Homeಮುಖಪುಟದಲಿತ ವಿದ್ಯಾರ್ಥಿ ಅಮಾನತು ಆದೇಶ ಹಿಂಪಡೆಯುವಂತೆ 'ಟಿಸ್' ಹಳೆ ವಿದ್ಯಾರ್ಥಿಗಳ ಆಗ್ರಹ

ದಲಿತ ವಿದ್ಯಾರ್ಥಿ ಅಮಾನತು ಆದೇಶ ಹಿಂಪಡೆಯುವಂತೆ ‘ಟಿಸ್’ ಹಳೆ ವಿದ್ಯಾರ್ಥಿಗಳ ಆಗ್ರಹ

- Advertisement -
- Advertisement -

ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದಲಿತ ವಿದ್ಯಾರ್ಥಿ ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸಿ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ನ 600 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಸಂಸ್ಥೆಯ ಹೆಸರನ್ನು ಬಳಸಿಕೊಂಡು ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ದಲಿತ ಸಂಶೋಧನಾ ವಿದ್ಯಾರ್ಥಿ ರಾಮದಾಸ್ ಅವರನ್ನು ಎರಡು ವರ್ಷಗಳ ಅಮಾನತುಗೊಳಿಸಿರುವುದನ್ನು ಟೀಕಿಸಿದ್ದಾರೆ.

ರಾಮದಾಸ್ ಅವರ ಅಮಾನತು ರದ್ದುಗೊಳಿಸಬೇಕೆಂದು ಟಿಸ್ ಹಳೆಯ ವಿದ್ಯಾರ್ಥಿಗಳು ಹೇಳಿಕೆಯಲ್ಲಿ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.

ಟಿಸ್‌ನ ಕ್ರಮವು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯ, ಒಳಗೊಳ್ಳುವಿಕೆ ಮತ್ತು ಮುಕ್ತ ಚಿಂತನೆಯ ಸಾಂವಿಧಾನಿಕ ನೀತಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

“ಅಮಾನತು ಆದೇಶವು ಸಂಸ್ಥೆಯ ಇತಿಹಾಸದಲ್ಲಿ ಅಭೂತಪೂರ್ವವಾಗಿದೆ, ಇದು ಶಿಕ್ಷಣವನ್ನು ಒಳಗೊಂಡಿರುವ ಮತ್ತು ಸಮಾಜದ ಅತ್ಯಂತ ಅಂಚಿನಲ್ಲಿರುವ ವರ್ಗಗಗಳಿಗೆ ನ್ಯಾಯ ಪೂರೈಸುವ ತತ್ವಗಳನ್ನು ಯಾವಾಗಲೂ ಎತ್ತಿಹಿಡಿದಿದೆ” ಎಂದು ಹೇಳಿಕೆ ತಿಳಿಸಿದೆ.

ಜನವರಿ 12, 2024 ರಂದು ಪ್ರಗತಿಶೀಲ ವಿದ್ಯಾರ್ಥಿಗಳ ವೇದಿಕೆ-ಟಿಸ್ ಬ್ಯಾನರ್ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಪ್ರತಿಭಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಸಂಸತ್ತಿನ ಹೊರಗೆ ನಡೆದ ಪ್ರದರ್ಶನದಲ್ಲಿ ರಾಮದಾಸ್ ಭಾಗವಹಿಸಿದ್ದರು. ಸಂಸ್ಥೆಯು ಇದನ್ನು ವಿದ್ಯಾರ್ಥಿಯು ಸಂಸ್ಥೆಯ ಹೆಸರಿನ ಸಂಪೂರ್ಣ ದುರ್ಬಳಕೆ ಮತ್ತು ದುರ್ನಡತೆಯ ಕೃತ್ಯವೆಂದು ಪರಿಗಣಿಸಿದೆ.

ಇದನ್ನೂ ಓದಿ; ಮೋದಿ ಟೀಕಿಸಿದ್ದಕ್ಕೆ ದಲಿತ ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ‘ಟಾಟಾ ಇನ್‌ಸ್ಟಿಟ್ಯೂಟ್’ ಮ್ಯಾನೇಜ್‌ಮೆಂಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read