Homeಮುಖಪುಟಲಾಕ್‌ಡೌನ್‌ ಸಮಯದಲ್ಲಿ ತನ್ನ ನೌಕರರ ಸಂಬಳ ಹೆಚ್ಚಿಸಿ ಮನೋಸ್ಥೈರ್ಯ ತುಂಬಿದ ಏಷ್ಯನ್‌ ಪೇಂಟ್ಸ್‌!

ಲಾಕ್‌ಡೌನ್‌ ಸಮಯದಲ್ಲಿ ತನ್ನ ನೌಕರರ ಸಂಬಳ ಹೆಚ್ಚಿಸಿ ಮನೋಸ್ಥೈರ್ಯ ತುಂಬಿದ ಏಷ್ಯನ್‌ ಪೇಂಟ್ಸ್‌!

- Advertisement -
- Advertisement -

ಕೊರೊನಾ ಲಾಕ್‌ಡೌನ್‌ ಕುಸಿಯುತ್ತಿದ್ದ ಭಾರತದ ಆರ್ಥಿಕತೆಯನ್ನು ಮತ್ತುಷ್ಟು ಪಾತಾಳಕ್ಕೆ ತಳ್ಳಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಲಕ್ಷಾಂತರ ಕಂಪನಿಗಳು ತನ್ನ ನೌಕರರನ್ನು ಕೆಲಸದಿಂದ ಕಿತ್ತೆಸೆದಿವೆ. ಇನ್ನಷ್ಟು ಕಂಪನಿಗಳು ಸಂಬಳ ನಿಲ್ಲಿಸಿವೆ ಅಥವಾ ಸಂಬಳ ಕಡಿತ ಮಾಡಿವೆ. ಆದರೆ ಏಷ್ಯನ್‌ ಪೇಂಟ್ಸ್‌ ಕಂಪನಿ ಮಾತ್ರ ಕಷ್ಟಕರ ಸಂದರ್ಭದಲ್ಲಿಯೂ ತನ್ನ ನೌಕರರ ಸಂಬಳ ಹೆಚ್ಚಿಸಿ ಅವರಿಗೆ ಮನೋಸ್ಥೈರ್ಯ ತುಂಬುವ ಮಾದರಿ ಕೆಲಸ ಮಾಡಿದೆ.

ಭಾರತದ ದೊಡ್ಡ ಮತ್ತು ಬ್ರಾಂಡ್‌ ಕಂಪನಿಯಾದ ಏಷ್ಯನ್‌ ಪೇಂಟ್ಸ್‌ ಪ್ರವಾಹದ ವಿರುದ್ಧ ಈಜಲು ಹೊರಟಿದೆ. ಕೆಲಸ ಕಳೆದುಕೊಂಡು ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಕೋಟ್ಯಾಂತರ ನೌಕರರ ನಡುವೆ ಅದು ತನ್ನ ನೌಕರರಿಗೆ ನಾನಿದ್ದೇನೆ ಭಯಪಡಬೇಡಿ ಎಂಬ ಭರವಸೆ ನೀಡಿದೆ.

ಕಂಪನಿಯ ತನ್ನ ಎಲ್ಲಾ ನೌಕರರ ವಾರ್ಷಿಕ ಸಂಬಳವನ್ನು ಹೆಚ್ಚಿಸಿದೆ. ಎಲ್ಲರಿಗು ಉಚಿತ ವೈದ್ಯಕೀಯ ವಿಮೆ ಮಾಡಿಸಲು ಮುಂದಾಗಿದೆ. ತನ್ನ ಅಂಗಡಿಗಳ ನೈರ್ಮಲ್ಯೀಕರಣ ಜವಾಬ್ದಾರಿ ಹೊತ್ತಿದೆ. ಈಗಾಗಲೇ ತನ್ನ ಗುತ್ತಿಗೆದಾರರ ಖಾತೆಗೆ 40 ಕೋಟಿ ರೂಗಳನ್ನು ವರ್ಗಾಹಿಸಿದೆ. ಅಲ್ಲದೇ ಕಂಪನಿಯಿಂದ ಪಾವತಿಗಳಿಗೆ 45 ದಿನಗಳ ವಿಸ್ತರಣೆ ಮತ್ತು 45 ದಿನಗಳಲ್ಲಿ ಪಾವತಿ ಮಾಡಿದರೆ 2 ಪ್ರತಿಶತ ರಿಯಾಯಿತಿಯನ್ನು ಘೋಷಿಸಿದೆ.

ನಮ್ಮದು ಉತ್ತಮ ನಾಯಕತ್ವ ಹೊಂದಿರುವ ಮತ್ತು ನಮ್ಮ ಎಲ್ಲಾ ಪಾಲುದಾರರನ್ನು ನೋಡಿಕೊಳ್ಳುವ ಮಾದರಿ ಸಂಸ್ಥೆಯಾಗಿರಬೇಕು. ಇಂತಹ ಎಲ್ಲಾ ಉಪಕ್ರಮಗಳ ಬಗ್ಗೆ ನಾನು ನಿಯಮಿತವಾಗಿ ಮಂಡಳಿಯೊಂದಿಗೆ ಚರ್ಚಿಸಿ ಅವರ ಅನುಮೋದನೆಯನ್ನು ಪಡೆದುಕೊಂಡಿದ್ದೇನೆ. “ನಮ್ಮ ಪ್ರತಿಯೊಬ್ಬ ಉದ್ಯೋಗಿಯೊಂದಿಗೆ ಹೆಜ್ಜೆ ಹಾಕಲು, ಸಂವಹನ ನಡೆಸಲು ಮತ್ತು ಅನಿಶ್ಚಿತ ಮಾರುಕಟ್ಟೆಯಲ್ಲಿ ಅವರ ಕಳವಳಗಳನ್ನು ಹೋಗಲಾಡಿಸಲು ಇದು ಒಂದು ದೊಡ್ಡ ಅವಕಾಶವೆಂದು ನಾನು ನೋಡುತ್ತೇನೆ. ಪ್ರಬುದ್ಧ ಬ್ರಾಂಡ್ ಆಗಿ ಕೆಲಸಕ್ಕೆ ತೆಗೆದುಕೊಳ್ಳುವ/ಕೈಬಿಡುವುದು (Hire and Fire) ಏಷ್ಯನ್ ಪೇಂಟ್ಸ್ ಸಂಸ್ಕೃತಿಯಲ್ಲ. ಬದಲಿಗೆ ಉದ್ಯೋಗಿಗಳಿಗೆ ಭರವಸೆ ನೀಡಿದ್ದೇವೆ” ಎಂದು ಕಂಪನಿಯ ಸಿಇಒ ಅಮಿತ್ ಸಿಂಗಲ್ ಅಭಿಪ್ರಾಯಪಟ್ಟಿದ್ದಾರೆ.

ಅಷ್ಟು ಮಾತ್ರವಲ್ಲದೇ ಕಂಪನಿಯೂ ಕೋವಿಡ್‌ ಪರಿಹಾರ ನಿಧಿಗೆ (ಮಹಾರಾಷ್ಟ್ರ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ) 35 ಕೋಟಿ ರೂಗಳ ದೇಣಿಗೆ ನೀಡಿದೆ. ಹ್ಯಾಂಡ್‌ ಸ್ಯಾನಿಟೈಸರ್‌ ತಯಾರಿಸಿ ವಿತರಿಸಿದೆ.

ಏಷ್ಯನ್‌ ಪೇಂಟ್ಸ್‌ ಕಂಪನಿಯ ಮೊದಲ ತ್ರೈಮಾಸಿಕದ ಸಮಯದಲ್ಲಿ ಯಾವುದೇ ಲಾಭ ದೊರೆಯುವುದಿಲ್ಲ ಎಂದು ಕಂಪನಿಗೆ ನಿಚ್ಚಳವಾಗಿ ತಿಳಿದಿದೆ. ಆದರು ಅದು ತತ್‌ಕ್ಷಣದ ಲಾಭ ನಷ್ಟದ ಬಗ್ಗೆ ಯೋಚಿಸದೇ ದೂರಗಾಮಿ ಪರಿಣಾಮಗಳ ಬಗ್ಗೆ ಚಿಂತಿಸುತ್ತಿದೆ.

ಈ ಹಂತಗಳು ಕಂಪನಿಗೆ ತಕ್ಷಣದ ಹಣಕಾಸಿನ ಪ್ರಯೋಜನಗಳಿಗೆ ಕಾರಣವಾಗದಿದ್ದರೂ, ಉದ್ಯೋಗಿಗಳು ಮತ್ತು ಪಾಲುದಾರರಂತಹ ಪ್ರಮುಖ ಪಾಲುದಾರರೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಅವು ಖಂಡಿತವಾಗಿಯೂ ಕಂಪನಿಗೆ ಒಳ್ಳೆಯ ಹೆಸರು ತಂದುಕೊಡುವುದರ ಜೊತೆಗೆ ತನ್ನ ನೌಕರರು ಮತ್ತು ಗುತ್ತಿಗೆದಾರರಲ್ಲಿ ಮಾತ್ರವಲ್ಲದೇ ಗ್ರಾಹಕರಲ್ಲಿಯೂ ಸಹ ನಂಬಿಕೆಯನ್ನು ಹುಟ್ಟಿಸುತ್ತದೆ.

ಒಟ್ಟಿನಲ್ಲಿ ಕಂಪನಿ ನಷ್ಟದಲ್ಲಿದೆ ಎಂದು ಹಲವಾರು ಉದ್ಯಮಿಗಳು ತನ್ನ ಉದ್ಯೋಗಿಗಳನ್ನು ಕ್ಷಣಮಾತ್ರದಲ್ಲಿ ಕಿತ್ತೊಗೆಯುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಸರ್ಕಾರವು ಅವರ ಪರ ನಿಲ್ಲಬೇಕು. ಇದಕ್ಕೆ ಏಷ್ಯನ್‌ ಪೇಂಟ್ಸ್‌ ಉತ್ತಮ ಮಾದರಿಯಾಗಿದೆ.


ಇದನ್ನೂ ಓದಿ: ಈ ಸಂದರ್ಭ ಒಂದು ತಿರುವು ಬಿಂದುವಾಗಬಲ್ಲುದು, ಮನಸ್ಸು ಮಾಡಿದರೆ…! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಏಶಿಯನ್ ಪೆಯಿಂಟ್ಸ್ ಮಾಲೀಕರಿಗೊಂದು ಸಲಾಂ. ಇವರ ನೀತಿ ಅನುಕರಣೆಗೆ ಅರ್ಹವಾಗಿದೆ.

LEAVE A REPLY

Please enter your comment!
Please enter your name here

- Advertisment -

ರಾಯಚೂರು ದಲಿತ ದೌರ್ಜನ್ಯ: ಪ್ರಕರಣಗಳನ್ನು CIDಗೆ ಒಪ್ಪಿಸುವಂತೆ ಆಗ್ರಹಿಸಿ ಗೃಹ ಸಚಿವರನ್ನು ಭೇಟಿಯಾದ ನಿಯೋಗ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತರ ಮೇಲೆ ಸಾಲು ಸಾಲು ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರದಂತಹ ಭೀಕರ ಕೃತ್ಯಗಳು ಹೆಚ್ಚಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿ, ದಲಿತ ಹಕ್ಕುಗಳ ಹೋರಾಟಗಾರರ ಹಾಗೂ ಪ್ರಮುಖ ಮುಖಂಡರ ನಿಯೋಗವು ಗೃಹ...

ಶಾರ್ಜೀಲ್ ಇಮಾಮ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು

ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್ ಇಮಾಮ್‌ಗೆ ಅವರ ಸೋದರಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ದೆಹಲಿ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಜಾಮೀನು ಅಕ್ಟೋಬರ್ 4 ರಿಂದ ಅಕ್ಟೋಬರ್ 10 ರವರೆಗೆ ಇರಲಿದೆ...

ಎಬಿವಿಪಿ ಒತ್ತಡಕ್ಕೆ ಮುಸ್ಲಿಂ ಪ್ರಾಧ್ಯಾಪಕಿ ರಾಜೀನಾಮೆ; ಕಾಲೇಜು ಆವರಣ ‘ಶುದ್ಧೀಕರಣ’ ಮಾಡಿದ ಬಲಪಂಥೀಯ ಗುಂಪು

ಕೋಲ್ಕತ್ತಾದ ಸುರೇಂದ್ರನಾಥ ಕಾಲೇಜಿನ ಮುಸ್ಲಿಂ ಪ್ರಾಧ್ಯಾಪಕಿ ಮೊಹಮ್ಮದಿ ತರನ್ನುಮ್ ಅವರನ್ನು ಹಾಜರಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಇದಾದ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು...

SIR ಪರಿಶೋಧ ಹಾಗೂ ಪ್ರತಿರೋಧ ಪ್ರವಾಸಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಚಾಲನೆ: ಸಿಪಿಐ(ಎಂ) ಬೆಂಬಲ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 'SIR ವಿರೋಧಿ ಕರ್ನಾಟಕ', ನಾಗರಿಕ ಮತಕಾವಲು ಸಮಿತಿ, ಜಾತ್ಯತೀತ ಪಕ್ಷಗಳು ಹಾಗೂ ವಿವಿಧ ನಾಗರಿಕ ಸಂಘಟನೆಗಳ...

ಪಶ್ಚಿಮ ಬಂಗಾಳ: ಸರ್ಕಾರದ ಜೊತೆ ಇರಬೇಕಾದರೆ ಎಲೆಕ್ಷನ್ ‘ಟೆಸ್ಟ್’ನಲ್ಲಿ ಗೆಲ್ಲಿ, ಮುಸ್ಲಿಮರಿಗೆ ಸುವೇಂದು ಅಧಿಕಾರಿ ಎಚ್ಚರಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಮುಂಬರುವ ಉಪಚುನಾವಣೆಯನ್ನು ಅಲ್ಪಸಂಖ್ಯಾತರಿಗೆ ಒಂದು ‘ಪರೀಕ್ಷೆ’ ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹಾಗೂ ಕಳವಳಕ್ಕೆ ಕಾರಣವಾಗಿದೆ....

ಮಹಿಳೆಯರ ಮೇಲಿನ ದಾಳಿಗಳು ಮತ್ತಷ್ಟು ಹಿಂಸಾತ್ಮಕವಾಗುತ್ತಿವೆ: ಪ್ರಿಯಾಂಕಾ ಗಾಂಧಿ

ದೆಹಲಿ ಮತ್ತು ಬಿಹಾರದಲ್ಲಿ ಮಹಿಳೆಯರ ಮೇಲೆ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಳವಳ ವ್ಯಕ್ತಪಡಿಸಿದ್ದು, ಇಂತಹ ದಾಳಿಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ಇನ್ನಷ್ಟು ಹಿಂಸಾತ್ಮಕವಾಗುತ್ತಿವೆ...

ಜಮುಯಿ ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣ: ಎನ್‌ಕೌಂಟರ್ ಬಳಿಕ ಪ್ರಮುಖ ಆರೋಪಿ ನಂದನ್ ಯಾದವ್ ಬಂಧನ; 7 ಮಂದಿಯಲ್ಲಿ 5 ಮಂದಿ ವಶಕ್ಕೆ

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕೋಚಿಂಗ್‌ ತರಗತಿಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿ ಮತ್ತು ಬಾಲಕನನ್ನು ತಡೆದು ಹಲ್ಲೆ ಮಾಡಿ, ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ....

ಬಿಹಾರ|ಸಭ್ಯ ರೀತಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಮಾಡಿ: ಬಿಜೆಪಿ ಸಚಿವೆ ಶ್ರೇಯಸಿ ಸಿಂಗ್

ಬಿಹಾರದ ಜಮುಯಿ ಜಿಲ್ಲೆಯಲ್ಲಿ ಯುವಕ ಮತ್ತು ಯುವತಿಗೆ ಗುಂಪೊಂದು ಸಾರ್ವಜನಿಕವಾಗಿ ಕಿರುಕುಳ ನೀಡಿದ ಘಟನೆಯನ್ನು ಖಂಡಿಸುವ ಭರದಲ್ಲಿ, ‘ಅನೈತಿಕ ಪೊಲೀಸ್‌ಗಿರಿಯನ್ನು ಹೆಚ್ಚು ಸಭ್ಯ ಮತ್ತು ಘನತೆಯುತ ರೀತಿಯಲ್ಲಿ ಮಾಡಬಹುದು’ ಎಂದು ಬಿಹಾರದ ಬಿಜೆಪಿ...

ಭೋಪಾಲ್: ಮಕ್ಕಳ ಸಾವಿನ ಬಗ್ಗೆ ವರದಿ ಮಾಡುತ್ತಿದ್ದಾಗ ಪೊಲೀಸರು ಹೋಟೆಲ್‌ಗಳಿಂದ ಹೊರಹಾಕಿದರು ಎಂದು ಖ್ಯಾತ ಯೂಟ್ಯೂಬರ್ ಕಾವ್ಯ ಕರ್ನಾಟಕ್ ಆರೋಪ

ಭೋಪಾಲ್: ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಮಕ್ಕಳ ಸಾವಿನ ಕುರಿತು ವರದಿ ಮಾಡಲು ತೆರಳಿದ್ದ ತಮ್ಮ ತಂಡವನ್ನು ಎರಡು ಹೋಟೆಲ್‌ಗಳಿಂದ ಹೊರಹೋಗುವಂತೆ ಒತ್ತಾಯಿಸಲಾಯಿತು. ಪೊಲೀಸರು ಹೋಟೆಲ್‌ಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ದೆಹಲಿಯಿಂದ ಬಂದ ಪತ್ರಕರ್ತರನ್ನು ಅಲ್ಲಿಂದ...

DELHI SIR |’ನೋಟಿಸ್‌ಗಳನ್ನು ಯಾಂತ್ರಿಕವಾಗಿ ನೀಡಿದಂತಿದೆ, ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಸ್ಪಷ್ಟನೆ ಅಗತ್ಯ : ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಮಯದಲ್ಲಿ ಮತದಾರರಿಗೆ ನೀಡಲಾದ ನೋಟಿಸ್‌ಗಳು 'ಬಹುತೇಕ ಯಾಂತ್ರಿಕವಾಗಿ' ಜಾರಿಯಾದಂತೆ ಕಂಡುಬರುತ್ತಿವೆ ಮತ್ತು 'ತಾರ್ಕಿಕ ವ್ಯತ್ಯಾಸ'ವನ್ನು ಗುರುತಿಸಲು ಬಳಸಲಾದ ಆಧಾರದ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ...