Homeಮುಖಪುಟನಿಸರ್ಗ ಚಂಡಮಾರುತ: 2 ದಿನಗಳ ಕಾಲ ಮನೆಯೊಳಗೆ ಇರಿ ಎಂದು ಮಹಾ ಸಿಎಂ ಉದ್ಧವ್‌ ಮನವಿ

ನಿಸರ್ಗ ಚಂಡಮಾರುತ: 2 ದಿನಗಳ ಕಾಲ ಮನೆಯೊಳಗೆ ಇರಿ ಎಂದು ಮಹಾ ಸಿಎಂ ಉದ್ಧವ್‌ ಮನವಿ

- Advertisement -
- Advertisement -

ಇಂದಿನಿಂದ ನಿಸರ್ಗ ಚಂಡಮಾರುತವು ಮಹಾರಾಷ್ಟ್ರ ಮತ್ತು ಗುಜರಾತ್‌ನ ಕರಾವಳಿ ಭಾಗಗಳಿಗೆ ಅಪ್ಪಳಿಸುವುದಿರಂದ ಮುನ್ನೆಚ್ಚರಿಕೆಯ ಕ್ರಮವಾಗಿ ದಯವಿಟ್ಟು 2 ದಿನಗಳ ಕಾಲ ಮನೆಯೊಳಗೆ ಇರಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ‌ ಮನವಿ ಮಾಡಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಕರೋನವೈರಸ್ ಪ್ರಕರಣಗಳನ್ನು (70000 ಕ್ಕೂ ಹೆಚ್ಚು) ಹೊಂದಿರುವ ರಾಜ್ಯವಾದ ಮಹಾರಾಷ್ಟ್ರದ ಮೇಲೆ ಮತ್ತೆ ನಿಸರ್ಗ ಚಂಡಮಾರುತದ ಕಾರಣಕ್ಕೆ ಅತಿಯಾದ ಹೊರೆ ಬಿದ್ದಿದೆ. ಅಲ್ಲಿನ ಆರೋಗ್ಯ ಮೂಲಸೌಕರ್ಯವನ್ನು ಒದಗಿಸಲು ಹೆಣಗಾಡುತ್ತಿರುವ ಸಮಯದಲ್ಲಿಯೇ ಈ ಚಂಡಮಾರುತ ಬರುತ್ತಿದ್ದು ಆಂತಕಕ್ಕೆ ಕಾರಣವಾಗಿದೆ. ಇದು ಮಹಾರಾಷ್ಟ್ರದಲ್ಲಿನ COVID-19 ವಿರುದ್ಧದ ಹೋರಾಟವನ್ನು ಸಂಕೀರ್ಣಗೊಳಿಸುತ್ತದೆ.

ನಗರದಲ್ಲಿ ಬಲವಾದ ಗಾಳಿ ಬೀಸುತ್ತಿರುವ ಕಾರಣ ಮುಂಬೈ ನಿವಾಸಿಗಳಿಗೆ ಸಂಭವನೀಯ ವಿದ್ಯುತ್ ಕಡಿತವನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಮೊಬೈಲ್‌ ಸೇರಿದಂತೆ ಇತರ ಎಲೆಕ್ಟ್ರಿಕ್‌ ಸಾಧನಗಳನ್ನು ಚಾರ್ಜ್ ಮಾಡಿಕೊಳ್ಳಿ ಮತ್ತು ಸಾಧ್ಯವಾದರೆ ತುರ್ತು ದೀಪಗಳನ್ನು ಹೊಂದಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

“ಈ ಚಂಡಮಾರುತವು ರಾಜ್ಯವು ಇಲ್ಲಿಯವರೆಗೆ ಎದುರಿಸಿದ್ದಕ್ಕಿಂತಲೂ ತೀವ್ರವಾಗಿರಬಹುದು … ನಾಳೆ ಮತ್ತು ನಾಳಿದ್ದು ಕರಾವಳಿ ಪ್ರದೇಶಗಳಲ್ಲಿ ನಿರ್ಣಾಯಕವಾಗಿದೆ … ಲಾಕ್‌ಡೌನ್ ಸಡಿಲಗೊಳಿಸುವ ಭಾಗವಾಗಿ ಪುನರಾರಂಭಗೊಂಡ ಚಟುವಟಿಕೆಗಳು ಅಲ್ಲಿ ಮುಚ್ಚಲ್ಪಡುತ್ತವೆ. ಮುಂದಿನ ಎರಡು ದಿನಗಳಲ್ಲಿ ಜನರು ಜಾಗರೂಕರಾಗಿರಬೇಕು “ಎಂದು ಠಾಕ್ರೆ ಹೇಳಿದ್ದಾರೆ.

ಮೀರಾ ಭೈಂದಾರ್‌ನ ಉತ್ತರ ಗ್ರಾಮದಲ್ಲಿನ ಜನರನ್ನು ಮುಂಜಾಗ್ರತೆ ಕ್ರಮವಾಗಿ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ) ತಂಡಗಳು ಸ್ಥಳಾಂತರಿಸಿವೆ.

ಮುಂದಿನ 12 ಗಂಟೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 100 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ನಿಸರ್ಗ “ತೀವ್ರ ಚಂಡಮಾರುತ” ವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.


ಇದನ್ನೂ ಓದಿ: ಇಂದು ಗೋವಾ,ಮಹಾರಾಷ್ಟ್ರಕ್ಕೆ ಅಪ್ಪಳಿಸಲಿದೆ ನಿಸರ್ಗ ಚಂಡಮಾರುತ! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...