Homeಅಂತರಾಷ್ಟ್ರೀಯನೇಪಾಳ ಚುನಾವಣೆ : ಪ್ರಚಂಡ ಗೆಲುವಿನತ್ತ ಆರ್‌ಎಸ್‌ಪಿ; ಬೆಂಗಳೂರಿನಲ್ಲಿ ಪದವಿ ಪಡೆದಿದ್ದ ಬಲೇಂದ್ರ ಶಾಗೆ ಪ್ರಧಾನಿ...

ನೇಪಾಳ ಚುನಾವಣೆ : ಪ್ರಚಂಡ ಗೆಲುವಿನತ್ತ ಆರ್‌ಎಸ್‌ಪಿ; ಬೆಂಗಳೂರಿನಲ್ಲಿ ಪದವಿ ಪಡೆದಿದ್ದ ಬಲೇಂದ್ರ ಶಾಗೆ ಪ್ರಧಾನಿ ಪಟ್ಟ?

- Advertisement -
- Advertisement -

‘ಜೆನ್‌ ಝೀ ದಂಗೆ’ಯ ಬಳಿಕ ನಡೆದ ನೇಪಾಳದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಯುವ ನಾಯಕ ಬಲೇಂದ್ರ ಶಾ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಅಭೂತಪೂರ್ವ ಗೆಲುವಿನತ್ತ ಮುನ್ನುಗ್ಗುತ್ತಿದೆ. 

ಕಠ್ಮಂಡುವಿನ ಮಾಜಿ ಮೇಯರ್ ಮತ್ತು ಮಾಜಿ ರ‍್ಯಾಪರ್ ಆಗಿರುವ ಬಲೇಂದ್ರ ಶಾ ಅವರು, ಈಗಾಗಲೇ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರನ್ನು ಝಾಪಾ-5 ಕ್ಷೇತ್ರದಲ್ಲಿ ಸುಮಾರು 50,000 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಬಲೇಂದ್ರ ಶಾ ಅವರ ಪಕ್ಷವು ಈಗಾಗಲೇ 165 ನೇರ ಚುನಾವಣೆ ಕ್ಷೇತ್ರಗಳ ಪೈಕಿ 47 ಸ್ಥಾನಗಳಲ್ಲಿ ಜಯಗಳಿಸಿದ್ದು, ಒಟ್ಟು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಕೆ.ಪಿ. ಒಲಿ ಅವರ ಸಿಪಿಎನ್-ಯುಎಂಎಲ್ ಮತ್ತು ನೇಪಾಳಿ ಕಾಂಗ್ರೆಸ್ (ಐಎನ್‌ಸಿ) ಪಕ್ಷಗಳು ಈ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿವೆ.

ಈ ಭರ್ಜರಿ ಯಶಸ್ಸಿನೊಂದಿಗೆ, ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ 35 ವರ್ಷದ ಬಲೇಂದ್ರ ಶಾ ನೇಪಾಳದ ಮುಂದಿನ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳಿವೆ.

‘ಜೆನ್-ಝೀ’ ಯುವಜನರ ಮತ್ತು ಇತರ ಜನರ ಅತೃಪ್ತಿಯ ಅಲೆಯಲ್ಲಿ ಹಳೆಯ ರಾಜಕೀಯ ಶಕ್ತಿಗಳನ್ನು ಮೆಟ್ಟಿ ನಿಂತು ಆರ್‌ಎಸ್‌ಪಿ ಭರ್ಜರಿ ಗೆಲುವನ್ನು ದಾಖಲಿಸುತ್ತಿದೆ.

ನೇಪಾಳವು ಮಿಶ್ರ ಚುನಾವಣಾ ವ್ಯವಸ್ಥೆಯನ್ನು ಅನುಸರಿಸುತ್ತದೆ. ಮತ ಎಣಿಕೆಯು ಎರಡು ಹಂತಗಳಲ್ಲಿ ನಡೆಯುತ್ತದೆ.

165 ಸ್ಥಾನಗಳಿಗೆ ಮತದಾರರು ನೇರವಾಗಿ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ. ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿ ಜಯಗಳಿಸುತ್ತಾರೆ. ಇದರ ಎಣಿಕೆ ಮೊದಲು ನಡೆಯುತ್ತದೆ. ಉಳಿದ 110 ಸ್ಥಾನಗಳಿಗೆ ಮತದಾರರು ರಾಜಕೀಯ ಪಕ್ಷಕ್ಕೆ ಮತ ಹಾಕುತ್ತಾರೆ. ಇಡೀ ದೇಶವನ್ನು ಒಂದು ಕ್ಷೇತ್ರವೆಂದು ಪರಿಗಣಿಸಿ, ಪಕ್ಷಗಳು ಪಡೆದ ಒಟ್ಟು ಮತಗಳ ಶೇಕಡಾವಾರು ಆಧಾರದ ಮೇಲೆ ಈ ಸ್ಥಾನಗಳನ್ನು ಹಂಚಲಾಗುತ್ತದೆ.

ಬಾಹ್ಯ ಪ್ರದೇಶಗಳಿಂದ ಮತಪೆಟ್ಟಿಗೆಗಳನ್ನು ಸಂಗ್ರಹಿಸಿ ಕೇಂದ್ರಗಳಿಗೆ ತಲುಪಿಸಿದ ನಂತರ ಕೈಯಿಂದಲೇ ಮತ ಎಣಿಕೆ ಮಾಡಲಾಗುತ್ತದೆ. 

ಮಾರ್ಚ್ 5ರಂದು ಮತದಾನ ಮುಕ್ತಾಯಗೊಂಡ ತಕ್ಷಣ, ಅಂದರೆ ಮಾರ್ಚ್ 5ರ ಸಂಜೆ ಅಥವಾ ಮಾರ್ಚ್ 6ರ ಬೆಳಿಗ್ಗೆಯಿಂದ ಮತ ಎಣಿಕೆ ಆರಂಭವಾಗಿದೆ.

ಚುನಾವಣಾ ಆಯೋಗವು ಮಾರ್ಚ್ 9, 2026ರೊಳಗೆ ಎಲ್ಲಾ 275 ಸ್ಥಾನಗಳ ಮತ ಎಣಿಕೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ.

ಫಲಿತಾಂಶಗಳು ಶೀಘ್ರವಾಗಿ ಪ್ರಕಟವಾಗುತ್ತಿದ್ದು, ಪ್ರಮಾಣಾನುಗುಣ ಪ್ರಾತಿನಿಧ್ಯದ ಅಂತಿಮ ಲೆಕ್ಕಾಚಾರಕ್ಕೆ ಇನ್ನೂ 2-3 ದಿನಗಳು ಬೇಕಾಗಬಹುದು. 

ಬೆಂಗಳೂರಿನಲ್ಲಿ ಪದವಿ ಪಡೆದಿರುವ ಬಲೇಂದ್ರ ಶಾ

ಪ್ರಧಾನಿ ಹುದ್ದೆಗೇರಲು ಅಣಿಯಾಗಿರುವ ಯುವ ನಾಯಕ ಬಲೇಂದ್ರ ಶಾ ಅವರು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು. ನಗರದ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಎಂಐಟಿ) ಕಾಲೇಜಿನಲ್ಲಿ ಅವರು ತಮ್ಮ ಉನ್ನತ ವ್ಯಾಸಂಗ ಮಾಡಿದ್ದಾರೆ.

2016 ರಿಂದ 2018 ರ ಅವಧಿಯಲ್ಲಿ ಸ್ಟ್ರಕ್ಚರಲ್ ಇಂಜಿನಿಯರಿಂಗ್‌ನಲ್ಲಿ ಬಲೇಂದ್ರ ಶಾ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಜನಪ್ರಿಯ ರ‍್ಯಾಪರ್ ಬಲೇಂದ್ರ ಶಾ

ಬಲೇಂದ್ರ ಶಾ ರಾಜಕೀಯಕ್ಕೆ ಬರುವ ಮೊದಲು ನೇಪಾಳದ ಅತ್ಯಂತ ಜನಪ್ರಿಯ ರ‍್ಯಾಪರ್ ಆಗಿದ್ದರು.

ನೇಪಾಳದ ಪ್ರಸಿದ್ಧ ‘Raw Barz’ ಎಂಬ ರ‍್ಯಾಪ್ ಬ್ಯಾಟಲ್ ಸರಣಿಯ ಮೂಲಕ ಅವರು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು.

ಅವರ ಹಾಡುಗಳು ಕೇವಲ ಮನೋರಂಜನೆಗೆ ಸೀಮಿತವಾಗಿರದೆ, ನೇಪಾಳದ ಭ್ರಷ್ಟಾಚಾರ, ರಾಜಕೀಯ ಅಸ್ಥಿರತೆ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ದನಿಯೆತ್ತುತ್ತಿದ್ದವು. 

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗಲೂ ಸಂಗೀತದಲ್ಲಿ ಸಕ್ರಿಯರಾಗಿದ್ದರು ಮತ್ತು ಅವರ ಅನೇಕ ಯೂಟ್ಯೂಬ್ ವಿಡಿಯೋಗಳು ಆ ಸಮಯದಲ್ಲಿ ವೈರಲ್ ಆಗಿದ್ದವು. ಸಂಗೀತ ಕ್ಷೇತ್ರದಲ್ಲಿ ಅವರು ಬಲೇನ್ಎಂಬ ಹೆಸರಿನಿಂದಲೇ ಹೆಚ್ಚು ಪ್ರಸಿದ್ಧರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು (ಮಾ.28) ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿ ಮತ್ತು...

ಇರಾನ್‌ನ ಸರ್ವೋಚ್ಚ ನಾಯಕನನ್ನು ‘ನಿರ್ಮೂಲನೆ’ ಮಾಡಲಾಗಿದೆ; ನಮ್ಮ ಮುಂದಿನ ಗುರಿ ಕ್ಯೂಬಾ: ಡೊನಾಲ್ಡ್‌ ಟ್ರಂಪ್

ಪಶ್ಚಿಮ ಏಷ್ಯಾದಾದ್ಯಂತ ಯುದ್ಧ ಮುಂದುವರೆದಿದ್ದರೂ ಮತ್ತು ರಾಜತಾಂತ್ರಿಕ ಪ್ರಯತ್ನಗಳು ಅನಿಶ್ಚಿತವಾಗಿದ್ದರೂ ಸಹ, ಇರಾನ್‌ನ ಉನ್ನತ ನಾಯಕರು ಮತ್ತು ಅದರ ಹೆಚ್ಚಿನ ಮಿಲಿಟರಿ ಸಾಮರ್ಥ್ಯ ನಾಶವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಿಯಾಮಿಯಲ್ಲಿ ಸೌದಿ...

ತೆಲಂಗಾಣ| ನಿಗದಿತ ವೇತನ-ಉದ್ಯೋಗ ಭದ್ರತೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

ಹೈದರಾಬಾದ್‌ನ ಧರಣಾ ಚೌಕ್‌ನಲ್ಲಿ ಇಂದು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯಿತು. ಸರ್ಕಾರವು 18,000 ರೂ.ಗಳ ಮಾಸಿಕ ನಿಗದಿತ ವೇತನ ಮತ್ತು ಉದ್ಯೋಗ ಭದ್ರತೆಯ ಚುನಾವಣಾ...

2001-2006 ರ ಚುನಾವಣೆ ಗೆಲ್ಲಲು ವಿ.ಡಿ. ಸತೀಸನ್ ಆರ್‌ಎಸ್‌ಎಸ್ ಬೆಂಬಲ ಕೋರಿದ್ದರು: ಸಂಘದ ನಾಯಕನಿಂದ ಆರೋಪ

ಕೇರಳದ ಯುಡಿಎಫ್ ಅಧ್ಯಕ್ಷ ವಿ ಡಿ ಸತೀಸನ್ 2001 ಮತ್ತು 2006 ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಗೆಲ್ಲಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ಬೆಂಬಲ ಕೋರಿದ್ದರು ಎಂದು ಸಂಘ ಪರಿವಾರದ ಹಿರಿಯ ನಾಯಕ...

ಚರ್ಚ್‌ಗಳಲ್ಲಿ ಧರ್ಮಾಧ್ಯಕ್ಷರಾಗಲು ಕನ್ನಡ ಕಲಿತು ಬರಬೇಕು: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ಮಾ.28: ಇತರೇ ರಾಜ್ಯಗಳಿಂದ ಕರ್ನಾಟಕದ ಚರ್ಚ್‌ಗಳಲ್ಲಿ ಧರ್ಮಾಧ್ಯಕ್ಷರಾಗಲು ಬರುವವರು ಕಡ್ಡಾಯವಾಗಿ ಕನಿಷ್ಠ ಆರು ತಿಂಗಳು ವ್ಯಾವಹಾರಿಕ ಕನ್ನಡವನ್ನು ಕಲಿತು ಬರಬೇಕು. ಇಲ್ಲದಿದ್ದರೆ ಇಲ್ಲಿನ ಧರ್ಮಾಧ್ಯಕ್ಷರ ಸ್ಥಾನಕ್ಕೆ ಗೌರವ ಉಳಿಯುವುದಿಲ್ಲ ಎಂದು ಸಾಹಿತಿ...

‘ಮಾನವಶಕ್ತಿ ಕೊರತೆಯಿಂದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಒತ್ತಡ ಎದುರಿಸಬಹುದು..’; ಸೇನಾ ಮುಖ್ಯಸ್ಥರಿಂದ ಸರ್ಕಾರಕ್ಕೆ ಎಚ್ಚರಿಕೆ

ಹೆಚ್ಚುತ್ತಿರುವ ಮಾನವಶಕ್ತಿ ಕೊರತೆಯಿಂದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಕಾರ್ಯಾಚರಣೆಯ ಗಂಭೀರ ಒತ್ತಡವನ್ನು ಎದುರಿಸಬಹುದು ಎಂದು ಸೇನಾ ಮುಖ್ಯಸ್ಥ ಇಯಾಲ್ ಜಮೀರ್ ಭದ್ರತಾ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ವರದಿಗಳನ್ನು...

ಯೆಮೆನ್‌ನಿಂದ ಹಾರಿದ ಮೊದಲ ಕ್ಷಿಪಣಿ ಎದುರಿಸಿದ ಇಸ್ರೇಲ್; ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಹೌತಿ ಪ್ರವೇಶ?

ಕಳೆದ ತಿಂಗಳು ಮಧ್ಯಪ್ರಾಚ್ಯದಲ್ಲಿ ಯುದ್ಧ ಭುಗಿಲೆದ್ದ ನಂತರ, ಮಾರ್ಚ್ 28 ರಂದು ಯೆಮೆನ್‌ನಿಂದ ಹಾರಿಸಲಾದ ಕ್ಷಿಪಣಿಯೊಂದನ್ನು ಇಸ್ರೇಲ್ ಮೊದಲಬಾರಿಗೆ ಎದುರಿಸಿದೆ. ಕಳೆದ ತಿಂಗಳು ಮಧ್ಯಪ್ರಾಚ್ಯದಲ್ಲಿ ಯುದ್ಧ ಭುಗಿಲೆದ್ದ ನಂತರ ಯೆಮೆನ್‌ನಿಂದ ಮೊದಲ ಬಾರಿಗೆ...

ಬಿಜೆಪಿಗೆ ಮತ ಹಾಕುವುದು ವ್ಯರ್ಥ; ಬದಲಿಗೆ ಕಾಂಗ್ರೆಸ್‌ಗೆ ಹಾಕಿ: ಸಂಸದ ಶಶಿ ತರೂರ್

ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕುವುದು ವ್ಯರ್ಥ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕೇರಳದಲ್ಲಿ ಹೇಳಿದ್ದಾರೆ. ರಾಜ್ಯದ ಚುನಾವಣಾ ಸ್ಪರ್ಧೆ ಪ್ರಾಥಮಿಕವಾಗಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಎಡ...

ಅಬುಧಾಬಿ | ಭದ್ರತಾ ಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷಗಳು ಬಿದ್ದು ಐವರು ಭಾರತೀಯರಿಗೆ ಗಾಯ

ಯುಎಇ ರಾಜಧಾನಿ ಅಬುಧಾಬಿ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಸಂದರ್ಭದಲ್ಲಿ, ಕ್ಷಿಪಣಿಗಳ ಅವಶೇಷಗಳು ಬಿದ್ದ ಪರಿಣಾಮ ಐವರು ಭಾರತೀಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಬುಧಾಬಿಯ ಸರ್ಕಾರಿ...

ಧುರಂಧರ್-2 ಬಿಜೆಪಿಯ ದೊಡ್ಡ ಬಜೆಟ್‌ನ ರಾಜಕೀಯ ಜಾಹೀರಾತು: ಧ್ರುವ ರಾಥೀ

ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ ಅವರ ಆಕ್ಷನ್ ಎಂಟರ್‌ಟೈನರ್ ಧುರಂಧರ್‌ನ ಮುಂದುವರಿದ ಭಾಗವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆಯ ಜೊತೆಗೆ ಬಲಪಂಥೀಯ ವರ್ಗದ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಗಳಿಸುತ್ತಿದೆ. ಆದರೂ, ಈ ಚಿತ್ರವು ಸಾಕಷ್ಟು...