Homeಕರ್ನಾಟಕಪಂಚಾಚಾರ್ಯರು ಇಟ್ಟ ಬತ್ತಿ, ಯಡ್ಡಿಗೆ ಕಸಿವಿಸಿ : ಎಂ.ಬಿ. ಪಾಟೀಲ್, ಡಿಕೆಶಿ ನಡುವೆ ಪೈಪೋಟಿ

ಪಂಚಾಚಾರ್ಯರು ಇಟ್ಟ ಬತ್ತಿ, ಯಡ್ಡಿಗೆ ಕಸಿವಿಸಿ : ಎಂ.ಬಿ. ಪಾಟೀಲ್, ಡಿಕೆಶಿ ನಡುವೆ ಪೈಪೋಟಿ

ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದ ಯಡಿಯೂರಪ್ಪರಿಗೆ ಇದು ಆತಂಕ ತಂದಿರಬಹುದೇ? ಯಾಕೆಂದರೆ, ಜನರಿಗೆ ಗೊತ್ತೇ ಇಲ್ಲದ ಸಂತೋಷ್‍ಜೀ ಎಂಬ ಆರ್‍ಎಸ್‍ಎಸ್ ಕುಳ ಬೇರೆ ಬೆನ್ನಿನ ಹಿಂದೆ ಬಿದ್ದಿದ್ದಾರೆ.

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ಮೈಸೂರು ಭಾಗದ ಎರಡನೇ ಹಂತದ ಒಕ್ಕಲಿಗರ ನಾಯಕ ಡಿ.ಕೆ ಶಿವಕುಮಾರ್ ಉತ್ತರದ ಭಾಗದಲ್ಲಿ ಸಪೋರ್ಟ್ ಬೇಸ್ ರೆಡಿ ಮಾಡಿಕೊಳ್ಳುತ್ತಿದ್ದಾರಾ? ಕುಂದಗೋಳ ಉಪ ಚುನಾವಣೆ ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತಿರುವ ಅವರು, ಇದು ತಮ್ಮದೇ ಚುನಾವಣೆ ಎಂಬಂತೆ ಸಕ್ರಿಯರಾಗಿದ್ದಾರೆ. ಈ ನಡುವೆ ನಿನ್ನೆ (ಬುಧವಾರ) ಅವರು, ಲಕ್ಷ್ನೇಶ್ವರ ಹತ್ತಿರದ ಮುಕ್ತಿಮಂದಿರಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ಇದರ ಹಿಂದೆ ಪಂಚಾಚಾರ್ಯರ ಆಶಿರ್ವಾದವೂ ಇದೆಯಾ? ಯಡಿಯೂರಪ್ಪರಿಗೆ ಇದು ಆತಂಕದ ವಿಷಯವಾ? ತನ್ನ ಸ್ಪರ್ಧಿ ಎಂ.ಬಿ. ಪಾಟೀಲರಿಗೂ ಡಿಕೆಶಿ ಚಾಲೆಂಜ್ ಮಾಡ್ತಿದ್ದೀರಾ? ಧರ್ಮ, ಜಾತಿಗಳ ಹೆಸರಲ್ಲಿ ನಡೆಯುವ ಕ್ಷುಲ್ಲಕ ರಾಜಕೀಯದ ಒಂದು ಅಸಹ್ಯ ಝಲಕ್ ಇದು

ನೇರ ವಿಷಯಕ್ಕೆ ಬಂದರೆ, ಉತ್ರರ ಕರ್ನಾಟಕದಲ್ಲಿ ಒಂದು ಸಣ್ಣ ಸಪೋರ್ಟ್ ಬೇಸ್ ಸೃಷ್ಟಿಸಿಕೊಳ್ಳಲು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಯತ್ನಿಸುತ್ತಿರುವ ಎಲ್ಲ ಲಕ್ಷಣಗಳೂ ಅವರ ಇತ್ತೀಚಿನ ನಡೆಯಲ್ಲಿ ಕಂಡು ಬರುತ್ತಿವೆ.

ಕುಂದಗೋಳ ಕ್ಷೇತ್ರದ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ಬೇಕಾದುದೆಲ್ಲವನ್ನೂ ಮಾಡುತ್ತಲೇ, ಇಲ್ಲಿ ಅವರು ಒಂದಿಷ್ಟು ‘ಭವಿಷ್ಯ ನಿರ್ಮಾಣ’ದ ಕೆಲಸದಲ್ಲೂ ನಿರತರಾಗಿದ್ದಾರೆ. ಇಲ್ಲಿನ ಹಲವಾರು ಲೋಕಲ್ ನಾಯಕರ ಜೊತೆ ಸೌಹಾರ್ದ ಸಂಬಂಧವನ್ನು ಕಟ್ಟಿಕೊಳ್ಳುತ್ತಲೇ, ಒಟ್ಟೂ ಈ ಭಾಗದಲ್ಲಿ ತಮ್ಮನ್ನು ಸಪೋರ್ಟ್ ಮಾಡುವ ಒಂದು ರಾಜಕೀಯ ಗುಂಪು ಮತ್ತು ಧಾರ್ಮಿಕ ನಾಯಕರ ಗುಂಪು ಇರಲೆಂದು ಅವರು ಕಾರ್ಯಾಚರಣೆ ನಡೆಸಿದ್ದು ಎದ್ದು ಕಾಣುತ್ತಿದೆ.

ಇದ್ಹೇಗೆ ಯಡಿಯೂರಪ್ಪ ಆತಂಕಕ್ಕೆ ಕಾರಣವಾಗುತ್ತದೆ? ಏಕೆಂದರೆ, ಯಡಿಯೂರಪ್ಪ  ಲಿಂಗಾಯತರ ಯಾವ ಪಂಗಡಗಳನ್ನು ನೆಚ್ಚಿದ್ದರೋ ಅದೇ ಪಂಗಡಗಳ ಹಿಂದೆ ಡಿ.ಕೆ ಶಿವಕುಮಾರ್ ಬಿದ್ದಂತಿದೆ. ಈಗ ಮುಕ್ತಿಮಂದಿರಕ್ಕೆ ಭೇಟಿ ಕೊಟ್ಟಾಗ ಅವರು ಹೇಳಿದ್ದು: ‘ನನಗೆ ಈ ದೇವರ ಮೇಲೆ, ದೇವಸ್ಥಾನದ ಮೇಲೆ ನಂಬಿಕೆಯಿದೆ’ ಎಂದು. ಯಾವ ದೇವರು? ಅವರಿಗೇ ಗೊತ್ತಿಲ್ಲ. ಭಕ್ತರಿಗೆ ಯಾವ ದೇವರಾದರೇನು ಎಂದು ಸುಮ್ಮನಾಗೋಣ.

ಇಲ್ಲಿ ಐತೆ ಪಾಲಿಟಿಕ್ಸ್!

ಆಟದ ಮಸಲತ್ತೇ ಇಲ್ಲಿದೆ. ಮೊನ್ನೆ ಮುಕ್ತಿಮಂದಿರಕ್ಕೆ ಡಿಕೆಶಿ ಭೇಟಿ ಕೊಟ್ಟರಲ್ಲ ಅದು ಪುಟ್ಟಾಪೂರಾ ಪಂಚಾಚಾರ್ಯರ ಅಂದರೆ ಕರ್ಮಠ ವೀರಶೈವರ/ಜಂಗಮರ ಮಂದಿರ. ಇದರ ಹಿಂದೆ ಇರುವುದು ಪಂಚಾಚಾರ್ಯ ಜಗದ್ಗುರು ರಂಭಾಪುರಿ ಸ್ವಾಮೀಜಿ! ಯಡಿಯೂರಪ್ಪರ ಹಿಡನ್ ರಿಲಿಜಿಯಸ್ ಗುರು ಇವರು… ಅವರನ್ನೇ ಡಿಕೆಶಿ ಬುಟ್ಟಿಗೆ ಹಾಕಿಕೊಂಡರಾ ಎಂಬ ಪ್ರಶ್ನೆ ಭವಿಷ್ಯದ್ದು.

ಎಂ.ಬಿ. ಪಾಟೀಲ್ ವರ್ಸಸ್ ಡಿಕೆಶಿ?

ಇಲ್ಲಿ ವಿಚಿತ್ರ ಮತ್ತು ಅಸಹ್ಯದ ಧರ್ಮೋ-ರಾಜಕೀಯದ ವಿದ್ಯಮಾನ ಜರುಗುತ್ತಿವೆ. ಗೃಹ ಸಚಿವ ಎಂ.ಬಿ. ಪಾಟೀಲ್ ಲಿಂಗಾಯತ ಪ್ರತ್ಯೇಕ ಧರ್ಮದ ಪರ ಬಹಿರಂಗವಾಗಿ ನಿಂತಿದ್ದರು. ನಾಲ್ಕು ದಿನಗಳ ಹಿಂದೆ ಅವರು, ಪ್ರತ್ಯೇಕ ಧರ್ಮ ವಿರೋಧಿಸಿದ್ದ ಪಂಚಾಚಾರ್ಯರ ಶಾಖಾಮಠಕ್ಕೆ ಅಂದರೆ ಮುಕ್ತಿಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸ್ವಾಮಿ ಅವರನ್ನು ಸನ್ಮಾನವನ್ನೂ ಮಾಡಿತ್ತು. ವೀರಶೈವ ಮಹಾಸಭಾ ಆ ಸ್ವಾಮಿ ವಿರುದ್ಧ ಕಿಡಿ ಕಾರಿತ್ತು! ಆದಾದ ಎರಡೇ ದಿನಕ್ಕೆ ಅಲ್ಲಿ ಡಿ.ಕೆ ಶಿವಕುಮಾರರಿಂದ ಭಕ್ತಿಪೂರ್ವಕ ಪೂಜೆ!

ಡಿಕೇಶಿ, ರಂಭಾಪುರಿ ದೋಸ್ತಿ

ಇದೆಲ್ಲ ಬಿಡಿ, ರಾಜಕಾರಣಕ್ಕೆ ಬರೋಣ.. ಕೇವಲ ನೂರಾರು ಕೋಟಿ ವ್ಯಯಿಸಿ ಬಿಟ್ಟರೆ ಸಿಎಂ ಆಗಲ್ಲ ಎಂದು ಡಿ.ಕೆ ಶಿವಕುಮಾರ್‍ಗೆ ಈಗ ಅರಿವಾದಂತಿದೆ. ಈಗಲ್ಲ, ಮುಂದಿನ ಚುನಾವಣೆ ವೇಳೆಗೆ ರಾಜ್ಯದಾದ್ಯಂತ ಸಪೋರ್ಟ್ ಬೇಸ್ ಹೊಂದಲು ಅವರು ಪ್ರಯತ್ನ ಪಡುತ್ತಿದ್ದಾರೆ. 

ಆರು ತಿಂಗಳ ಹಿಂದೆ  ಇದೇ ಲಕ್ಷ್ಮೇಶ್ವರದಲ್ಲಿ ರಂಭಾಪುರಿ ‘ಜಗದ್ಗುರು’ವಿನ ಸಮಾರಂಭದಲ್ಲಿ  ಭಾವಹಿಸಿದ್ದ ಡಿ.ಕೆ. ಶಿವಕುಮಾರ್, ‘ಪ್ರತ್ಯೇಕ ಧರ್ಮ ಬೆಂಬಲಿಸಿದ್ದು ಕಾಂಗ್ರೆಸ್‍ನ ತಪ್ಪು’ ಎಂದಿದ್ದರು. ಆಗ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ತರಾಟೆಗೆ ತೆಗೆದುಕೊಂಡ ಮೇಲೆ ವಿಷಾದ ವ್ಯಕ್ತಪಡಿಸಿದ್ದರು.

ತಿಂಗಳ ಹಿಂದಷ್ಟೇ ಡಿಕೆಶಿ ಲಿಂಗಾಯತ ಧರ್ಮದ ಬಗ್ಗೆ ಎಲ್ಲೊ ಮಾತಾಡಿದ್ದನ್ನು ಪ್ರಸ್ತಾಪಿಸಿದ್ದ ಗೃಹ ಸಚಿವ ‘ಅಂವಂಗೇನು ಗೊತ್ತು ಬಸವ ಧರ್ಮ, ಮೂರ್ಖ’ ಎಂದು ಡಿಕೆಶಿಯನ್ನು ಏಕವಚನದಲ್ಲಿ ಬೈದಿದ್ದರು. ಬಹುಶಃ ಇದು, ಎರಡನೇ ಹಂತದ ನಾಯಕರಲ್ಲಿ ಮುಖ್ಯಮಂತ್ರಿಯಾಗುವ ಹಂಬಲವುಳ್ಳವರ ಜಿದ್ದಾಜಿದ್ದಿಯೇ?
ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದ ಯಡಿಯೂರಪ್ಪರಿಗೆ ಇದು ಆತಂಕ ತಂದಿರಬಹುದೇ? ಯಾಕೆಂದರೆ, ಜನರಿಗೆ ಗೊತ್ತೇ ಇಲ್ಲದ ಸಂತೋಷ್‍ಜೀ ಎಂಬ ಆರ್‍ಎಸ್‍ಎಸ್ ಕುಳ ಬೆನ್ನಿನ ಹಿಂದೆ ಬಿದ್ದಿರುವಾಗ, ಡಿಕೆಶಿ ಮತ್ತು ಎಂಬಿ ಪಾಟೀಲ್ ಕೂಡ ತಮ್ಮ ಬೇಸ್ ಅಲುಗಾಡಿಸುತ್ತಿದ್ದಾರೆಯೇ ಎಂಬ ಭಯ ಅವರಲ್ಲಿ ಕಾಡುತ್ತಿದೆಯೇ?
ಇನ್ನು ಬಾದಮಿಯಿಂದ ಸ್ಪರ್ಧಿಸಿ ಗೆದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಉತ್ತರ ಕರ್ನಾಟಕಕ್ಕೂ ಲೀಡರ್ ಆಗುವ ಪಯಣದ ಹಾದಿಯಲ್ಲಿ ಅರ್ಧ ಸಾಗಿ ಆಗಿದೆ ಎಂದೇ ಹೇಳುತ್ತಿದ್ದಾರೆ. ಮುಖ್ಯವಾಗಿ ಅಹಿಂದ ಜೊತೆಗೆ ಎಲ್ಲಾ ಸಮುದಾಯದ ಜನರ ಮೇಲೂ ಪ್ರಭಾವ ಬೀರಲು ಅವರು ಶುರುವಚ್ಚಿಕೊಂಡಿದ್ದಾರೆ. ಕೊಪ್ಪಳದಲ್ಲಿ ಕುರುಬ ಸಮುದಾಯದವರಿಗೆ ಟಿಕೆಟ್ ನೀಡಿ ಶತಯಗತಾಯ ಗೆಲ್ಲಿಸಲು ಶ್ರಮ ಹಾಕಿದ್ದಾರೆ. ಇನ್ನೊಂದು ಕಡೆ ಸಿದ್ದರಾಮಯ್ಯನವರ ಕ್ಯಾಂಡಿಡೇಟ್ ಬಾಗಲಕೋಟೆಯ ಆಕ್ಟಿವ್ ಹುಡುಗಿ ವೀಣಾ ಕಾಶೆಪ್ಪನವರ್ ಈಗಾಗಲೇ ಗೆದ್ದಾಗಿದೆ ಎಂದು ಹೇಳಲಾಗುತ್ತಿದೆ.
ಇದೆಲ್ಲಾ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...