Homeಅಂತರಾಷ್ಟ್ರೀಯಇಸ್ಲಾಮಾಬಾದ್‌ನಲ್ಲಿ ಇಬ್ಬರು ಭಾರತೀಯ ಹೈಕಮಿಷನ್ ಅಧಿಕಾರಿಗಳು ಕಾಣೆ

ಇಸ್ಲಾಮಾಬಾದ್‌ನಲ್ಲಿ ಇಬ್ಬರು ಭಾರತೀಯ ಹೈಕಮಿಷನ್ ಅಧಿಕಾರಿಗಳು ಕಾಣೆ

- Advertisement -
- Advertisement -

ಇಸ್ಲಾಮಾಬಾದ್‌ನಲ್ಲಿ ಇಬ್ಬರು ಭಾರತೀಯ ಹೈಕಮಿಷನ್ ಅಧಿಕಾರಿಗಳು ಕಾಣೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಸೋಮವಾರ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಬೆಳಿಗ್ಗೆ 8 ಗಂಟೆಯಿಂದ ಇವರಿಬ್ಬರು ನಾಪತ್ತೆಯಾಗಿದ್ದು, ಈ ಕುರಿತು ನವದೆಹಲಿಯು ಪಾಕಿಸ್ತಾನ ಸರ್ಕಾರಕ್ಕೆ ದೂರು ನೀಡಿದೆ.

ನವದೆಹಲಿಯ ಪಾಕಿಸ್ತಾನಿ ಹೈಕಮಿಷನ್‌ನಲ್ಲಿ ಇಬ್ಬರು ಪಾಕಿಸ್ತಾನಿ ಅಧಿಕಾರಿಗಳನ್ನು ಗೂಢಾಚರ್ಯೆ ಆರೋಪದ ಮೇಲೆ ಗಡೀಪಾರು ಮಾಡಿದ ನಂತರ ಈ ಘಟನೆ ನಡೆದಿದೆ. ಅವರಿಬ್ಬರು ದೆಹಲಿಯ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ಕಳೆದ ಹಲವಾರು ದಿನಗಳಿಂದ ಪಾಕಿಸ್ತಾನವು ಭಾರತದ ಹಲವಾರು ಉನ್ನತ ರಾಜತಾಂತ್ರಿಕರನ್ನು ಇಸ್ಲಾಮಾಬಾದ್‌ನಲ್ಲಿ ಆಕ್ರಮಣಕಾರಿಯಾಗಿ ನಡೆಸಿಕೊಳ್ಳಲಾಗುತ್ತಿದೆ ಮತ್ತು ವಿಪರೀತ ಕಣ್ಗಾವಲು ವಿರುದ್ಧ ಭಾರತ ಪ್ರತಿಭಟನೆ ನಡೆಸಿದೆ.

ಭಾರತದ ಚಾರ್ಜ್ ಡಿ ಅಫೈರ್ಸ್ ಗೌರವ್ ಅಹ್ಲುವಾಲಿಯಾ ಅವರ ವಾಹನವನ್ನು ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸದಸ್ಯ ಇತ್ತೀಚೆಗೆ ಬೆನ್ನಟ್ಟಿದ್ದರು. ಭಾರತದ ಅಧಿಕಾರಿಯ ಕಾರಿನ ಹಿಂದೆ ಬೈಕರ್ ಒಬ್ಬರು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ.

ಮಾರ್ಚ್‌ನಲ್ಲಿ ಪಾಕಿಸ್ತಾನದ ಭಾರತೀಯ ಹೈಕಮಿಷನ್ ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಿರುಕುಳ ನೀಡುವುದನ್ನು ವಿರೋಧಿಸಿ ಇಸ್ಲಾಮಾಬಾದ್‌ನ ವಿದೇಶಾಂಗ ಸಚಿವಾಲಯಕ್ಕೆ ಬಲವಾದ ಪ್ರತಿಭಟನಾ ವರದಿಯನ್ನು ಕಳುಹಿಸಿತು.

ವರದಿಯಲ್ಲಿ, ಭಾರತವು ಮಾರ್ಚ್‌ ತಿಂಗಳೊಂದರಲ್ಲೇ 13 ನಿದರ್ಶನಗಳನ್ನು ಉಲ್ಲೇಖಿಸಿ ಅಂತಹ ಘಟನೆಗಳನ್ನು ಕೊನೆಗಾಣಿಸಲು ಪಾಕಿಸ್ತಾನವನ್ನು ಕೇಳಿದೆ. “ಈ ಘಟನೆಗಳನ್ನು ತುರ್ತಾಗಿ ತನಿಖೆ ಮಾಡಿ ಮತ್ತು ಇದೇ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸಂಬಂಧಿತ ಏಜೆನ್ಸಿಗಳಿಗೆ ಸೂಚಿಸಿ” ಎಂದು ಎಎನ್ಐ ವರದಿ ಮಾಡಿದೆ.


ಇದನ್ನೂ ಓದಿ: ನಮಗೆ ಪಾಕಿಸ್ತಾನ, ಚೀನಾದ ಭೂಮಿ ಬೇಡ ಬದಲಿಗೆ ಶಾಂತಿ ಬೇಕು: ನಿತಿನ್ ಗಡ್ಕರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...