ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಕನಸು ಎಲ್ಲರಲ್ಲಿಯೂ ಚಿಗುರುತ್ತದೆ. ಅಂತಹ ಕನಸುಗಳನ್ನು ನನಸು ಮಾಡಲು ಕೆಲವರಿಗೆ ತಮ್ಮ ಕೌಟುಂಬಿಕ ಹಿನ್ನೆಲೆ ಸಹಾಯವಾದರೆ, ಮತ್ತೂ ಕೆಲವರಿಗೆ ಕನಸನ್ನ ಕನಸಾಗಿಯೇ ಉಳಿಸಿಬಿಡುತ್ತದೆ. ಅದರಲ್ಲೂ ಖಾಸಗೀಕರಣದ ದವಡೆಯಲ್ಲಿರುವ ಇಂದಿನ ಕಾಲಘಟ್ಟದಲ್ಲಿ ಎಲ್ಲವೂ ದುಭಾರಿಯೇ ಸರಿ. ಉತ್ತಮ ಶೈಕ್ಷಣಿಕ ಸೌಲಭ್ಯ, ಸಾಧನೆಯ ಹಾದಿಯಲ್ಲಿ ಒಂದಷ್ಟು ಮಾರ್ಗದರ್ಶನ ಪಡೆದುಕೊಳ್ಳಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಅಂತಹ ಬಯಕೆಗಳಿಗೆ ಆರ್ಥಿಕ ಪರಿಸ್ಥಿತಿಗಳಂತಹ ಹಲವು ಸಮಸ್ಯೆಗಳು ಎದುರಾಗುತ್ತವೆ.- Advertisement -
ಈ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿಯೂ ಉತ್ತಮ ಬೋಧಕರಾಗಬೇಕು, ಆಪ್ತ ಸಮಾಲೋಚಕರಾಗಬೇಕು, ಜೆಆರ್‍ಎಫ್-ಎನ್‍ಇಟಿಗಳನ್ನು ಪಾಸು ಮಾಡಿ ಪಿಎಚ್‍ಡಿ ಪದವಿ ಪಡೆಯಬೇಕೆಂದು, ಅದರೊಂದಿಗೆ ಸಮಾಜದಲ್ಲಿ ಏನನ್ನಾದರೂ ಕೊಡುಗೆ ಕೊಡಬೇಕು ಎಂದು ಬಯಸುವವರು ಸಾಕಷ್ಟಿದ್ದಾರೆ. ಅಂತಹವರಿಗೆ ಈಗೊಂದು ಸುವರ್ಣಾವಕಾಶವನ್ನು ಬದುಕು ಕಮ್ಯುನಿಟಿ ಕಾಲೇಜು ತೆರೆದಿಟ್ಟಿದೆ.
ಕಡಿಮೆ ಖರ್ಚಿನಲ್ಲಿ ಕೋಚಿಂಗ್ ನೀಡುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುತ್ತಿರುವ ಈ ಸಂಸ್ಥೆ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಾಯೋಗಿಕ ತರಬೇತಿಗೆ ಹೆಚ್ಚು ಒತ್ತು ನೀಡುತ್ತಿರುವ ಸಂಸ್ಥೆ ಕಲಿಕೆಗೆ ಬರುವ ವಿದ್ಯಾರ್ಥಿಗಳನ್ನು ತಮ್ಮ ಆಯ್ಕೆಯ ವಿಷಯದಲ್ಲಿ ಹಿಡಿತ ಸಾಧಿಸಲು ನೆರವಾಗುತ್ತಿದೆ.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವೇದಿಕೆಯ ನಿರ್ಮಾಣವಾಗಿದೆ. ಈ ಕಾಲೇಜು ಪ್ರಾಯೋಗಿಕ ಕಲಿಕೆ, ಸುಸಜ್ಜಿತ ಓದಿನ ಸಂಪನ್ಮೂಲಗಳು, ವಿಷಯ ತಜ್ಞರು-ಶಿಕ್ಷಣ ತಜ್ಞರಿಂದ ಮಾರ್ಗದರ್ಶನ, ಅಧ್ಯಯನ ಪ್ರವಾಸ ಮತ್ತು ವಸತಿ ವ್ಯವಸ್ಥೆಗಳನ್ನು ಒಳಗೊಂಡಿದೆ. ಇಲ್ಲಿ ಮೂರು ತಿಂಗಳ ಅವಧಿಗೆ ಜುಲೈ 15ರಿಂದ ಆರಂಭವಾಗುತ್ತಿರುವ ಐeಚಿಡಿಟಿiಟಿg ಐಇಓSಇS ಕೋರ್ಸುಗಳಿಗೆ ಜುಲೈ 05 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ಯಾವ ಕೋರ್ಸುಗಳು ಲಭ್ಯ
· ಸೃಜನಶೀಲ ಬೋಧನಾ ಕಲಿಕೆ
· ಆಪ್ತ ಸಮಾಲೋಚನಾ ಕೌಶಲ್ಯ ಕಲಿಕೆ
· ಡಿಜಿಟಲ್ ಕ್ಲಾಸ್ ರೂಂ ನಿರ್ವಹಣೆ
· ಜೆಆರ್‍ಎಫ್, ನೆಟ್ ಮತ್ತು ಸ್ಲೆಟ್ ಸಿದ್ಧತೆಗೆ ತರಬೇತಿ
· ಪಿಎಚ್‍ಡಿ ಮತ್ತು ಕಿರುಸಂಶೋಧನೆಗಳ ಸಿದ್ಧತೆಗೆ ಮಾರ್ಗದರ್ಶನ
· ಕಾಲೇಜುಗಳಲ್ಲಿ ನಡೆಯುವ ನೇಮಕಾತಿ ಸಂದರ್ಶನಗಳಿಗೆ ಸಹಾಯ
ಯಾರು ಅರ್ಜಿ ಸಲ್ಲಿಸಬಹುದು
· ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.
· ಸಂಶೋಧನಾ ವಿದ್ಯಾರ್ಥಿ/ನಿಯರು.
· ಈಗಾಗಲೇ ಅಧ್ಯಾಪಕ ವೃತ್ತಿಯಲ್ಲಿದ್ದು, ಮತ್ತಷ್ಟು ಸೃಜನಶೀಲತೆ ಕಲಿಯುವ ಆಸಕ್ತಿ ಇರುವವರು.
ಮೇಲಿನ ಕೋರ್ಸುಗಳಿಗೆ ಕೇವಲ 30 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವನ್ನು ಕಲ್ಪಸಲಾಗುವುದು. ಅಸಕ್ತ ವಿದ್ಯಾರ್ಥಿಗಳು ತಮ್ಮ ವೈಯಕ್ತಿಯ ಮಾಹಿತಿ(ರೆಸುಮ್)ಯನ್ನು ಜುಲೈ 05 ರೊಳಗೆ ಕೆಳಕಂಡ ವಿಳಾಸಕ್ಕೆ ತಲುಪಿಸಿ ಅಥವಾ ಇ-ಮೇಲ್ ಮಾಡಬಹುದು.
ಸಂಪರ್ಕ: ಸಂವಾದ, ಬದುಕು ಕಮ್ಯುನಿಟಿ ಕಾಲೇಜು, #7, 2ನೇ ಕ್ರಾಸ್, ಡಯಾಗನಲ್ ರಸ್ತೆ, ಸಿಟಿ ಸೆಂಟ್ರಲ್ ಲೈಬ್ರರಿ ಹಿಂಭಾಗ, ಜಯನಗರ 3ನೇ ಹಂತ, ಬೆಂಗಳೂರು. 560011…
7899769899, 9739286217, 8050599001
ಇ-ಮೇಲ್: [email protected]



