ಮುಂದಿನ 30 ರಿಂದ 40 ವರ್ಷಗಳು ನಮ್ಮ ಪಕ್ಷದ ಯುಗವಾಗಿದ್ದು, ಈ ವೇಳೆ ಭಾರತವು ‘ವಿಶ್ವ ಗುರು’ ಆಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕ, ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಜಕೀಯ ನಿರ್ಣಯವನ್ನು ಪ್ರಸ್ತಾಪಿಸಿದ ಅಮಿತ್ ಶಾ, “ಕುಟುಂಬ ರಾಜಕಾರಣ, ಜಾತೀಯತೆ ಮತ್ತು ತುಷ್ಟೀಕರಣದ ರಾಜಕೀಯವು ಮಹಾ ಪಾಪಗಳಾಗಿದ್ದು, ಹಲವು ವರ್ಷಗಳಿಂದ ದೇಶ ಅನುಭವಿಸುತ್ತಿರುವ ನೋವುಗಳ ಹಿಂದಿನ ಕಾರಣ ಇದುವೆ ಆಗಿದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಮಿತ್ ಶಾ ಅವರ ಭಾಷಣದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಬಿಜೆಪಿಯ ಅಭಿವೃದ್ಧಿ ಮತ್ತು ಕಾರ್ಯನಿರ್ವಹಣೆಯ ರಾಜಕೀಯಕ್ಕೆ ಜನರ ಅನುಮೋದನೆಯನ್ನು ಒತ್ತಿಹೇಳಿದ ಅಮಿತ್ ಶಾ ಅವರು, ಬಿಜೆಪಿಯ ಸರಣಿಯ ಗೆಲುವನ್ನು ಉಲ್ಲೇಖಿಸಿದ್ದಾರೆ ಮತ್ತು ಕುಟುಂಬ ಆಡಳಿತ, ಜಾತಿವಾದ ಮತ್ತು ತುಷ್ಟೀಕರಣದ ರಾಜಕೀಯವನ್ನು ಕೊನೆಗೊಳಿಸುವಂತೆ ಕರೆ ನೀಡಿದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಂದು ಅಮಿತ್ ಶಾ ಕೊಟ್ಟ ಮಾತು ಉಳಿಸಿಕೊಂಡಿದ್ದರೆ, ಇಂದು ಮಹಾರಾಷ್ಟ್ರ ಬಿಜೆಪಿ ಸಿಎಂ ಹೊಂದಿರುತ್ತಿತ್ತು: ಉದ್ಧವ್ ಠಾಕ್ರೆ
ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸಲಿದೆ. ಇತರ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಮತ್ತು ಒಡಿಶಾದಲ್ಲಿ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದಾಗಿನಿಂದ ಈ ಎಲ್ಲಾ ರಾಜ್ಯಗಳು ಪಕ್ಷಕ್ಕೆ ತೆಕ್ಕೆಗೆ ಹೋಗಿಲ್ಲ.
ಸಭೆಯ ಸಾಮೂಹಿಕ ಭರವಸೆ ಮತ್ತು ಸಂಶೋಧನೆಯ ಪ್ರಕಾರ ಬಿಜೆಪಿಯ ಮುಂದಿನ ಸುತ್ತಿನ ಬೆಳವಣಿಗೆಯು ದಕ್ಷಿಣ ಭಾರತದಿಂದ ಉಂಟಾಗಲಿದೆ ಎಂದು ಹಿಮಾಂತ ಶರ್ಮಾ ಹೇಳಿದ್ದಾರೆ.


