ಕೊರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ವೇತನ ಪಾವತಿಸದ ಖಾಸಗಿ ಉದ್ಯೋಗದಾತರ ವಿರುದ್ಧ ಜುಲೈ ಅಂತ್ಯದವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ವೇತನ ಪಾವತಿ ಕುರಿತು ನೌಕರರು ಮತ್ತು ಉದ್ಯೋಗದಾತರ ನಡುವೆ ಮಾತುಕತೆ ನಡೆಸಲು ರಾಜ್ಯಗಳು ತಯಾರಾಗಬೇಕು ಹಾಗೂ ತಮ್ಮ ವರದಿಗಳನ್ನು ಸಂಬಂಧಪಟ್ಟ ಕಾರ್ಮಿಕ ಆಯುಕ್ತರಿಗೆ ಸಲ್ಲಿಸಬೇಕು ಎಂದು ಉನ್ನತ ನ್ಯಾಯಾಲಯ ಹೇಳಿದೆ.
ಲಾಕ್ ಡೌನ್ ಸಮಯದಲ್ಲಿ ಪೂರ್ಣ ವೇತನವನ್ನು ಕಡ್ಡಾಯವಾಗಿ ಪಾವತಿಸಲು ಆದೇಶಿಸಿದ್ದ ಮಾರ್ಚ್ 29 ರ ಅಧಿಸೂಚನೆಯ ಕಾನೂನು ಬದ್ಧತೆಯ ಬಗ್ಗೆ ಉತ್ತರವನ್ನು ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಇನ್ನೂ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಕೇಂದ್ರ ಗೃಹ ಸಚಿವಾಲಯವು ಮಾರ್ಚ್ ನ ತನ್ನ ಸುತ್ತೋಲೆಯಲ್ಲಿ, ಎಲ್ಲಾ ಉದ್ಯೋಗದಾತರ ತಮ್ಮ ಕಾರ್ಮಿಕರಿಗೆ ಯಾವುದೇ ಕಡಿತವಿಲ್ಲದೆ ತಮ್ಮ ಕಾರ್ಮಿಕರಿಗೆ ವೇತನವನ್ನು ಪಾವತಿಸುವಂತೆ ಕೇಳಿಕೊಂಡಿತ್ತು.
“ಉದ್ಯಮ ಮತ್ತು ಕಾರ್ಮಿಕರ ನಡುವೆ ಪರಸ್ಪರ ವಿವಾದವಿದೆಯೆಂದು ವಾದಿಸಲು ಸಾಧ್ಯವಿಲ್ಲ. 50 ದಿನಗಳವರೆಗೆ ವೇತನ ಪಾವತಿಸುವ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು” ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಎಮ್ಆರ್ ಷಾ ಅವರ ಪೀಠವು ಆದೇಶಗಳನ್ನು ಅಂಗೀಕರಿಸುವಾಗ ಹೇಳಿದರು.
ವೇತನಕ್ಕೆ ಸಂಬಂಧಿಸಿದ ವಿವಾದಗಳ ಹೊರತಾಗಿಯೂ ಕೆಲಸ ಮಾಡಲು ಸಿದ್ಧರಿರುವವರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಉನ್ನತ ನ್ಯಾಯಾಲಯ ಹೇಳಿದೆ.
ಸ್ಮಾಲ್ ಸ್ಕೇಲ್ ಇಂಡಸ್ಟ್ರಿಯಲ್ ಮ್ಯಾನ್ಯುಫ್ಯಾಕ್ಚರರ್ಸ್ ಅಸೋಸಿಯೇಷನ್ ಮತ್ತು ಲುಧಿಯಾನ ಹ್ಯಾಂಡ್ ಟೂಲ್ಸ್ ಅಸೋಸಿಯೇಷನ್, ಫಿಕಸ್ ಪ್ಯಾಕ್ಸ್ ಮತ್ತು ಇತರ ಕಂಪೆನಿಗಳು ಮಾರ್ಚ್ 29 ರ ಸುತ್ತೋಲೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ಪೀಠವು ಈ ಮೇಲನ ಅಭಿಪ್ರಾ ವ್ಯಕ್ತಪಡಿಸಿದೆ.
ಸರ್ಕಾರವು ಉದ್ಯೋಗದಾತರ ಹಣಕಾಸಿನ ಪರಿಣಾಮಗಳ ಬಗ್ಗೆ ಸರಿಯಾದ ಕಾಳಜಿ ಮತ್ತು ಚರ್ಚೆಯಿಲ್ಲದೆ ಆದೇಶಗಳನ್ನು ರವಾನಿಸುತ್ತಿದೆ ಎಂದು ಅರ್ಜಿದಾರರು ದೂಷಿಸಿದ್ದರು.
ಓದಿ: ಲಾಕ್‌ಡೌನ್ ಸಮಯದಲ್ಲಿ ತನ್ನ ನೌಕರರ ಸಂಬಳ ಹೆಚ್ಚಿಸಿ ಮನೋಸ್ಥೈರ್ಯ ತುಂಬಿದ ಏಷ್ಯನ್ ಪೇಂಟ್ಸ್!


