Homeಮುಖಪುಟಅಗ್ನಿಪಥ ಯೋಜನೆ: ದೇಶದ ಜನರಿಗೆ ಏನು ಬೇಕೆಂದು ಪ್ರಧಾನಿಗೆ ಅರ್ಥವಾಗುತ್ತಿಲ್ಲ - ರಾಹುಲ್ ಗಾಂಧಿ

ಅಗ್ನಿಪಥ ಯೋಜನೆ: ದೇಶದ ಜನರಿಗೆ ಏನು ಬೇಕೆಂದು ಪ್ರಧಾನಿಗೆ ಅರ್ಥವಾಗುತ್ತಿಲ್ಲ – ರಾಹುಲ್ ಗಾಂಧಿ

’ಪ್ರಧಾನಿ ಮೋದಿ ತಮ್ಮ ಸ್ನೇಹಿತರ ಮಾತು ಬಿಟ್ಟು ಬೇರೆನು ಕೇಳುವುದಿಲ್ಲ’

- Advertisement -
- Advertisement -

“ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ನೇಹಿತರ ಮಾತುಗಳನ್ನು ಹೊರತುಪಡಿಸಿ ಬೇರೆ ಏನನ್ನೂ ಕೇಳದ ಕಾರಣ ದೇಶದ ಜನರಿಗೆ ಏನು ಬೇಕು ಎಂದು ಅವರಿಗೆ ಅರ್ಥವಾಗುತ್ತಿಲ್ಲ” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ (ಜೂನ್ 17) ಆರೋಪಿಸಿದ್ದಾರೆ.

ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ‘ಅಗ್ನಿಪಥ’ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಅಗ್ನಿಪಥ ಯೋಜನೆಯ ವಿರುದ್ಧದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನೋಟು ಅಮಾನ್ಯೀಕರಣ ಮತ್ತು ಮೂರು ಕೃಷಿ ಕಾನೂನುಗಳಂತಹ ಇತರ ವಿವಾದಾತ್ಮಕ ಕ್ರಮಗಳನ್ನು ಉಲ್ಲೇಖಿಸಿದ್ದಾರೆ.

ಭಾರಿ ಪ್ರತಿಭಟನೆ ಬೆನ್ನಲ್ಲೇ ’ಅಗ್ನಿಪಥ’ ಯೋಜನೆಗೆ ನೇಮಕಾತಿಗಾಗಿ ಒಕ್ಕೂಟ ಸರ್ಕಾರವು ಗರಿಷ್ಠ ವಯೋಮಿತಿಯನ್ನು 21 ವರ್ಷದಿಂದ 23 ವರ್ಷಕ್ಕೆ ಏರಿಸಿದೆ.  ದೇಶದ ಹಲವಾರು ಭಾಗಗಳಲ್ಲಿ ಈ ಯೋಜನೆಯ ವಿರುದ್ಧ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದನ್ನೂ ಓದಿ: ‘ಅಗ್ನಿ ಪಥ್’ ಯೋಜನೆ ಸೇನೆಗೆ ಅಪಾಯಕಾರಿ: ಕೊಡಗಿನ ವೀರ ಯೋಧರ ಆತಂಕ

“ಶ್ರೇಣಿ ಇಲ್ಲ, ಪಿಂಚಣಿ ಇಲ್ಲ. 2 ವರ್ಷಗಳಿಂದ ನೇರ ನೇಮಕಾತಿ ಇಲ್ಲ. 4 ವರ್ಷಗಳ ನಂತರ ಸ್ಥಿರ ಭವಿಷ್ಯವಿಲ್ಲ. ಸೇನೆಯ ಬಗ್ಗೆ ಗೌರವವಿಲ್ಲ. ಪ್ರಧಾನಿಗಳೇ ದೇಶದ ನಿರುದ್ಯೋಗಿ ಯುವಕರ ದನಿಯನ್ನು ಆಲಿಸಿ, ಅವರನ್ನು ಅಗ್ನಿಪಥದಲ್ಲಿ ಓಡಿಸುವ ಮೂಲಕ ಅವರ ಸಂಯಮದ ಅಗ್ನಿ ಪರೀಕ್ಷೆ ಮಾಡಬೇಡಿ” ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಜಿಎಸ್‌ಟಿ, ನೋಟ್‌ಬಾನ್, ಕೃಷಿ ಕಾನೂನುಗಳು ಮತ್ತು ಈಗ ಅಗ್ನಿಪಥ್‌ನಂತಹ ಯೋಜನೆಗಳನ್ನು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಅವರು, ಅವುಗಳನ್ನು ಜನರ ಕಲ್ಯಾಣಕ್ಕಾಗಿ ಯೋಜಿಸಲಾಗಿದೆ ಎಂದರು ಆದರೆ, ನಾಗರಿಕರಿಂದಲೇ ತಿರಸ್ಕರಿಸಲಾಗಿದೆ ಎಂದು ಒಕ್ಕೂಟ ಸರ್ಕರದ ಯೋಜನೆಗಳಿಗೆ ಉಂಟಾದ ಪ್ರತಿಭಟನೆಗಳ ಬಗ್ಗೆ ತಿಳಿಸಿದ್ದಾರೆ.

“ಅಗ್ನಿಪಥ್ – ಯುವಕರು ತಿರಸ್ಕರಿಸಿದರು. ಕೃಷಿ ಕಾನೂನುಗಳು – ರೈತರು ತಿರಸ್ಕರಿಸಿದರು. ನೋಟ್‌ಬಾನ್ – ಅರ್ಥಶಾಸ್ತ್ರಜ್ಞರು ತಿರಸ್ಕರಿಸಿದರು. ಜಿಎಸ್‌ಟಿ – ವ್ಯಾಪಾರಿಗಳು ತಿರಸ್ಕರಿಸಿದರು. ದೇಶದ ಜನರಿಗೆ ಏನು ಬೇಕು ಎಂದು ಪ್ರಧಾನಿಗೆ ಅರ್ಥವಾಗುತ್ತಿಲ್ಲ, ಏಕೆಂದರೆ ಅವರು ತಮ್ಮ ಸ್ನೇಹಿತರ ಮಾತುಗಳನ್ನು ಹೊರತುಪಡಿಸಿ ಏನನ್ನೂ ಕೇಳುವುದಿಲ್ಲ” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಈ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಪ್ರಧಾನಿಯನ್ನು ಒತ್ತಾಯಿಸಿದ್ದರು. ಬಿಜೆಪಿ ಸರ್ಕಾರವು 24 ಗಂಟೆಗಳಲ್ಲಿ ಹೊಸ ಸೇನಾ ನೇಮಕಾತಿ ಯೋಜನೆಯ ನಿಯಮಗಳನ್ನು ಬದಲಾಯಿಸಬೇಕಾಗಿದೆ ಎಂದು ಹೇಳಿದ್ದರು.

ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿಪಥ್‌‌’ ಯೋಜನೆ ವಿರೋಧಿಸಿ ಮತ್ತು ಸೇನಾ ನೇಮಕಾತಿ ಮಾಡುವಂತೆ ಆಗ್ರಹಿಸಿ ಬಿಹಾರ, ಉತ್ತರ ಪ್ರದೇಶ, ಹರಿಯಾಣ ಮತ್ತು ಜಮ್ಮುವಿನಲ್ಲಿ ಸೇನಾ ಉದ್ಯೋಗಾಕಾಂಕ್ಷಿಗಳು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಹಾರದಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಇದೇ ವೇಳೆ ಬಿಹಾರದ ನಾವಡದಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದ್ದು, ಕಚೇರಿಯನ್ನು ಧ್ವಂಸ ಮಾಡಲಾಗಿದೆ.


ಇದನ್ನೂ ಓದಿ: ಅಗ್ನಿಪಥ್‌ ಯೋಜನೆ: ಯುವಕರಿಗೆ 4 ವರ್ಷಗಳಲ್ಲ, ಪೂರ್ಣಾವಧಿಯ ಉದ್ಯೋಗ ನೀಡಿ- ಕೇಜ್ರಿವಾಲ್ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...