ಬಿಜೆಪಿ ನಾಯಕಿ, ಶಾಲಿಮಾರ್ ಬಾಗ್ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನೆ ಸ್ವೀಕರಿಸಿದ್ದಾರೆ. ಈ ನಡುವೆ, ಪಕ್ಷವೂ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಿದ್ದಂತೆ ಅವರು ಈ ಹಿಂದೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಗೂಂಡಾಗಿರಿ ಮಾಡುತ್ತಿರುವ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳ ಬಳಕೆದಾರರು ದೆಹಲಿಯ ಜನತೆಗೆ ವ್ಯಂಗ್ಯವಾಗಿ ಶುಭಾಶಯ ಕೋರಿದ್ದಾರೆ. ದೆಹಲಿ ನೂತನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವೈರಲ್ ವಿಡಿಯೊ 2023ರದ್ದಾಗಿದ್ದು, ದೆಹಲಿ ಪಾಲಿಕೆಯಲ್ಲಿ ಅವರು ವೇದಿಕೆ ಬಳಿ ತೆರಳಿ ಅದನ್ನು ತಳ್ಳಿ, ಅದರಲ್ಲಿನ ಮೈಕ್ ಅನ್ನು ಕಿತ್ತು ಮುಂದೆ ಇರುವ ಟೇಬಲ್‌ಗೆ ಬಡಿಯುತ್ತಾ ಗೂಂಡಾಗಿರಿ ಮಾಡುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ಬಗ್ಗೆಗಿನ ವಿವರ
2023ರಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯ ಸಂದರ್ಭದಲ್ಲಿ ರೇಖಾ ಗುಪ್ತಾ ವೇದಿಕೆ ಮತ್ತು ಮೈಕ್ ಅನ್ನು ಧ್ವಂಸಗೊಳಿಸಿದ್ದರು. ರಹಸ್ಯ ಮತದಾನದ ಸಮಯದಲ್ಲಿ ಕೌನ್ಸಿಲರ್‌ಗಳು ತಮ್ಮ ಮೊಬೈಲ್‌ಗಳ ಮೂಲಕ ಮತಪತ್ರಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈ ವೇಳೆ ರೇಖಾ ಅವರು ಗೂಂಡಾಗಿರಿ ಮಾಡಿದ್ದರು.ದೆಹಲಿ ನೂತನ
#ದೆಹಲಿ ಯ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕಿ #ರೇಖಾ_ಗುಪ್ತಾ ಅವರು ಗುರುವಾರ ಪ್ರಮಾಣ ವಚನೆ ಸ್ವೀಕರಿಸಿದ್ದಾರೆ. ಈ ನಡುವೆ ಅವರು ಈ ಹಿಂದೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ #ಗೂಂಡಾಗಿರಿ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.#NaanuGauri #ನಾನುಗೌರಿ #RekhaGupta #CMofDelhi
ಸುದ್ದಿ ಓದಿ➣ https://t.co/cA0updS3lT pic.twitter.com/QSj3Ec56hX
— Naanu Gauri (@naanugauri) February 20, 2025
ಎಎನ್‌ಐ ವರದಿಗಳ ಪ್ರಕಾರ, ಈ ಘಟನೆಯ ಸಂದರ್ಭದಲ್ಲಿ ಎರಡೂ ಪಕ್ಷಗಳ ಕೌನ್ಸಿಲರ್‌ಗಳು ಸಹ ಜಗಳವಾಡಿದ್ದರು. ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್‌ಗಳ ಗದ್ದಲದಿಂದಾಗಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸದನವನ್ನು ಬೆಳಿಗ್ಗೆ 13 ನೇ ಬಾರಿಗೆ ನಾಳೆ ಬೆಳಿಗ್ಗೆ 10 ಗಂಟೆಯವರೆಗೆ ಮುಂದೂಡಲಾಗಿತ್ತು.
ಈ ವೇಳೆ ಸದನದಲ್ಲಿ ವಿಧ್ವಂಸಕ ಕೃತ್ಯ ನಡೆದಿತ್ತು. ಆಗ ಬಿಜೆಪಿ ಮೇಯರ್ ಅಭ್ಯರ್ಥಿಯಾಗಿದ್ದ ರೇಖಾ ಗುಪ್ತಾ ಅವರು ವೇದಿಕೆಯನ್ನು ಮುರಿದಿದ್ದಾರೆ ಎಂದು ಆರೋಪಿಸಲಾಗಿತ್ತು ಮತ್ತು ಅಮಿತ್ ನಾಗ್ಪಾಲ್ ಎಂಬವರು ಮತಪತ್ರವನ್ನು ಹರಿದು ಮತಪೆಟ್ಟಿಗೆಯನ್ನು ಎಸೆದಿದ್ದಾರೆ ಎಂದು ವರದಿಯಾಗಿತ್ತು.
ಎಎಪಿಯ ಆರೋಪ
ಅದಾಗ್ಯೂ, 2023 ರಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದ ಎಎಪಿ ತಮ್ಮ ಸೋಲಿನ ಹತಾಶೆಯಿಂದ ರೇಖಾ ಗುಪ್ತಾ ಪಾಲಿಕೆಯೊಳಗೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿತ್ತು.
“ಬಿಜೆಪಿ ಮೇಯರ್ ಅಭ್ಯರ್ಥಿ ರೇಖಾ ಗುಪ್ತ ಅವರ ಸೋಲಿನ ನಂತರ ಅವರ ಹತಾಶೆಯನ್ನು ನೋಡಿ. ಸುಪ್ರೀಂ ಕೋರ್ಟ್‌ನ ತೀರ್ಪಿನ ಹೊರತಾಗಿಯೂ, ರಾತ್ರಿಯಿಡೀ ಸದನದಲ್ಲಿ ಗದ್ದಲ ನಡೆಯಿತು. ಧ್ವಂಸಗೊಳಿಸಲಾಯಿತು. ಹಲ್ಲೆ ಮತ್ತು ಗೂಂಡಾಗಿರಿ ಮತ್ತು ಸ್ಥಾಯಿ ಸಮಿತಿಯ ಚುನಾವಣೆ ನಡೆಯಲು ಅವಕಾಶ ನೀಡಲಾಗಿಲ್ಲ.” ಎಂದು ಎಎಪಿ 2023ರಲ್ಲಿ ಟ್ವೀಟ್ ಮಾಡಿತ್ತು.
BJP Mayor Candidate @gupta_rekha की हार की बौखलाहट देखिये‼️
Supreme Court के निर्णय के बावजूद, पूरी रात सदन में
▪️हंगामा किया
▪️तोड़फोड़ की
▪️मारपीट और गुंडागर्दी कीऔर Standing Committee का Election नहीं होने दिया pic.twitter.com/sPvKBRqWgL
— Aam Aadmi Party- Uttar Pradesh (@AAPUttarPradesh) February 23, 2023
ಇದನ್ನೂಓದಿ: ನನ್ನ ಜಮೀನಿನ ಸರ್ವೆ ಹಿಂದೆ ಕಾಂಗ್ರೆಸ್ ರಾಜಕೀಯ ದ್ವೇಷವಿದೆ: ಎಚ್‌ಡಿ ಕುಮಾರಸ್ವಾಮಿ ಆರೋಪ
ನನ್ನ ಜಮೀನಿನ ಸರ್ವೆ ಹಿಂದೆ ಕಾಂಗ್ರೆಸ್ ರಾಜಕೀಯ ದ್ವೇಷವಿದೆ: ಎಚ್‌ಡಿ ಕುಮಾರಸ್ವಾಮಿ ಆರೋಪ


