Homeಮುಖಪುಟಶ್ರಮಿಕ್ ರೈಲುಗಳಲ್ಲಿ ಕಳೆದ 48 ಗಂಟೆಗಳಲ್ಲಿ 9 ವಲಸೆ ಕಾರ್ಮಿಕರು ಮೃತ : ಕೇಂದ್ರದ...

ಶ್ರಮಿಕ್ ರೈಲುಗಳಲ್ಲಿ ಕಳೆದ 48 ಗಂಟೆಗಳಲ್ಲಿ 9 ವಲಸೆ ಕಾರ್ಮಿಕರು ಮೃತ : ಕೇಂದ್ರದ ವಿರುದ್ಧ ಆಕ್ರೋಶ

- Advertisement -
- Advertisement -

ಕಳೆದ 48 ಗಂಟೆಗಳಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಹೊರಟಿದ್ದ ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ ಒಂಬತ್ತು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ ಐದು ಜನರು ಉತ್ತರ ಪ್ರದೇಶದವರಾಗಿದ್ದು, ನಾಲ್ವರು ಬಿಹಾರದವರಾಗಿದ್ದಾರೆ. ಇವರಲ್ಲಿ ಹಲವರು ರೋಗಿಗಳಾಗಿದ್ದು ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮರಳುತ್ತಿದ್ದರು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾವುಗಳ ಬಗ್ಗೆ ರೈಲ್ವೆ ವಕ್ತಾರರು ಪ್ರತಿಕ್ರಿಯಿಸಿದ್ದು”ಶ್ರಮಿಕ್ ವಿಶೇಷ ರೈಲುಗಳಲ್ಲಿ ಕೆಲವು ಸಾವುಗಳು ವರದಿಯಾಗಿವೆ. ಈ ಹೆಚ್ಚಿನ ಸಂದರ್ಭಗಳಲ್ಲಿ, ಮರಣ ಹೊಂದಿದವರು ವೃದ್ಧರು, ಅನಾರೋಗ್ಯ ಪೀಡಿತರು ಮತ್ತು ದೀರ್ಘಕಾಲದ ಕಾಯಿಲೆ ಹೊಂದಿರುವವರು ವೈದ್ಯಕೀಯ ಚಿಕಿತ್ಸೆ ಪಡೆಯಲು ನಗರಗಳಿಗೆ ಹೋಗಿದ್ದರು ಎಂದು ತಿಳಿದುಬಂದಿದೆ… ” ಎಂದಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬುಧವಾರ, ಬಿಹಾರದ ಮುಜಾಫರ್ಪುರ್ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಮೃತಪಟ್ಟ ತಾಯಿಯನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿರುವ ಪುಟ್ಟ ಕಂದನ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಜನರು ಸರ್ಕಾರದ ವಿರುದ್ದ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಹಾರದ ಮುಜಾಫರ್ ಪುರದ ರೈಲ್ವೆ ನಿಲ್ದಾಣದಲ್ಲಿ ಈ ಮಗು ತನ್ನ ತಾಯಿಯೊಂದಿಗೆ ಆಟವಾಡುತ್ತಿದೆ. ಆದರೆ ತನ್ನ ತಾಯಿ ಸಾವನಪ್ಪಿದ್ದಾಳೆ ಎಂಬ ಅರಿವು ಅದಕ್ಕಿಲ್ಲ…ಆಕೆ ನಾಲ್ಕು ದಿನಗಳಿಂದ ಹಸಿವು, ಬಾಯಾರಿಕೆ ತಾಳಲಾರದೇ ಮೃತಪಟ್ಟಿದ್ದಾಳೆ. ಆ ಮಕ್ಕಳ ಮುಂದಿನ ಕಥೆಯೇನು?ಈ ಪರಿಸ್ಥಿತಿ ಯಾರಿಗೂ ಬರಬಾರದು..ವಿಡಿಯೋ: ಪತ್ರಕರ್ತ ಕವೀಶ್ ಟ್ವಿಟ್ಟರ್ ನಿಂದ…

Posted by Naanu Gauri on Wednesday, May 27, 2020

ಮೃತ ಮಹಿಳೆಯನ್ನು ಕತಿಹಾರ್ ನಿವಾಸಿ ಅರ್ವೀನಾ ಖಟೂನ್ (26) ಎಂದು ಗುರುತಿಸಲಾಗಿದ್ದು, ಮೇ 23 ರಂದು ಅಹ್ಮದಾಬಾದ್‌ನಿಂದ ತನ್ನ ಇಬ್ಬರು ಮಕ್ಕಳೊಂದಿಗೆ ರೈಲು ಹತ್ತಿದ್ದರು. ರೈಲಿನಲ್ಲಿ ಆಹಾರ ಹಾಗೂ ನೀರಿನ ಕೊರತೆ ಇತ್ತು ಎನ್ನಲಾಗಿದೆ.

ಸೂರತ್-ಪೂರ್ಣಿಯಾ ರೈಲಿನಲ್ಲಿ ಮಲಗಿದ್ದ ಬಿಹಾರದ ಕಟಿಹಾರ್ ಎಂಬಲ್ಲಿನ ಉರೇಶ್ ಖಟೂನ್ ಎಂಬ ಮಹಿಳೆ ನಿದ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬಿಹಾರದ ದಾನಾಪುರ್ ಎಂಬಲ್ಲಿ  70 ವರ್ಷದ ಬಸಿಷ್ಠ್ ಮಹತೋ ಎಂಬವರ ಮೃತದೇಹ ಮುಂಬೈ-ದರ್ಭಾಂಗ ಶ್ರಮಿಕ್ ರೈಲಿನಲ್ಲಿ ಪತ್ತೆಯಾಗಿತ್ತು. ಅವರು ಹೃದ್ರೋಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಿಂದ ಬಂದ ರೈಲಿನಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದು, ವಾರಣಾಸಿ ರೈಲ್ವೆ ಪೊಲೀಸ್ ಪ್ರಕಾರ, ಮೃತಪಟ್ಟವರನ್ನು ಜಾನ್‌ಪುರದ ದಸರತ್ ಪ್ರಜಾಪತಿ (30) ಮತ್ತು ಅಜಮ್‌ರ್‌ನ ರಾಮರತನ್ ರಘುನಾಥ್ (55) ಎಂದು ಗುರುತಿಸಲಾಗಿದೆ.

ಇವರಲ್ಲಿ ಪ್ರಜಾಪತಿ ಅಂಗವಿಕಲರಾಗಿದ್ದು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ರಘುನಾಥ್ ಅನೇಕ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ರೈಲ್ವೇ ಪೊಲೀಸರು ಹೇಳಿದ್ದಾರೆ.

ಸೂರತ್‌ನಿಂದ ಬಲ್ಲಿಯಾ ತಲುಪಿದ ರೈಲಿನಲ್ಲಿ ಬಿಹಾರದ ಸರನ್ ಮೂಲದ ಭೂಷಣ್ ಸಿಂಗ್ (58) ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ನಾಥ್ ತಿಳಿಸಿದ್ದಾರೆ.

ಝಾನ್ಸಿ-ಗೋರಖ್‌ಪುರ ರೈಲಿನಲ್ಲಿ ಕಾನ್ಪುರಕ್ಕೆ ತಲುಪಿದಾಗ ಇಬ್ಬರು ಮೃತಪಟ್ಟಿದ್ದು, ಮೃತ ವ್ಯಕ್ತಿಯಲ್ಲಿ ಒಬ್ಬರನ್ನು ರಾಮ್ ಅವಧ್ ಚೌಹಾನ್ (45) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ; ಎರಡನೇ ವ್ಯಕ್ತಿಯ ಗುರುತನ್ನು ಇನ್ನೂ ಪತೆಯಾಗಿಲ್ಲ ಎಂದು ಹೇಳಿದ್ದಾರೆ.

ಬಿಹಾರ ಮತ್ತು ಉತ್ತರ ಪ್ರದೇಶದ ಎರಡೂ ರೈಲುಗಳ ಮಾರ್ಗದಲ್ಲಿ ಊಟದ ಸೇವೆಯನ್ನು ಹೊಂದಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಮತ್ತೊಂದು ಪ್ರಕರಣದಲ್ಲಿ, ದೆಹಲಿಯಿಂದ ಮುಜಾಫರ್ಪುರದ 39 ಗಂಟೆಗಳ ಪ್ರಯಾಣದಲ್ಲಿ ನಾಲ್ಕು ವರ್ಷದ ಬಾಲಕ ಮೊಹಮ್ಮದ್ ಇರ್ಷಾದ್ ಬಿಸಿಲು ಹಾಗೂ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಸರ್ಕಾರಗಳು ಇವರೆಲ್ಲಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೆಂದು ಹೇಳಿ ಜಾರಿಕೊಂಡಿದೆ. ಆದರೆ ಈ ರೈಲುಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿರಲಿಲ್ಲ. ಹಸಿವು ಮತ್ತು ಬಾಯಾರಿಕೆಯಿಂದಲೇ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆಂದು ಸಾರ್ವಜನಿಕರು ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಓದಿ:  60 ದಿನಗಳಿಂದ ರಸ್ತೆಯಲ್ಲಿದ್ದು ವಲಸೆ ಕಾರ್ಮಿಕರ ಮನಕಲಕುವ ಕತೆ ಹೇಳುತ್ತಿರುವ ದಿಟ್ಟ ಪತ್ರಕರ್ತೆ ‘ಬರ್ಖಾ ದತ್’


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...