Homeಅಂಕಣಗಳುಜೈ ಸಿದ್ದೇಶ್ವರ ಸ್ವಾಮಿ

ಜೈ ಸಿದ್ದೇಶ್ವರ ಸ್ವಾಮಿ

- Advertisement -
- Advertisement -

ನಮ್ಮ ಸಿದ್ದೇಶ್ವರ ಸ್ವಾಮೀಜಿಗಳು ಸ್ವಾಮಿಗಳ ಹಿಂಡಿನಲ್ಲೇ ಎದ್ದು ಕಾಣುವಂತವರು ಎಲ್ಲ ಸ್ವಾಮಿಗಳು ಕೆಂಪು ಉಡುಪುಗಳಲ್ಲಿ ಕಾಣಿಸಿಕೊಂಡರೆ ಅವರು ಬಿಳಿ ಧಿರಿಸಿನಲ್ಲಿ ಹಂಸದಂತೆ ಕಾಣುತ್ತಾರೆ. ಮಾತು ಕೂಡ ಅಷ್ಟೆ. ಹಂಸಕ್ಷೀರ ನ್ಯಾಯದಂತೆ. ಉತ್ತರ ಕರ್ನಾಟಕದಲ್ಲಿ ಏರ್ಪಡುವ ಅವರ ಉಪನ್ಯಾಸ ಕೇಳಲು ಸಾವಿರಾರು ಜನ ಸೇರುತ್ತಾರೆ. ಅಲ್ಲಿ ಸಿದ್ದೇಶ್ವರರು ಆಡುವ ಮಾತು ಕೇಳಿದರೆ ಬಸವ ಯುಗವೇ ತೆರೆದುಕೊಳ್ಳುತ್ತದೆ. ಅಮರ ಜ್ಯೋತಿಯಾದ ಬಸವೇಶ್ವರರ ವಾಣಿ ಕೇಳಿದಂತಾಗುತ್ತದೆ. ಇಂತಹ ಸುಯೋಗವೊಂದು ಸುತ್ತೂರು ಮಠದ ಸುತ್ತಲ ಭಕ್ತಾದಿಗಳಿಗೆ ಲಭ್ಯವಾಯ್ತಂತಲ್ಲಾ. ಕರ್ನಾಟಕಕ್ಕೆ ಯೋಗಾಭ್ಯಾಸ ಮಾಡಲು ಬಂದ ಪ್ರಧಾನ ಮಂತ್ರಿಯ ಪ್ರಧಾನ ಭೇಟಿಗಳಲ್ಲಿ ಸುತ್ತೂರು ಮಠವು ಒಂದಾಗಿತ್ತು. ಅಲ್ಲಿನ ಶ್ರೀಗಳು ತಲೆಯೋಡಿಸಿ ಮೋದಿಯನ್ನು ಮರಳು ಮಾಡುವ ಭಾಷಣ ಮಾಡುವ ಶಕ್ತಿ ತಮಗಿಲ್ಲವೆಂದು ಸಿದ್ದೇಶ್ವರ ಸ್ವಾಮಿಗಳನ್ನ ಕರೆಸಿದರು. ಶ್ರೀ ಸಿದ್ದೇಶ್ವರರು ಸುತ್ತೂರು ಅಲ್ಲದೆ ಮೋದಿಯವರೂ ತಲೆದೂಗುವಂತೆ ಮಾತನಾಡುವಾಗ ಅರ್ಥವಾಗದ ಮೋದಿ ಸುತ್ತೂರು ಕಡೆ ವಾಲಿ ಮಾತಿನ ಅರ್ಥವನ್ನ ತಿಳಿದುಕೊಂಡು ಕೈ ಮುಗಿಯುತ್ತಿದ್ದುದು ಮನಮೋಹಕವಾಗಿತ್ತಂತಲ್ಲಾ. ಮುಖ್ಯವಾಗಿ ಸಿದ್ದೇಶ್ವರರು ಮೋದಿಯನ್ನ ಕುರಿತು ನಮ್ಮ ಪ್ರಧಾನಿಯವರು ಲೋಕದ ಹಿತ ಬಯಸುವಂತಹ ಲೋಕ ಚಿಂತಕರು, ಆದರೂ ಆ ಮುಖದಲ್ಲಿ ಚಿಂತೆ ಕಾಣುವುದಿಲ್ಲ. ಬದಲಿಗೆ ಸದಾ ಪ್ರಸನ್ನತೆಯೇ ಕಾಣುತ್ತದೆ ಎಂದಾಗ ಇಡೀ ಸಭೆ ಬೆರಗಾಗಿ ಸಿದ್ದೇಶ್ವರ ಸ್ವಾಮಿ ಸುಳ್ಳಿಗೆ ಸುಸ್ತು ಹೊಡೆಯಲಿಲ್ಲವಂತಲ್ಲಾ. ಅಂತೂ ಭಾರತದಲ್ಲಿ ಆಳುವವರಿಗೊಂದು ನ್ಯಾಯ ಸಂಹಿತೆ ಸಾಮಾನ್ಯರಿಗೊಂದು ನ್ಯಾಯ ಸಂಹಿತೆ ರೂಪುಗೊಳ್ಳುತ್ತಿದೆಯಂತಲ್ಲಾ, ಥೂತ್ತೇರಿ.

*****

ಈ ಹಿಂದಿನ ಸಿದ್ದೇಶ್ವರ ಸ್ವಾಮಿಯವರ ಮಾತುಗಳನ್ನು ಗ್ರಹಿಸಿದ್ದಾದರೆ, ಅವು ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗಮೆಚ್ಚಿ ಅಹುದಹುದೆನ್ನಬೇಕು ಎನ್ನುವ ಬಸವಣ್ಣನವರ ಮಾನಿನಂತಿದ್ದುದ್ದರಿಂದ ಅವರೆದುರು ಕುಳಿತ ಸಾವಿರಾರು ಜನರು ಅಹುದಹುದೆನ್ನುತ್ತ ತಲೆ ಹಾಕುತ್ತಿದ್ದರು. ಆದರೆ ಸುತ್ತೂರಿನಲ್ಲಿ ಅಹುದಹುದೆನ್ನುವುದರ ಬದಲಿಗೆ ಮೋದಿಗೆ ಜೈಕಾರದಂತಹ ಗದ್ದಲ ಕೇಳಿಬಂತು. ದಶಕಗಳ ಕಾಲ ಮುತ್ತಿನಹಾರದಂತೆ ಮಾತಾನಾಡಿದ್ದ ಸಿದ್ದೇಶ್ವರರು ಮೋದಿ ಹೊಗಳಿಕೆಯ ಸುಳ್ಳು ಮಾತುಗಳಿಂದ ತಮ್ಮ ಖ್ಯಾತಿಗೇ ಕಳಂಕ ತಂದುಕೊಂಡರಂತಲ್ಲಾ. ಸಿದ್ದೇಶ್ವರರ ಸುಳ್ಳು ಬಿತ್ತರವಾಗುವಾಗ ಅಗ್ನಿಪಥ ಜಾರಿಯಿಂದ ಆಕ್ರೋಶಗೊಂಡ ಜನ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಇನ್ನೂರು ಕೋಟಿ ರೂಪಾಯಿಗಳ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿದ್ದರು. ಇದು ಲೋಕಹಿತ ಬಯಸುವವರನ್ನ ಕಂಗಾಲು ಮಾಡಬೇಕಿತ್ತು. ಸಿದ್ದೇಶ್ವರರು ವಾರೊಪ್ಪತ್ತು ಮೌನವ್ರತ ಮಾಡಬೇಕಿತ್ತು. ಆದರೆ ದೇಶದ ಗಲಭೆಯ ಬಗ್ಗೆ ಕಿಂಚಿತ್ ಅರಿವಿಲ್ಲದಂತೆ ಒಬ್ಬರು ಹೊಗಳುತ್ತಾರೆ, ಕೇಳಿಸಿಕೊಂಡವರು ಕೈ ಮುಗಿಯುತ್ತಾರೆ. ಈ ಭಾಷಣಕ್ಕೆ ಕಳಶವಿಟ್ಟಂತೆ ಗುಜರಾತ್ ನರಮೇಧದ ವಿಷಯದಲ್ಲಿ ಮೋದಿಯವರಿಗೆ ಕ್ಲೀನ್‌ಚಿಟ್ ನೀಡಿದ ಕಾರಣ ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುವುದಾದರೆ ಸಿದ್ದೇಶ್ವರ ಸ್ವಾಮಿಗಳ ಮಾತುಗಳನ್ನು ಗೌರವಿಸಬೇಕಂತಲ್ಲಾ ಥೂತ್ತೇರಿ.

*****

ಮೋದಿಯವರು ಜಗದ್ಗುರುಗಳ ಸುಳ್ಳು ಆಶೀರ್ವಾದವನ್ನು ಹೊತ್ತು ದೆಹಲಿಯ ಕಡೆ ಹೊರಟನಂತರ ಇತ್ತ ಕರ್ನಾಟಕದ ಬಳ್ಳಾರಿಯ ಧೂಳಿನಿಂದ ಸುಂಟರಗಾಳಿಯೊಂದು ಎದ್ದಿದೆಯಲ್ಲಾ. ಎಡೂರಪ್ಪನ ಸರಕಾರ ಎದ್ದುನಿಲ್ಲಲು ಸಹಾಯ ಮಾಡಿದ ಬಳ್ಳಾರಿ ಗಣಿ’ಧಣಿ’ಗಳ ಪೈಕಿ ಪ್ರಧಾನ ವ್ಯಕ್ತಿಯಾದ ಗಾಲಿ ಜನಾರ್ದನ ರೆಡ್ಡಿ ಹಠಾತ್ತನೆ ನಾನು ಕರ್ನಾಟಕದ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೆದರಿಸಿದ್ದಾರಲ್ಲಾ. ರೆಡ್ಡಿ ಇಂತಹ ಮಾತುಗಳನ್ನಾಡಬೇಕಾದರೆ ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಕತೆ ಏನಾಗಿರಬೇಕು ಎಂಬ ಯೋಚನೆ ರೆಡ್ಡಿ ಮಾತನ್ನು ಗ್ರಹಿಸಿದವರಿಗೆ ಅಮರಿಕೊಂಡಿದೆಯಲ್ಲಾ. ರೆಡ್ಡಿ ಸಾರ್ವಜನಿಕರ ಎದುರೇ ತನ್ನ ಮುಖ್ಯಮಂತ್ರಿ ಪದವಿ ಘೋಷಿಸಬೇಕಾದರೆ ಮೂರು ಘಟನೆಗಳು ಆತನಿಗೆ ಪ್ರೇರಣೆ ನೀಡಿರಬೇಕು. ಒಂದು ಜೆಡಿಎಸ್ ಶಾಸಕರನ್ನು ಜಮೀರ್ ಅಹಮದ್ ಬಸ್ಸಿನಲ್ಲಿ ರೆಸಾರ್ಟಿಗೆ ಕರೆದುಕೊಂಡು ಹೋಗಿ ಮತ್ತೆ ತಂದು ವಿಧಾನಸೌಧದ ಎದುರು ಸುರಿದು ಧರ್ಮಸಿಂಗ್ ಸರಕಾರ ಕೆಡವಿ ಕುಮಾರಣ್ಣ ಅನಾಯಾಸವಾಗಿ ಮುಖ್ಯಮಂತ್ರಿಯಾದದ್ದು. ಅದೇ ಕುಮಾರಣ್ಣನ ಕೃತ್ಯವನ್ನು ಅವರಿಗೇ ಹಿಂತಿರುಗಿಸಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನ ಅಪಹರಿಸಿ ಬಾಂಬೆ ಗ್ರಾಂಟ್‌ರೋಡಿನಲ್ಲಿ ಇರಿಸಿದ್ದು, ನಂತರ ತಂದು ಎಡೂರಪ್ಪ ಮುಖ್ಯಮಂತ್ರಿಯಾದದ್ದು. ಇದೀಗ ಛತ್ರಪತಿ ಶಿವಾಜಿ ಕೋಟೆಯಿಂದ ಶಿವಸೈನಿಕ ಶಾಸಕರನ್ನು ಅಪಹರಿಸಿ, ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಲು ತಯಾರಿ ನಡೆಸಿರುವುದು. ಈ ಎಲ್ಲಾ ಬೆಳವಣಿಗೆಯ ಹಿಂದೆ ಝಣಝಣ ಕಾಂಚಣದ ಸದ್ದು ಕೇಳಿತಾಗಿ ರೆಡ್ಡಿ ರೋಮಾಂಚನಗೊಂಡು ಮುಂದಿನ ಮುಖ್ಯಮಂತ್ರಿ ನಾನೇ ಎಂದುಬಿಟ್ಟಿದ್ದಾರಂತಲ್ಲಾ, ಥೂತ್ತೇರಿ.

*****

ಇತ್ತ ಕರ್ನಾಟಕದ ಶಿಕ್ಷಣ ಇಲಾಖೆಯ ಸುದ್ದಿ ಅಧ್ವಾನವೆದ್ದು ಚಡ್ಡಿಗಳು ಹಠಕ್ಕೆ ಬಿದ್ದಿವೆಯಂತಲ್ಲಾ. ಪಠ್ಯಪುಸ್ತಕ ತಿರುಚಿದ ಘಟನೆಯ ಪ್ರಯುಕ್ತ ಶಿಕ್ಷಣ ಪಡೆದ ನಾಡಿನ ಮನಸ್ಸುಗಳು ಫ್ರೀಡಂಪಾರ್ಕಿನಲ್ಲಿ ದೇವೇಗೌಡರ ನೇತೃತ್ವದಲ್ಲಿ ಸಭೆ ಸೇರಿ ಪಠ್ಯ ಸರಿ ಮಾಡಲು ಹತ್ತು ದಿನ ಗಡುವು ಕೊಟ್ಟಿದ್ದರೆ, ಈ ಹತ್ತು ದಿನದಲ್ಲಿ ಏನು ಉತ್ತರ ಕೊಡಬೇಕೆಂದು ಚಿಂತಿಸಿದ ಚೆಡ್ಡಿಗಳು, ದೇವೇಗೌಡರು ಗುಟುರು ಹಾಕಿರುವುದರಿಂದ ಅವರೆದುರು ಅಶೋಕನ್ನು ನಿಲ್ಲಿಸುವುದು ಸೂಕ್ತ ಎಂದು ತೀರ್ಮಾನಿಸಿ, ಕಡಲೆಕಾಯಿ ಹೊಲಕ್ಕೆ ಬೆದರುಗೊಂಬೆ ಮಾಡಿ ನಿಲ್ಲಿಸಿದಂತೆ ಪಠ್ಯಕ್ಕೆ ಕಾಯುತ್ತಿರುವ ಮಕ್ಕಳ ಎದುರು ನಿಲ್ಲಿಸಿವೆಯಲ್ಲಾ. ಈ ಅಶೋಕರಿಗಾಗಲಿ ಅವರ ಜೊತೆಯಲ್ಲಿ ನಿಂತ ಇನ್ನಿತರ ಮಂತ್ರಿವರ್ಯರಿಗಾಗಲಿ ಪಠ್ಯದ ನಿಜವಾದ ಅರ್ಥವೇ ಗೊತ್ತಿಲ್ಲ. ಸ್ವತಃ ನಾಗೇಶರಿಗೆ ಬಹಳದಿನ ಗೊತ್ತಿರಲಿಲ್ಲ. ಇಂತಿರುವಾಗ ಹಿಂದಿನ ಪಠ್ಯದಲ್ಲಿ ಕಮ್ಯುನಿಸಂ ಸಿದ್ಧಾಂತವಿತ್ತು ಎಂದುಬಿಟ್ಟಿದ್ದಾರಲ್ಲಾ. ಈ ಬಗ್ಗೆ ಅಶೋಕರನ್ನ ಹಿಡಿದುಕೊಂಡು ಕಮ್ಯುನಿಸ್ಟ್ ಸಿದ್ಧಾಂತ ಅಂದರೇನು, ಅದರ ಉದ್ದೇಶಗಳೇನು ಅದು ನಮ್ಮ ಸಂಸ್ಕೃತಿಯೊಳಕ್ಕೆ ನುಸುಳಿರುವ ಪರಿಯೇನು ವಿವರಿಸೆಂದು ಕೇಳಿದ್ದರೆ ಮತ್ತೆ ಹತ್ತು ದಿನದ ಗಡವು ಕೇಳುತ್ತಿದ್ದರಂತಲ್ಲಾ. ಅದೆಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಮಾಜಿ ಪ್ರಧಾನಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೂ ಕೇರ್ ಮಾಡದೆ ಸುಳ್ಳುಗಳನ್ನ ಹೊಡೆಯುತ್ತ ಕುಳಿತಿರುವ ಚೆಡ್ಡಿಗಳು ತಮ್ಮ ಸಂಚು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಭಾವಿಸುವ ಈ ಹೊತ್ತಿನಲ್ಲಿ ನಾಡನ್ನೇ ತುಂಬಿ ಮೆರೆದಂತಹ ಗೋಕಾಕ್ ಚಳವಳಿಯ ಅಗತ್ಯ ಅನಿವಾರ್ಯವಾಗಿದೆಯಂತಲ್ಲಾ, ಥೂತ್ತೇರಿ.

*****

ಕರ್ನಾಟಕದ ಇತರೆ ಸುದ್ದಿಗಳು ಶಾನೆ ತಮಾಷೆಯಿಂದಲೂ ಜೊತೆಗೆ ವಿಷಾದದಿಂದಲೂ ಕೂಡಿದೆಯಂತಲ್ಲಾ. ನಾಯಿ ಸಿನಿಮಾ ನೋಡಿದ ಮುಖ್ಯಮಂತ್ರಿ ಥಿಯೇಟರಿಂದ ಈಚೆ ಬಂದರೂ ಅಳು ನಿಲ್ಲಿಸದೆ ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಪ್ರಕಟವಾದ ಕೂಡಲೇ ನಾಡಿನ ನಾಯಿ ಮಾಲೀಕರು ತಮ್ಮತಮ್ಮ ನಾಯಿಗಳನ್ನ ಹಿಡಿದು ಶೃಂಗಾರ ಮಾಡಿ ಬತಡೇ ಮಾಡುವುದೇನು, ಹೆಣ್ಣು ನಾಯಿಗೆ ಕುಂಕುಮ ಹಚ್ಚಿ ಬಳೆ ತೊಡಿಸಿ ಸೀರೆ ಉಡಿಸಿ ಸೀಮಂತ ಮಾಡುವುದೇನು. ಈ ಕೃತ್ಯಗಳ ಬಗ್ಗೆ ತಿಳಿದ ಬೀದಿನಾಯಿಗಳು ಶಾನೆ ದುಗುಡದಿಂದ ಅವರು ಸಾಕಿದ ನಾಯಿಗಳಿಗೆ ಅವರು ಏನಾದರೂ ಮಾಡಿಕೊಳ್ಳಲಿ ನಮಗೇನು, ಆದರೆ ನಮಗೂ ಒಂದು ತುತ್ತು ಎಸೆಯಲು
ಇವರಿಗೇನು ಬಂದಿದೆ, ಸಾಕು ನಾಯಿ ಕಾರಣದಿಂದ ನಮ್ಮನ್ನ ತುಂಬ ತಿರಸ್ಕಾರದಿಂದ ಕಾಣುತ್ತಾರೆ, ಕಾಂಪೌಂಡ್ ಬಳಿಗೆ ಹೋದರೆ ಸಾಕು ಗದರುತ್ತಾರೆ, ಇವರ ಮಕ್ಕಳು ಕಲ್ಲು ತೆಗೆದುಕೊಂಡು ಬೀರುತ್ತವೆ, ಇತ್ತ ಮುನಿಸಿಪಾಲಿಟಿಯವರ ಕಾಟ ಬೇರೆ ಎಂದುಕೊಂಡವಂತಲ್ಲಾ. ಹಳ್ಳಿಯ ಕಡೆಗಳಲ್ಲಿ ಊಟ ಮಾಡುವಾಗ ನಮ್ಮವರ ಕಡೆ ಒಂದು ತುತ್ತು ಎಸೆಯುತ್ತಿದ್ದರು. ಈಗ ಆ ಸಂಸ್ಕೃತಿಯೂ ನಿಂತುಹೋಗಿ ನಮ್ಮವರೆಲ್ಲಾ ಊರು ಬಿಟ್ಟು ಗುಡ್ಡ ಗವಿ ಸೇರಿಕೊಂಡು ಆಡು ಕುರಿಗಳನ್ನು ಬೇಟೆಯಾಡುತ್ತಿದ್ದಾರಂತೆ. ಇದು ನಮ್ಮ ಕುಲಕ್ಕೆ ಬಂದ ಕಳಂಕ. ಇದಕ್ಕೆ ಕಾರಣ ಬದಲಾದ ನಾಯಿ ಮನುಷ್ಯನ ಸಂಬಂಧ. ಇಂಥ ಸನ್ನಿವೇಶದಲ್ಲಿ ನಾಯಿ ಸಿನಿಮಾ ನೋಡಿ ಅತ್ತಿರುವ ನಮ್ಮ ಮುಖ್ಯಮಂತ್ರಿಗಳ ಅಳುವಿಗೆ ಕಾರಣವೇನೆಂಬ ವಾಸನೆಯನ್ನ ನಾವೇ ಕಂಡುಹಿಡಿಯಬೇಕು, ಇಲ್ಲವಾದರೆ ಈ ತಲೆಕೆಟ್ಟ ಜನಗಳಿಂದ ನಾಯಿಗಳ ಹುಟ್ಟು ಹಬ್ಬ, ಮದುವೆ, ಸೀಮಂತ, ನಾಮಕರಣ ಇನ್ನು ಹೆಚ್ಚಾಗಿ ನಮ್ಮ ಬೀದಿ ಬದುಕು ಇನ್ನ ದಾರುಣವಾಗಲಿದೆ ಎಂದಿಲ್ಲವಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಗುರುಗಳ ಬಗ್ಗೆ ಮಾತಾಡೋ ಯೋಗ್ಯತೆ ನಿಮ್ಮಂತ ಹಂದಿಗಳಿಗಿಲ್ಲಾ ,ಗುರುಗಳ ಪಾದದ ಧೂಳಿಗೂ ಸಮ ಇಲ್ಲಾ ನಿಮ್ಮಗಳ ಪರಿವಾರ

  2. ದಯವಿಟ್ಟು 100ರಲ್ಲಿ 1ತಪ್ಪನ್ನು ತಿರುಚಿ, ಅವರ ಜೀವನದುದ್ದಕ್ಕೂ ಗಳಿಸಿದ ಹೆಸರಿಗೆ ಕಳಂಕ ತರಬೇಡಿ. ಇಲ್ಲೀವರೆಗೂ ಅವರ ಆದ್ಯಾತ್ಮಿಕ ಮಾತಿನ ಮೋಡಿಯಿಂದ ಸಾಕಷ್ಟುಉತ್ತರ ಕರ್ನಾಟಕದ ಜನ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಾಣಿಕೊಂಡ ಉತ್ತಮ ಜೀವನ ಮಾಡುತ್ತಿದ್ದಾರೆ.ಅವರು ತಿಳಿಯದೆ ಮಾತನಾಡಿರಬಹುದು 🙏🙏

  3. ಕಾಂಗ್ರಸ್ಸಿನ ಉಡಾಫೆ ಆಡಳಿತ,ಭ್ರಷ್ಟತೆ ಗಳಿಗೆ ಬೇಸರ ಪಟ್ಟು ಭಾರತದ ಜನ 2014 ರಲ್ಲಿ ಬಿಜೆಪಿ ಯ ಮಾತುಗಾರ ಮೋದಿಗೆಮತನೀಡಿದರು. ಆಗ ಜನ ಗುಜರಾತಿನ ಅಮಾನವೀಯಗೋಧ್ರಾ ದುರಂತ ಮರೆತಿದ್ದರು,ಮೋದಿ ಒಬ್ಬರೇ ಬರಲಿಲ್ಲ,ಜೊತೆಗೆ ಕಟುಗ ಮನಸ್ಸುಳ್ಳ ಅಮಿತ್ ಶಾ ಎಂಭವ್ಯಕ್ತಿಯನ್ನು ಜೋತೆಗೆ ತಂದು,ತಾವು ವಿಶ್ರಮಿತ ಸ್ಥಿತಿಯಲ್ಲಿ ಇರುವದಕ್ಕೆ ಪ್ರಾರಂಭಿಸಿದರು. ಆದರೆ ದುರಂತ ಆರ್ ಎಸ್ ಏಸ್ ಈ ಅವಕಾಶ ಬಳಸಿಕೊಂಡು ಜನರವಿರುದ್ಧ ಇಸ್ತುಕ್ರೂರವಾಗಬಾರದಿತ್ತು,ಎಂ7ಮಾಡುವದು, ಅದು ಅವರ ಮೂಲಗುಣ. ಈ ಕ್ರೌರ್ಯದವಿರುದ್ಧ ಜನ ಬೇಸತ್ತಿದ್ದಾರೆ ಆದರೆ ಅವರಿಗೆ ಪರ್ಯಾಯ ಇಲ್ಲ. ಇಂತಹ ಸ್ಥಿತಿಯಲ್ಲಿ ಈ ಮೋದಿಯನ್ನ ಒಬ್ಬಸ್ವಾಮಿಜಿ ಈ ರೀತಿ ಹೊಗಳಿದ್ದು,ಪ್ರಜ್ಞಾವಂತಿಕೆಯಿಂದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುವವರಿಗೆ, ಆ ಸ್ವಾಮಿಜಿಯವರ ಮನೋಸ್ಥಿತಿಯಬಗ್ಗೆ ಮರುಕ ಹುಟ್ಟಿಸುತ್ತದೆ,ಅವರು ಸತ್ಯದ ನಿಲುವನ್ನು ತಿಳಿಯದೆ ಆ ಒಲೈಕೆಯ ಮಾತುಆಡಿದ್ದು ಅವರಬಗ್ಗೆ ಇದ್ದ ಗೌರವ ಕಡಿಮೆಯಾಗುತ್ರದೆ ಎನ್ನವದು ಸತ್ಯ.

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...