ಇತ್ತೀಚಿನ ನೀಟ್ ಪೇಪರ್ ಸೋರಿಕೆ ಪ್ರಕರಣದ ಬೆಳವಣಿಗೆಯಲ್ಲಿ, ಮಹಾರಾಷ್ಟ್ರ ಎಟಿಎಸ್‌ನ ಮಾಹಿತಿ ಮೇರೆಗೆ ಲಾತೂರ್ ಪೊಲೀಸರು ಇನ್ನೂ ಇಬ್ಬರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ವರದಿಗಳ ಪ್ರಕಾರ, ಒಬ್ಬರು ದೆಹಲಿಯವರು ಮತ್ತು ಇತರರು ಮಹಾರಾಷ್ಟ್ರದವರು ಎಂದು ಹೇಳಲಾಗಿದೆ.
ಪೊಲೀಸ್ ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ನೀಟ್ ಪರೀಕ್ಷೆಯಲ್ಲಿ ರಿಗ್ಗಿಂಗ್ ನೇರವಾಗಿ ಮಹಾರಾಷ್ಟ್ರದ ಲಾತೂರ್ ಜಿಲ್ಲೆಗೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ ಸಂಜಯ್ ತುಕಾರಾಂ ಜಾಧವ್, ಜಲೀಲ್ ಉಮಾರ್ಖಾನ್ ಪಠಾಣ್, ಮಷ್ನಾಜಿ ಕೊಂಗಲ್ಬಾರ್ ಮತ್ತು ಗಂಗಾಧರ್ ಸೇರಿದಂತೆ ನಾಲ್ವರ ವಿರುದ್ಧ ಇದುವರೆಗೆ ಎಫ್‌ಐಆರ್ ದಾಖಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಗಂಗಾಧರ್ ಮತ್ತು ಸಂಜಯ್ ತುಕಾರಾಂ ಜಾಧವ್ ನೇರ ಸಂಪರ್ಕ ಹೊಂದಿದ್ದರು. ದೆಹಲಿಯಿಂದ ಬಂದವರು ಎನ್ನಲಾದ ಗಂಗಾರಾಮ್ ಮತ್ತು ಸಂಜಯ್ ಜಾಧವ್ ನಡುವೆ ಹಣದ ವಹಿವಾಟು ನಡೆದಿದೆ.
ಇದಲ್ಲದೇ ಭಾನುವಾರ ನಡೆದ ಎಟಿಎಸ್ ವಿಚಾರಣೆ ವೇಳೆ ಅವರ ಬಳಿಯಿದ್ದ ಕೆಲವು ಹಾಲ್ ಟಿಕೆಟ್‌ಗಳು ಹಾಗೂ ಅವರ ವಾಟ್ಸ್‌ಆ್ಯಪ್ ಚಾಟ್‌ಗಳ ಮೂಲಕ ಸಿಕ್ಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಈ ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಾಗಿ ಭರವಸೆ ನೀಡಿ ಹಲವು ಮಕ್ಕಳ ಹಾಲ್ ಟಿಕೆಟ್ ಕೂಡ ಕೇಳಿದ್ದರು ಎನ್ನಲಾಗುತ್ತಿದೆ.
ಇದನ್ನೂ ಓದಿ; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಮಾಣ ವಚನ ಸ್ವೀಕರಿಸುವಾಗ ಸಂಸತ್ತಿನಲ್ಲಿ “ನೀಟ್ ಘೋಷಣೆ”


