Homeಅಂಕಣಗಳುಡಾರ್ಕ್ ವೆಬ್ ಎಂಬ ಮಬ್ಬಲೆಯೊಳಗೆ ಬೀಳದಿರಿ ಜೋಕೆ..

ಡಾರ್ಕ್ ವೆಬ್ ಎಂಬ ಮಬ್ಬಲೆಯೊಳಗೆ ಬೀಳದಿರಿ ಜೋಕೆ..

- Advertisement -
- Advertisement -

ನಮ್ಮ ಬಳ್ಳಾರಿ ಜಿಲ್ಲೆಯ ಮೈಲಾರದಾಗ ದೇವರ ಭಕ್ತ ಗೊರಪ್ಪ ಪ್ರತಿ ವರ್ಷ ಜಾತ್ರಿಯೊಳಗ ಕರಣಿಕ ಅಂದರ ಭವಿಷ್ಯ ಹೇಳತಾನ. ಒಂದು ಹತ್ತು ವರ್ಷ ಹಿಂದ ಆತ ಹೇಳಿದ್ದು ಏನಪಾ ಅಂದರ `ಸಂಪೆಲ್ಲಾ ಮಬ್ಬಲೆ ಕಳೀತಲೇ ಪರಾಕ’ ಅಂತ. ಹಂಗಂದರ `ಎಷ್ಟು ಸಮೃದ್ಧಿ ಬಂದರ ಏನು, ಅಜ್ಞಾನ ಇದ್ದರ ಎಲ್ಲಾ ವ್ಯರ್ಥ,’ ಅಂತ.

ಆದರ ಈಗ ನಮಗ ಬೇಕಾಗಿರೋದು ಆ ಮಬ್ಬಲೆ ಅಲ್ಲ. ಇದು ಬ್ಯಾರೆ ಮಬ್ಬಲೆ. ನಮ್ಮ ಈ ವಾರದ ಪದ ಯಾವುದು ಅಂದರ ಡಾರ್ಕ ವೆಬ್ಬು. ಅಂದರ ಮಬ್ಬು ಬಲೆ- `ಮಬ್ಬಲೆ’

ಮೊನ್ನೆ ಒಂದು ಸುದ್ದಿ ಏನು ಬಂತಪಾ ಅಂದರ ನಮ್ಮ ದೇಶದ ಮೂರು ಕೋಟಿ ನಿರುದ್ಯೋಗಿ ಯುವ ಜನರ ವೈಯಕ್ತಿಕ ಮಾಹಿತಿ ಎಲ್ಲಾ ಡಾರ್ಕ ವೆಬ್ಬಿನ್ಯಾಗ/ ಮಬ್ಬಲೆಯೊಳಗ ಯಾರೋ ಅಪರಿಚಿತರು ಹಾಕಿ ಬಿಟ್ಟಾರಂತ. ಇದು ಬರೇ ಭಾರತದ ಪತ್ರಿಕೆಗಳಲ್ಲಿ ಅಲ್ಲ, ನ್ಯೂಯಾರ್ಕ ಟೈಮ್ಸ್ ಮುಂತಾದ ವಿದೇಶದ ಪತ್ರಿಕೆಗಳಲ್ಲಿ ಸಹಿತಿ ಬಂದು ಬಿಟ್ಟೇತಿ.

ಹಿಂಗಂದರೇನು? ಇದರಿಂದ ನಮಗ ಯಾವ ರೀತಿ ತೊಂದರೆ ಆಗತೇತಿ?

ಮೊದಲಿಗೆ- ಮಬ್ಬಲೆ ಅಂದರ ಜನಸಾಮಾನ್ಯರಿಗೆ ಅಂದರ ನಮಗೂ ನಿಮಗೂ ಸುಲಭಕ್ಕ ಸಿಗಲಾರದ ಅಂತರ್ಜಾಲ, ಸರಳವಾಗಿ ಹೇಳಬೇಕಂದರ ಗೂಗಲ್ಲಿನ್ಯಾಗ ಸಿಗಲಾರದ ಮಾಹಿತಿ. ಇಂತಾದ್ದೂ ಒಂದು ಐತಿ ಅಂತ ಭಾಳ ಜನರಿಗೆ ಗೊತ್ತು ಮಾಡಿಕೊಡಬೇಕಾಗತೇತಿ. ಎಲ್ಲಾರೂ ಗೂಗಲ್ ಹುಡುಕಾಟದ ಅಸ್ತ್ರ ಒಂದು ನಮ್ಮ ಫೋನಿನ್ಯಾಗ ಇದ್ದರ ಸಾಕು, ನಮಗ ಏನು ಬೇಕು ಎಲ್ಲಾ ಸಿಕ್ಕು ಬಿಡತದ ಅಂತ ತಿಳಕೊಂಡಿರತಾರ. ಆದರ ಅದು ಹಂಗಂಲ್ಲ.

ನಮಗ ಗೊತ್ತಿರಲಾರದ್ದು, ನಮ್ಮ ಕೈಯ್ಯಾಗ ಸಿಗಲಾರದ್ದು, ತಿಳಿಸಿದರೂ ತಿಳಿಯಲಾರದ್ದು ಬೇಕಾದಷ್ಟು ಐತಿ. ಈದು ಏನಪಾ ಅಂದರ ಸಾಫ್ಟವೇರು ತಂತ್ರಜ್ಞಾನದೊಳಗ ಸಾಕಷ್ಟು ಪರಿಣಿತಿ ಹೊಂದಿರೋ ಕೆಲವರು, ತಮ್ಮ ಶಾಣೆತನಾ ಉಪಯೋಗಿಸಿ ಅಂತರಜಾಲದಾಗ ಒಂದಿಷ್ಟು ಮಾಹಿತಿ ಮುಚ್ಚಿ ಇಡತಾರ. ಅದನ್ನ ತೆಗೀಲಿಕ್ಕೆ ಆ ಮಟ್ಟಿಗಿನ ತಾಂತ್ರಿಕತೆ ಇದ್ದವರಿಗೆ ಅಷ್ಟ ಸಾಧ್ಯ. ಅದು ಹೆಂಗಪಾ ಅಂದರ ಪಾತಾಳ ಗರಡಿ ಹಾಕಿ ತಾಮ್ರದ ಕೊಡಾ ತಗದ ಹಂಗ. ಅಥವಾ ಅಕ್ಕ ಹೇಳಿದಂಗ `ನೆಲದ ಮರೆಯ ನಿದಾನದಂತೆ’.

ಇದನ್ನ ಟೋರು, ಫ್ರೀನೆಟ್ಟು, ರಿಫಲ್ಲು, ಐಟುಪಿ, ಮುಂತಾದ ತಂತ್ರಜ್ಞಾನದ ಉಪಕರಣಗಳನ್ನ ಬಳಸಿ ನೋಡಲಿಕ್ಕೆ ಬರತೇತಿ. ಇವನ್ನ ಯಾವ ಕಾಲೇಜಿನಾಗೂ ಕಲಿಸೋದಿಲ್ಲ. ಆಸಕ್ತಿ ಇದ್ದವರು ಅದನ್ನ ಕಲಕೋಬೇಕು.

ಮೊದಲಿಗೆ ಏನು ಆತಪಾ ಅಂದರ ಕೆಲವು ಉತ್ಸಾಹಿ ತರುಣರು, (ಎಲ್ಲಾ ತರುಣರು ಉತ್ಸಾಹಿ ಇರಲಿಕ್ಕೆ ಸಾಧ್ಯ ಇಲ್ಲ. ಎಲ್ಲಾ ಉತ್ಸಾಹಿಗಳು ತರುಣರಾಗಿರಬೇಕು ಅಂತೇನೂ ಇಲ್ಲ) ಸೇರಿಕೊಂಡು ಕೆಲವು ವಿಶೇಷ ಮಾಹಿತಿ- ಹೊಸದಾಗಿ ಕಂಡುಹಿಡಿದ, ಆದರ ಎಲ್ಲಾರ ಜೊತೆ ಪುಕ್ಕಟೆಯಾಗಿ ಹಂಚಿಕೊಳ್ಳಲಿಕ್ಕೆ ಸಾಧ್ಯವಿಲ್ಲದ ತಾಂತ್ರಿಕತೆ, ರಹಸ್ಯ ನಾಣ್ಯ, ಜನರಿಗೆ ಅನುಕೂಲವಾಗಬಹುದಾದ ಸರಕಾರಿ ರಹಸ್ಯಗಳು, ಅಧಿಕಾರದಲ್ಲಿ ಇರೋರ ಕಾರಸ್ಥಾನ ಇತ್ಯಾದಿಗಳನ್ನು ಒಂದು ಕಡೆ ಇಡೋ ಉದ್ದೇಶದಿಂದ ಇದನ್ನ ಆರಂಭ ಮಾಡಿದರು. ಆದರ ಅದು ಮುಂದ ಹೋದಂಗ, ಶಿಶು ಲೈಂಗಿಕತೆ, ಶಸ್ತ್ರಾಸ್ತ್ರ, ಮಾದಕ ದೃವ್ಯ, ಕಳ್ಳ ಸಾಗಾಣಿಕೆ ಇತ್ಯಾದಿಗಳ ಖರೀದಿ- ಮಾರಾಟದ ರಹದಾರಿ ಆತು.

ಹಂಗಂತ ಮಬ್ಬಲೆಯ ಎಲ್ಲಾ ಬಳಕೆದಾರರು ಕೆಟ್ಟವರು ಅಂತಲ್ಲ. ಅದನ್ನು ಬಹಳ ಒಳ್ಳೆ ಕೆಲಸಕ್ಕೆ ಬಳಸಿಕೊಳ್ಳೋರು ಬಹಳ ಜನ ಇದ್ದಾರ. ಅವರು ಗೂಗಲ್ಲು- ಫೇಸುಬುಕ್ಕು, ಅಮೇಜಾನು ಮುಂತಾದ ದೈತ್ಯ ಕಂಪನಿಗಳ ಕೈಯಿಂದ ತಂತ್ರಜ್ಞಾನವನ್ನು ಬಿಡುಗಡೆ ಮಾಡಬೇಕು, ಅದು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಸರಳವಾಗಿ ಸಿಗಬೇಕು ಅಂತ ಹೇಳಿ ಅದನ್ನು ಬಳಸಿಕೊಳ್ಳತಾರ. ದೊಡ್ಡ ದೊಡ್ಡ ಕಂಪನಿಗಳ ಟ್ರಕ್ಕುಗಳು ಹೆದ್ದಾರಿ ಉಪಯೋಗಿಸಿದರ, ಮಬ್ಬಲೆ ಬಳಸುವವರು ಕಿರಿದಾರಿ ಬಳಸುವ ಸೈಕಲ್ಲು ಇದ್ದಂಗ.

ಇವರಿಗೆ ಬೈಯುವರೂ ಇದ್ದಾರ, ಹೊಗಳುವವರೂ ಇದ್ದಾರ. ನೀವು ಎಲ್ಲರ ಹತ್ತರ ಏನನ್ನೋ ಮುಚ್ಚಿಇಡತಾ ಇದ್ದೀರಿ ಅಂತ ಕೆಲವರು ಆರೋಪಿಸಿದರ, ಅಂತರ್ಜಾಲವನ್ನು ಬಂಧ ಮುಕ್ತರನ್ನಾಗಿ ಮಾಡತಾ ಇದ್ದೀರಿ ಅಂತ ಕೆಲವರು ಕೊಂಡಾಡತಾರ.

ರೋಜರ ಡಿಂಗಲಡಿನ್ ಅನ್ನೋ ವಿಚಿತ್ರ ಹೆಸರಿನ ಒಬ್ಬ ಮನುಷಾ ಇದ್ದಾನ. ಟೋರು ತಂತ್ರಜ್ಞಾನದ ಸಂಶೋಧಕರಲ್ಲಿ ಒಬ್ಬ. ಅವ “ನೀವು ನಮ್ಮನ್ನ ಏನು ಮಬ್ಬಲೆ ಬಳಕೆದಾರರು ಅಂತ ಕರೀತೀರಿ? ನೀವು ಉಪಯೋಗಿಸೋ ಫೇಸುಬುಕ್ಕು ಅದಲಾ ಅದ ದೊಡ್ಡ ಮಬ್ಬಲೆ. ಅದರಾಗ ಸಿಕ್ಕವ ಯಾರೂ ಹೊರಗ ಬರಲಿಕ್ಕೆ ಸಾಧ್ಯ ಇಲ್ಲ. ಅದರಾಗ ನಿಮಗ ಸಿಗೋ ಮಾಹಿತಿ ಶೇಕಡಾ ಹತ್ತಕ್ಕಿಂತಲೂ ಕಮ್ಮಿ” ಅಂತ ಹೇಳಿಕೊಂಡು ನಗತಾನ.

ಅಂದಂಗ ನಮ್ಮ ನಿರುದ್ಯೋಗಿಗಳ ಮಾಹಿತಿ ಮಬ್ಬಲೆಯೊಳಗ ಸಿಕ್ಕರ ಏನು ಆಗತೇತಿ? ಅದನ್ನ ಒಳ್ಳೆಯವರು ಬಳಸಿದರ ಇವರಿಗೆ ನೌಕರಿ ಸಿಗಬಹುದು, ಒಳ್ಳೆಯ ಸ್ಥಾನಮಾನ ದೊರಕಿ ಒಂದಿಷ್ಟು ಹಣ ಸಿಕ್ಕಬಹುದು. ಅವರ ತಂತ್ರಜ್ಞಾನದ ಅರಿವು ಹೆಚ್ಚಾಗಬಹುದು. ಆದರ ಕೆಟ್ಟವರ ಕೈಗೆ ಸಿಕ್ಕರ? ಅದನ್ನ ಅವರು ನೌಕರಿ ಡಾಟ್ ಕಾಂ ನಂಥಾ ಕಂಪನಿಗಳಿಗೆ ಮಾರಿಕೊಳ್ಳಬಹುದು. ಅವರು ಅದನ್ನ ಯಾವುದೋ ಕಂಪನಿಯವರಿಗೆ ಮಾರಿಕೊಳ್ಳಬಹುದು. ಅವರು ಕೆಲಸ ಕೇಳಲಿಕ್ಕೆ ಹೋದ ನಿರುದ್ಯೋಗಿಗಳನ್ನ ಯಾಮಾರಿಸಬಹುದು, ಬ್ಲ್ಯಾಕ ಮೇಲು ಮಾಡಬಹುದು. ವಿನಾಕಾರಣ ತೊಂದರೆ ಕೊಡಬಹುದು.

ಏನು ಇದ್ದರೂ ನಮ್ಮ ವೈಯಕ್ತಿಕ ಮಾಹಿತಿ ಅನ್ನೋದು ನಮಗ ಪರಿಚಯ ಇಲ್ಲದ ಇನ್ನೊಬ್ಬನಿಗೆ ಸಿಗೋದು ಬಹಳ ಅಪಾಯಕಾರಿ. ಅವರ ಕೈಯಾಗ ನಮ್ಮ ಕುತಗಿ ಕೊಟ್ಟಂಗ. ಅವರು ಮಾಲಿಷು ಮಾಡಬಹುದು, ಅಥವಾ ಕುತಗಿ ಹಿಚಗಬಹುದು.

ಎಲ್ಲಾ ಸರಿ, ಇಷ್ಟೆಲ್ಲಾ ರಾದ್ಧಾಂತ ಆಗಿ ಹೋದ ಮ್ಯಾಲೆ ನಮ್ಮ ಸರಕಾರದವರು ಏನು ಮಾಡಿದರು? ಛಪ್ಪನ ಇಂಚಿನ ಛಾತಿ ಇದ್ದವರು ಇಂಥಾ ಮಾಹಿತಿ ಸೋರಿ ಹೋಗಲಾರದ ಹಂಗ ಏನರ ಮಾಡಿದರ? ಇಲ್ಲಾ. ಏನರ ಮಾಡೋದು ಹೋಗಲಿ, ಸರಕಾರದಾಗ ಯಾರುನೂ- ದೊಡ್ಡವರಾಗಲೀ, ಸಣ್ಣವರಾಗಲೀ, ಇದು ಸಮಸ್ಯೆ ಆಗೇದ ಅಂತ ಒಪ್ಪಿಕೊಳ್ಳಲಿಲ್ಲ.

ಅವರು ಹೋಗಲಿ, ವಿಶ್ವದಾದ್ಯಂತ ಭಾರತದ ಹಿರಿಮೆಯನ್ನು ಬಿತ್ತಿದ ನಮ್ಮ ಹೆಮ್ಮೆಯ ಐಟಿ- ಬಿಟಿ ಹುಡುಗರು ಏನರ ಮಾಡಿದರ? ಇಲ್ಲಾ. ಅವರೆಲ್ಲಾ ಇವರನ್ನು ಸುಳ್ಳೇ ಹೊಗಳಿ, ಅವರನ್ನ ಸುಳ್ಳು ಸುಳ್ಳೇ ತೆಗಳೋದರಾಗ ಬಿಜಿ ಇದ್ದಾರ. ಅವರಿಗೆ ಇಂಥಾದಕ್ಕೆಲ್ಲಾ ಎಲ್ಲೆ ಟೈಂ ಇರಬೇಕು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...