ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ದಿನದ ವಿಚಾರಣೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ “Z+” ವರ್ಗದ CRPF ಭದ್ರತಾ ಬೆಂಗಾವಲಿನೊಂದಿಗೆ ದೆಹಲಿಯ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯದ ಪ್ರಧಾನ ಕಛೇರಿಗೆ 11.05 ಕ್ಕೆ ಹಾಜರಾಗಿದ್ದಾರೆ.
ಕಳೆದ ವಾರ ರಾಹುಲ್ ಗಾಂಧಿ ಅವರನ್ನು ಇಡಿ ಕಚೇರಿಯಲ್ಲಿ ಮೂರು ಬಾರಿ ಪ್ರಶ್ನಿಸಲಾಗಿದೆ. ಶುಕ್ರವಾರವೂ (ಜೂನ್ 17) ಸಮನ್ಸ್ ನೀಡಲಾಗಿತ್ತು. ಆದರೆ, ಕೋವಿಡ್ ಸಂಬಂಧಿತ ಸಮಸ್ಯೆಗಳಿಂದಾಗಿ ಆಸ್ಪತ್ರೆಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ಇರಬೇಕಾಗಿರುವುದರಿಂದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಬೇಕೆಂದು ಕೇಂದ್ರ ತನಿಖಾ ಏಜೆನ್ಸಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸತತ ಮೂರನೇ ದಿನವು ರಾಹುಲ್ ಗಾಂಧಿ ವಿಚಾರಣೆಗೆ ಸಮನ್ಸ್
#WATCH | Delhi: Congress leader Rahul Gandhi arrives at the Enforcement Directorate (ED) office, for questioning in the National Herald case. Today is the fourth day of his questioning by the agency. pic.twitter.com/4XHeiqf8Sr
— ANI (@ANI) June 20, 2022
ಕಳೆದ ವಾರದಂತೆ ಇಂದೂ ಕೂಡ ಇಡಿ ಕಚೇರಿ ಸುತ್ತ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144 ಅನ್ನು ವಿಧಿಸಲಾಗಿದ್ದರೂ ಸಹ ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿಗಳ ಬೃಹತ್ ತುಕಡಿಯನ್ನು ನಿಯೋಜಿಸಲಾಗಿದೆ. ಕಳೆದ ವಾರ ಮೂರು ದಿನಗಳಲ್ಲಿ ಇಡಿ ಕಚೇರಿಯಲ್ಲಿ ಒಟ್ಟು 30 ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದಾರೆ. ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗಿದೆ.
ಜೂನ್ 23 ರಂದು ಪ್ರಕರಣದ ವಿಚಾರಣೆಗಾಗಿ ಸೋನಿಯಾ ಗಾಂಧಿಯವರಿಗೆ ಸಂಸ್ಥೆಯು ಸಮನ್ಸ್ ನೀಡಿದೆ.
ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇಡೀ ಕ್ರಮವನ್ನು ಸೇಡಿನ ರಾಜಕಾರಣ ಎಂದಿದೆ.
ಇದನ್ನೂ ಓದಿ: ಅಗ್ನಿಪಥ ಯೋಜನೆ: ದೇಶದ ಜನರಿಗೆ ಏನು ಬೇಕೆಂದು ಪ್ರಧಾನಿಗೆ ಅರ್ಥವಾಗುತ್ತಿಲ್ಲ – ರಾಹುಲ್ ಗಾಂಧಿ


