ಪಾಕಿಸ್ತಾನದ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ)ನ ಏಜೆಂಟ್ ಆಗಿ ಕೆಲಸ ಮಾಡುತ್ತಿರುವುದರ ಬಗ್ಗೆ ಸುಳಿವು ಸಿಕ್ಕ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುಜರಾತ್‌ನ ವ್ಯಕ್ತಿಯೊಬ್ಬನನ್ನು ಬಂಧಿಸಿದೆ.
ರಜಕ್ ಭಾಯ್ ಕುಂಭಾರ್ ಎಂಬ ವ್ಯಕ್ತಿಯನ್ನು ಪಶ್ಚಿಮ ಕಚ್ ಪ್ರದೇಶದಿಂದ ಬಂಧಿಸಲಾಗಿದ್ದು, ಉತ್ತರಪ್ರದೇಶದಲ್ಲಿ ವರದಿಯಾದ ರಕ್ಷಣಾ/ಐಎಸ್‌ಐ ಪ್ರಕರಣಕ್ಕೂ ಈತನಿಗೂ ಸಂಬಂಧವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡೋಲಿ ಜಿಲ್ಲೆಯ ಮೊಘಲ್ಸ್ ರಾಯ್‌ನ ಮೊಹಮ್ಮದ್ ರಶೀದ್ ಎಂಬ ವ್ಯಕ್ತಿಯ ಬಂಧನಕ್ಕೆ ಸಂಬಂಧಿಸಿದಂತೆ ಲಖನೌದ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ಜನವರಿ 19 ರಂದು ದಾಖಲಾದ ಎಫ್‌ಐಆರ್‌ಗೆ ಈ ಪ್ರಕರಣ ಸಂಬಂಧಿಸಿದೆ ಎಂದು ಎನ್ಐಎ ತಿಳಿಸಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ಎನ್‌ಐಎ ಮತ್ತೆ ಪ್ರಕರಣ ದಾಖಲಿಸಿತ್ತು. ತನಿಖೆಯಲ್ಲಿ ರಶೀದ್ ಪಾಕಿಸ್ತಾನದ ರಕ್ಷಣಾ/ಐಎಸ್ಐ ಹ್ಯಾಂಡ್ಲರ್ ಗಳೊಂದಿಗೆ ಸಂಪರ್ಕದಲ್ಲಿದ್ದ ಮತ್ತು ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಾಣೆಯಾದ ಭಾರತೀಯ ಹೈಕಮಿಷನ್ ಅಧಿಕಾರಿಗಳು ಪಾಕಿಸ್ತಾನಿ ISI ವಶದಲ್ಲಿ: ಉನ್ನತ ಮೂಲಗಳು
ಭಾರತದಲ್ಲಿ ಕೆಲವು ಸೂಕ್ಷ್ಮ ಮತ್ತು ಕಾರ್ಯತಂತ್ರದ ಮಹತ್ವದ ಸ್ಥಾಪನೆಗಳ ಛಾಯಾಚಿತ್ರಗಳನ್ನು ರವಾನಿಸಿ, ಪಾಕಿಸ್ತಾನದ ಐಎಸ್ಐ ಹ್ಯಾಂಡ್ಲರ್ ಗಳೊಂದಿಗೆ ಸಶಸ್ತ್ರ ಪಡೆಗಳ ಚಲನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು ಎಂದು ಎನ್ಐಎ ತಿಳಿಸಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕುಂಭಾರ್ ಅವರ ಮನೆಯಲ್ಲಿ ಶೋಧ ನಡೆಸಿದ್ದು, ಅವರು 5,000 ರೂಗಳನ್ನು ಪೇಟಿಎಂ ಮೂಲಕ ರಿಜ್ವಾನ್ ಎನ್ನುವವನ ಖಾತೆಗೆ ವರ್ಗಾಯಿಸಿರುವುದು ಪತ್ತೆಯಾಗಿದ್ದು, ಇದನ್ನು ಮೊಹಮ್ಮದ್ ರಶೀದ್ ಹಸ್ತಾಂತರಿಸಲಾಯಿತು ಎಂದು ತಿಳಿದುಬಂದಿದೆ.
ಐಎಸ್‌ಐ ಏಜೆಂಟರ ನಿರ್ದೇಶನದ ಮೇರೆಗೆ ಈ ಮೊತ್ತವನ್ನು ಕುಂಭರ್ ರಶೀದ್‌ಗೆ ರವಾನಿಸಿದ್ದಾನೆ. ಕುಂಭಾರ್ ಮನೆಯ ಶೋಧದ ಸಮಯದಲ್ಲಿ, ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. – ಮೋದಿಯ ಹೊಸ ಮಂತ್ರ


