Homeಅಂಕಣಗಳುಹೊಸ ಮಾಧ್ಯಮ: ಮೂರನೇ ಬೆಲ್ ಬಾರಿಸಿದೆ, ಇನ್ನೀಗ ಶುರು ಮಾಡಲೇಬೇಕು

ಹೊಸ ಮಾಧ್ಯಮ: ಮೂರನೇ ಬೆಲ್ ಬಾರಿಸಿದೆ, ಇನ್ನೀಗ ಶುರು ಮಾಡಲೇಬೇಕು

- Advertisement -
- Advertisement -

ಭಾರತದಲ್ಲಿ ಮಾಧ್ಯಮ ಕ್ಷೇತ್ರ ತನ್ನ ಕೆಲಸ ನಿಲ್ಲಿಸಿ ಪ್ರಜಾತಂತ್ರ ವಿರೋಧಿ ಪಯಣ ಆರಂಭಿಸಿ ಬಹಳ ಕಾಲವೇ ಆಯಿತು. ಆದರೆ ತೀರಾ ಇತ್ತೀಚೆಗೆ ತನ್ನ ಜೀವವಿರೋಧಿತನವನ್ನು ಸಾಬೀತುಪಡಿಸಿಕೊಂಡಿತು. ಜಗತ್ತಿನೆಲ್ಲೆಡೆ ಮನುಷ್ಯರನ್ನು ಅತ್ಯಂತ ಕ್ಷುದ್ರವಾಗಿಸಿಬಿಟ್ಟ ಕಣ್ಣಿಗೆ ಕಾಣದ ಕೊರೊನಾ ಆವರಿಸುತ್ತಾ ಬಂದಂತೆ, ಕೆಲವರಾದರೂ ಭಿನ್ನವಾಗಿ ಆಲೋಚಿಸಲು ಶುರು ಮಾಡಿದ್ದರು. ಬದುಕು ಇಷ್ಟೇನಾ, ಹಾಗಿದ್ದ ಮೇಲೆ ಈ ಜಗಳ, ಈ ದ್ವೇಷ, ಈ ತಾರತಮ್ಯ ಏಕೆ ಎಂಬುದು ಅದರ ತಿರುಳಾಗಿತ್ತು. ಆದರೆ ಎಲ್ಲರೂ ಗಾಬರಿಗೊಳ್ಳುವ ಹಾಗೆ ನಮ್ಮ ಬಹುತೇಕ ಮಾಧ್ಯಮಗಳು ಇನ್ನಷ್ಟು ಉಲ್ಟಾ ದಿಕ್ಕಿನಲ್ಲಿ ಹೊರಟಿದ್ದವು.

ಕೊರೊನಾ ಸೋಂಕನ್ನು ಧರ್ಮವೊಂದಕ್ಕೆ ತಳುಕುಹಾಕಲು ಹೊರಟಾಗಲೇ ಮೊದಲ ಗಂಟೆ ಮೊಳಗಿತ್ತು. ದೇಶಕ್ಕೆ ದೇಶವೇ ದಿಗ್ಭ್ರಾಂತವಾಗಿ ಹೊಸಪರಿಸ್ಥಿತಿಗೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದರೆ, ಬಡವರು ಬೀದಿಯ ಮೇಲೆ ಬಂದರೆ ಅವರನ್ನು ಬಡಿಯಲು ಪೊಲೀಸರ ಮೇಲೆ ಒತ್ತಡ ಹಾಕುವುದರಲ್ಲಿ ಮಾಧ್ಯಮಗಳು ನಿರತವಾಗಿದ್ದವು. ಮತ್ತೀಗ ದೇಶ ಕಳೆದೊಂದು ಶತಮಾನದಲ್ಲೇ ಅತೀ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅದಕ್ಕೆ ಕೇಂದ್ರ ಸರ್ಕಾರವು ಒಂದು ಮೋಸದ ಪ್ಯಾಕೇಜನ್ನು ಬಿಡುಗಡೆ ಮಾಡಿದೆ; ಅದನ್ನು ಕನಿಷ್ಠ ವಿಮರ್ಶಾತ್ಮಕವಾಗಿ ನೋಡುವ ಕೆಲಸವನ್ನೂ ಬಹುತೇಕ ಮಾಧ್ಯಮಗಳು ಮಾಡಲಿಲ್ಲ. ಈ ಮೂರು ಸಂಗತಿಗಳು ಕಡೆಯ ಮೂರು ಬೆಲ್‍ಗಳು ಬಡಿದ ಹಾಗೆ ಎಂದು ದೇಶದ ಪ್ರಜ್ಞಾವಂತ ಸಮಾಜ ಭಾವಿಸಬೇಕಿತ್ತು; ಭಾವಿಸಿಯೂ ಇದೆ.

ಹೀಗಾಗಿಯೇ ಪರ್ಯಾಯ ಮಾಧ್ಯಮದ ಚರ್ಚೆಯೂ ಈ ಅವಧಿಯಲ್ಲಿ ಆರಂಭವಾಯಿತು. ಅದೇ ಕೆಲಸದಲ್ಲಿ ನಿರತರಾಗಿದ್ದ ಗೌರಿ ಮೀಡಿಯಾ ತಂಡವೂ ಅದಕ್ಕೆ ಪ್ರತಿಕ್ರಿಯಿಸುವುದರ ಭಾಗವಾಗಿ ಹೊಸ ಮಾಧ್ಯಮದ ಕುರಿತಾದ ತನ್ನ ಪರಿಕಲ್ಪನೆಯ ಪ್ರಸ್ತಾಪವೊಂದನ್ನು ಮುಂದಿಟ್ಟಿತು. ನ್ಯಾಯಪಥ ಮತ್ತು ನಾನುಗೌರಿ.ಕಾಂನಲ್ಲಿ ಪ್ರಕಟವಾದ ಆ ಪರಿಕಲ್ಪನೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದವು. ನಮ್ಮ ಬಳಗದಲ್ಲಿನ ಉಮೇದು ನಮಗೂ ಉತ್ಸಾಹ ತಂದಿತು.

ಆ ಬರಹದಲ್ಲಿ ಮುಖ್ಯವಾಹಿನಿ ಮಾಧ್ಯಮ ಎಂದು ಬಳಸಿದ್ದು ಕೆಲವರಲ್ಲಿ ಗೊಂದಲ ಮೂಡಿಸಿತ್ತು. ಇನ್ನೊಂದು ಚಾನೆಲ್ ಆರಂಭಿಸುವುದು ಅಥವಾ ದೊಡ್ಡ ರಾಜ್ಯ ಮಟ್ಟದ ಪತ್ರಿಕೆಯನ್ನು ತರುವುದು ಸಾಧ್ಯವೇ ಎಂಬುದು ಆ ಗೊಂದಲಕ್ಕೆ ಕಾರಣವಾಗಿತ್ತು. ಚಾನೆಲ್ ಅಥವಾ ದೊಡ್ಡ ಪತ್ರಿಕೆ ಯಾರಾದರೂ ಮಾಡಿದರೆ ಅದಕ್ಕೆ ನಮ್ಮ ತಕರಾರೇನೂ ಇಲ್ಲ; ಆದರೆ ನಮ್ಮ ಪರಿಕಲ್ಪನೆಯ ಮುಖ್ಯವಾಹಿನಿ ಮಾಧ್ಯಮ ಅದಲ್ಲ ಎಂದು ಸ್ಪಷ್ಟಪಡಿಸಬೇಕಾಗಿ ಬಂದಿತು. ಮುಖ್ಯವಾಹಿನಿ ಎಂದಾಗ ಕಣ್ಣಮುಂದೆ ಬರುವ ಕಲ್ಪನೆಯು ಹಾಗೇ ಇರುತ್ತದಾದ್ದರಿಂದ, ಅದು ನನ್ನ ಬರಹದಲ್ಲೇ ಇದ್ದ ಸಮಸ್ಯೆಯಾಗಿತ್ತು ಎಂಬುದನ್ನು ವಿನಮ್ರವಾಗಿ ಒಪ್ಪಿಕೊಳ್ಳಬಯಸುತ್ತೇನೆ.

ಹೊಸ ಮುಖ್ಯವಾಹಿನಿ ಎಂದರೆ ಜನಸಾಮಾನ್ಯರೆಲ್ಲರೂ ತಮ್ಮದೆಂದು ಭಾವಿಸಿ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮಾಧ್ಯಮದ ಹೊಸರೂಪವಾಗಿರುತ್ತದೆ. ನೂರಾರು ಸಣ್ಣ ಪ್ರಯತ್ನಗಳು ಸ್ವಾಯತ್ತವಾಗಿ ಉಳಿದುಕೊಂಡೂ ಸಮಷ್ಟಿಯಾಗಿ ಸಮಷ್ಟಿ ಹಿತಕ್ಕಾಗಿ ಕೆಲಸ ಮಾಡುವ ಸಂಘಟನಾ ರೂಪ ಹಾಗೂ ಉದ್ದೇಶ ಹೊಂದಿರುತ್ತವೆ.

ಈ ಕುರಿತು ನಮ್ಮ ಪತ್ರಿಕಾ ಬಳಗದಲ್ಲೂ ಚರ್ಚೆ ಶುರುವಾಗಿದ್ದು, ಇನ್ನೊಂದೆರಡು ವಾರಗಳಲ್ಲಿ ಅಂತಿಮಗೊಳ್ಳಲಿದೆ. ಅದನ್ನು ನಿಮ್ಮೆಲ್ಲರ ಮುಂದಿಡಲಾಗುತ್ತದೆ. ಎಲ್ಲರೂ ಮುಕ್ತವಾದ ಚರ್ಚೆ ನಡೆಸೋಣ. ಅಲ್ಲಿಂದಾಚೆಗೆ ನಾವೆಲ್ಲರೂ ಜೊತೆಗೂಡಿ ಈ ಕಾಲದ ಬಹುಮುಖ್ಯ ಅಗತ್ಯವಾದ ಹೊಸ ಮಾಧ್ಯಮವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲಿದ್ದೇವೆ ಎಂಬ ವಿಶ್ವಾಸ ನಮಗಂತೂ ಇದೆ. ಕಡೆಯ ಮೂರು ಗಂಟೆ ಹೊಡೆದ ಮೇಲೂ ನಮ್ಮ ಕೆಲಸಕ್ಕೆ ಚಾಲನೆ ಕೊಡದಿದ್ದರೆ ಹೇಗೆ, ಅಲ್ಲವೇ?


ಇದನ್ನು ಓದಿ: ಮದುವೆಗೆ ಉಳಿಸಿದ ಹಣದಿಂದ ವಲಸೆ ಕಾರ್ಮಿಕರ ಹಸಿವು ನೀಗಿಸುತ್ತಿರುವ ’ರಿಕ್ಷಾ ಚಾಲಕ’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...