್ರಮಿಸಿರುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ

- Advertisement -
- Advertisement -

ಭಾರತೀಯ ಔಷಧ ನಿಯಂತ್ರಕ ಈಗಾಗಲೇ ಎರಡು ಕೊರೊನಾ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಒಕ್ಕೂಟ ಸರ್ಕಾರ ಈ ಹಿನ್ನಲೆಯಲ್ಲಿ ಅದನ್ನು ತನ್ನ ರಾಜಕೀಯ ಲಾಭಕ್ಕೆ ಬಳಸುತ್ತಿರುವ ಹೊತ್ತಿಗೆ, ಬಿಜೆಪಿಯ ರಾಜ್ಯಸಭಾ ಸಂಸದರಾಗಿರುವ ಸುಬ್ರಮಣಿಯಣ್ ಸ್ವಾಮಿ, “ಈ ಲಸಿಕೆ ಸಂಭ್ರಮದಲ್ಲಿ ಕುಸಿಯುತ್ತಿರುವ ಆರ್ಥಿಕತೆ ಮತ್ತು ಲಡಾಖ್‌ನಲ್ಲಿ 4 ಸಾವಿರ ಚದರ ಕಿಲೋ ಮೀಟರ್ ಭೂಮಿಯನ್ನು ಚೀನಾ‌ ಆಕ್ರಮಿಸಿರುವುದನ್ನು ಮರೆಯಬೇಡಿ” ಎಂದು ಎಚ್ಚರಿಕೆ ನೀಡಿದ್ದಾರೆ.

ಸದಾ ತಮ್ಮ ಸರ್ಕಾರದ ವಿರುದ್ದ ಮಾತನಾಡುತ್ತಲೇ ಅದನ್ನು ಮುಜುಗರಕ್ಕೆ ಈಡಾಗಿಸುತ್ತಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಕೊರೊನಾ ಲಸಿಕೆಯ ಸಂಭ್ರಮದಲ್ಲಿ ಕಳೆದು ಹೋಗಬೇಡಿ ಎಂದು ಎಚ್ಚರಿಸಿದ್ದಾರೆ. ಮಂಗಳವಾರ ಟ್ವೀಟ್ ಮಾಡಿರುವ ಅವರು. “ಲಸಿಕೆಯ ಎಲ್ಲಾ ಸಂಭ್ರಮಗಳ ನಡುವೆ ಆರ್ಥಿಕತೆಯು ಕುಸಿಯುತ್ತಿರುವುದು ಮತ್ತು ಲಡಾಖ್‌ನಲ್ಲಿ ಚೀನಾ ಕನಿಷ್ಠ 4000 ಚದರ ಕಿ.ಮೀ. ಆಕ್ರಮಿಸಿರುವುದನ್ನು ಮರೆಯಬೇಡಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಸಂಸತ್ ಭವನದ ನಿರ್ಮಾಣಕ್ಕೆ ಟಾಟಾ ಕಂಪೆನಿ ಆಯ್ಕೆಯಾಗಿದ್ದು ಹೇಗೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

ಕೊರೊನಾ ನಡುವೆ ಕೂಡಾ ಚೀನಾ ಗಡಿ ತಗಾದೆ ತೆಗೆದು ಭಾರತದ ಭೂಪ್ರದೇಶದ ಒಳಗೆ ಕಾಲಿಟ್ಟಿದೆ. ಇದನ್ನು ಆಡಳಿತ ಪಕ್ಷ ಬಿಜೆಪಿ ನೇರವಾಗಿ ಒಪ್ಪುತ್ತಿಲ್ಲವಾದರೂ, ಮಾಧ್ಯಮಗಳು ಅಲ್ಲಿನ ಉಪಗ್ರಹ ಚಿತ್ರಗಳನ್ನು ಪ್ರಕಟಿಸಿ ಗಡಿಯಲ್ಲಿ ಚೀನಾ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದೀಗ ರೈತರ ಹೋರಾಟ, ಕೊರೊನಾ ಲಸಿಕೆಯ ಅಬ್ಬರದಲ್ಲಿ ಆ ಸುದ್ದಿಗಳು ಹಿನ್ನಲೆಗೆ ಸರಿದಿವೆ.

ಅಲ್ಲದೆ ಕೊರೊನಾ ಪತ್ತೆಯಾಗಿರುವುಕ್ಕಿಂತ ಮುಂಚೆಯೆ ಭಾರತದ ಆರ್ಥಿಕತೆ ಹಿಮ್ಮುಖವಾಗಿಯೇ ಚಲಿಸುತ್ತಿತ್ತು. ಇದಕ್ಕೆ ನೋಟ್ ನಿಷೇಧ ಮತ್ತು ಜಿಎಸ್‌ಟಿ ಸೇರಿದಂತೆ ಬಿಜೆಪಿಯ ಅಸಮರ್ಪಕ ಆರ್ಥಿಕ ನೀತಿಯು ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದರು. ಜೊತೆಗೆ ಕೊರೊನಾ ಪತ್ತೆಯಾದ ನಂತರ ಯಾವುದೇ ಮುನ್ನೆಚ್ಚರಿಕೆಯಿಲ್ಲದೆ ಹೇರಲ್ಪಟ್ಟ ಲಾಕ್‌ಡೌನ್‌ನಿಂದಾಗಿ ಭಾರತದ ಆರ್ಥಿಕತೆ ಹಿಮ್ಮುಖವಾಗಿ ಚಲಿಸಲು ಫ್ರಾರಂಭವಾಯಿತು. ಏಷ್ಯಾಖಂಡದಲ್ಲೇ ಅತೀ ಕೆಟ್ಟ ಆರ್ಥಿಕತೆಯನ್ನು ಭಾರತದ್ದಾಗಿದೆ ಎಂದು ವರದಿಗಳು ಸೂಚಿಸುತ್ತದೆ.

ಇದನ್ನೂ ಓದಿ: ಬಿಜೆಪಿ ಐಟಿ ಸೆಲ್ ವರ್ತನೆ ರಾಕ್ಷಸೀಯವಾಗಿದೆ: ಸುಬ್ರಮಣಿಯನ್ ಸ್ವಾಮಿ ಟ್ವೀಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...