Homeಅಂತರಾಷ್ಟ್ರೀಯಕಾಣೆಯಾದ ಭಾರತೀಯ ಹೈಕಮಿಷನ್ ಅಧಿಕಾರಿಗಳು ಪಾಕಿಸ್ತಾನಿ ISI ವಶದಲ್ಲಿ: ಉನ್ನತ ಮೂಲಗಳು

ಕಾಣೆಯಾದ ಭಾರತೀಯ ಹೈಕಮಿಷನ್ ಅಧಿಕಾರಿಗಳು ಪಾಕಿಸ್ತಾನಿ ISI ವಶದಲ್ಲಿ: ಉನ್ನತ ಮೂಲಗಳು

- Advertisement -
- Advertisement -

ಇಂದು ಬೆಳಿಗ್ಗೆ 8 ರಿಂದ ಇಸ್ಲಾಮಾಬಾದ್‌ನಲ್ಲಿ ಕಾಣೆಯಾದ ಇಬ್ಬರು ಭಾರತೀಯ ಹೈಕಮಿಷನ್ ಅಧಿಕಾರಿಗಳು ಪಾಕಿಸ್ತಾನಿ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ವಶದಲ್ಲಿದ್ದಾರೆ ಎಂದು ಸರ್ಕಾರಿ ಉನ್ನತ ಮೂಲಗಳು ತಿಳಿಸಿವೆ.

ವಿದೇಶಾಂಗ ಸಚಿವಾಲಯವು ಪಾಕಿಸ್ತಾನದ ರಾಯಭಾರಿಯನ್ನು ಕರೆಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಇಬ್ಬರು ಅಧಿಕಾರಿಗಳು ಕಾಣೆಯಾದ ನಂತರ ಭಾರತವೂ ಪಾಕಿಸ್ತಾನ ಸರ್ಕಾರಕ್ಕೆ ದೂರು ನೀಡಿತ್ತು.

ನವದೆಹಲಿಯ ಪಾಕಿಸ್ತಾನಿ ಹೈಕಮಿಷನ್‌ನಲ್ಲಿ ಇಬ್ಬರು ಪಾಕಿಸ್ತಾನಿ ಅಧಿಕಾರಿಗಳು ಗೂಡಚರ್ಯೆ ಆರೋಪದಲ್ಲಿ ಗಡೀಪಾರು ಮಾಡಿದ ನಂತರ ಈ ಘಟನೆ ನಡೆದಿದೆ. ಇವರಿಬ್ಬರು ದೆಹಲಿಯ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಬೇಹುಗಾರಿಕೆ ಕೃತ್ಯದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ಹಲವಾರು ದಿನಗಳಿಂದ ಪಾಕಿಸ್ತಾನದ ಹಲವಾರು ಉನ್ನತ ರಾಜತಾಂತ್ರಿಕರನ್ನು ಇಸ್ಲಾಮಾಬಾದ್‌ನಲ್ಲಿ ಆಕ್ರಮಣಕಾರಿಯಾಗಿ ವೀಕ್ಷಿಸಲಾಗುತ್ತಿದ್ದು, ಈ ವಿಪರೀತ ಕಣ್ಗಾವಲು ವಿರುದ್ಧ ಭಾರತ ಪ್ರತಿಭಟನೆ ಮಾಡಿದೆ.

ಭಾರತದ ಚಾರ್ಜ್ ಡಿ ಅಫೈರ್ಸ್ ಗೌರವ್ ಅಹ್ಲುವಾಲಿಯಾ ಅವರ ವಾಹನವನ್ನು ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸದಸ್ಯ ಇತ್ತೀಚೆಗೆ ಬೆನ್ನಟ್ಟಿದ್ದರು. ಅಧಿಕಾರಿಯ ಕಾರಿನ ಹಿಂದೆ ಬೈಕರ್ ಒಬ್ಬರು ಕಾಣಿಸಿಕೊಂಡಿದ್ದರು.

ಮಾರ್ಚ್‌ನಲ್ಲಿ, ಪಾಕಿಸ್ತಾನದ ಭಾರತೀಯ ಹೈಕಮಿಷನ್ ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಿರುಕುಳ ನೀಡುವುದನ್ನು ವಿರೋಧಿಸಿ ಇಸ್ಲಾಮಾಬಾದ್‌ನ ವಿದೇಶಾಂಗ ಸಚಿವಾಲಯಕ್ಕೆ ತೀಕ್ಷ್ಣವಾದ ಪ್ರತಿಭಟನಾ ಟಿಪ್ಪಣಿ ಒಂದನ್ನು ಕಳುಹಿಸಿತ್ತು.

ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಡುತ್ತಿವೆ.


ಓದಿ: ಪಾಕಿಸ್ತಾನದಲ್ಲಿ ಇಬ್ಬರು ಭಾರತೀಯ ಹೈಕಮಿಷನ್ ಅಧಿಕಾರಿಗಳು ಕಾಣೆ


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...