Homeಮುಖಪುಟದೇಶದಲ್ಲಿ ೨೦೨೦ಕ್ಕೆ ಹೊಸ ರಾಷ್ಟ್ರೀಯ ಸೈಬರ್‌ ಭದ್ರತಾ ನೀತಿ ಜಾರಿಗೆ ತರಲು ಚಿಂತನೆ..!

ದೇಶದಲ್ಲಿ ೨೦೨೦ಕ್ಕೆ ಹೊಸ ರಾಷ್ಟ್ರೀಯ ಸೈಬರ್‌ ಭದ್ರತಾ ನೀತಿ ಜಾರಿಗೆ ತರಲು ಚಿಂತನೆ..!

- Advertisement -
- Advertisement -

ದೇಶದಲ್ಲಿ ೨೦೨೦ಕ್ಕೆ ಹೊಸ ರಾಷ್ಟ್ರೀಯ ಸೈಬರ್ ಭದ್ರತಾ ನೀತಿ ಜಾರಿಗೆ ತರಲು ಚಿಂತನೆ ನಡೆದಿದೆ. ಸೈಬರ್ ಸುರಕ್ಷತೆ, ಜಾಗೃತಿ ಮತ್ತು ನೈರ್ಮಲ್ಯಕ್ಕೆ ಒತ್ತು ನೀಡಲು, ಶಾಲಾ-ಕಾಲೇಜುಗಳ ಪಠ್ಯದಲ್ಲಿ ಸೈಬರ್‌ ಭದ್ರತೆ ಕುರಿತು ಮಾಹಿತಿ ನೀಡಲು ಹೊಸ ರಾಷ್ಟ್ರೀಯ ಸೈಬರ್ ಭದ್ರತಾ ನೀತಿ ಸಹಕಾರಿಯಾಗಲಿದೆ ಎಂದು ಭದ್ರತಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ರಕ್ಷಣಾತ್ಮಕ ಸೈಬರ್ ಕಾರ್ಯಾಚರಣೆಗಳ ಸಂಪೂರ್ಣ ಸ್ಪೆಕ್ಟ್ರಂಗೆ ಶೀಘ್ರದಲ್ಲಿ ಒಂದೇ ಪ್ರಾಧಿಕಾರ ಅಥವಾ ಏಜೆನ್ಸಿ ಹೊಂದಲಾಗುವುದು. ದೇಶ ಸೈಬರ್‌ ದಾಳಿ, ಸೈಬರ್‌ ಭಯೋತ್ಪಾದನೆಯಂಥ ಬೆದರಿಕೆಗಳನ್ನು ಎದುರಿಸುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ದೇಶದ ಅತಿದೊಡ್ಡ ನಾಗರಿಕ ಪರಮಾಣು ವಿದ್ಯುತ್‌ ಸ್ಥಾವರ (ಕೆಎನ್‌ಪಿಪಿ).

ಭಾರತದ ಸೈಬರ್‌ ಮೂಲಸೌಕರ್ಯಗಳನ್ನು ಸಂರಕ್ಷಿಸಲು ಡಜನ್‌ಗಟ್ಟಲೇ ಇರುವ ಏಜೆನ್ಸಿಗಳನ್ನು ಮರುಜೋಡಣೆ ಮಾಡುವುದು ಮತ್ತು ಸಂಘಟಿಸುವುದು ಸರ್ಕಾರದ ಯೋಜನೆಯಾಗಿದೆ. ಪ್ರಸ್ತುತ ಏಜೆನ್ಸಿಗಳು ಸ್ವತಂತ್ರವಾಗಿ ವರದಿ ಮಾಡುವ ಹಾಗೂ ವೈಯಕ್ತಿಕ ನಿಯಂತ್ರಣ ಹೊಂದಿವೆ. ಅಲ್ಲದೇ ಸಮನ್ವಯುತ ಕಾರ್ಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಇವುಗಳನ್ನು ಪುನರ್‌ ರಚಿಸುವ ಆಲೋಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಗೃಹ ವ್ಯವಹಾರ ಸಚಿವಾಲಯ, ರಕ್ಷಣಾ ಸಚಿವಾಲಯ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಸೇರಿದಂತೆ ಇತರೆ ಇಲಾಖೆಗಳು ಮತ್ತು ಏಜೆನ್ಸಿಗಳು ತಮ್ಮದೇ ಸೈಬರ್‌‌ ಘಟಕಗಳನ್ನು ಹೊಂದಿವೆ. ಇವುಗಳಲ್ಲಿ ಕಂಪ್ಯುಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್, ನ್ಯಾಷನಲ್ ಕ್ರಿಟಿಕಲ್ ಇನ್ಫಾರ್ಮೇಷನ್ ಇನ್ಫ್ರಾಸ್ಟ್ರಕ್ಚರ್‌ ಮತ್ತು ನ್ಯಾಷನಲ್‌ ಸೈಬರ್ ಕೋಆರ್ಡಿನೇಟರ್‌ ಸೆಂಟರ್‌ ಎಂಬ ವಿಶೇಷ ಘಟಕಗಳಿವೆ.

ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕ, ಲೆಫ್ಟಿನೆಂಟ್ ಜನರಲ್‌ ರಾಜೇಶ್‌ ಪಂಥ್‌ ಅವರಿಗೆ ಎಲ್ಲಾ ಘಟಕಗಳು ಮತ್ತು ಏಜೆನ್ಸಿಗಳನ್ನು ಒಟ್ಟುಗೂಡಿಸಿ, ರಚಿಸುವ ಕೆಲಸ ನೀಡಲಾಗಿದೆ. ರಾಷ್ಟ್ರೀಯ ಸೈಬರ್‌ ಭದ್ರತಾ ನೀತಿ-೨೦೨೦ರ ಕಾರ್ಯವೆಂದರೆ ಒಗ್ಗಟ್ಟು ತರುವುದು ಎಂದು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...