Homeಮುಖಪುಟಗಾಝಾ ಕದನ ವಿರಾಮ ಮುಂದುವರಿಯುವ ಗ್ಯಾರಂಟಿಯಿಲ್ಲ : ನೆತನ್ಯಾಹು ಭೇಟಿಗೂ ಮುನ್ನ ಟ್ರಂಪ್ ಹೇಳಿಕೆ

ಗಾಝಾ ಕದನ ವಿರಾಮ ಮುಂದುವರಿಯುವ ಗ್ಯಾರಂಟಿಯಿಲ್ಲ : ನೆತನ್ಯಾಹು ಭೇಟಿಗೂ ಮುನ್ನ ಟ್ರಂಪ್ ಹೇಳಿಕೆ

- Advertisement -
- Advertisement -

ಮುಂದಿನ ಗುರುವಾರ (ಫೆ.6) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ.

ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ, ಅವರನ್ನು ಭೇಟಿಯಾಗುತ್ತಿರುವ ಮೊದಲ ವಿದೇಶ ನಾಯಕ ನೆತನ್ಯಾಹು ಆಗಿದ್ದಾರೆ.

ನೆತನ್ಯಾಹು ಭೇಟಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಟ್ರಂಪ್, “ಗಾಝಾ ಕದನ ವಿರಾಮ ಮುಂದುವರಿಯುವ ಯಾವುದೇ ಗ್ಯಾರಂಟಿ ನನಗಿಲ್ಲ” ಎಂದಿದ್ದಾರೆ.

ವಿವಿಧ ‍‍ಷರತ್ತುಗಳನ್ನು ಒಳಗೊಂಡ ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಒಪ್ಪಂದ ಜನವರಿ 16, 2025ರಿಂದ ಜಾರಿಗೆ ಬಂದಿದೆ. ಅದರ ಮೊದಲ ಹಂತವಾಗಿ ಪರಸ್ಪರ ಬಂಧಿತರು, ಒತ್ತೆಯಾಳುಗಳ ಬಿಡುಗಡೆ ಯಶಸ್ವಿಯಾಗಿ ನಡೆಯುತ್ತಿದೆ. ಶಿಬಿರಗಳಲ್ಲಿ ಇದ್ದ ಲಕ್ಷಾಂತರ ಜನರು ಉತ್ತರ ಗಾಝಾಗೆ ಮರಳುತ್ತಿದ್ದಾರೆ.

ಈ ನಡುವೆ ಕದನ ವಿರಾಮ ವಿಫಲಗೊಳ್ಳುವ ಬಗ್ಗೆ ಟ್ರಂಪ್ ಮಾತನಾಡಿರುವುದು ಆತಂಕ್ಕೆ ಕಾರಣವಾಗಿದೆ. ಏಕೆಂದರೆ, ಗಾಝಾದಲ್ಲಿ ಇಸ್ರೇಲ್ ಆಕ್ರಮಣ ನಡೆಸಲು ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಿರುವುದು ಇದೇ ಅಮೆರಿಕವಾಗಿದೆ.

ಈ ಹಿಂದೆ ಜೋ ಬೈಡೆನ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ಮಾಧ್ಯಮಗಳ ಮುಂದೆ ಗಾಝಾ ಆಕ್ರಮಣವನ್ನು ಖಂಡಿಸುತ್ತಿದ್ದರು. ಜೀವ ಹಾನಿಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದರು. ಆದರೆ, ಹಿಂಬದಿಯಲ್ಲಿ ಇಸ್ರೇಲ್‌ಗೆ ಬೇಕಾದ ಮದ್ದು, ಗುಂಡು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು.

ಇದೀಗ ಬೈಡೆನ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡುವ ಟ್ರಂಪ್ ಕೈಗೆ ಅಮೆರಿಕದ ಆಡಳಿತ ಸಿಕ್ಕಿದೆ. ಹಾಗಾಗಿ, ಯಾವ ರೀತಿಯ ಹುಚ್ಚು ನಿರ್ಧಾರಗಳನ್ನು ಬೇಕಾದರು ತೆಗೆದುಕೊಳ್ಳಬಹುದು. ಈ ಕಾರಣಕ್ಕೆ ಟ್ರಂಪ್ ಹೇಳಿಕೆ ಮಹತ್ವವೆನಿಸಿದೆ.

ಕದನ ವಿರಾಮದ ಬಳಿಕ ಸದ್ಯಕ್ಕೆ ಗಾಝಾದಲ್ಲಿ ಆಕ್ರಮಣ ಕೊನೆಗೊಳಿಸಿರುವ ಇಸ್ರೇಲ್, ಆಕ್ರಮಿತ ಪಶ್ಚಿಮ ದಂಡೆಯಲ್ಲಿ ದಾಳಿ ಮುಂದುವರೆಸಿದೆ. ಇತ್ತೀಚಿನ ಘಟನೆಗಳಲ್ಲಿ ಓರ್ವ ಬಂದೂಕುಧಾರಿಯನ್ನು ಇಸ್ರೇಲಿ ಸೇನೆ ಗುಂಡಿಕ್ಕಿ ಹತ್ಯೆ ಮಾಡಿದೆ. ಆತ ಮಿಲಿಟರಿ ಚೆಕ್‌ ಪಾಯಿಂಟ್ ಮೇಲೆ ಗುಂಡು ಹಾರಿಸಿ ಹಲವಾರು ಜನರನ್ನು ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಟ್ರಂಪ್ ಭೇಟಿಗೆ ಅಮೆರಿಕಕ್ಕೆ ತೆರಳುವುದಕ್ಕೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಸಚಿವ ಸಂಪುಟದ ಜೊತೆ ಸಭೆ ನಡೆಸಿದ್ದಾರೆ. ಅದರಲ್ಲಿ ಗಾಝಾ ಯುದ್ಧದ ಕುರಿತು ಚರ್ಚಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಗಾಝಾದಲ್ಲಿರುವ ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೊಳಿಸುವುದು, ಹಮಾಸ್ ವಿರುದ್ದ ಪೂರ್ಣ ಜಯ ಸಾಧಿಸುವುದು, ಇರಾನ್ ಬೆಂಬಲಿತ ಪಡೆಗಳನ್ನು ಹಿಮ್ಮೆಟಿಸುವುದು ನೆತನ್ಯಾಹು ಸಭೆಯ ಮುಖ್ಯ ಚರ್ಚಾ ವಿಷಯಗಳು ಎಂದು ಹೇಳಲಾಗಿದೆ.

ಈ ನಡುವೆ, ಹಮಾಸ್ ಗಾಝಾದ ಮೇಲೆ ಶೀಘ್ರವಾಗಿ ನಿಯಂತ್ರಣವನ್ನು ಮರಳಿ ಪಡೆದಂತೆ ಕಂಡುಬರುತ್ತಿದೆ. ಇಸ್ರೇಲಿ ಪಡೆಗಳು ಗಾಝಾ ಪ್ರದೇಶದ ಮೇಲಿನ ತನ್ನ ಮಿಲಿಟರಿ ಆಕ್ರಮಣವನ್ನು ಕೊನೆಗೊಳಿಸುವ ಮೂಲಕ ತನ್ನ ಬದ್ಧತೆಗಳನ್ನು ಪೂರೈಸದಿದ್ದರೆ, ಎರಡನೇ ಹಂತದ ಕದನ ವಿರಾಮದ ಸಮಯದಲ್ಲಿ ಹೆಚ್ಚಿನ ಸೆರೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹಮಾಸ್ ಒತ್ತಿ ಹೇಳಿದೆ.

ಯುದ್ಧದ ಸಮಯದಲ್ಲಿ ಇಸ್ರೇಲ್ ಮತ್ತು ಅಮೆರಿಕ ತೆಗೆದುಕೊಂಡ ನಿರ್ಧಾರಗಳು ಈಗಾಗಲೇ ಮಧ್ಯಪ್ರಾಚ್ಯದ ಮುಖವನ್ನೇ ಬದಲಾಯಿಸಿದೆ. ಈ ನಕ್ಷೆಯನ್ನು ಇನ್ನಷ್ಟು ಮತ್ತು ಉತ್ತಮವಾಗಿ ಪುನಃ ರಚಿಸುವ ಉದ್ದೇಶವನ್ನು ಹೊಂದಿರುವುದಾಗಿ ನೆತನ್ಯಾಹು ಹೇಳಿದ್ದಾರೆ.

ಯುದ್ಧದ ವಿನಾಶ, ಈಜಿಪ್ಟ್ ಮತ್ತು ಜೋರ್ಡಾನ್ ಮೇಲೆ ಲಕ್ಷಾಂತರ ಪ್ಯಾಲೆಸ್ತೀನಿಯನ್ ನಿರಾಶ್ರಿತರನ್ನು ಸ್ವೀಕರಿಸಲು ಒತ್ತಡ ಹೇರುವ ಮೂಲಕ ಗಾಝಾವನ್ನು ಸ್ವಚ್ಛಗೊಳಿಸುವ ಟ್ರಂಪ್ ಸಲಹೆಯ ಹೊರತಾಗಿಯೂ, ನೆತನ್ಯಾಹು ಅರಬ್ ರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸುವ ಬಗ್ಗೆಯೂ ಯೋಚಿಸುತ್ತಿದ್ದಾರೆ. ಕೈರೋ ಮತ್ತು ಅಮ್ಮನ್ ಸರ್ಕಾರಗಳು ಟ್ರಂಪ್ ಪ್ರಸ್ತಾಪವನ್ನು ತಿರಸ್ಕರಿಸಿವೆ ಎಂದು ವರದಿಗಳು ಹೇಳಿವೆ.

ಇಸ್ರೇಲ್ ಬಿಡುಗಡೆಗೊಳಿಸಿದವರು ಗಡಿಪಾರು!

ಇಸ್ರೇಲ್ ಬಂಧಿಸಿಟ್ಟಿದ್ದ ನೂರಾರು ಮಂದಿ ಪ್ಯಾಲೆಸ್ತೀನ್ ನಾಗರಿಕರನ್ನು ಕದನ ವಿರಾಮದ ಒಪ್ಪದಂತೆ ಹಂತ ಹಂತವಾಗಿ ಬಿಡುಗಡೆಗೊಳಿಸುತ್ತಿದೆ. ಆದರೆ, ಈಗಾಗಲೇ ಬಿಡುಗಡೆಗೊಂಡವರನ್ನು ವಿವಿಧ ದೇಶಗಳಿಗೆ ಗಡಿಪಾರು ಮಾಡಲಾಗಿದೆ ಎಂದು ವರದಿಯಾಗಿದೆ.

ಗಾಝಾ ಕದನ ವಿರಾಮ ಮತ್ತು ವಿನಿಮಯ ಒಪ್ಪಂದದ ಭಾಗವಾಗಿ ಇಸ್ರೇಲ್ ಬಿಡುಗಡೆ ಮಾಡಿದ 79 ಪ್ಯಾಲೆಸ್ತೀನ್ ಕೈದಿಗಳನ್ನು ಈಜಿಪ್ಟ್‌ಗೆ ಗಡಿಪಾರು ಮಾಡಿದ ನಂತರ, ಅವರು ಕೈರೋ ತಲುಪಿದ್ದಾರೆ ಎಂದು ಹಮಾಸ್‌ನ ಕೈದಿಗಳ ಕಚೇರಿಯ ಮಾಧ್ಯಮ ಅಧಿಕಾರಿಯೊಬ್ಬರು ದೃಢಪಡಿಸಿದ್ದಾಗಿ ಅಲ್‌-ಜಝೀರಾ ವರದಿ ಮಾಡಿದೆ.

ಗಡಿಪಾರಾದ ಕೆಲವರು ಈಜಿಪ್ಟ್‌ನಲ್ಲಿ ನೆಲೆಸಲಿದ್ದಾರೆ. ಮುಂದೆಯೂ ಬಿಡುಗಡೆಯಾಗುವ ಹೆಚ್ಚಿನ ಕೈದಿಗಳು ಕೈರೋಗೆ ಗಡಿಪಾರು ಆಗಬಹುದು ಎಂದು ಹಿರಿಯ ಹಮಾಸ್ ನಾಯಕ ನಹೇದ್ ಅಲ್-ಫಖೌರಿ ಹೇಳಿದ್ದಾರೆ.

ಬಿಡುಗಡೆಯಾದ ಕೈದಿಗಳನ್ನು ಸ್ವೀಕರಿಸಲು ಇತರ ದೇಶಗಳಲ್ಲೂ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹಮಾಸ್ ಅಧಿಕಾರಿ ತಿಳಿಸಿದ್ದಾರೆ. ಮಂಗಳವಾರ 15 ಮಂದಿ ಟರ್ಕಿ ತಲುಪುವ ನಿರೀಕ್ಷೆಯಿದೆ. ನಂತರದ ದಿನಗಳಲ್ಲಿ ಇನ್ನೂ 15 ಮಂದಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಲ್-ಫಖೌರಿ ಪ್ರಕಾರ, ಇಸ್ರೇಲ್ ಗಡಿಪಾರು ಮಾಡುವಂತೆ ಒತ್ತಾಯಿಸಿದ ಪ್ಯಾಲೆಸ್ತೀನಿಯರನ್ನು ಸ್ವೀಕರಿಸಲು ಅಲ್ಜೀರಿಯಾ ಕೂಡ ಆರಂಭಿಕ ಅನುಮೋದನೆಯನ್ನು ನೀಡಿದೆ. ಆದರೆ, ಟುನೀಶಿಯಾ ಯಾವುದೇ ಜನರನ್ನು ಸ್ವೀಕರಿಸಲು ನಿರಾಕರಿಸಿದೆ.

ಇಸ್ರೇಲಿ ಪಡೆಗಳು ಆಕ್ರಮಿತ ಪಶ್ಚಿಮ ದಂಡೆಯಿಂದ ಹಲವಾರು ಇತರ ಕೈದಿಗಳನ್ನು ಮತ್ತು ಒಬ್ಬ ಜೋರ್ಡಾನ್ ಕೈದಿಯನ್ನು ಗಾಝಾಗೆ ಗಡಿಪಾರು ಮಾಡಿವೆ.

ಅಕ್ಟೋಬರ್ 7, 2023ರಿಂದ ಇದುವರೆಗೆ ಗಾಝಾದಲ್ಲಿ ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ 61, 700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜನವರಿ16, 2025ರಂದು ಕದನ ವಿರಾಮ ಜಾರಿಯಾಗುವವರೆಗೆ 47ಕ್ಕೂ ಹೆಚ್ಚು ಜನರನ್ನು ಇಸ್ರೇಲ್ ಹತ್ಯೆ ಮಾಡಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಕದನ ವಿರಾಮದ ಬಳಿಕ ಸುಮಾರು 3 ಲಕ್ಷದಷ್ಟು ಜನರು ಉತ್ತರ ಗಾಝಾದ ತಮ್ಮ ಮೂಲ ಸ್ಥಳಗಳಿಗೆ ಮರಳಿದ್ದಾರೆ. ಅಲ್ಲಿ ಧ್ವಂಸಗೊಂಡ ಕಟ್ಟಡಗಳ ಅವಶೇಷಗಳಡಿಯಲ್ಲಿ ನಾಪತ್ತೆಯಾಗಿದ್ದ ನೂರಾರು ಜನರ ಮೃತದೇಹಗಳು ಸಿಗುತ್ತಿವೆ ಎಂದು ವರದಿಯಾಗಿದೆ. ಈ ಕಾರಣಕ್ಕೆ ಮೃತರ ಸಂಖ್ಯೆ ಒಂದೇ ಸಮನೆ 61 ಸಾವಿರಕ್ಕೆ ತಲುಪಿದೆ.

ಗಾಝಾದಲ್ಲಿ ಕದನ ವಿರಾಮ ಜಾರಿಯಾದ ಬಳಿಕ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಆಕ್ರಮಣ ಮುಂದುವರಿಸಿದೆ. ಅಲ್ಲಿ ಇತ್ತೀಚಿನ ದಾಳಿಯಲ್ಲಿ ಒಂದೇ ಸಮನೆ 20 ಮನೆಗಳನ್ನು ಸ್ಪೋಟಗೊಳಿಸಿ ಧ್ವಂಸ ಮಾಡಿದೆ. ಪರಿಣಾಮ 15 ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ನೂರಾರು ಮಂದಿ ಸಾವನ್ನಪ್ಪಿದ್ದಾರೆ.

ಒಟ್ಟಿನಲ್ಲಿ, ಗಾಝಾದಲ್ಲಿ ಕದನ ವಿರಾಮ ಜಾರಿಯಾದರೂ ಅನಿಶ್ಚತತೆ ಮುಂದುವರೆದಿದೆ. ಜನರು ಆತಂಕದಲ್ಲೇ ಜೀವನ ನಡೆಸುವಂತಾಗಿದೆ.

ಭಾರತದ ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆ ಆರಂಭಿಸಿದ ಅಮೆರಿಕ : ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....